ಪಾದದಡಿಯ ದಪ್ಪಗಿನ ಬೊಕ್ಕೆ ನಿವಾರಣೆಗೆ ಮನೆಮದ್ದುಗಳು

Written By: Lekhaka
Subscribe to Boldsky

ಪಾದದ ಅಡಿಭಾಗ ಮತ್ತು ಬೆರಳುಗಳ ಸಂದುಗಳಲ್ಲಿ ಚರ್ಮವು ದಪ್ಪವಾಗಿ ಮೊಳೆಯಾಕಾರದಲ್ಲಿ ಕಾಣಿಸಿಕೊಳ್ಳುವಂತಹ ಬೊಕ್ಕೆಗಳು ತುಂಬಾ ನೋವು ಉಂಟು ಮಾಡುವುದು ಮಾತ್ರವಲ್ಲದೆ, ಇದರಿಂದ ನಡೆದಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು. ಇದಕ್ಕೆ ಹಲವಾರು ಕಾರಣಗಳು ಕೂಡ ಇದೆ.

ಸ್ವಚ್ಛತೆ ಇಲ್ಲದೆ ಇರುವುದು, ಸತ್ತ ಚರ್ಮವು ಜಮೆಯಾಗಿರುವುದು, ಅಶುದ್ಧಿ ಇತ್ಯಾದಿ. ಇಂತಹ ಪರಿಸ್ಥಿತಿ ನಿಮ್ಮ ಕಾಲಿನಲ್ಲೂ ಇದ್ದರೆ ಅದಕ್ಕೆ ತಕ್ಕಪರಿಹಾರ ಕಂಡುಕೊಳ್ಳಬೇಕು. ಕೆಲವು ಮನೆಮದ್ದು ಬಳಸಿಕೊಂಡು ಈ ಸಮಸ್ಯೆ ನಿವಾರಣೆ ಮಾಡಬಹುದು. ಈ ಲೇಖನದಲ್ಲಿ ಬೋಲ್ಡ್ಸ್ಕೈ  ನಿಮಗೆ ಮೊಳೆಯಾಕಾರದ ಬೊಕ್ಕೆಗಳ ನಿವಾರಣೆ ಮಾಡುವುದು ಹೇಗೆ ಎಂದು ಹೇಳಿಕೊಡಲಿದೆ. ಇದನ್ನು ಓದಿ ತಿಳಿಯಿರಿ..

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆಯು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು. ಇದು ಸತ್ತ ಚರ್ಮ ಜಮೆಯಾಗಿರುವುದನ್ನು ತೆಗೆದುಹಾಕುವುದು ಮತ್ತು ಕಾಲಿನಡಿಯಲ್ಲಿ ಮೊಳೆಯಾಕಾರದ ಬೊಕ್ಕೆ ತೆಗೆಯುವುದು.

ಬಳಸುವ ವಿಧಾನ

* ಬಾಧಿತ ಪ್ರದೇಶಕ್ಕೆ ವಿಟಮಿನ್ ಇ ಎಣ್ಣೆ ಹಚ್ಚಿಕೊಳ್ಳಿ.

* ಕಾಲಿಗೆ ಸಾಕ್ಸ್ ಹಾಕಿಕೊಳ್ಳಿ ಮತ್ತು ಈ ಎಣ್ಣೆಯು ರಾತ್ರಿಯಿಡಿ ಕಾಲಿನಲ್ಲಿ ಹಾಗೆ ಇರಲಿ.

* ವೇಗದ ಫಲಿತಾಂಶ ಪಡೆಯಲು ವಾರದಲ್ಲಿ 4-5 ಸಲ ಇದನ್ನು ಬಳಸಿ.

ಓಟ್ ಮೀಲ್

ಓಟ್ ಮೀಲ್

ಓಟ್ ಮೀಲ್ ಕಾಲಿನಡಿಯಲ್ಲಿ ಕಂಡುಬರುವ ಮೊಳೆಯಾಕಾರದ ಬೊಕ್ಕೆಗಳಿಗೆ ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ.

ಬಳಸುವ ವಿಧಾನ

*ಬಿಸಿ ನೀರಿನ ಟಬ್ ನಲ್ಲಿ ಪಾದಗಳನ್ನು ಮುಳುಗಿಸಿಡಿ.

*4-5 ನಿಮಿಷ ಬಳಿಕ ಬಾಧಿತ ಪ್ರದೇಶಕ್ಕೆ ಬೇಯಿಸಿದ ಓಟ್ ಮೀಲ್ ನ್ನು ಹಚ್ಚಿಕೊಳ್ಳಿ.

* ಇದನ್ನು ಹತ್ತು ನಿಮಿಷ ಕಾಲ ಉಜ್ಜಿಕೊಳ್ಳಿ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯು ಚರ್ಮದ ಕೆಳಭಾಗಕ್ಕೆ ಇಳಿದು ಸತ್ತ ಚರ್ಮ ಜಮೆಯಾಗಿರುವುದು ಮತ್ತು ಅಶುದ್ಧಿಯನ್ನು ತೆಗೆದುಹಾಕುವುದು. ಇದರಿಂದ ಪಾದದ ಅಡಿಯಲ್ಲಿ ಕಂಡುಬರುವ ಮೊಳೆಯಾಕಾದ ಬೊಕ್ಕೆಗಳ ನಿವಾರಣೆ ಸಾಧ್ಯ.

ಬಳಸುವ ವಿಧಾನ

* ಬಾಧಿತ ಪ್ರದೇಶಕ್ಕೆ ಬಾದಾಮಿ ಎಣ್ಣೆಯಿಂದ ಸರಿಯಾಗಿ ಮಸಾಜ್ ಮಾಡಿ.

* ಕಾಲಿಗೆ ಸಾಕ್ಸ್ ಹಾಕಿಕೊಳ್ಳಿ ಮತ್ತು ರಾತ್ರಿಯಿಡಿ ಎಣ್ಣೆ ಹಾಗೆ ಇರಲಿ.

*ಬೊಕ್ಕೆಗಳು ಬೇಗನೆ ನಿವಾರಣೆಯಾಗಬೇಕೆಂದರೆ ಇದನ್ನು ದಿನನಿತ್ಯ ಬಳಸಿ.

ಅಲೋವೆರಾ ಲೋಳೆ

ಅಲೋವೆರಾ ಲೋಳೆ

ಪ್ರಬಲ ಆ್ಯಂಟಿಆಕ್ಸಿಡೆಂಟ್ ಒಳಗೊಂಡಿರುವ ಈ ಔಷಧೀಯ ಗಿಡವು ಪಾದದ ಅಡಿಯಲ್ಲಿ ಕಂಡುಬರುವ ಎಲ್ಲಾ ರೀತಿಯ ಬೊಕ್ಕೆಗಳನ್ನು ತೆಗೆದುಹಾಕಿ ನೋವು ನಿವಾರಿಸುವುದು.

ಬಳಸುವ ವಿಧಾನ

* ತಾಜಾ ಅಲೋವೆರಾ ಲೋಳೆಯನ್ನು ಬಾಧಿತ ಪ್ರದೇಶಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆಯುವ ಮೊದಲು ಒಂದು ಗಂಟೆ ಕಾಲ ಹಾಗೆ ಬಿಡಿ.

* ದಿನದಲ್ಲಿ 2-3 ಸಲ ಇದನ್ನು ಬಳಸಿಕೊಂಡರೆ ಪಾದದ ಅಡಿಯಲ್ಲಿರುವ ಬೊಕ್ಕೆಗಳು ಬೇಗನೆ ನಿವಾರಣೆಯಾಗುವುದು.

ಈರುಳ್ಳಿ

ಈರುಳ್ಳಿ

ಸತ್ತ ಚರ್ಮವನ್ನು ಕಿತ್ತುಹಾಕುವ ಗುಣ ಹೊಂದಿರುವ ಈರುಳ್ಳಿಯು ದಪ್ಪ ಹಾಗೂ ಗಡಸು ಚರ್ಮವನ್ನು ನಯವಾಗಿಸುವುದು. ಇದರಿಂದ ಬೊಕ್ಕೆಗಳು ನಿವಾರಣೆ ಸಾಧ್ಯ.

ಬಳಸುವ ವಿಧಾನ

*ಬಿಸಿ ನೀರಿನ ಸಣ್ಣ ಟಬ್ ನಲ್ಲಿ 4-5 ಚಮಚ ಈರುಳ್ಳಿ ರಸ ಹಾಕಿ.

* ಈ ಟಬ್ ನಲ್ಲಿ 15-20 ನಿಮಿಷ ಕಾಲ ಪಾದವನ್ನು ಮುಳುಗಿಸಿಡಿ.

* ಹೀಗೆ ಮಾಡಿದ ಬಳಿಕ ಕಾಲಿನ ಕ್ರೀಮ್ ಹಚ್ಚಿಕೊಳ್ಳಿ.

* ವಾರದಲ್ಲಿ 2-3 ದಿನ ಈ ಮನೆಮದ್ದು ಬಳಸಿ.

ಹರಳೆಣ್ಣೆ

ಹರಳೆಣ್ಣೆ

ಪಾದದ ಅಡಿಯಲ್ಲಿ ಜಮೆಯಾಗಿರುವ ದಪ್ಪ ಚರ್ಮವನ್ನು ನಯವಾಗಿಸಲು ಹರಳೆಣ್ಣೆಯು ತುಂಬಾ ಪರಿಣಾಮಕಾರಿ ಔಷಧಿ. ಇದರಿಂದ ಕಾಲಿನಡಿಯಲ್ಲಿ ಇರುವ ಮೊಳೆಯಾಕಾದ ಬೊಕ್ಕೆಗಳು ನಿವಾರಣೆಯಾಗುವುದು.

ಬಳಸುವುದು ಹೇಗೆ

ಬಾಧಿತ ಪ್ರದೇಶಕ್ಕೆ ಹರಳೆಣ್ಣೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ.

*ಬೆಳಗ್ಗೆ ಎದ್ದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ.

*ವೇಗದ ಫಲಿತಾಂಶ ಪಡೆಯಲು ವಾರದಲ್ಲಿ 4-5 ಸಲ ಇದನ್ನು ಬಳಸಿಕೊಳ್ಳಿ.

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾ ನಂಜುನಿವಾರಕ ಅಂಶಗಳನ್ನು ಒಳಗೊಂಡಿದ್ದು ಉರಿಯೂತ ನಿವಾರಕ ಎಂದೆನಿಸಿದೆ. ನಿಮ್ಮ ತ್ವಚೆಯ ಯಾವುದೇ ತೊಂದರೆಯಲ್ಲೂ ಇದು ಉತ್ತಮ ಔಷಧವಾಗಿದೆ.

*ಒಂದು ಚಮಚ ಅಡುಗೆ ಸೋಡಾ ಮತ್ತು ಒಂದು ಚಮಚ ನೀರು ಹಾಕಿ ಪೇಸ್ಟ್ ಮಾಡಿ.

*ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಂಡು 10-15 ನಿಮಿಷ ಹಾಗೆ ಬಿಟ್ಟ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರದಲ್ಲಿ 2-3 ಸಲ ಇದನ್ನು ಬಳಸಿದರೆ ಫಲಿತಾಂಶ ಕಟ್ಟಿಟ್ಟ ಬುತ್ತಿ.

English summary

Simple home Remedies to Banish Corn and Calluses ...

Anyone who has ever had to deal with corns and calluses on his or her feet is well aware of the trials and tribulations of dealing with this annoying skin condition. Not only do they make your feet appear unsightly and unhealthy, but they also cause a great amount of pain and discomfort. These usually occur between the toes and soles of the feet. They make the skin thick, hard and extremely rough.