For Quick Alerts
ALLOW NOTIFICATIONS  
For Daily Alerts

  ಹತ್ತೇ ದಿನದಲ್ಲಿ ಗಲ್ಲದ ಕೊಬ್ಬಿಗೆ ಗುಡ್ ಬೈ ಹೇಳಿ...

  By Sushma Charhra
  |

  ನೀವು ನಿಮ್ಮ ಗಲ್ಲದ ಸೈಜ್ ನೋಡಿ ಆಶ್ಚರ್ಯಗೊಂಡಿದ್ದೀರಾ? ಹಾಗಾದ್ರೆ ನೀವು ಸರಿಯಾದ ಲೇಖನವನ್ನೇ ಓದುತ್ತಿದ್ದೀರಿ., ನಿಮ್ಮ ಗಲ್ಲದಲ್ಲಿರುವ ಅನವಶ್ಯಕ ಕೊಬ್ಬಿನಾಂಶವನ್ನು ಕರಗಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ನಿಮಗೆ ಸಲಹೆ ನೀಡುತ್ತೇವೆ. ಆರೋಗ್ಯಯುತವಾದ, ಸುಂದರವಾದ, ಮತ್ತು ಯೌವನಾತ್ಮಕವಾಗಿರುವ ಚರ್ಮವನ್ನು ಹೊಂದಿರುವುದು ಈಗಿನ ಜಮಾನದಲ್ಲಿ ಬಹಳ ಮುಖ್ಯ, ಆದರೆ ಕೆಲವೊಂದು ಕಾರಣಗಳಿಂದಾಗಿ ಉದಾಹರಣೆಗೆ ಪ್ರಾಕೃತಿಕ ಕಲ್ಮಶಗಳು, ಸೂರ್ಯನ ನೇರಳಾತೀತ ಕಿರಣಗಳಿಗೆ ಮೈ ಒಡ್ಡುವುದು, ಕೆಮಿಕಲ್ ಪ್ರೊಡಕ್ಟ್‌ಗಳನ್ನು ಬಳಕೆ ಮಾಡುವುದು, ಅಸರ್ಮಪಕವಾದ ಆಹಾರ ಕ್ರಮ, ಇತ್ಯಾದಿಗಳ ಕಾರಣದಿಂದಾಗಿ ನಿಮ್ಮ

  ಚರ್ಮ ಹೊಳೆಯದೇ ಇರಬಹುದು.

  ಈಗಾಗಲೇ ಹಲವಾರು ಬಗೆಯ ಟ್ರೀಟ್ ಮೆಂಟ್ ಗಳು ಮತ್ತು ಕ್ರೀಮ್ ಗಳು ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಅವುಗಳು ನಿಮ್ಮ ಕೆನ್ನೆಯ ಹೆಚ್ಚುವರಿ ಕೊಬ್ಬಿನ ಅಂಶವನ್ನು ತೊಡೆದು ಹಾಕಿ,ಸುಂದರವಾದ ಕೆನ್ನೆಗಳನ್ನು ಪಡೆಯುವಂತೆ ಮಾಡುತ್ತವೆಯಂತೆ. ಆದರೆ ಈ ಟ್ರೀಟ್ ಮೆಂಟ್ ಗಳು ಬಹಳ ದುಬಾರಿಯಾಗಿರುತ್ತೆ ಮತ್ತು ಅಡ್ಡಪರಿಣಾಮಗಳಿಗೆ ಕಾರಣವಾಗುವ ಸಾಧ್ಯತೆಗಳಿರುತ್ತೆ.

  face fat

  ಆದರೆ ಹಲವಾರು ನೈಸರ್ಗಿಕ ದಾರಿಗಳಿದ್ದು, ಅವುಗಳು ನಿಮ್ಮ ಕೆನ್ನೆಯಲ್ಲಿ ಅನಗತ್ಯವಾಗಿ ಶೇಖರಣೆಗೊಂಡಿರುವ ಕೊಬ್ಬಿನಂಶವನ್ನು ತೊಡೆದು ಹಾಕಿ,ಮುಖದ ಮಾಂಸಖಂಡಗಳನ್ನು ಆರೋಗ್ಯಯುತವಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇವು ಸಾಂಪ್ರದಾಯಿಕಬದ್ಧವಾಗಿಲ್ಲದೇ ಇದ್ದರೂ ಶೇಕಡಾ 100 ರಷ್ಟು ಸುರಕ್ಷಿತ ಕ್ರಮಗಳಾಗಿವೆ ಮತ್ತು ಸುಲಭದಲ್ಲೇ ಮಾಡಿಕೊಳ್ಳಬಹುದಾಗಿದೆ.

  ಕೆಲವು ಆಹಾರ ಪರಿಕ್ರಮ ಮತ್ತು ನಿಮಗೆ ನೀವು ಸ್ವಲ್ಪ ಸಮಯ ನೀಡಿ ಮಾಡಿಕೊಳ್ಳಬೇಕಾಗಿರುವ ಚಿಕಿತ್ಸೆಯನ್ನು ಹೊರತುಪಡಿಸಿದರೆ ಈ ನೈಸರ್ಗಿಕ ವಿಧಾನಗಳು ನಿಮ್ಮಿಂದ ಹೆಚ್ಚೇನನ್ನೂ ನಿರೀಕ್ಷಿಸುವುದಿಲ್ಲ. ಹಾಗಾದ್ರೆ ಕೇವಲ 10 ದಿನದಲ್ಲಿ ಹೇಗೆ ಕೆನ್ನೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ..

  • ಹಾಟ್ ಟವೆಲ್ ಟ್ರೀಟ್ ಮೆಂಟ್

  ಆವಿಯು ಮುಖದ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುತ್ತೆ. ಹಾಟ್ ಟವೆಲ್ ಟ್ರೀಟ್ ಮೆಂಟ್ ನಿಮ್ಮ ಮುಖದಲ್ಲಿ ಬೆವರನ್ನು ಸುರಿಸುವಂತೆ ಮಾಡುತ್ತೆ. ಇದು ಮುಖದ ಫ್ಯಾಟ್ ಅಂಶವು ಕರಗಲು ನೆರವಾಗುತ್ತೆ. ಇದು ಚರ್ಮದ ಕಾಂತಿ ಹೆಚ್ಚಿಸುವ ಮತ್ತು ಚರ್ಮವನ್ನು ಬಿಗಿಗೊಳಿಸುವ ಕೆಲಸವನ್ನು ಮಾಡುತ್ತೆ. ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ. ಅದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಒಂದು ಟವೆಲ್ ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಅದ್ದಿ. ಬಟ್ಟೆಯನ್ನು ಹಿಂಡಿ, ನಿಮ್ಮ ಮುಖದ ಮೇಲೆ ಇಟ್ಟುಕೊಳ್ಳಿ. ಪ್ರಮುಖವಾಗಿ ಕೆನ್ನೆಗಳ ಮೇಲೆ ಇಟ್ಟು ಸ್ವಲ್ಪ ಒತ್ತಿ. ಬೇಗನೆ ರಿಸಲ್ಟ್ ಸಿಗಬೇಕು ಎಂದರೆ 3 ರಿಂದ 4 ಬಾರಿ ಪುನರಾವರ್ತಿಸಿ. ಪ್ರತಿದಿನ ಮಲಗುವ ಮುನ್ನ ಇದನ್ನು ಮಾಡಿದರೆ ಬಹಳ ಒಳ್ಳೆಯದು.

  • ಅರಿಶಿನ

  ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳ ಪರಿಹಾರಕ್ಕೆ ಅರಿಶಿನ ಒಂದು ಅತ್ಯುತ್ತಮ ಮದ್ದು. ಪುರಾತನ ಕಾಲದಿಂದಲೇ ಇದನ್ನು ಬಳಸಲಾಗುತ್ತಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು,ಇದು ಚರ್ಮವನ್ನು ಯಾವುದೇ ಕೀಟಾಣುಗಳ ದಾಳಿಯಿಂದ ರಕ್ಷಿಸುತ್ತೆ.

  ಬೇಕಾಗುವ ಸಾಮಗ್ರಿಗಳು

  ಒಂದು ಟೇಬಲ್ ಸ್ಪೂನ್ ಅರಿಶಿನ, ಒಂದು ಟೇಬಲ್ ಸ್ಪೂನ್ ಮೊಸರು, ಒಂದು ಟೇಬಲ್ ಸ್ಪೂನ್ ಕಡಲೆ ಹಿಟ್ಟು

  ಬಳಕೆ ಮಾಡುವ ವಿಧಾನ

  ಒಂದು ಟೇಬಲ್ ಸ್ಪೂನ್ ಅರಿಶಿನ, ಒಂದು ಟೇಬಲ್ ಸ್ಪೂನ್ ಮೊಸರು, ಒಂದು ಟೇಬಲ್ ಸ್ಪೂನ್ ಕಡಲೆ ಹಿಟ್ಟು

  ಇವು ಮೂರನ್ನೂ ಒಂದು ಬೌಲ್ ನಲ್ಲಿ ಮಿಕ್ಸ್ ಮಾಡಿ. ಯಾವುದೇ ಗಂಟುಗಳು ಆಗದಂತೆ ಇವು ಮೂರನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ವೇಳೆ ಪ್ಯಾಕ್ ಗಟ್ಟಿಯಾಯಿತು ಎಂದು ಅನ್ನಿಸಿದರೆ ಇನ್ನಷ್ಟು ಮೊಸರನ್ನು ಸೇರಿಸಿಕೊಳ್ಳಿ. ನಂತರ ಈ ಗಟ್ಟಿ ಪೇಸ್ಟನ್ನು ನಿಮ್ಮ ಕೆನ್ನೆಯ ಭಾಗಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷ ಹಾಗೆಯೇ ಬಿಟ್ಟು ಪ್ಯಾಕ್ ಡ್ರೈ ಆಗುವ ತನಕ ಕಾಯಿರಿ. ತಣ್ಣನೆಯ ನೀರಿನಲ್ಲಿ ಮುಖ ತೊಳೆಯರಿ ಮತ್ತು ಟವೆಲ್ ನಿಂದ ಒರೆಸಿಕೊಳ್ಳಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ ಬದಲಾವಣೆಯನ್ನು ಗಮನಿಸಿಕೊಳ್ಳಿ., ಆದರೆ ನೆನಪಿರಲಿ ಅತಿಯಾಗಿ ಅರಿಶಿನವನ್ನು ಬಳಸಬೇಡಿ ಯಾಕೆಂದರೆ ಇದು ನಿಮ್ಮ ಚರ್ಮದಲ್ಲಿ ಅರಿಶಿನದ ಲೇಯರ್ ನ್ನು ಹಾಗೆಯೇ ಉಳಿಯುವಂತೆ ಮಾಡುವ ಸಾಧ್ಯತೆಗಳಿರುತ್ತೆ.

  • ಗ್ಲಿಸರಿನ್

  ಗ್ಲಿಸರಿನ್ ಚರ್ಮವನ್ನು ಮಾಯ್ಚಿರೈಸ್ ಆಗಿ ಇರಿಸಲು ನೆರವಾಗುತ್ತೆ. ಇದು ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಕಾಪಾಡಿಕೊಳ್ಳಲು ನೆರವಾಗುತ್ತೆ.

  ಬೇಕಾಗುವ ಸಾಮಗ್ರಿಗಳು 

  ಒಂದು ಟೇಬಲ್ ಸ್ಪೂನ್ ಗ್ಲಿಸರಿನ್, ಅರ್ಧ ಟೇಬಲ್ ಸ್ಪೂನ್ ಉಪ್ಪು

  ಬಳಕೆ ಮಾಡುವ ವಿಧಾನ ಹೇಗೆ - ಒಂದು ಬೌಲ್ ನಲ್ಲಿ ಗ್ಲಿಸರಿನ್ ಮತ್ತು ಉಪ್ಪನ್ನು ಮಿಕ್ಸ್ ಮಾಡಿ ಚೆನ್ನಾಗಿ ಕುಲುಕಿ., ಕಾಟನ್ ತುಂಡುಗಳ ಸಹಾಯದಿಂದ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ. ನಿಮ್ಮ ಕೆನ್ನೆ, ಗಲ್ಲ ಮತ್ತು ಕುತ್ತಿಗೆಯ ಭಾಗವನ್ನು ಚೆನ್ನಾಗಿ ಕವರ್ ಮಾಡಿದ್ದೀರಾ ನೋಡಿಕೊಳ್ಳಿ. ಅಟ್ ಲೀಸ್ಟ್ 20 ನಿಮಿಷ ಈ ಸೆಲ್ಯೂಷನ್ ನಿಮ್ಮ ಮುಖದಲ್ಲಿರಲಿ. ಇದರಿಂದಾಗಿ ನಿಮ್ಮ ಚರ್ಮ ಅದನ್ನು ಹೀರಿಕೊಳ್ಳುತ್ತೆ. ತಣ್ಣನೆಯ ನೀರಿನಿಂದ ನಂತರ ತೊಳೆಯರಿ. ಇದನ್ನುವಾರಕ್ಕೆ ಮೂರು ನಾಲ್ಕು ಬಾರಿ ಮಾಡಿ. ಮತ್ತು ನಿಮ್ಮ ಚರ್ಮದ ಅನಗತ್ಯ ಫ್ಯಾಟ್ ತೊಡೆದುಹಾಕಿಕೊಳ್ಳಿ.

  • ಹಾಲು

  ಚರ್ಮವನ್ನು ಟೋನ್ ಮಾಡಲು ಮತ್ತು ಹೊಳಪು ಬರುವಂತೆ ಮಾಡಲು ಹಾಲು ಬಹಳ ಸಹಕಾರಿ. ಇದು ಕೂಡ ಚರ್ಮದ ಸ್ಥಿತಿಸ್ಥಾಪಕತ್ವ ಗುಣವನ್ನು ಕಾಪಾಡಿಕೊಳ್ಳಲು ನೆರವಾಗುತ್ತೆ.

  ಬೇಕಾಗುವ ಸಾಮಗ್ರಿಗಳು 

  ಒಂದು ಟೇಬಲ್ ಸ್ಪೂನ್ ಹಾಲು, ಒಂದು ಟೇಬಲ್ ಸ್ಪೂನ್ ಜೇನುತುಪ್ಪ

  ಹೇಗೆ ಬಳಕೆ ಮಾಡಬೇಕು?

  ಒಂದು ಟೇಬಲ್ ಸ್ಪೂನ್ ಹಾಲು, ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಅಪ್ಲೈ ಮಾಡಿಕೊಳ್ಳಿ.

  ನಂತರ ವೃತ್ತಾಕಾರದಲ್ಲಿ ನಿಮ್ಮ ಮುಖವನ್ನು ಮಸಾಜ್ ಮಾಡಿ. 10 ನಿಮಿಷ ಕಾಯಿರಿ ಮತ್ತು ಹದವಾಗಿ ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ. ಇದು ನಿಮಗೆ ಉಬ್ಬಿಕೊಂಡಿರುವ ಕೆನ್ನೆಯನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತೆ. ವಾರಕ್ಕೆ ಕೊನೆಪಕ್ಷ ಎರಡು ಬಾರಿಯಾದರೂ ಮಾಡಿ ಮತ್ತು ಫಲಿತಾಂಶವನ್ನು ಗಮನಿಸಿಕೊಳ್ಳಿ.

  • ಮೊಟ್ಟೆ

  ಮೊಟ್ಟೆಯು ಪ್ರೊಟೀನ್ ಮತ್ತು ಅಲ್ಬುಮಿನ್ ನಿಂದ ಶ್ರೀಮಂತವಾಗಿದೆ. ಮೊಟ್ಟೆಯ ಬಿಳಿ ಭಾಗಕ್ಕೆ ಚರ್ಮವನ್ನು ಟೋನ್ ಮಾಡುವ ಸಾಮರ್ಥ್ಯವಿದೆ.ಇದು ಚರ್ಮಕ್ಕೆ ಹೊಳಪು ಬರುವಂತೆ ಮಾಡುವ ತಾಕತ್ತನ್ನು ಹೊಂದಿದೆ.

  ಬೇಕಾಗುವ ಸಾಮಗ್ರಿಗಳು

  ಎರಡು ಮೊಟ್ಟೆ, ಒಂದು ಟೇಬಲ್ ಸ್ಪೂನ್ ಹಾಲು, ಒಂದು ಟೇಬಲ್ ಸ್ಪೂನ್ ನಿಂಬೆರಸ, ಒಂದು ಟೇಬಲ್ ಸ್ಪೂನ್ ಜೇನುತುಪ್ಪ

  ಹೇಗೆ ಬಳಕೆ ಮಾಡಬೇಕು?

  ಎರಡು ಮೊಟ್ಟೆಯ ಬಿಳಿಭಾಗವನ್ನು ಒಂದು ಬೌಲ್ ನಲ್ಲಿ ಹಾಕಿ ಬ್ಲೆಂಡ್ ಮಾಡಿ. ಒಂದು ಟೇಬಲ್ ಸ್ಪೂನ್ ಹಾಲು, ಒಂದು ಟೇಬಲ್ ಸ್ಪೂನ್ ನಿಂಬೆರಸ, ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಅದಕ್ಕೆ ಸೇರಿಸಿ. ಮತ್ತೆ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ, ಈ ಮಾಸ್ಕ್ ನ್ನು ಮುಖಕ್ಕೆ ಮತ್ತು ಕುತ್ತಿಗೆಗೆ ಅಪ್ಲೈ ಮಾಡಿಕೊಳ್ಳಿ. ಅರ್ಧ ಗಂಟೆ ಹಾಗೆಯೇ ಇದ್ದು ಬಿಡಿ. ನಂತರ ಹದವಾಗಿ ಬಿಸಿ ಇರುವ ನೀರಿನಿಂದ ಮುಖವನ್ನು ತೊಳೆದು, ಒಣಗಿಸಿಕೊಳ್ಳಿ. ಇದನ್ನು ಪ್ರತಿದಿನವೂ ಮಾಡಿಕೊಳ್ಳಬಹುದು ಮತ್ತು ವೇಗವಾಗಿ ಫಲಿತಾಂಶವನ್ನು ಪಡೆಯಬಹುದು.

  English summary

  Say Goodbye To Cheek Fat In 10 Days

  There are various natural ways that can reduce a considerable amount of cheek fat and also firm your facial muscles. These ways might seem unconventional, but they are 100% safe and easy to do, and unlike the diet and pricey treatments, these natural ways won't cost you at all. So, let us see some home remedies to reduce cheek fate instantly in 10 day
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more