For Quick Alerts
ALLOW NOTIFICATIONS  
For Daily Alerts

  ಒಂದೇ ರಾತ್ರಿಯಲ್ಲಿ ಹೊಳೆಯುವ ತುಟಿಗಳನ್ನು ಪಡೆಯುವುದು ಹೇಗೆ?

  By Sushma Charhra
  |

  ತುಟಿಗಳು ನಮ್ಮ ಮುಖದಲ್ಲಿನ ಒಂದು ಆಕರ್ಷಣೀಯ ಅಂಗವಾಗಿದ್ದು ಅದನ್ನು ನಾವು ಯಾವಾಗಲೂ ಕೆಂಗುಲಾಬಿಯಂತೆ ಹೊಳೆಯುತ್ತಿರಬೇಕು ಎಂದೇ ಬಯಸುತ್ತೇವೆ. ಆದರೆ ಹೆಚ್ಚಿನವರು ತುಟಿ ಶುಷ್ಕವಾಗುವುದು, ಒಡೆಯುವುದು, ಬಣ್ಣ ಕಳೆದುಕೊಂಡಂತಾಗಿ ಕಳಾಹೀನವಾಗುವ ಸಮಸ್ಯೆಯನ್ನು ಎದುರಿಸುತ್ತೀವಿ ಮತ್ತು ಇದು ನಮ್ಮ ವ್ಯಕ್ತಿತ್ವದ ಮೇಲೂ ಪರಿಣಾಮವನ್ನುಂಟು ಮಾಡಬಹುದು.

  pink lips naturally in a week

  ಸೂರ್ಯನ ಕಿರಣಗಳಿಗೆ ಮುಖ ಒಡ್ಡುವುದು, ಅತಿಯಾಗಿ ಕಾಫಿ ಮತ್ತು ಟೀ ಸೇವನೆ, ಸರಿಯಾದ ಕಾಳಜಿ ತೆಗೆದುಕೊಳ್ಳದೇ ಇರುವುದರ ಪರಿಣಾಮವಾಗಿ ತುಟಿಗಳು ಶುಷ್ಕವಾಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ನಾವು ಕೆಮಿಕಲ್ ಕ್ರೀಮ್ ಗಳ ಮತ್ತು ಇತರೆ ಕೆಲವು ಟ್ರೀಟ್ ಮೆಂಟ್ ಗಳ ಮೊರೆ ಹೋಗುತ್ತೇವೆ ಮತ್ತು ಹೆಚ್ಚು ದಿನ ಉಳಿಯದ ಚಿಕಿತ್ಸೆ ಆಗಿರುವುದೂ ಇಲ್ಲ ಜೊತೆಗೆ ನಿಮಗೆ ಅಡ್ಡ ಪರಿಣಾಮಗಳನ್ನು ಮಾಡುವ ಸಾಧ್ಯತೆಗಳಿರುತ್ತದೆ.

  ಸರಳವಾದ ಮತ್ತು ನೈಸರ್ಗಿಕವಾದ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಮದ್ದುಗಳೇ ಇರುವಾಗ ಸುಮ್ಮನೆ ಯಾಕೆ ನೀವು ಇಂತಹ ಚಿಕಿತ್ಸೆಗಳ ಮೊರೆ ಹೋಗುತ್ತೀರಿ. ಎಸ್, ನೀವು ಸರಿಯಾಗಿಯೇ ಓದಿದ್ದೀರಿ... ಹೌದು ಹಲವಾರು ಮನೆಮದ್ದುಗಳಿವೆ ಮತ್ತು ಅವು ಸುಲಭದಲ್ಲಿ ನಿಮಗೆ ಹೊಳೆಯುವ , ಕೆಂದುಟಿಯನ್ನು ಕರುಣಿಸುತ್ತವೆ. ಹಾಗಾದ್ರೆ ಅವುಗಳು ಯಾವುದು ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ..

  1.ಗ್ಲಿಸರಿನ್

  ತುಟಿಗಳನ್ನು ಮಾಯ್ಚರೈಸ್ ಮಾಡಲು ಗ್ಲಿಸರಿನ್ ಒಂದು ಅತ್ಯದ್ಭುತವಾದ ಪದಾರ್ಥವಾಗಿದೆ.

  ಮಾಡುವ ವಿಧಾನ ಹೇಗೆ? :

  *ರಾತ್ರಿ ಮಲಗಲು ಹೋಗುವ ಮುನ್ನ ನಿಮ್ಮ ತುಟಿಗಳಿಗೆ ಗ್ಲಿಸರಿನ್ ಅನ್ನು ಹಚ್ಚಿಕೊಂಡು ಮಲಗಿ.

  * ನೀವು ಈ ರೆಮಿಡಿಯನ್ನು ಪ್ರತಿದಿನ ರಾತ್ರಿ ಬಳಸಬಹುದು ಮತ್ತು ನೈಸರ್ಗಿಕವಾಗಿ ಗ್ಲಾಸಿ ತುಟಿಗಳನ್ನು ಪಡೆಯಬಹುದು.

  2. ಆಪಲ್ ಸಿಡರ್ ವಿನೆಗರ್

  ತುಟಿಗಳಲ್ಲಾಗಿರುವ ಪಿಗ್ಮೆಂಟೇಷನ್ ನ್ನು ನಿವಾರಿಸಲು ಆಪಲ್ ಸಿಡರ್ ವಿನೆಗರ್ ಸಹಕಾರಿ ಮತ್ತು ನಿಮ್ಮ ತುಟಿಗಳನ್ನು ಇದು ಹೊಳೆಯುವಂತೆ ಮಾಡುತ್ತೆ.

  ಮಾಡುವ ವಿಧಾನ ಹೇಗೆ? :

  *ನೀರಿನಲ್ಲಿ ಕೆಲವು ಹನಿ ಆಪಲ್ ಸಿಡರ್ ವಿನೆಗರ್ ನ್ನು ಡೈಲ್ಯೂಟ್ ಮಾಡಿ..

  *ಹತ್ತಿಯ ತುಂಡುಗಳನ್ನು ಬಳಕೆ ಮಾಡಿ ಮತ್ತು ನಿಮ್ಮ ತುಟಿಗಳಿಗೆ ಮಿಶ್ರಣವನ್ನು ಹಚ್ಚಿ. 10 ರಿಂದ 15 ನಿಮಿಷದ ಹಾಗೆಯೇ ಇರಲಿ.

  *ಇದಾದ ನಂತರ,ಹದವಾಗಿ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.

  3.ಬೇಕಿಂಗ್ ಸೋಡಾ

  ಪಿಗ್ಮೆಂಟೇಷನನ್ನು ಕಡಿಮೆ ಮಾಡಲು ಬೇಕಿಂಗ್ ಸೋಡಾವನ್ನು ಬಳಕೆ ಮಾಡಬಹುದು. ಇದು ಕಪ್ಪಾಗಿರುವ ನಿಮ್ಮ ತುಟಿಗಳನ್ನು ತಿಳಿಗೊಳಿಸಲು ಸಹಾಯ ಮಾಡುತ್ತೆ, ಹಾಗಾಗಿ ನಿಮ್ಮ ತುಟಿಗಳು ಹೊಳೆಯುವಂತಾಗುತ್ತದೆ.

  ಮಾಡುವ ವಿಧಾನ ಹೇಗೆ? :

  * ಸ್ವಲ್ಪ ನೀರನ್ನು ಸೇರಿಸಿ 1 ಟೀ ಸ್ಪೂನ್ ಬೇಕಿಂಗ್ ಸೋಡಾವನ್ನು ಪೇಸ್ಟ್ ನಂತೆ ಮಾಡಿಕೊಳ್ಳಿ

  * ಈ ಪೇಸ್ಟನ್ನು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ.

  * 5 ನಿಮಿಷ ಹಾಗೆಯೇ ಬಿಡಿ ನಂತರ ಸಾಮಾನ್ಯ ನೀರಿನಲ್ಲಿ ತೊಳೆಯಿರಿ. ಒಂದಿನ ಬಿಟ್ಟು ಒಂದಿನ ಪ್ರಯತ್ನಿಸಿ ನೋಡಿ,,.

  4.ರೋಸ್ ವಾಟರ್

  ಇದು ರಕ್ತಸಂಚಾರವನ್ನು ಹೆಚ್ಚಿಸುತ್ತೆ ಮತ್ತು ತುಟಿಯ ಬಣ್ಣವನ್ನು ಹೆಚ್ಚಿಸಲು ನೆರವಾಗುತ್ತೆ

  ಮಾಡುವ ವಿಧಾನ ಹೇಗೆ? :

  * ನೀವು ಮಾಡಬೇಕಾಗಿರುವು ಇಷ್ಟೇ.. ತಣ್ಣನೆಯ ರೋಸ್ ವಾಟರ್ ನ್ನು ನಿಮ್ಮ ತುಟಿಗಳಿಗೆ ಒಂದು ಕಾಟನ್ ಬಾಲ್ ನ ಸಹಾಯದಿಂದ ಅಪ್ಲೈ ಮಾಡಿಕೊಳ್ಳಿ.

  *ಇದನ್ನು 2-3 ಬಾರಿ ಮಾಡಿ ನಂತರ ರಾತ್ರಿಯ ನಿದ್ದೆ ಮಾಡಿ. ಮಾರನೇ ದಿನ ಬೆಳಿಗ್ಗೆ ಎದ್ದ ನಂತರ ಮುಖವನ್ನು ತೊಳೆಯಿರಿ .

  5. ಅಲೋವೆರಾ

  ಅಲವೀರಾ ನಿಮ್ಮ ಚರ್ಮವನ್ನು ರಿಫ್ರೆಶ್ ಮಾಡುತ್ತದೆ, ಹಾಗಾಗಿ ಮಾಯ್ಚರ್ ಕಾಯ್ದಿರಿಸಿ ನಿಮ್ಮ ಚರ್ಮವು ಹೊಳೆಯುವಂತೆ ಮಾಡುತ್ತದೆ. ಅದು ತುಟಿಗಳಿಗೂ ಅನ್ವಯಿಸುತ್ತದೆ.

  ಮಾಡುವ ವಿಧಾನ ಹೇಗೆ? :

  *ಅಲೋವೆರಾ ಎಲೆಯನ್ನು ಕತ್ತರಿಸಿ ಮತ್ತು ಅದರ ಜೆಲನ್ನು ಹೊರ ತೆಗೆಯಿರಿ

  * ನೀವು ರೆಡಿ ಮೇಡ್ ಅಲವೀರಾ ಜೆಲನ್ನು ಬಳಕೆ ಮಾಡಬಹುದು, ಅದು ಮಾರ್ಕೆಟ್ ನಲ್ಲಿ ಲಭ್ಯವಿರುತ್ತೆ. ಆದರೆ ತಾಜಾ ಅಲವೀರಾ ಜೆಲ್ ಬಳಕೆ ಮಾಡುವುದು ಹೆಚ್ಚು ಒಳ್ಳೆಯದು.

  * ನಿಮ್ಮ ತುಟಿಗಳಿಗೆ ಅಪ್ಲೈ ಮಾಡಿ ಮತ್ತು ನಿಧಾನವಾಗಿ ಮಸಾಜ್ ಮಾಡಿ

  * ಪ್ರತಿದಿನ ಇದನ್ನು ಪುನರಾವರ್ತಿಸಿ ಉತ್ತಮ ಫಲಿತಾಂಶ ಪಡೆಯಿರಿ

  6. ಸಕ್ಕರೆ

  ಸಕ್ಕರೆಯು ಉತ್ತಮ ನೈಸರ್ಗಿಕ ಎಕ್ಸ್ಫ್ಲಾಯಿಟರ್ ಆಗಿ ಗುರುತಿಸಿಕೊಂಡಿದೆ.

  ಮಾಡುವ ವಿಧಾನ ಹೇಗೆ? :

  * ಒಂದು ಟೇಬಲ್ ಸ್ಪೂನ್ ಸಕ್ಕರೆ ಮತ್ತು ಸ್ವಲ್ಪ ನೀರನ್ನು ಮಿಶ್ರಣ ಮಾಡಿ, ಸಕ್ಕರೆಯನ್ನು ಕರಗಿಸಿ.

  * ಈ ಪೇಸ್ಟನ್ನು ನಿಮ್ಮ ತುಟಿಗಳಿಗೆ ಅಪ್ಲೈ ಮಾಡಿ, ಚೆನ್ನಾಗಿ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ .

  * ಪ್ರತಿ ದಿನವೂ ನೀವಿದನ್ನು ಹಚ್ಚಿಕೊಳ್ಳಿ. ರಾತ್ರಿ ಮಲಗುವು ಮುನ್ನ ಮಾಡಿ. ಉತ್ತಮವಾದ ಮತ್ತು ಬೇಗನೆಯ ಫಲಿತಾಂಶವನ್ನು ಪಡೆಯಬಹುದು.

  7. ದಾಳಿಂಬೆ

  ದಾಳಿಂಬೆ ಹಣ್ಣು ಕಪ್ಪಾಗಿರುವ ತುಟಿಗಳ ಬಣ್ಣವನ್ನು ಬೇಗನೆ ತಿಳಿಗೊಳಿಸಲು ನೆರವು ನೀಡುತ್ತದೆ.

  ಮಾಡುವ ವಿಧಾನ ಹೇಗೆ? :

  * 1 ಟೇಬಲ್ ಸ್ಪೂನ್ ನಷ್ಟು ದಾಳಿಂಬೆ ರಸವನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ 1 ಟೇಬಲ್ ಸ್ಪೂನ್ ಕ್ಯಾರೆಟ್ ಜ್ಯೂಸ್ ಸೇರಿಸಿ.

  * ಈ ಮಿಶ್ರಣವನ್ನು ನಿಮ್ಮ ತುಟಿಗಳಿಗೆ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ. ಮಾರನೇ ದಿನ ಬೆಳಿಗ್ಗೆ ತೊಳೆದುಕೊಳ್ಳಿ

  8. ಬಾದಾಮಿ ಎಣ್ಣೆ

  ಬಾದಾಮಿ ಎಣ್ಣೆಯಲ್ಲಿ ನಿಮ್ಮ ತುಟಿಗಳ ಬಣ್ಣ ಬದಲಾಗುವಿಕೆಯನ್ನು ತಡೆಯುವ ಶಕ್ತಿ ಇದೆ ಮತ್ತು ಇದು ನಿಮ್ಮ ತುಟಿಗಳು ಹೆಚ್ಚು ಬ್ರೈಟ್ ಆಗುವಂತೆ ಮಾಡುತ್ತದೆ.

  ಮಾಡುವ ವಿಧಾನ ಹೇಗೆ? :

  * ಕೆಲವು ಹನಿಗಳಷ್ಟು ಬಾದಾಮಿ ಎಣ್ಣೆ ತೆಗೆದುಕೊಳ್ಳಿ ಮತ್ತು ಅದನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ, ರಾತ್ರಿ ಪೂರ್ತಿ ಹಾಗೆಯೇ ಬಿಡಿ.

  * ಪ್ರತಿದಿನ ರಾತ್ರಿ ಮಲಗುವ ಮುನ್ನ ಇದನ್ನು ಮಾಡಿ ನೋಡಿ.

  9. ನಿಂಬೆ ರಸ ಮತ್ತು ಜೇನುತುಪ್ಪ

  ನಿಂಬೆ ರಸ ಮತ್ತು ಜೇನುತುಪ್ಪ ನಿಮ್ಮ ತುಟಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಆ ಮೂಲಕ ನಿಮ್ಮ ತುಟಿಗಳು ಮೃದು ಮತ್ತು ಅಂದವಾಗುತ್ತದೆ.

  ಮಾಡುವ ವಿಧಾನ ಹೇಗೆ? :

  *ನೀವೇನು ಮಾಡಬೇಕು ಎಂದರೆ, ಕೆಲವು ಹನಿಗಳಷ್ಟು ಜೇನುತುಪ್ಪ ಮತ್ತು 1 ಟೇಬಲ್ ಸ್ಪೂನ್ ನಿಂಬೆ ರಸ ಸೇರಿಸಿ

  *ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ನಿಮ್ಮ ತುಟಿಗಳಿಗೆ ಅಪ್ಲೈ ಮಾಡಿ

  *ಒಂದು ಗಂಟೆ ನಿಮ್ಮ ತುಟಿಗಳಲ್ಲಿ ಹಾಗೆಯೇ ಬಿಡಿ ನಂತರ ಒದ್ದೆ ಬಟ್ಟೆಯಿಂದ ಅದನ್ನು ಒರೆಸಿ .

  10. ಬೀಟ್ ರೂಟ್

  ಬೀಟ್ ರೂಟ್ ರಸವು ನಿಮ್ಮ ತುಟಿಗಳನ್ನು ಬ್ರೈಟ್ ಆಗಿಸುತ್ತೆ ಮತ್ತು ಗ್ಲಾಸಿ ಆಗಿ ಕಂಗೊಳಿಸುವಂತೆ ಮಾಡುತ್ತೆ.

  ಮಾಡುವ ವಿಧಾನ ಹೇಗೆ? :

  *ನೀವು ಮಾಡಬೇಕಾಗಿರುವು ಇಷ್ಟೇ, ಮೊದಲಿಗೆ ಬೀಟ್ ರೂಟ್ ಸಿಪ್ಪೆ ತೆಗೆದುಕೊಳ್ಳಬೇಕು. ಅದಕ್ಕೆ 3 ರಿಂದ ನಾಲ್ಕು ಪುದೀನಾ ಎಲೆ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿ

  *ಬೀಟ್ ರೂಟ್ ನ್ನು ಕಟ್ ಮಾಡಿ ಮತ್ತು ಅದನ್ನು ರುಬ್ಬಿಕೊಳ್ಳಿ

  * ರಸವನ್ನು ಸೋಸಿಕೊಳ್ಳಿಯ. ಪುದೀನಾ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿ..

  * ಕಾಟನ್ ಬಟ್ಟೆ ಬಳಸಿ ನಿಮ್ಮ ತುಟಿಗಳಿಗೆ ಅದನ್ನು ಅಪ್ಲೈ ಮಾಡಿ . 15 ನಿಮಿಷ ಹಾಗೆಯೇ ಬಿಡಿ ಮತ್ತು ನಂತರ ತೊಳೆಯಿರಿ.

  English summary

  How To Get Glossy Lips Overnight?

  There are several homemade remedies that can be easily used to have those natural-looking glossy, pink and soft lips. So, let's see what they are.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more