For Quick Alerts
ALLOW NOTIFICATIONS  
For Daily Alerts

ಅಡುಗೆ ಸೋಡಾ ಬಳಸಿ ಮನೆಯಲ್ಲಿಯೇ ಮಾಡಿದ ಟೂತ್‌ಪೇಸ್ಟ್

|

ನಾವು ಹೊರಗೆ ಸುಂದರವಾಗಿದ್ದು ನಮ್ಮ ಆಂತರಿಕ ಆರೋಗ್ಯ ಸರಿಯಾಗಿಲ್ಲ ಎಂದಾದಲ್ಲಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಬಾಯಿಯ ಸ್ವಚ್ಛತೆ ಎಂಬುದು ನಮ್ಮ ಆರೋಗ್ಯಕ್ಕೆ ಅತಿ ಮುಖ್ಯವಾದುದು. ನಾವು ಸರಿಯಾಗಿ ಹಲ್ಲುಜ್ಜಿಲ್ಲ ಎಂದಾದಲ್ಲಿ ಬಾಯಿ ವಾಸನೆ, ಹುಳುಲು ಹಲ್ಲುಗಳು ಇವೇ ಮೊದಲಾದ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಇಂದು ಮಾರುಕಟ್ಟೆಗಳಲ್ಲಿ ಬೇರೆ ಬೇರೆ ರೀತಿಯ ಟೂತ್‌ಪೇಸ್ಟ್ ಬ್ರ್ಯಾಂಡ್‌ಗಳು ಬರುತ್ತಿವೆ ಆದರೆ ಇವುಗಳು ಉತ್ತಮ ಆರೋಗ್ಯವನ್ನು ನೀಡಬಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ.

ಮನೆಯಲ್ಲೇ ಟೂತ್‌ಪೇಸ್ಟ್ ಮಾಡುವ ವಿಧಾನವನ್ನು ನೀವು ತಿಳಿದುಕೊಂಡರೆ ಅದು ಇನ್ನೂ ಉತ್ತಮವಲ್ಲವೇ? ಮನೆಯಲ್ಲೇ ಟೂತ್‌ಪೇಸ್ಟ್ ತಯಾರಿಸುವುದು ನಿಮ್ಮ ಬಾಯಿಯನ್ನು ಬ್ಯಾಕ್ಟೀರಿಯಾದಿಂದ ಸಂರಕ್ಷಿಸುತ್ತದೆ ಮತ್ತು ನಿಮ್ಮ ಬಾಯಿಯ ಆರೋಗ್ಯವನ್ನು ಕೂಡ ಕಾಪಾಡುತ್ತದೆ.

homemade toothpaste Using baking soda

Most Read: ಈ 5 ಲೋಹಗಳ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ!

ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿಕೊಂಡು ನೀವು ಮನೆಯಲ್ಲೇ ಟೂತ್‌ಪೇಸ್ಟ್ ಅನ್ನು ತಯಾರಿಸಬಹುದಾಗಿದೆ. ಅಂತೆಯೇ ಈ ಟೂತ್‌ಪೇಸ್ಟ್‌ಗಳು ಬಳಸಲು ಆರೋಗ್ಯಕರವಾಗಿದ್ದು ಸುರಕ್ಷಿತವಾಗಲಿವೆ. ಪ್ರತಿಯೊಬ್ಬರೂ ಈ ಟೂತ್‌ಪೇಸ್ಟ್ ಅನ್ನು ಬಳಸಬಹುದಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಟೂತ್‌ಪೇಸ್ಟ್ ಅನ್ನು ಬಳಸಬಹುದು. ಇದು ಕಡಿಮೆ ಖರ್ಚಿನದಾಗಿದ್ದು ಮನೆಯಲ್ಲೇ ಹೆಚ್ಚಿನ ಸಮಯವನ್ನು ವಿನಿಯೋಗಿಸದೆಯೇ ಇದನ್ನು ಸಿದ್ಧಪಡಿಸಬಹುದಾಗಿದೆ. ಹಾಗಿದ್ದರೆ ಈ ಟೂತ್‌ಪೇಸ್ಟ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳೇನು ಎಂಬುದನ್ನು ನೋಡಿ

ಸಾಮಾಗ್ರಿಗಳು

* 2/3 ಕಪ್ ಅಡುಗೆ ಸೋಡಾ
* 1 ಪ್ ನೀರು
* 2-3 ಹನಿ ಪುದೀನಾ ರಸ

Most Article: ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...

ಮಾಡುವುದು ಹೇಗೆ

* ಒಂದು ಪಾತ್ರೆಯಲ್ಲಿ ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ತೆಗೆದುಕೊಳ್ಳಿ
* ನಂತರ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಶ್ರಣವನ್ನು ದಪ್ಪನೆ ಮಾಡಿಕೊಳ್ಳಿ
* ಈಗ ಪುದೀನಾ ರಸವನ್ನು ಹಾಕಿ ಮತ್ತು ಬ್ಲೆಂಡ್ ಮಾಡಿಕೊಳ್ಳಿ. ನಿಮ್ಮ ಪೇಸ್ಟ್ ದಪ್ಪವಾಗಿದೆ ಎಂಬುದನ್ನು ಖಚಿತಪಡಿಸಿ
* ಒಂದು ಪಾತ್ರೆಯಲ್ಲಿ ಮಿಶ್ರಣವನ್ನು ಸ್ಟೋರ್ ಮಾಡಿ ಮತ್ತು ನಂತರದ ಬಳಕೆಗಾಗಿ ಅದನ್ನು ಹಾಗೆಯೆ ಇರಿಸಿ. ಒಣ ಪ್ರದೇಶದಲ್ಲಿ ಅದನ್ನು ಇರಿಸಿ.
* ನಿಮ್ಮ ದೈನಂದಿನ ಪೇಸ್ಟ್ ಅನ್ನು ಬಳಸದೆಯೇ ಈ ಟೂತ್‌ಪೇಸ್ಟ್ ಅನ್ನು ನೀವು ಬಳಸಬಹುದು.

ಟೂತ್‌ಪೇಸ್ಟ್ ಎಷ್ಟು ಸಮಯದವರೆಗೆ ಬರುತ್ತದೆ?

ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಟೂತ್‌ಪೇಸ್ಟ್ ಅನ್ನು ಒಂದು ವಾರದ ಸಮಯ ಬಳಸಬಹುದು. ನಿಮಗೆ ಇನ್ನೂ ಹೆಚ್ಚು ದಿನ ಈ ಪೇಸ್ಟ್ ಬಳಸಬೇಕು ಎಂದಾದಲ್ಲಿ ನೀವು ಸಾಮಾಗ್ರಿಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು.

* ಬೇಕಿಂಗ್ ಸೋಡಾವನ್ನು ನೀವು ಬಳಸುತ್ತೀರಿ ಎಂದಾದಲ್ಲಿ ಅದನ್ನು ನಿಯಮಿತ ಟೂತ್‌ಪೇಸ್ಟ್‌ನಂತೆ ನಿಮಗೆ ನುಂಗಲು ಸಾಧ್ಯವಿಲ್ಲ.
* ಬಳಕೆಯ ಸಂದರ್ಭದಲ್ಲಿ ಟೂತ್‌ಪೇಸ್ಟ್ ಒಣಗುತ್ತಿದೆ ಎಂದರೆ, ಅದಕ್ಕೆ ಸ್ವಲ್ಪ ನೀರು ಹಾಕಿ ಅದನ್ನು ಮಿಶ್ರ ಮಾಡಿ ನಂತರ ಬಳಸಿ. ಆದರೆ ಸ್ವಲ್ಪ ಮಾತ್ರ ನೀರು ಹಾಕಬೇಕು ಎಂಬುದನ್ನು ಮರೆಯಬೇಡಿ.
* ಗಾಳಿಯಾಡದ ಡಬ್ಬದಲ್ಲಿ ಯಾವಾಗಲೂ ಟೂತ್‌ಪೇಸ್ಟ್ ಅನ್ನು ಸಂಗ್ರಹಿಸಿ ಇದು ದೀರ್ಘಕಾಲದವರೆಗೆ ಬರುತ್ತದೆ
*ಕೊನೆಯದಾಗ, ಉತ್ತಮ ಗುಣಮಟ್ಟದ ಟೂತ್‌ಬ್ರಶ್ ಬಳಸಿ ಇದರಿಂದ ನಿಮ್ಮ ವಸಡು ಗಟ್ಟಿ ಮತ್ತು ಆರೋಗ್ಯಕರವಾಗಿರುತ್ತದೆ.

English summary

homemade toothpaste Using baking soda

You might not know this but baking soda is a well-known odour remover - which is the primary reason why it is one of the choicest options for making a toothpaste - it will keep you away from bad breath for a long time. Also, we understand how difficult and boring it might be at times to gather ingredients and make something useful out of it. But trust us, this baking soda toothpaste is something different. It is very easy to prepare and will barely take 5 minutes of your time.
X
Desktop Bottom Promotion