ಕಂಕುಳಲ್ಲಿ ಕಪ್ಪಾಗಿದ್ದರೆ ಚಿಟಿಕೆಯಷ್ಟು ಅಡುಗೆ ಸೋಡಾ ಬಳಸಿ!

Posted By: Divya Pandith
Subscribe to Boldsky

ಕೆಲವರು ತೋಳಿಲ್ಲದ ಉಡುಗೆಯನ್ನು ಧರಿಸಲು ಹಿಂದೆ ಮುಂದೆ ಯೋಚಿಸುತ್ತಾರೆ. ಇದಕ್ಕೆ ಕಾರಣ ಕಪ್ಪಾಗಿರುವ ಕಂಕುಳು (ಡಾರ್ಕ್ ಅಂಡರ್‍ಆರ್ಮ್). ಅಂಡರ್ ಆರ್ಮ್‍ಗಳಿಗೆ ವಿವಿಧ ಬಗೆಯ ಕ್ರೀಮ್‍ಗಳ ಬಳಕೆ ಮಾಡುವುದು, ಚರ್ಮವನ್ನು ಗಾಢವಾಗಿ ಉಜ್ಜುವುದು, ಅನುಚಿತ ರೀತಿಯಲ್ಲಿ ಅಂಡರ್ ಆರ್ಮ್ ಮಾಡಿಸುವುದರಿಂದಲೂ ಕಂಕುಳ ಭಾಗ ಕಪ್ಪಾದ ಚರ್ಮವನ್ನು ಹೊಂದುತ್ತದೆ. ಕಂಕುಳು ಭಾಗದಲ್ಲಿ ಅಧಿಕ ಬೆವರು ಸಂಗ್ರಹವಾಗುವ ಸ್ಥಳವಾದ್ದರಿಂದ ಸೂಕ್ತ ರೀತಿಯ ಸ್ವಚ್ಛತೆಯು ಪ್ರಮುಖವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಬಳಸುವ ಸುಗಂಧ ದ್ರವ್ಯಗಳು, ಪೌಡರ್, ಕ್ರೀಮ್ ಎಲ್ಲವೂ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತವೆ. ಮೃತ ಜೀವನಕೋಶದ ಶೇಖರಣೆಯ ಪರಿಣಾಮದಿಂದಲೂ ಕಂಕುಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದು. ಈ ಸಮಸ್ಯೆಯಿಂದ ಬಹುಬೇಗ ಹೊರ ಬರಬೇಕು ಎಂದರೆ ಅಡುಗೆ ಸೋಡಾವನ್ನು ಬಳಸಬಹುದು. ಆದರೆ ಇದರ ಬಳಕೆಯ ವಿಧಾನ ಸೂಕ್ತವಾಗಿ ಇರಬೇಕು. ಹಾಗಾದರೆ ಆ ವಿಧಾನಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....

ಅಡುಗೆ ಸೋಡಾ ಪೇಸ್ಟ್

ಅಡುಗೆ ಸೋಡಾ ಪೇಸ್ಟ್

- 2 ಟೇಬಲ್ ಚಮಚ ನೀರಿಗೆ 1 ಟೇಬಲ್ ಚಮಚ ಅಡುಗೆ ಸೋಡಾವನ್ನು ಮಿಶ್ರಮಾಡಿ.

- ಮಿಶ್ರಣವನ್ನು ತೋಳಿನ ಕೆಳಭಾಗದಲ್ಲಿ ಅನ್ವಯಸಿ, ಸ್ವಲ್ಪ ಸಮಯಗಳ ಕಾಲ ಮಸಾಜ್ ಮಾಡಿ.

- 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

- ಬಿಳಿಯಾದ ಅಂಡರ್ ಆರ್ಮ್ ಗಾಗಿ ವಾರದಲ್ಲಿ 3-4 ಬಾರಿ ಈ ಕ್ರಮವನ್ನು ಅನ್ವಯಿಸಿ.

ಅಡುಗೆ ಸೋಡಾ ಮತ್ತು ತೆಂಗಿನ ಎಣ್ಣೆ

ಅಡುಗೆ ಸೋಡಾ ಮತ್ತು ತೆಂಗಿನ ಎಣ್ಣೆ

- 1 ಟೇಬಲ್ ಚಮಚ ಅಡುಗೆ ಸೋಡಾಕ್ಕೆ 3-4 ಟೀಚಮಚ ಎಣ್ಣೆಯನ್ನು ಮಿಶ್ರಮಾಡಿ.

- ಮಿಶ್ರಣವನ್ನು ಕಂಕುಳಿಗೆ ಅನ್ವಯಿಸಿ, 10-15 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಉತ್ಸಾಹವಿಲ್ಲದ ನೀರಿನಲ್ಲಿ ಸ್ವಚ್ಛಗೊಳಿಸಿ.

- ವಾರಕ್ಕೆ 2 ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲವನ್ನು ಅನ್ವಯಿಸಬಹುದು.

ಅಡುಗೆ ಸೋಡಾ ಮತ್ತು ಗ್ಲಿಸರಿನ್

ಅಡುಗೆ ಸೋಡಾ ಮತ್ತು ಗ್ಲಿಸರಿನ್

- 2 ಟೇಬಲ್ ಚಮಚ ಅಡುಗೆ ಸೋಡಾ, 1 ಟೀ ಚಮಚ ಗ್ಲಿಸರಿನ್ ಮತ್ತು 2 ಟೇಬಲ್ ಚಮಚ ಗುಲಾಬಿ ನೀರನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

- 15 ನಿಮಿಷಗಳ ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ನಿಯಮಿತವಾದ ಬಳಕೆಯಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಅಡುಗೆ ಸೋಡಾ, ಕಾರ್ನ್‍ಸ್ಟಾರ್ಚ್ ಮತ್ತು ವಿಟಮಿನ್ ಇ ಎಣ್ಣೆ

ಅಡುಗೆ ಸೋಡಾ, ಕಾರ್ನ್‍ಸ್ಟಾರ್ಚ್ ಮತ್ತು ವಿಟಮಿನ್ ಇ ಎಣ್ಣೆ

- 1 ಟೀ ಚಮಚ ಅಡುಗೆ ಸೋಡಾ, 1 ಟೀ ಚಮಚ ಕಾರ್ನ್‍ಸ್ಟಾರ್ಚ್ ಮತ್ತು 2 ವಿಟಮಿನ್ ಇ ಮಾತ್ರೆಯ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

- ಸ್ವಲ್ಪ ಸಮಯ ಮೃದುವಾಗಿ ಮಸಾಜ್ ಮಾಡಿ, 15 ನಿಮಿಷಗಳ ಕಾಲ ಬಿಡಿ.

- ಬಳಿಕ ತಣ್ಣೀರಿನಿಂದ ಸ್ವಚ್ಛಗೊಳಿಸಿ.

- ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಅಡುಗೆ ಸೋಡಾ ಮತ್ತು ಸೌತೆಕಾಯಿ

ಅಡುಗೆ ಸೋಡಾ ಮತ್ತು ಸೌತೆಕಾಯಿ

- 2 ಟೀ ಚಮಚ ಅಡುಗೆ ಸೋಡಾ ಮತ್ತು 2-3 ಟೇಬಲ್ ಚಮಚ ಸೌತೆಕಾಯಿ ಪೇಸ್ಟ್ ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

- 15-20 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ನಿಯಮಿತವಾಗಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.

ಅಡುಗೆ ಸೋಡಾ ಮತ್ತು ಆವಕಾಡೊ (ಬೆಣ್ಣೆ ಹಣ್ಣು)

ಅಡುಗೆ ಸೋಡಾ ಮತ್ತು ಆವಕಾಡೊ (ಬೆಣ್ಣೆ ಹಣ್ಣು)

- 2 ಟೀ ಚಮಚ ಅಡುಗೆ ಸೋಡಾದೊಂದಿಗೆ ಹಣ್ಣಾದ ಆವಕಾಡೊ (ಬೆಣ್ಣೆ ಹಣ್ಣು) ಹಣ್ಣಿನ ತಿರುಳನ್ನು ಬೆರೆಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ತೋಳಿನ ಕೆಳಭಾಗದಲ್ಲಿ ಅನ್ವಯಿಸಿ.

- 20 ನಿಮಿಷಗಳ ಕಾಲ ಆರಲು ಬಿಡಿ.

- ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ತಿಂಗಳಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಅಡುಗೆ ಸೋಡಾ ಮತ್ತು ಹಾಲು

ಅಡುಗೆ ಸೋಡಾ ಮತ್ತು ಹಾಲು

- 2 ಟೀ ಚಮಚ ಅಡುಗೆ ಸೋಡಾ ಮತ್ತು 2-3 ಟೇಬಲ್ ಚಮಚ ಹಾಲನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ತೋಳಿನ ಕೆಳಭಾಗಕ್ಕೆ ಅನ್ವಯಿಸಿ.

- 15 ನಿಮಿಷಗಳ ಕಾಲ ಆರಲು ಬಿಡಿ.

- ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

- ಸಮಸ್ಯೆಗಳ ನಿವಾರಣೆಗೆ ವಾರದಲ್ಲಿ ಎರಡು ಬಾರಿ ಈ ಕ್ರಮವನ್ನು ಅನ್ವಯಿಸಿ.

English summary

homemade-scrubs-dark-underarms

When summers reach their peak in our country, and the sun is reigning the skies with full force, most of us whip out our sleeveless clothes. Having dark or discoloured underarm skin can, however, prove to be a summer mood dampener. Such a situation forces us to forgo our favourite item of summer clothing. In fact, many of us do not even know what could be the cause of dark underarms. So let us first figure out the probable causes for dark underarms.