Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಬೆಳ್ಳುಳ್ಳಿ ಬಳಸಿ ತ್ವಚೆಯ ಮೇಲಿನ ಮಚ್ಚೆ ನಿವಾರಿಸಲು ಮನೆಮದ್ದುಗಳು
ಮಚ್ಚೆಗಳು ನಮ್ಮ ದೇಹದಲ್ಲಿ ಹುಟ್ಟುತ್ತಲೇ ಬರುವುದು ಅಥವಾ ಬೆಳೆಯುತ್ತಿರುವಂತೆ ಇದು ಕಾಣಿಸಿಕೊಳ್ಳುವುದು. ಕಂದು ಅಥವಾ ಕಪ್ಪು ಬಣ್ಣದ ಮಚ್ಚೆಗಳು ವ್ಯಕ್ತಿಯೊಬ್ಬನನ್ನು ಗುರುತಿಗೂ ಮಹತ್ವದ್ದಾಗಿದೆ. ಆದರೆ ಇಂತಹ ಮಚ್ಚೆಗಳು ಕೆಲವೊಂದು ಸಲ ದೊಡ್ಡ ಗಾತ್ರ ಅಥವಾ ಆಕಾರದಲ್ಲಿರುವುದು. ಇದು ಯಾವುದೇ ಹಾನಿಯುಂಟು ಮಾಡದೆ ಇದ್ದರೂ ಮುಖ, ಕೈ ಅಥವಾ ಹೊರಗಡೆ ಕಾಣುವಂತಹ ದೇಹದ ಭಾಗದಲ್ಲಿ ಇದು ಇದ್ದರೆ ಆಗ ನಮಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿಯಾಗುವುದು.

ಇದನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬಹುದಾಗಿದೆ. ಇದರೊಂದಿಗೆ ಕೆಲವೊಂದು ನೈಸರ್ಗಿಕ ವಿಧಾನಗಳಿಂದಲೂ ಇದನ್ನು ತೆಗೆಯಬಹುದು. ಈ ಲೇಖನದಲ್ಲಿ ಬೆಳ್ಳುಳ್ಳಿ ಬಳಸಿಕೊಂಡು ಮಚ್ಚೆ ತೆಗೆಯುವುದು ಹೇಗೆ ಎಂದು ಹೇಳಲಿದ್ದೇವೆ. ಬೆಳ್ಳುಳ್ಳಿಯು ದೇಹದಲ್ಲಿ ಅತಿಯಾಗಿ ಮೆಲನಿನ್ ಉತ್ಪತ್ತಿಯಾಗದಂತೆ ತಡೆಯುವುದು ಮತ್ತು ಇದರಿಂದ ಕಪ್ಪು ಕಲೆಗಳು ಮತ್ತು ಬಣ್ಣ ಮಾಸಿರುವುದನ್ನು ನಿವಾರಣೆ ಮಾಡಬಹುದು.

ಬೆಳ್ಳುಳ್ಳಿ
ಮಚ್ಚೆ ನಿವಾರಣೆ ಮಾಡಲು ಇದು ತುಂಬಾ ಮೂಲ ವಿಧಾನವಾಗಿದೆ. ಬೆಳ್ಳುಳ್ಳಿ ಸಿಪ್ಪೆ ತೆಗೆದು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ಮಚ್ಚೆ ಇರುವ ಜಾಗದಲ್ಲಿ ಇಟ್ಟುಕೊಂಡು ಅದಕ್ಕೆ ಬ್ಯಾಂಡೇಜ್ ಕಟ್ಟಿಕೊಳ್ಳಿ. 4-5 ಗಂಟೆಗಳ ಕಾಲ ಹಾಗೆ ಇರಲಿ. ಇದರ ಬಳಿಕ ಬ್ಯಾಂಡೇಜ್ ತೆಗೆದು ನೀರಿನಿಂದ ತೊಳೆಯಿರಿ. ದಿನದಲ್ಲಿ ಮೂರು ಸಲ ನೀವು ಈ ವಿಧಾನ ಅನುಸರಿಸಿ.

ಬೆಳ್ಳುಳ್ಳಿ ಮತ್ತು ಪೆಟ್ರೋಲಿಯಂ ಜೆಲ್
ಸಿಪ್ಪೆ ತೆಗೆದಿರುವಂತಹ 3-4 ಎಸಲು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದರ ರಸ ತೆಗೆಯಿರಿ. ಮೊದಲು ಮಚ್ಚೆಗೆ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ಹೆಚ್ಚಿಕೊಳ್ಳಿ. ಇದರಿಂದ ಬೆಳ್ಳುಳ್ಳಿ ಉಂಟುಮಾಡುವ ಉರಿಯನ್ನು ನಿವಾರಿಸಬಹುದು. ಕ್ಯೂಟಿಪ್ ಬಳಸಿಕೊಂಡು ಬೆಳ್ಳುಳ್ಳಿ ರಸವನ್ನು ಮಚ್ಚೆ ಇರುವಂತಹ ಜಾಗಕ್ಕೆ ಹಚ್ಚಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ಎದ್ದ ಬಳಿಕ ತೊಳೆಯರಿ. ನಿಮಗೆ ಫಲಿತಾಂಶ ಸಿಗುವ ತನಕ ನೀವು ಇದನ್ನು ಪ್ರತಿನಿತ್ಯ ಬಳಸಿ.

ಬೆಳ್ಳುಳ್ಳಿ ಮತ್ತು ಹರಳೆಣ್ಣೆ
2-3 ಬೆಳ್ಳುಳ್ಳಿ ಎಸಲುಗಳು ಮತ್ತು ಕೆಲವು ಹನಿ ಹರಳೆಣ್ಣೆ ಇದಕ್ಕೆ ಬೇಕು. ಜಜ್ಜಿಕೊಂಡು ಅಥವಾ ರುಬ್ಬಿ ಬೆಳ್ಳುಳ್ಳಿ ಪೇಸ್ಟ್ ಮಾಡಿ. ಈ ಪೇಸ್ಟ್ ಗೆ ಕೆಲವು ಹನಿ ಹರಳೆಣ್ಣೆ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮಚ್ಚೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ಇದನ್ನು ತೊಳೆದು, ಒರೆಸಿಕೊಳ್ಳಿ. ನಿಮಗೆ ವೇಗದ ಫಲಿತಾಂಶ ಬೇಕಿದ್ದರೆ ಆಗ ನೀವು ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಿ. ಪೇಸ್ಟ್ ಹಚ್ಚಿಕೊಂಡ ಬಳಿಕ ಬ್ಯಾಂಡೇಜ್ ಸುತ್ತಿದರೆ ಒಳ್ಳೆಯದು.

ಬೆಳ್ಳುಳ್ಳಿ ಮತ್ತು ವಿನೇಗರ್
ಈ ಮನೆಮದ್ದಿಗೆ ನೀವು ಆ್ಯಪಲ್ ಸೀಡರ್ ವಿನೇಗರ್ ಅಥವಾ ಸಾಮಾನ್ಯ ಬಿಳಿ ವಿನೇಗರ್ ಬಳಸಬಹುದು. ಬೆಳ್ಳುಳ್ಳಿ ಎಸಲುಗಳನ್ನು ತೆಗೆದುಕೊಂಡು ರುಬ್ಬಿ ಪೇಸ್ಟ್ ಮಾಡಿ. ವಿನೇಗರ್ ಹಾಕಿಕೊಂಡು ಪೇಸ್ಟ್ ನ್ನು ತೆಳು ಮಾಡಿ. ಇದನ್ನು ಮಚ್ಚೆ ಇರುವಂತಹ ಜಾಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಇಡಿ. 30 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆದು, ಒರೆಸಿಕೊಳ್ಳಿ. ಪ್ರತಿನಿತ್ಯ ಇದನ್ನು ಬಳಸಿ.

ಬೆಳ್ಳುಳ್ಳಿ ಮತ್ತು ಈರುಳ್ಳಿ
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಜಜ್ಜಿಕೊಂಡು ರಸ ತೆಗೆಯಿರಿ. ಈ ಎರಡರ ರಸವನ್ನು ಮಿಶ್ರಣ ಮಾಡಿಕೊಂಡು ಹತ್ತಿ ಉಂಡೆಯಿಂದ ಮಚ್ಚೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ. ನೀರಿನಿಂದ ತೊಳೆದು, ಒರೆಸಿಕೊಳ್ಳಿ. ದಿನದಲ್ಲಿ ಎರಡು ಸಲ ಇದನ್ನು ನೀವು ಬಳಸಿ. ಬೆಳ್ಳುಳ್ಳಿ ಜತೆಗೆ ಈರುಳ್ಳಿ ಬಳಸಿಕೊಂಡಾಗ ಕಪ್ಪ/ಕಂದು ಕಲೆಗಳು ಮಾಯವಾಗುವುದು.
ಕೆಲವು ಸಲಹೆಗಳು
1. ಬೆಳ್ಳುಳ್ಳಿ ಬಳಸುತ್ತಿರುವ ಕಾರಣದಿಂದಾಗಿ ಉರಿ ಕಂಡುಬರಬಹುದು. ಇದನ್ನು ತಪ್ಪಿಸಲು ನೀವು ಬೆಳ್ಳುಳ್ಳಿ ಪೇಸ್ಟ್ ನ್ನು ನೀರಿಗೆ ಹಾಕಿ, ಬಳಿಕ ಹಚ್ಚಿಕೊಳ್ಳಿ.
2. ಬೆಳ್ಳುಳ್ಳಿ ಹಚ್ಚಿದ ಬಳಿಕ ಮುಖವು ತುಂಬಾ ಒಣಗಿದ್ದರೆ ಆಗ ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
3. ಬೆಳ್ಳುಳ್ಳಿ ಹಚ್ಚಿಕೊಂಡ ಬಳಿಕ ಮಚ್ಚೆಗಳನ್ನು ಉಜ್ಜಬೇಡಿ.
4. ಬಿಸಿಲಿಗೆ ಅತಿಯಾಗಿ ಮೈಯೊಡ್ಡಬೇಡಿ. ಬಿಸಿಲಿನಿಂದಾಗಿ ಕಲೆಗಳು ಚರ್ಮದಲ್ಲಿ ಮೂಡುವುದು.



Click it and Unblock the Notifications
