For Quick Alerts
ALLOW NOTIFICATIONS  
For Daily Alerts

ಕೈ ಬೆರಳಿನ ಉಗುರುಗಳನ್ನು ಶೀಘ್ರವಾಗಿ ಬೆಳೆಸಲು ನೈಸರ್ಗಿಕ ಮನೆಮದ್ದುಗಳು

|

ಉದ್ದವಾದ, ಸುಂದರ ಹಾಗೂ ಆರೋಗ್ಯವಂತ ಉಗುರುಗಳನ್ನು ಬೆಳೆಸುವುದು ಅನೇಕರಿಗೆ ಅತಿ ಇಷ್ಟದ ಸಂಗತಿಯಾಗಿದೆ. ಇದು ಫ್ಯಾಷನ್ ಕೂಡ ಆಗಿದೆ. ಆದರೆ ಬೆಳೆದ ಉಗುರುಗಳು ಸೀಳು ಬಿಟ್ಟಾಗ ಅಥವಾ ತನ್ನ ಹೊಳಪು ಕಳೆದುಕೊಂಡಾಗ ಅವನ್ನು ಕತ್ತರಿಸಿ ತೆಗೆಯುವುದು ಅನಿವಾರ್ಯವಾಗುತ್ತದೆ. ಉಗುರುಗಳ ಸೌಂದರ್ಯವರ್ಧನೆಗಾಗಿ ಬಹುತೇಕರು ಸ್ಪಾ ಹಾಗೂ ಸಲೂನ್‌ಗಳಿಗೆ ಹೋಗುತ್ತಾರೆ. ಇನ್ನು ಕೆಲವರು ದುಬಾರಿ ವೆಚ್ಚದ ಮ್ಯಾನಿಕ್ಯೂರ್ ಹಾಗೂ ಇನ್ನಿತರ ಸೌಂದರ್ಯವರ್ಧಕ ವಿಧಾನಗಳ ಮೊರೆ ಹೋಗುತ್ತಾರೆ. ಆದರೆ ಸುಂದರ, ಆರೋಗ್ಯಕರ ಉಗುರುಗಳಿಗಾಗಿ ಇವನ್ನು ಬಿಟ್ಟು ಬೇರೆ ದಾರಿಯಿಲ್ಲವೆ ಎಂದು ನಿಮಗೆ ಅನಿಸಿರಬಹುದು. ಖಂಡಿತವಾಗಿಯೂ ಮನೆಯಲ್ಲಿಯೇ ಕೆಲ ಸುಲಭ ವಿಧಾನಗಳ ಮೂಲಕ ಸುಂದರ, ಆರೋಗ್ಯಕರ ಉಗುರುಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಸ್ಪಾ ಅಥವಾ ಸಲೂನ್‌ಗಳಿಗೆ ಹೋಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುವ ಬದಲಾಗಿ ಕೆಲ ನೈಜ ಹಾಗೂ ಸಹಜ ವಿಧಾನಗಳ ಮೂಲಕ ಸುಂದರವಾದ ಉಗುರುಗಳನ್ನು ಶೀಘ್ರವಾಗಿ ಬೆಳೆಸಬಹುದು. ಅದರಲ್ಲೂ ಮನೆಯಲ್ಲಿಯೇ ಕೆಲ ಸುಲಭ ಮನೆಮದ್ದುಗಳನ್ನು ತಯಾರಿಸಿ ಬಳಸುವ ಮೂಲಕ ಉಗುರು ಸೌಂದರ್ಯ ನಿಮ್ಮದಾಗಿಸಿಕೊಳ್ಳಬಹುದು. ಮನೆಯಲ್ಲಿ ಅಡುಗೆ ಮನೆಯಲ್ಲಿ ಯಾವಾಗಲೂ ಇರುವ ಕೆಲ ವಸ್ತುಗಳನ್ನು ಬಳಸಿ ಉಗುರುಗಳ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಾಧ್ಯ. ಇದರಿಂದ ಬಿರುಕು ಬಿಟ್ಟ ಉಗುರುಗಳ ಸಮಸ್ಯೆಯನ್ನೂ ದೂರ ಮಾಡಬಹುದು. ಯಾವೆಲ್ಲ ಸುಲಭ ಮನೆಮದ್ದುಗಳ ಮೂಲಕ ಉಗುರುಗಳನ್ನು ಸುಂದರವಾಗಿಟ್ಟು ಕೊಳ್ಳಬಹುದು ಎಂಬುದನ್ನು ತಿಳಿಸಿದ್ದೇವೆ. ನೀವೂ ಓದಿ ಟ್ರೈ ಮಾಡಿ ನೋಡಿ. ಶೀಘ್ರವಾಗಿ ಹಾಗೂ ಸುಂದರ ಉಗುರುಗಳ ಬೆಳವಣಿಗೆಗೆ ಚಮತ್ಕಾರಿ ಉಪಾಯಗಳು:

ಬಾಳೆಹಣ್ಣು ಮತ್ತು ಮೊಟ್ಟೆ

ಬಾಳೆಹಣ್ಣು ಮತ್ತು ಮೊಟ್ಟೆ

ಬಾಳೆಹಣ್ಣು ಹಾಗೂ ಮೊಟ್ಟೆಗಳಲ್ಲಿ ಬಯೋಟಿನ್ ಎಂಬ ಅಂಶ ಹೇರಳವಾಗಿರುತ್ತದೆ. ಕೆಲವೇ ವಾರ ಇದನ್ನು ಉಪಯೋಗಿಸಿದರೂ ಉಗುರುಗಳು ಬಲಿಷ್ಠವಾಗುತ್ತವೆ. ಬಾಳೆಹಣ್ಣು ಹಾಗೂ ಮೊಟ್ಟೆಗಳನ್ನು ದಿನನಿತ್ಯ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಬಯೋಟಿನ್ ಅಂಶ ಪಡೆಯಬಹುದು ಅಥವಾ ಇವುಗಳ ಮಿಶ್ರಣ ತಯಾರಿಸಿ ಅದರಲ್ಲಿ ಬೆರಳುಗಳನ್ನು ಅದ್ದಬಹುದು.

ಬೇಕಾಗುವ ಸಾಮಗ್ರಿಗಳು : 2 ಟೇಬಲ್ ಸ್ಪೂನ್ ನುಣ್ಣಗೆ ಅರೆದ ಬಾಳೆಹಣ್ಣಿನ ಪಲ್ಪ್ (ತಿರುಳು), 1 ಮೊಟ್ಟೆ

ಮಿಶ್ರಣ ತಯಾರಿಕೆ ವಿಧಾನ :

*ಒಂದು ಮೊಟ್ಟೆಯನ್ನು ಒಡೆದು ಬಟ್ಟಲಿಗೆ ಹಾಕಿ

*ಇದಕ್ಕೆ ಬಾಳೆಹಣ್ಣಿನ ಪಲ್ಪ್ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ನುಣ್ಣಗಿನ ಪೇಸ್ಟ್ ತಯಾರಿಸಿ

*ಈಗ ನಿಮ್ಮ ಕೈಬೆರಳುಗಳನ್ನು ಈ ಪೇಸ್ಟ್‌ನಲ್ಲಿ ಅದ್ದಿ 10 ರಿಂದ 15 ನಿಮಿಷ ಹಾಗೆಯೇ ಇಡಿ.

*ಕೈಗಳನ್ನು ಸ್ವಚ್ಛವಾಗಿ ತೊಳೆದು ಟವೆಲ್‌ನಿಂದ ಒಣಗಿಸಿಕೊಳ್ಳಿ

*ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆರಡು ಬಾರಿ ಈ ವಿಧಾನ ಅನುಸರಿಸಿ

Most Read: ನೇಲ್ ಪಾಲಿಷ್ ಕಲೆ ನಿವಾರಿಸಲು ಸಮರ್ಥ ವಿಧಾನಗಳು

ಕಿತ್ತಳೆ ಹಾಗೂ ನಿಂಬೆ ಹಣ್ಣು

ಕಿತ್ತಳೆ ಹಾಗೂ ನಿಂಬೆ ಹಣ್ಣು

ದೇಹಕ್ಕೆ ಅಗತ್ಯವಾದ ಕೊಲಾಜೆನ್ ಎಂಬ ಪೋಷಕಾಂಶ ತಯಾರಿಸಲು ಬೇಕಾದ ವಿಟಮಿನ್ ಸಿ ಅಂಶವು ಆರೆಂಜ್ ಹಾಗೂ ನಿಂಬೆಹಣ್ಣುಗಳಲ್ಲಿ ಸಮೃದ್ಧವಾಗಿರುತ್ತದೆ. ಕೊಲಾಜೆನ್ ಇದು ಉಗುರುಗಳಿಗೆ ಆಕಾರ ಹಾಗೂ ಬಲಿಷ್ಠತೆ ನೀಡುವ ಪ್ರೋಟೀನ್ ಆಗಿದೆ. ಒಟ್ಟಾರೆಯಾಗಿ ವಿಟಮಿನ್ ಸಿ ಯಿಂದ ಉಗುರುಗಳ ಬೆಳವಣಿಗೆ ಶೀಘ್ರವಾಗುತ್ತದೆ.

ಬೇಕಾಗುವ ಸಾಮಗ್ರಿಗಳು : ಅರ್ಧ ಕಪ್ ಆರೆಂಜ್ ಜ್ಯೂಸ್, ಅರ್ಧ ಟೇಬಲ್ ಸ್ಪೂನ್ ನಿಂಬೆ ಜ್ಯೂಸ್

ಮಿಶ್ರಣ ತಯಾರಿಕೆ ವಿಧಾನ :

*ಒಂದು ಬಟ್ಟಲಲ್ಲಿ ಆರೆಂಜ್ ಜ್ಯೂಸ್ ಹಾಕಿ

*ಇದಕ್ಕೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

*ಹೀಗೆ ತಯಾರಾದ ದ್ರಾವಣದಲ್ಲಿ ನಿಮ್ಮ ಕೈಬೆರಳುಗಳ ಉಗುರುಗಳನ್ನು 10 ರಿಂದ 15 ನಿಮಿಷ ಅದ್ದಿ

*ನಂತರ ಕೈಗಳನ್ನು ತೊಳೆದುಕೊಂಡು ಒಣಗಿಸಿಕೊಳ್ಳಿ

*ಬೇಗ ಪರಿಣಾಮ ಬೀರಲು ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ

ಅವೊಕ್ಯಾಡೊ, ಕಿವಿ ಹಣ್ಣು ಮತ್ತು ಜೇನು ತುಪ್ಪ

ಅವೊಕ್ಯಾಡೊ, ಕಿವಿ ಹಣ್ಣು ಮತ್ತು ಜೇನು ತುಪ್ಪ

ಆರೋಗ್ಯಕರ ಹಾಗೂ ಶೀಘ್ರ ಉಗುರು ಬೆಳವಣಿಗೆಗೆ ಬೇಕಾದ ಸತುವಿನ ಅಂಶವು ಅವೊಕ್ಯಾಡೊ ಹಾಗೂ ಕಿವಿ ಹಣ್ಣುಗಳಲ್ಲಿ ಹೇರಳವಾಗಿದೆ. ನಿಜ ಹೇಳಬೇಕೆಂದರೆ ದೇಹದಲ್ಲಿ ಸತುವಿನ ಅಂಶ ಕೊರತೆ ಆದಾಗ ಉಗುರುಗಳು ಬಿರುಕು ಬಿಡುವ ಸಮಸ್ಯೆ ಕಾಡುತ್ತದೆ. ಅಲ್ಲದೆ ಸತುವಿನ ಕೊರತೆಯಿಂದ ಉಗುರುಗಳ ಮೇಲೆ ಬಿಳಿ ಬಣ್ಣದ ಚಿಕ್ಕ ಚಿಕ್ಕ ಕಲೆಗಳು ಕಾಣಿಸಿಕೊಳ್ಳುತ್ತವೆ. ಸತುವಿನ ಕೊರತೆ ನಿವಾರಿಸಲು ಅವೊಕ್ಯಾಡೊ ಹಾಗೂ ಕಿವಿ ಹಣ್ಣಿನ ಜ್ಯೂಸ್ ಸೇವಿಸಬಹುದು. ಅಲ್ಲದೆ ಅವೊಕ್ಯಾಡೊ, ಕಿವಿ ಹಾಗೂ ಜೇನುತುಪ್ಪದ ಮಿಶ್ರಣ ತಯಾರಿಸಿ ಅದನ್ನು ಉಗುರುಗಳಿಗೆ ಲೇಪಿಸುವುದರಿಂದ ಸಹ ಉತ್ತಮ ಪರಿಣಾಮ ಪಡೆಯಬಹುದು.

ಬೇಕಾಗುವ ಸಾಮಗ್ರಿಗಳು : 1 ಟೇಬಲ್ ಸ್ಪೂನ್ ಅವೊಕ್ಯಾಡೊ ಪಲ್ಪ್, 1 ಟೇಬಲ್ ಸ್ಪೂನ್ ಕಿವಿ ಪಲ್ಪ್, 1 ಟೇಬಲ್ ಸ್ಪೂನ್ ಜೇನು ತುಪ್ಪ

ಮಿಶ್ರಣ ತಯಾರಿಕೆ ವಿಧಾನ :

*ಒಂದು ಬಟ್ಟಲಿಗೆ ಅವೊಕ್ಯಾಡೊ ಹಾಗೂ ಕಿವಿ ಪಲ್ಪ್ ಹಾಕಿಕೊಳ್ಳಿ

*ಇದಕ್ಕೆ ಒಂಚೂರು ಜೇನುತುಪ್ಪ ಸೇರಿಸಿ ಬ್ಲೆಂಡ್ ಮಾಡಿಕೊಳ್ಳಿ

*ಈ ಪೇಸ್ಟ್ ಅನ್ನು ಉಗುರುಗಳಿಗೆ ಹಚ್ಚಿ ಕೆಲ ನಿಮಿಷಗಳವರೆಗೆ ಹಾಗೆಯೇ ಬಿಡಿ

*ನಂತರ ಕೈಗಳನ್ನು ತೊಳೆದುಕೊಂಡು ಒಣಗಿಸಿಕೊಳ್ಳಿ

*ದಿನಕ್ಕೆರಡು ಬಾರಿ ಈ ವಿಧಾನ ಅನುಸರಿಸಿ ಉತ್ತಮ ಪರಿಣಾಮ ಕಾಣಬಹುದು

ಮೀನೆಣ್ಣೆ

ಮೀನೆಣ್ಣೆ

ಮೀನೆಣ್ಣೆಯಲ್ಲಿರುವ ಒಮೆಗಾ-3 ಎಂಬ ಫ್ಯಾಟಿ ಆಸಿಡ್ ಉಗುರುಗಳಲ್ಲಿ ತೈಲಾಂಶ ಹಾಗೂ ತೇವಾಂಶಗಳೆರಡನ್ನೂ ಹೆಚ್ಚಿಸಿ ಅವುಗಳ ಕಾಂತಿಯನ್ನು ಹೆಚ್ಚಿಸಿ, ಬೆಳವಣಿಗೆಯನ್ನು ಶೀಘ್ರಗೊಳಿಸುತ್ತದೆ. ಅಲ್ಲದೆ ಉಗುರು ಕೆಳಗಿನ ನೋವನ್ನು ಸಹ ಒಮೆಗಾ-3 ಆಸಿಡ್ ನಿವಾರಿಸುವುದರಿಂದ ಆರೋಗ್ಯಕರ ಉಗುರು ನಿಮ್ಮದಾಗುತ್ತವೆ.

ಬೇಕಾಗುವ ಸಾಮಗ್ರಿಗಳು : ಮೀನೆಣ್ಣೆಯ 5 ಕ್ಯಾಪ್ಸೂಲ್‌ಗಳು

ತಯಾರಿಸುವ ವಿಧಾನ :

*ಮೀನೆಣ್ಣೆಯ ಕ್ಯಾಪ್ಸೂಲ್ (ಫಿಶ್ ಕ್ಯಾಪ್ಸೂಲ್) ಗಳನ್ನು ಒಡೆದು ಒಂದು ಬಟ್ಟಲಿಗೆ ಹಾಕಿ

*ಒಂದು ತುಂಡು ಹತ್ತಿಯನ್ನು ಈ ಎಣ್ಣೆಯಲ್ಲಿ ಅದ್ದಿ ಅದನ್ನು ಉಗುರುಗಳಿಗೆ ಲೇಪಿಸಿ

*ಅರ್ಧ ಗಂಟೆ ಹಾಗೆಯೇ ಬಿಡಿ

*ನಂತರ ಸ್ವಚ್ಛವಾಗಿ ತೊಳೆದುಕೊಳ್ಳಿ

*ದಿನಕ್ಕೆರಡು ಬಾರಿ ಈ ಚಿಕಿತ್ಸೆ ಮಾಡಿ ಉತ್ತಮ ಫಲಿತಾಂಶ ಪಡೆಯಬಹುದು

Most Read: ಮುಟ್ಟಿನ ದಿನಗಳಲ್ಲಿ ಮಹಿಳೆಯರ ದೇಹದ ತೂಕ ಏರುತ್ತದೆ! ಏಕೆಂದು ಗೊತ್ತೇ?

ಹಾಲು ಹಾಗೂ ಮೊಸರು

ಹಾಲು ಹಾಗೂ ಮೊಸರು

ಉಗುರುಗಳು ಮುಖ್ಯವಾಗಿ ಕೆರಾಟಿನ್ ಎಂಬ ಫೈಬರ್ ಪ್ರೋಟೀನ್‌ನಿಂದ ಮಾಡಲ್ಪಟ್ಟಿರುತ್ತವೆ. ಉಗುರು ಆರೋಗ್ಯವಾಗಿರಲು ಹಾಗೂ ಅವು ಬಿರುಕು ಬಿಡದಂತೆ ಕೆರಾಟಿನ್ ಕಾಪಾಡುತ್ತದೆ. ದೇಹದಲ್ಲಿ ಕೆರಾಟಿನ್ ಪ್ರಮಾಣ ವೃದ್ಧಿಗೆ ನೇರವಾಗಿ ಈ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಬಹುದು.

ಹಾಲು ಹಾಗೂ ಮೊಸರಿನಲ್ಲಿ ಕೆರಾಟಿನ್ ಪ್ರೋಟೀನ್ ಅಂಶವು ಹೇರಳವಾಗಿದ್ದು, ಉಗುರುಗಳ ಆರೋಗ್ಯಕ್ಕೆ ಇವುಗಳ ಮಿಶ್ರಣ ಬಳಸುವುದು ಸಹಕಾರಿಯಾಗಿದೆ.

ಬೇಕಾಗುವ ಸಾಮಗ್ರಿಗಳು

: 2 ಟೇಬಲ್ ಸ್ಪೂನ್ ಹಾಲು

1 ಟೇಬಲ್ ಸ್ಪೂನ್ ಮೊಸರು

ತಯಾರಿಸುವ ವಿಧಾನ :

*ಒಂದು ಬಟ್ಟಲಿನಲ್ಲಿ ಹಾಲು ಹಾಗೂ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

*ಈ ಮಿಶ್ರಣದಲ್ಲಿ ಉಗುರುಗಳನ್ನು ಅದ್ದಿ 15 ನಿಮಿಷ ಇಡಿ

*ನಂತರ ಕೈಗಳನ್ನು ತೊಳೆದು ಒಣಗಿಸಿಕೊಳ್ಳಿ

*ದಿನಕ್ಕೆರಡು ಬಾರಿ ಈ ವಿಧಾನ ಅನುಸರಿಸಿದರೆ ಶೀಘ್ರ ಫಲಿತಾಂಶ ಕಂಡು ಬರುತ್ತದೆ

ಕೊನೆ ಮಾತು

ಕೊನೆ ಮಾತು

ಸುಂದರ ಹಾಗೂ ಆರೋಗ್ಯಕರವಾದ ಉಗುರು ವ್ಯಕ್ತಿಯ ಉತ್ತಮ ಆರೋಗ್ಯದ ಪ್ರತಿಬಿಂಬವೂ ಆಗಿವೆ. ಅಲ್ಲದೆ ಇವು ಫ್ಯಾಷನ್ ಸಿಂಬಲ್ ಸಹ ಆಗಿವೆ. ಆದರೆ ಸುಂದರ ಹಾಗೂ ಆರೋಗ್ಯಕರ ಉಗುರುಗಳಿಗಾಗಿ ಯಾವಾಗಲೂ ದುಬಾರಿ ವೆಚ್ಚದ ಮ್ಯಾನಿಕ್ಯೂರ್ ಮಾಡಿಸುವುದು ಅಥವಾ ಸ್ಪಾಗಳಿಗೆ ಹೋಗಬೇಕೆಂದಿಲ್ಲ. ಮೇಲೆ ತಿಳಿಸಲಾದ ಸುಲಭ ಮನೆ ವಿಧಾನಗಳ ಮೂಲಕವೇ ಸುಂದರ ಉಗುರುಗಳನ್ನು ಪಡೆಯಬಹುದು. ಈ ವಿಧಾನಗಳನ್ನು ಬಳಸಿ ಉತ್ತಮ ಫಲಿತಾಂಶ ನೀವೇ ನೋಡಿ.

English summary

Home Remedies To Grow Nails Faster!

Who doesn't want long, strong, and healthy looking nails? All of us do! But we are often disappointed when we see our nails breaking or losing its lustre and we are forced to trim them. We also rely a lot on spas and salons and even go for those expensive manicures and nail treatments. But is that all worth it in the end?For that, you can simply use some amazing ingredients that are readily available in your kitchen and never worry about brittle or damaged nails ever.
X
Desktop Bottom Promotion