For Quick Alerts
ALLOW NOTIFICATIONS  
For Daily Alerts

ನೀವು ಮೂಗು ಚುಚ್ಚಿಸಿಕೊಂಡಿದ್ದೀರಾ? ಹಾಗಿದ್ದರೆ ಈ ಸಲಹೆಗಳನ್ನು ಓದಲೇಬೇಕು..

By Sushma Charhra
|
ಹೊಸದಾಗಿ ಮೂಗು ಚುಚ್ಚಿಸಿಕೊಂಡವರು ಹೇಗೆ ಕಾಳಜಿ ಮಾಡಬೇಕು? ಇಲ್ಲಿದೆ ಸಲಹೆಗಳು | BoldSky Kannada

ಮೂಗಿಗೆ ಮೂಗುತಿ ಹಾಕಿಸಿಕೊಳ್ಳುವುದು ಕೇವಲ ಶೋಕಿಗಾಗಿಯೋ ಅಥವಾ ಟ್ರೆಂಡ್ ಗಾಗಿಯೋ ಮಾತ್ರವಲ್ಲ. ಇದು ಅವರ ವ್ಯಕ್ತಿತ್ವವನ್ನೂ ಕೂಡ ಬಿಂಬಿಸುತ್ತದೆ. ಮತ್ತು ನಮ್ಮ ಸಂಸ್ಕೃತಿಯ ಪ್ರತೀಕವೂ ಹೌದು. ಸಣ್ಣ ಮೂಗುತಿಯೇ ಇರಬಹುದು ಅಥವಾ ಚಂಕಿಚಂಕಿಯಾಗಿರುವ ನೋಸ್ ರಿಂಗ್ ಗಳೇ ಇರಬಹುದು, ಅದೊಂಥರಾ ಆಕರ್ಷಣೆ.

ಯಾರಾದರೂ ಅಟ್ರಾಕ್ಟೀವ್ ಆಗಿರುವ ಮೂಗುತಿ ಧರಿಸಿದ್ದರೆ ಒಮ್ಮೆ ನಮ್ಮ ಕಣ್ಣು ಅವರ ಮೇಲೆ ಹೋಗುತ್ತದೆ ಅಲ್ವಾ? ಹೆಚ್ಚಿನ ಹುಡುಗಿಯರು, ಮಹಿಳೆಯರು ಮೂಗುತಿ ಧರಿಸಲು ಇಷ್ಟಪಡುತ್ತಾರೆ ಹಾಗಾಗಿ ಮೂಗು ಚುಚ್ಚಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಸಮಸ್ಯೆಯಾಗುತ್ತೆ ಏಕೆಂದರೆ ನಮಗೆ ಆ ರೀತಿ ಮೂಗು ಚುಚ್ಚಿಸಿಕೊಂಡ ನಂತರ ಹೇಗೆ ಕಾಳಜಿ ಮಾಡಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ.

Nose Piercing After Care

ಕೆಲವರಿಗೆ ಇದೇನು ಅಂತ ಅನ್ನಿಸಬಹುದು. ಆದರೆ ನಿಜ, ನೀವು ಮೂಗು ಚುಚ್ಚಿಸಿಕೊಂಡರೆ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ಹಾಗಾಗಿ ನಾವಿಲ್ಲಿ ಮೂಗು ಚುಚ್ಚಿಸಿಕೊಂಡ ನಂತರ ಹೇಗೆ ಕಾಳಜಿ ಮಾಡಬೇಕು ಎಂಬ ಬಗ್ಗೆ ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ಇವುಗಳನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಂಡರೆ, ಮೂಗು ಚುಚ್ಚಿಸಿಕೊಂಡಾಗ ನೆರವಿಗೆ ಬರಬಹುದು.

1. ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ

ನೀವು ಮೂಗು ಚುಚ್ಚಿಸಿಕೊಂಡ ದಿನವೇ ಇದನ್ನು ಮಾಡಬೇಕು.ನೀವು ನಿಮ್ಮ ಮೂಗನ್ನು ಸರಳವಾದ ಉಪ್ಪು ನೀರಿನ ಮಿಶ್ರಣ ಬಳಸಿ ಮನೆಯಲ್ಲೇ ಸ್ವಚ್ಛಗೊಳಿಸಿಕೊಳ್ಳಬಹುದು. ಒಂದು ಕಪ್ ಬಿಸಿ ನೀರಿಗೆ ಅರ್ಧ ಚಮಚ ಉಪ್ಪು ಸೇರಿಸಿ, ಒಂದು ಹತ್ತಿ ತುಂಡನ್ನು ತೆಗೆದುಕೊಂಡು ಉಪ್ಪು ನೀರಿನಲ್ಲಿ ಅದ್ದಿ ಮತ್ತು ನೀವು ಮೂಗು ಚುಚ್ಚಿಸಿಕೊಂಡಿರುವ ಜಾಗಕ್ಕೆ ಇಟ್ಟುಕೊಳ್ಳಿ. ಇದಲ್ಲದೇ ಇದ್ದರೆ ಸಾಲಿನ್ ಸೊಲ್ಯೂಶನ್ ನ್ನು ಕೂಡ ಖರೀದಿ ಮಾಡಬಹುದು. ಸಾಮಾನ್ಯವಾಗಿ ಮೂಗು ಚುಚ್ಚಿದವರೇ ಇದನ್ನು ಖರೀದಿಸುವಂತೆ ಸೂಚಿಸುತ್ತಾರೆ. ಇದನ್ನು ಬಳಸುವುದರಿಂದಾಗಿ ನೋವು ನಿವಾರಣೆಯಾಗುತ್ತೆ.

2. ನಿಮ್ಮ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ

ನೀವು ಮೂಗು ಚುಚ್ಚಿಕೊಂಡ ಜಾಗವನ್ನು ಮುಟ್ಟುವುದು ಅಷ್ಟು ಸೂಕ್ತವಲ್ಲ. ಆದರೆ ಅದನ್ನು ಸ್ವಚ್ಛಗೊಳಿಸುವಾಗ ನೀವದನ್ನು ಮುಟ್ಟಲೇಬೇಕಾಗುತ್ತದೆ. ಹಾಗಾಗಿ, ನೀವು ಹಾಗೆ ಮಾಡುವಾಗ ನಿಮ್ಮ ಕೈಗಳು ಸ್ವಚ್ಛವಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಯಾಕೆಂದರೆ, ಕೊಳಕು ಕೈಗಳಿಂದ ಮುಟ್ಟಿದರೆ ನೀವು ಮೂಗು ಚುಚ್ಚಿಸಿಕೊಂಡ ಜಾಗದ ಸುತ್ತಮುತ್ತ ಸೋಂಕು ತಗುಲುವ ಸಾಧ್ಯತೆಗಳಿರುತ್ತದೆ. ಯಾವಾಗಲೂ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಸೋಪಿನಿಂದ ಕೈತೊಳೆದು ಮೂಗುತಿಯನ್ನು ಮುಟ್ಟುವುದು ಒಳ್ಳೆಯದು .

3. ಕಠಿಣ ವಸ್ತುಗಳನ್ನು ಬಳಸಬೇಡಿ

ಕೆಲವರು ಆಲ್ಕೋಹಾಲ್ ಮತ್ತು ಫೆರಾಕ್ಸೈಡ್ ಗಳನ್ನು ಮೂಗು ಚುಚ್ಚಿಸಿಕೊಂಡ ಜಾಗವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಬಳಕೆ ಮಾಡುತ್ತಾರೆ. ಆದರೆ ಇಂತಹ ಕಠಿಣ ಪದಾರ್ಥಗಳನ್ನು ಈ ರೀತಿ ಸ್ವಚ್ಛಕಾ ಕಾರ್ಯಕ್ಕೆ ಬಳಕೆ ಮಾಡಬೇಡಿ.ಇದು ನಿಮ್ಮ ಚರ್ಮವನ್ನು ಮತ್ತಷ್ಟು ಹಾಳು ಮಾಡಬಹುದು. ಅದರಲ್ಲೂ ಸೂಕ್ಷ್ಮ ತ್ವಚೆಯವರಾದ್ರೆ ನಿಮಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆಗಳಿರುತ್ತೆ. ಹಾಗಾಗಿ ಇದರ ಬದಲು ನೈಸರ್ಗಿಕ ಔಷಧಿಗಳನ್ನು ಬಳಸುವುದು ಸೂಕ್ತ. ಈಗಾಗಲೇ ನಾವು ಅದನ್ನು ಮೇಲೆ ತಿಳಿಸಿದ್ದೇವೆ.

4. ಆಭರಣಗಳಿಂದ ಆಟವಾಡುವುದನ್ನು ನಿಲ್ಲಿಸಿ

ಹೊಸ ಮೂಗುತಿ ಧರಿಸಿದರೆ ಪದೇ ಪದೇ ಮುಟ್ಟುತ್ತಲೇ ಇರುವ ಅಭ್ಯಾಸವನ್ನು ಪ್ರತಿಯೊಬ್ಬರೂ ಹೊಂದಿರುತ್ತಾರೆ. ಮತ್ತು ಅವರ ಮೂಗುತಿಯನ್ನು ಪರೀಕ್ಷಿಸಿಕೊಳ್ಳುತ್ತಲೇ ಇರುತ್ತಾರೆ.ಆದರೆ ಇದು, ಸೋಂಕುನ್ನು ಹೆಚ್ಚುಮಾಡಿ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಅಧಿಕವಾಗುವ ಸಾಧ್ಯತೆಗಳಿರುತ್ತದೆ. ಯಾಕೆಂದರೆ ನಮ್ಮ ಕೈಗಳು ಯಾವಾಗಲೂ ಸ್ವಚ್ಛವಾಗಿರುವುದಿಲ್ಲ. ಅಷ್ಟೇ ಅಲ್ಲ, ಪದೇ ಪದೇ ಹೊಸ ಮೂಗುತಿಯನ್ನು ಮುಟ್ಟುತ್ತಲೇ ಇರುವುದರಿಂದಾಗಿ ನೋವು ಹೆಚ್ಚಾಗಬಹುದು ಮತ್ತು ಹಿಂಸೆಗೆ ಕಾರಣವಾಗಬಹುದು

5. ನೋವು ಗುಣವಾದ ನಂತರವೇ ಆಭರಣ ಧರಿಸಿ

ನೀವು ಧರಿಸಿರುವ ಆಭರಣವನ್ನು ಯಾವುದೇ ಕಾರಣಕ್ಕೂ ತೆಗೆಯಬೇಡಿ ಎಂಬ ಸಲಹೆಯನ್ನು ಹೊಸದಾಗಿ ಮೂಗು ಚುಚ್ಚಿಕೊಂಡಾಗ ಸಲಹೆ ನೀಡಲಾಗುತ್ತೆ ಮತ್ತು ನಿಮ್ಮ ನೋವು ಗುಣವಾಗುವವ ವರೆಗೂ ನೀವು ಕಾಯಲೇಬೇಕು ಎಂದು ಹೇಳುತ್ತಾರೆ.ಯಾಕೆಂದರೆ ನೀವು ಆಭರಣವನ್ನು ತೆಗೆದರೆ ನೀವು ಚುಚ್ಚಿಕೊಂಡ ಮೂಗು ಬಹುಬೇಗನೆ ಮತ್ತೆ ಮುಚ್ಚಿಹೋಗಬಹುದು.ಒಂದು ವೇಳೆ ನಿಮ್ಮ ಜ್ಯುವೆಲರಿ ತುಂಬಾ ಗಟ್ಟಿಯಾಗಿದ್ದರೆ ಅಥವಾ ಇನ್ಯಾವುದೇ ರೀತಿಯ ಸಮಸ್ಯೆ ಇದ್ದರೆ, ಕೂಡಲೇ ನೀವು ಮೂಗು ಚುಚ್ಚಿಸಿಕೊಂಡವರ ಬಳಿ ತೆರಳಿ, ಆದಷ್ಟು ಬೇಗ ಸರಿಪಡಿಸಿಕೊಳ್ಳಿ.

6. ಬಿಸಿ ಎಣ್ಣೆ ಮತ್ತು ಅರಿಶಿನ.

ಅರಿಶಿನದಲ್ಲಿ ರೋಗ ನಿರೋಧಕ ಮತ್ತು ನೋವು ನಿವಾರಿಸುವ ಕೆಲವು ಗುಣಗಳಿವೆ. ಒಂದು ವೇಳೆ ನಿಮ್ಮ ನೋವು ಮತ್ತು ಗಾಯ ಬೇಗ ಗುಣವಾಗಬೇಕು ಎಂದರೆ ನೀವು ಈ ಔಷಧಿಯನ್ನು ಬಳಕೆ ಮಾಡಿ ನೋಡಬಹುದು. ಎಣ್ಣೆಯನ್ನು ಬಿಸಿ ಮಾಡಿ. ಮತ್ತು ಅದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ,ಹತ್ತಿಯ ತುಂಡುಗಳನ್ನು ಬಳಸಿ ನಿಮ್ಮ ಮೂಗು ಚುಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ. 5 ರಿಂದ 10 ನಿಮಿಷ ಬಿಟ್ಟು ಹದ ಬೆಚ್ಚಗಿರುವ ನೀರಿನಿಂದ ತೊಳೆದುಕೊಳ್ಳಿ. ಪ್ರತಿದಿನ ಒಂದು ಬಾರಿ ಇದನ್ನು ಬಳಸಿ ನೋಡಿ. ಬೇಗನೆಯ ಮತ್ತು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.

7. ಮೂಗು ಚುಚ್ಚಿಸಿಕೊಂಡ ಜಾಗಕ್ಕೆ ಮೇಕಪ್ ಮಾಡುವುದನ್ನು ಆದಷ್ಟು ನಿಯಂತ್ರಿಸಿ.

ನೀವು ಮೂಗು ಚುಚ್ಚಿಸಿಕೊಂಡಾಗ ಆ ಜಾಗಕ್ಕೆ ಆದಷ್ಟು ಮೇಕಪ್ ಮಾಡುವುದನ್ನು ನಿಯಂತ್ರಿಸಿ. ಇದು ಸೋಂಕನ್ನು ಹೆಚ್ಚಿಸಬಹುದು ಯಾಕೆಂದರೆ ಮೇಕಪ್ ನ ಅಂಶಗಳು ಮೂಗುತಿ ಚುಚ್ಚಿದ ಜಾಗದಲ್ಲೇ ಕುಳಿತು ನಿಮಗೆ ತೊಂದರೆ ನೀಡಬಹುದು. ಹೊಸದಾಗಿ ಮೂಗು ಚುಚ್ಚಿಸಿಕೊಂಡ ಕೆಲವು ದಿನಗಳ ವರೆಗೆ ಯಾವುದೇ ಕಾಸ್ಮೆಟಿಕ್ ಗಳನ್ನು ಬಳಸಬೇಡಿ.

8. ಈಜುವುದನ್ನು ಅವಾಯ್ಡ್ ಮಾಡಿ

ನೀವು ಒಬ್ಬರು ಈಜುಪಟುವಾಗಿದ್ದು, ಪದೇ ಪದೇ ಹೋಗುತ್ತಿರುತ್ತೀರಾದ್ರೆ, ಅಥವಾ ಟಬ್ ನೀರಿನಲ್ಲಿ ಗಂಟೆಗಟ್ಟಲೆ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ, ನಿಮ್ಮ ಮೂಗು ಚುಚ್ಚಿದ ಜಾಗದ ನೋವು ಕಡಿಮೆಯಾಗುವವರೆಗೂ ಇದನ್ನು ನೀವು ನಿಯಂತ್ರಿಸಿಕೊಳ್ಳಬೇಕು. ಯಾಕೆಂದರೆ ಇಂತಹ ನೀರಿನಲ್ಲಿ ಬ್ಯಾಕ್ಟೀರಿಯಾಗಳಿರಬಹುದು. ಇದು ನಿಮಗೆ ಸೋಂಕನ್ನು ತಂದೊಡ್ಡಬಹುದು. ಒಂದು ವೇಳೆ ಅನಿವಾರ್ಯ ಸಂದರ್ಬವಿದ್ದರೆ, ಮೂಗುತಿಯ ಜಾಗವನ್ನು ಬ್ಯಾಂಡ್ ಮುಖಾಂತರ ಮುಚ್ಚಿಕೊಂಡು ಜಾಗೃತೆಯಿಂದ ಈಜಾಡಿ.

9. ಕೊಳೆಯಾದ ದಿಂಬಿನ ಮೇಲೆ ಯಾವುದೇ ಕಾರಣಕ್ಕೂ ನಿದ್ರಿಸಬೇಡಿ.

ಕೊಳೆಯಾದ ದಿಂಬುಗಳು ಬ್ಯಾಕ್ಟೀರಿಯಾಗಳ ಮನೆಯಾಗಿರಬಹುದು. ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಕೊಳೆಯಾದ ದಿಂಬುಗಳನ್ನು ಬದಲಿಸುವುದು ಬಹಳ ಮುಖ್ಯವಾದ ಕೆಲಸವಾಗಿರುತ್ತದೆ ಎಂಬುದನ್ನು ಮರೆಯಬೇಡಿ.

English summary

Got Your Nose Pierced? Here Are Some Tips To Take Care Of It

Nose pins are not just piercings done on our nose anymore. They are a part of a trend and these define one's own personality. Be it those minimal cute ones or those chunky types, nose pins have always fascinated us. It has left us awestruck many a times when we see someone with attractive nose pins. Most of us love the idea of getting a piercing but often, we refrain because we aren't sure how to take care of those nose piercings.
X
Desktop Bottom Promotion