For Quick Alerts
ALLOW NOTIFICATIONS  
For Daily Alerts

ಕೈಗಳ ಮೇಲೆ ಇರುವ ಕಪ್ಪು ಕಲೆಗಳನ್ನು ತೆಗೆಯುವುದು ಹೇಗೆ?

By Lekhaka
|

ಚರ್ಮವು ನಮ್ಮ ಶರೀರದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಬಹುತೇಕ ಮಂದಿ ಮುಖದ ಆರೈಕೆಗೆ ಹೆಚ್ಚಿನ ಮಹತ್ವ ನೀಡುವರು. ಮುಖದ ತ್ವಚೆಗೆ ಹೆಚ್ಚಿನ ಮಹತ್ವ ನೀಡುವುದರಿಂದ ಸಾಕಷ್ಟು ಫೇಸ್ ಪ್ಯಾಕ್ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸಹಜ. ಅದೇ ದೇಹದ ಇತರ ಭಾಗಗಳಿಗಾಗಿ ಅಥವಾ ತ್ವಚೆಯ ಆರೈಕೆಗಾಗಿ ಅಷ್ಟಾಗಿ ಗಮನ ನೀಡುವುದಿಲ್ಲ. ಮುಖವು ಹೇಗೆ ನಮ್ಮ ಸೌಂದರ್ಯವನ್ನು ಪ್ರತಿಬಿಂಬಿಸುವುದೋ ಹಾಗೆಯೇ ನಮ್ಮ ಕೈ-ಕಾಲುಗಳು ಸಹ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಸೂರ್ಯನ ಯುವಿ ಕಿರಣವು ಹೇಗೆ ಮುಖದ ಮೇಲೆ ಪ್ರಭಾವ ಬೀರುವುದೋ ಹಾಗೆಯೇ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುವುದು.

Get Rid Of Dark Spots On Hands

ಸೂರ್ಯನ ಕಿರಣಗಳಿಗೆ ನೇರವಾಗಿ ತೆರೆದುಕೊಳ್ಳುವ ಅಂಗಗಳಲ್ಲಿ ನಮ್ಮ ಕೈಗಳು ಸೇರಿರುತ್ತವೆ ಎನ್ನುವುದನ್ನು ಮರೆಯಬಾರದು. ಈ ನಮ್ಮ ಕೈಗಳ ಮೇಲೆ ಸೂರ್ಯನ ಯುವಿ ಕಿರಣ, ಮಾಲಿನ್ಯ, ಗುಳ್ಳೆಗಳು, ವಿಟಮಿನ್ ಬಿ12 ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಚರ್ಮವು ಕಪ್ಪುಕಲೆ, ಒರಟಾಗುವುದು, ತೇವಾಂಶ ರಹಿತವಾಗುವುದು ಸೆರಿದಂತೆ ಇನ್ನಿತರ ಸಮಸ್ಯೆಗಳಿಂದ ಬಾಧಿತವಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು ಅಥವಾ ಕೈಗಳ ಸೌಂದರ್ಯ ವರ್ಧನೆಗಾಗಿ ಕೆಲವು ಮನೆ ಪರಿಹಾರವನ್ನು ಅನ್ವಯಿಸಬಹುದು.

ನಮ್ಮ ಮನೆಯಲ್ಲಿಯೇ ಅಥವಾ ಕೈಗೆಟಕುವ ದರದಲ್ಲಿ ಸಿಗುವ ಕೆಲವು ನೈಸರ್ಗಿಕ ಉತ್ಪನ್ನಗಳು ಚರ್ಮಗಳ ಆರೈಕೆಯಲ್ಲಿ ಮಹತ್ತರವಾಗಿ ಕಾರ್ಯನಿರ್ವಹಿಸುತ್ತವೆ. ನೀವು ಸಹ ನಿಮ್ಮ ತ್ವಚೆಯ ಆರೈಕೆಗಾಗಿ ಅಥವಾ ಕೈಗಳ ವಿಶೇಷ ಕಾಳಜಿಗಾಗಿ ಆರೈಕೆ ವಿಧಾನಗಳ ಹುಡುಕಾಟದಲ್ಲಿ ಇದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಶ್ರೀಗಂಧ ಮತ್ತು ನಿಂಬೆ:

ಶ್ರೀಗಂಧ ಮತ್ತು ನಿಂಬೆ:

ಶ್ರೀಗಂಧವು ಚರ್ಮಕ್ಕೆ ಉತ್ತಮ ಹೊಳಪನ್ನು ನೀಡುವಲ್ಲಿ ಸಹಾಯ ಮಾಡುವುದು. ಅಲ್ಲದೆ ಹಾನಿಗೊಳಗಾದ ಚರ್ಮಗಳನ್ನು ನಿವಾರಿಸಿ ಚರ್ಮವು ಹೊಳಪು ಹಾಗೂ ಆರೋಗ್ಯವಾಗಿರುವಂತೆ ಮಾಡುವುದು. ಚರ್ಮದ ಮೇಲಿರುವ ಕಪ್ಪು ಕಲೆಗಳ ನಿವಾರಣೆಗೆ ಮತ್ತು ಒರಟು ಚರ್ಮವನ್ನು ಮೃದುಗೊಳಿಸುವಲ್ಲಿ ನಿಂಬೆಯು ಬಹು ಸಹಕಾರಿ.

ಸಾಮಾಗ್ರಿಗಳು:

  • 1 ಟೀಚಮಚ ಶ್ರೀಗಂಧದ ಪುಡಿ.
  • 3-4 ಹನಿ ಗ್ಲಿಸರಿನ್
  • 1/2 ಟೀ ಚಮಚ ನಿಂಬೆ ರಸ.
  • ತಯಾರಿಸುವ ವಿಧಾನ:

    - ಒಂದು ಸ್ವಚ್ಛವಾದ ಬೌಲ್ ತೆಗೆದುಕೊಳ್ಳಿ.

    - ಶ್ರೀಗಂಧದ ಪುಡಿ, ಗ್ಲಿಸರಿನ್ ಮತ್ತು ನಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

    - ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

    - 15-20 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.

    - ಉತ್ತಮ ಫಲಿತಾಂಶ ಪಡೆದುಕೊಳ್ಳಲು ದಿನಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿ.

    ಕಡ್ಲೇ ಹಿಟ್ಟಿನ ಮಸಾಜ್

    ಕಡ್ಲೇ ಹಿಟ್ಟಿನ ಮಸಾಜ್

    ಕಡ್ಲೇ ಹಿಟ್ಟು ಗಾಢವಾದ ಕಪ್ಪು ಕಲೆಯನ್ನು ತಿಳಿಗೊಳಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಅಲ್ಲದೆ ಚರ್ಮವನ್ನು ಆರೋಗ್ಯಯುತವಾಗಿ ಹೊಳಪಿನಿಂದ ಕೂಡಿರುವಂತೆ ಮಾಡುವುದು.

    ಸಾಮಾಗ್ರಿಗಳು:

    • 1 ಟೇಬಲ್ ಚಮಚ ಕಡ್ಲೇ ಹಿಟ್ಟು.
    • ಒಂದು ಚಿಟಕಿ ಅರಿಶಿನ ಪುಡಿ.
    • ಕೆಲವು ಹನಿ ಗುಲಾಬಿ ನೀರು
    • ತಯಾರಿಸುವ ವಿಧಾನ:

      - ಒಂದು ಸ್ವಚ್ಛವಾದ ಬೌಲ್ ತೆಗೆದುಕೊಳ್ಳಿ.

      - ಬೌಲ್ ಅಲ್ಲಿ ಅರಿಶಿನ ಪುಡಿ, ಕಡ್ಲೇ ಹಿಟ್ಟು ಮತ್ತು ಗುಲಾಬಿ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

      - ಮಿಶ್ರಣವನ್ನು ಕೈಗಳಿಗೆ ಅನ್ವಯಿಸಿ.

      - 15 ನಿಮಿಷಗಳ ಕಾಲ ಆರಲು ಬಿಡಿ. ಬಳಿಕ ಮೃದುವಾದ ನೀರಿನಲ್ಲಿ ಸ್ವಚ್ಛಗೊಳಿಸಿ.

      - ಉತ್ತಮ ಫಲಿತಾಂಶ ಪಡೆದುಕೊಳ್ಳಲು ದಿನಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿ.

      Most Read: ಮುಖದಲ್ಲಿ ಕಾಣುವ ವೈಟ್ ಹೆಡ್ಸ್ ನಿವಾರಿಸಲು ಸುಲಭ ಉಪಾಯಗಳು

      ಆಲೂಗಡ್ಡೆ ಮತ್ತು ಈರುಳ್ಳಿ:

      ಆಲೂಗಡ್ಡೆ ಮತ್ತು ಈರುಳ್ಳಿ:

      ಆಲೂಗಡ್ಡೆ ಮತ್ತು ಈರುಳ್ಳಿ ನೈಸರ್ಗಿಕವಾದ ಬ್ಲೀಚಿಂಗ್ ಏಜೆಂಟ್‍ಗಳು ಎಂದು ಹೇಳಲಾಗುವುದು. ಇದು ಚರ್ಮದ ಮೇಲಿರುವ ಕಪ್ಪು ಕಲೆಯನ್ನು ಆಳವಾಗಿ ನಿಯಂತ್ರಿಸುತ್ತವೆ.

      ಸಾಮಾಗ್ರಿಗಳು:

      • 1/2 ಆಲೂಗಡ್ಡೆ
      • 1/2 ಈರುಳ್ಳಿ
      • ತಯಾರಿಸುವ ವಿಧಾನ:

        - ಈರುಳ್ಳಿ ಮತ್ತು ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಿ.

        - ನಂತರ ಚಿಕ್ಕದಾಗಿ ಹೆಚ್ಚಿಕೊಳ್ಳಿ.

        - ಮೃದುವಾಗಿ ರುಬ್ಬಿಕೊಂಡು ಪೇಸ್ಟ್ ನಂತೆ ಮಾಡಿ, ಎರಡನ್ನು ಮಿಶ್ರಗೊಳಿಸಿ.

        - ಮಿಶ್ರಣವನ್ನು ಕೈಗೆ ಅನ್ವಯಿಸಿ.

        - ಸ್ವಲ್ಪ ಸಮಯ ಆರಲು ಬಿಟ್ಟು ಸ್ವಚ್ಛ ನೀರಿನಿಂದ ತೊಳೆಯಿರಿ.

        - ಬಳಿಕ ಮಾಯ್ಚುರೈಸ್ ಕ್ರೀಮ್‍ಅನ್ನು ಅನ್ವಯಿಸಿ.

        - ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಚರ್ಮವು ಆರೋಗ್ಯವಾಗಿರುತ್ತದೆ.

        Most Read: ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...

        ಹರಳೆಣ್ಣೆ:

        ಹರಳೆಣ್ಣೆ:

        ಹರಳೆಣ್ಣೆಯು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ಇದು ಚರ್ಮವನ್ನು ಪುನರ್‍ಯೌವನಗೊಳಿಸುವುದು. ತ್ವಚೆಯ ಮೇಲೆ ಇದನ್ನು ಅನ್ವಯಿಸುವುದರಿಂದ ಚರ್ಮದ ಮೇಲಿನ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ. ಅಲ್ಲದೆ ತ್ವಚೆಯ ಮೇಲಿರುವ ಕಪ್ಪು ಕಲೆಯನ್ನು ನಿವಾರಿಸುವುದು.

        Most Read: ಹರಳೆಣ್ಣೆ ಬಳಸಿಕೊಂಡು ತ್ವಚೆಯ ಮೇಲಿನ ಮಚ್ಚೆ ನಿವಾರಿಸಲು, ಸ್ಟೆಪ್ ಬೈ ಸ್ಟೆಪ್ ಟಿಪ್ಸ್...

        ಸಾಮಾಗ್ರಿಗಳು:

        • 2-3 ಹನಿ ಹರಳೆಣ್ಣೆ
        • ಬಳಸುವ ವಿಧಾನ:

          - ಕೈಯನ್ನು ಸೋಪ್‍ಗಳಿಂದ ಸಂಪೂರ್ಣವಾಗಿ ತೊಳೆದು ಸ್ವಚ್ಛಗೊಳಿಸಿ.

          - ಕೈಗಳಿಗೆ ಹರಳೆಣ್ಣೆಯನ್ನು ಅನ್ವಯಿಸಿ, ಬೆರಳುಗಳ ಸಹಾಯದಿಂದ ಮೃದುವಾಗಿ ಮಸಾಜ್ ಮಾಡಿ.

          - ಎಣ್ಣೆಯನ್ನು 30 ನಿಮಿಷಗಳ ಕಾಲ ಕೈ ಮೇಲೆ ಆರಲು ಬಿಡಿ, ಬಳಿಕ ತೊಳೆಯಿರಿ.

          - ರಾತ್ರಿ ಮಲಗುವ ಮುನ್ನ ಈ ಕ್ರಮವನ್ನು ನಿತ್ಯವೂ ಅನ್ವಯಿಸಿ. ಚರ್ಮವು ಆರೋಗ್ಯದಿಂದ ಕೂಡಿರುತ್ತದೆ.

English summary

Get Rid Of Dark Spots On Hands

When it comes to skin care, we all have a tendency to pay more attention to the skin on our face. Most of the time, we neglect the skin of our hands. The skin of our hands is equally important as any other part of our body. The issue that most of us pay the least attention to are the dark spots on the hands. Some common factors that cause dark spots are the UV rays of the sun, pollution, pimples, and the deficiency of vitamin B12. These spots might look stubborn but it is possible to treat them with simple home remedies.
X
Desktop Bottom Promotion