For Quick Alerts
ALLOW NOTIFICATIONS  
For Daily Alerts

ನಗುವಾಗ ಬಾಯಿಯ ಸುತ್ತಲೂ ಬೀಳುವ ನೆರಿಗೆಗಳಿಗೆ ಮನೆಮದ್ದುಗಳು

By Hemanth
|

ನಗುವೆ ಸ್ವರ್ಗವೆನ್ನುವ ಮಾತಿದೆ. ನಕ್ಕರೆ ಯಾವುದೇ ಆರೋಗ್ಯ ಸಮಸ್ಯೆಗಳು ಕಾಡದು ಎಂದು ಹೇಳುತ್ತಾರೆ. ಆದರೆ ನಗುವಿನಿಂದ ಬಾಯಿಯ ಸುತ್ತಲು ನೆರಿಗೆ ಮೂಡುವುದು ಎಂದು ಕೇಳಿದರೆ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗುವುದು. ಯಾಕೆಂದರೆ ಅತಿಯಾಗಿ ನಗುವುದರಿಂದ ಬಾಯಿಯ ಸುತ್ತಲಿನ ಪ್ರದೇಶದಲ್ಲಿ ನೆರಿಗೆ ಮೂಡುವುದು. ಆದರೆ ಇಷ್ಟು ಮಾತ್ರ ಓದಿಕೊಂಡು ನೀವು ನಗುವನ್ನು ನಿಲ್ಲಿಸಬೇಡಿ. ಯಾಕೆಂದರೆ ಸಂಪೂರ್ಣ ಲೇಖನ ಓದಿದರೆ ನಗುವಿನಿಂದ ಮೂಡುವಂತಹ ನೆರಿಗೆ ನಿವಾರಣೆ ಮಾಡುವುದು ಹೇಗೆ ಎಂದು ತಿಳಿದುಬರಲಿದೆ.

ಇದರ ನಿವಾರಣೆಗೆ ಹಲವಾರು ರೀತಿಯ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು ಮತ್ತು ರಾಸಾಯನಿಕ ಚಿಕಿತ್ಸೆಗಳು ಇವೆ. ಇದು ವೇಗವಾಗಿ ನೆರಿಗೆ ನಿವಾರಣೆ ಮಾಡುವುದು. ಆದರೆ ಅದರಿಂದ ಅಡ್ಡಪರಿಣಾಮಗಳು ಕೂಡ ಇದೆ. ಇದಕ್ಕಾಗಿಯೇ ಕೆಲವೊಂದು ನೈಸರ್ಗಿಕವಾದ ವಿಧಾನಗಳನ್ನು ಈ ಲೇಖನ ಮೂಲಕ ನಿಮಗೆ ಹೇಳಿಕೊಡಲಿದ್ದೇವೆ. ಇದು ಯಾವುದೆಂದು ತಿಳಿದು ನಗುವಿನಿಂದ ಮೂಡಿರುವ ನೆರಿಗೆ ನಿವಾರಣೆ ಮಾಡಿಕೊಂಡು ನಗುತ್ತಾ ಇರಿ....

ನೀರು ಸಾಕಷ್ಟು ಕುಡಿಯಿರಿ

ನೀರು ಸಾಕಷ್ಟು ಕುಡಿಯಿರಿ

ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸಿದರೆ ಅದರಿಂದ ಚರ್ಮವು ಮಾಯಿಶ್ಚರೈಸ್ ಮತ್ತು ತೇವಾಂಶದಿಂದ ಇರುವುದು. ನಿರ್ಜಲೀಕರಣದಿಂದ ಉಂಟಾದ ಒಣ ಚರ್ಮವು ನೆರಿಗೆ ಮೂಡಿಸುವುದು. ಇದರಿಂದ ನಗುವಿನಿಂದ ಮೂಡುವಂತಹ ನೆರಿಗೆ ನಿವಾರಣೆಗೆ ಮೊದಲ ಹಾಗೂ ಪ್ರಮುಖ ನೈಸರ್ಗಿಕ ಮದ್ದು ಎಂದರೆ ಅದು ಸರಿಯಾದ ಪ್ರಮಾಣದ ನೀರು ಕುಡಿಯುವುದು.

ಲಿಂಬೆರಸ

ಲಿಂಬೆರಸ

ಬಾಯಿಯ ಸುತ್ತಲಿನ ಚರ್ಮವನ್ನು ಬಿಗಿಗೊಳಿಸುವಂತಹ ಕೆಲವೊಂದು ಗುಣಗಳು ಲಿಂಬೆರಸದಲ್ಲಿ ಇದೆ. ಇದರಲ್ಲಿ ಇರುವಂತಹ ವಿಟಮಿನ್ ಸಿ ಫ್ರೀ ರ್ಯಾಡಿಕಲ್ ತಡೆಯುವುದು. ಲಿಂಬೆರಸವನ್ನು ನೇರವಾಗಿ ಮುಖದಲ್ಲಿರುವ ನೆರಿಗೆ ಮೇಲೆ ಹಚ್ಚಿ ಅಥವಾ ಒಂದು ತುಂಡು ಲಿಂಬೆ ತೆಗೆದುಕೊಂಡು ಅದನ್ನು ನೆರಿಗೆ ಮೇಲೆ ಹಚ್ಚಿ. ಇದು ನೆರಿಗೆ ನಿವಾರಣೆ ಮಾಡುವುದು.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ನಗುವಿನಿಂದ ಮೂಡಿರುವಂತಹ ನೆರಿಗೆ ನಿವಾರಣೆ ಮಾಡಲು ಮೊಟ್ಟೆಯ ಲೋಳೆ ತುಂಬಾ ಪರಿಣಾಮಕಾರಿ. ಒಂದು ಮೊಟ್ಟೆಯನ್ನು ಪಿಂಗಾಣಿಗೆ ಹಾಕಿ ಕಲಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಬಾಯಿಯ ಸುತ್ತಲಿನ ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಬಳಸಿ.

ಅಲೋವೆರಾ

ಅಲೋವೆರಾ

ಅಲೋವೆರಾದಲ್ಲಿ ವಿಟಮಿನ್ ಸಿ ಮತ್ತು ಇ ಇದ್ದು, ಚರ್ಮದ ಬಿಗಿತನ ಕಾಪಾಡುವುದು ಹಾಗೂ ತೇವಾಂಶದಿಂದ ಇಡುವುದು. ಇದು ಚರ್ಮಕ್ಕೆ ಪೋಷಣೆ ನೀಡಿ ಸರಿಯಪಡಿಸುವುದು. ಇದರಿಂದ ಬಾಯಿಯ ಸುತ್ತಲಿನ ನೆರಿಗೆ ನಿವಾರಣೆಯಾಗುವುದು. ಒಂದು ಅಲೋವೆರಾ ಎಲೆ ತೆಗೆದುಕೊಂಡು ಅದರ ಲೋಳೆ ತೆಗೆಯಿರಿ. ಅದನ್ನು ಮುಖದಲ್ಲಿರುವ ನೆರಿಗೆ ಮೇಲೆ ಹಚ್ಚಿಕೊಳ್ಳಿ. ಐದು ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ.

ಅರಿಶಿನ

ಅರಿಶಿನ

ಅರಿಶಿನದಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ಇವೆ. ಇದು ಬಾಯಿ ಸುತ್ತಲಿನ ನೆರಿಗೆ ಮತ್ತು ಗೆರೆಗಳ ನಿವಾರಣೆ ಮಾಡಿ ಚರ್ಮವು ತುಂಬಾ ನಯವಾಗಿರುವಂತೆ ಮಾಡುವುದು. ಒಂದು ಚಮಚ ಅರಿಶಿನವನ್ನು ಪಿಂಗಾಣಿಗೆ ಹಾಕಿ, ಅದಕ್ಕೆ ಒಂದು ಚಮಚ ತೆಂಗಿನೆಣ್ಣೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ನೆರಿಗೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

ಪಪ್ಪಾಯಿ

ಪಪ್ಪಾಯಿ

ಬಾಯಿಯ ಸುತ್ತಲು ಇರುವಂತಹ ನೆರಿಗೆ ಮತ್ತು ಗೆರೆಗಳನ್ನು ನಿವಾರಣೆ ಮಾಡುವಲ್ಲಿ ಪಪ್ಪಾಯಿ ಪ್ರಮುಖ ಪಾತ್ರ ವಹಿಸುವುದು. ಇದು ನೆರಿಗೆಗಳನ್ನು ಬೇಗನೆ ನಿವಾರಣೆ ಮಾಡುವುದು. ಒಂದು ಪಪ್ಪಾಯಿಯನ್ನು ತುಂಡು ಮಾಡಿಕೊಂಡು ಅದರ ತಿರುಳು ತೆಗೆದು ನೆರಿಗೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಇರುವಂತಹ ವಯಸ್ಸಾಗುವ ಲಕ್ಷಣ ತಡೆಯುವ ಗುಣಗಳು ಚರ್ಮದಲ್ಲಿ ಕಾಣಿಸಿಕೊಳ್ಳುವಂತಹ ನೆರಿಗೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ಇರುವಂತಹ ಅ್ಯಂಟಿಆಕ್ಸಿಡೆಂಟ್ ಗಳು ಬಾಯಿಯ ಸುತ್ತಲಿನ ಚರ್ಮವನ್ನು ಬಿಗಿಗೊಳಿಸುವುದು. ಸ್ವಲ್ಪ ಗ್ರೀನ್ ಟೀ ಮಾಡಿಕೊಂಡು ಅದು ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿಡಿ. ಸ್ವಲ್ಪ ಸಮಯ ಬಿಟ್ಟು ತೆಗೆದು ಅದನ್ನು ನೆರಿಗೆ ಇರುವ ಜಾಗ ಮತ್ತು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ನಗುವಿನಿಂದಾದ ನೆರಿಗೆ ಕಡಿಮೆಯಾಗುವುದು.

ಮುಖದ ವ್ಯಾಯಾಮ

ಮುಖದ ವ್ಯಾಯಾಮ

ಮುಖದ ವ್ಯಾಯಾಮದಿಂದ ಬಾಯಿಯ ಸುತ್ತಲು ಇರುವಂತಹ ನೆರಿಗೆ ಕಡಿಮೆ ಮಾಡಬಹುದು. ಹಲವಾರು ರೀತಿಯ ಮುಖದ ವ್ಯಾಯಾಮಗಳು ನೆರಿಗೆ ಕಡಿಮೆ ಮಾಡುವುದು. ಇದರಲ್ಲಿ ಒಂದನ್ನು ಇಲ್ಲಿ ಹೇಳಿಕೊಡಲಾಗುವುದು. ಹಲ್ಲುಗಳನ್ನು ಕಚ್ಚಿಕೊಳ್ಳಿ ಮತ್ತು ಜೋರಾಗಿ ನಗಿ. 10 ಸೆಕೆಂಡು ಹಾಗೆ ಇರಿ ಮತ್ತು ಇದನ್ನು ಪುನರಾವರ್ತಿಸಿ. ದಿನದಲ್ಲಿ 15-20 ಸಲ ಹೀಗೆ ಮಾಡಿ ಮತ್ತು ಮುಖದಲ್ಲಿ ವ್ಯತ್ಯಾಸ ಕಂಡುಕೊಳ್ಳಿ.

English summary

Eight Home Remedies To Treat Smile Lines

Smile wrinkles or laughter wrinkles are not necessarily the signs of ageing. Sometimes, this can be caused when a person laughs or smiles too often. Surprised? Yes, you read that right! At times, factors like laughing, smiling and even frowning can cause fine lines to appear around your mouth. This may make you look old. But, there are remedies for this. There are best natural remedies for this at your own house.
X
Desktop Bottom Promotion