ತುಟಿಗಳ ಮೇಲಿನ ಬಿಳಿ ಕಲೆಗಳ ನಿವಾರಣೆಗೆ ಸರಳ ಮನೆಮದ್ದುಗಳು

Posted By: Hemanth Amin
Subscribe to Boldsky

ಮುಖದ ಸೌಂದರ್ಯದಲ್ಲಿ ತುಟಿಗಳು ಕೂಡ ತನ್ನದೇ ಆಗಿರುವ ಪಾತ್ರ ವಹಿಸುವುದು. ಆದರೆ ಕೆಲವೊಂದು ಸಲ ತುಟಿಗಳ ಮೇಲೆ ಬಿಳಿ ಕಲೆಗಳು ಮೂಡುವುದು. ಇದನ್ನು ಫೋರ್ಡಿಸ್ ತಾಣಗಳು ಎಂದು ಕರೆಯಲಾಗುತ್ತದೆ. ಇದರಿಂದ ಯಾವುದೇ ಹಾನಿಯಿಲ್ಲವಾದರೂ ಸೌಂದರ್ಯವನ್ನು ಕೆಡಿಸುವುದು ಎನ್ನುವುದರಲ್ಲಿ ಸಂಶಯವಿಲ್ಲ. ಚರ್ಮದಲ್ಲಿ ಮೇದೋಗ್ರಂಥಿಗಳು ಹೆಚ್ಚಾಗಿ ಸ್ರವಿಸುವಿಕೆಯಿಂದ ಹೀಗೆ ಆಗುವುದು. ಜಮೆಯಾಗಿರುವ ಮೇದೋಗ್ರಂಥಿಗಳು ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳ ಬೆಳವಣಿಗೆಗೆ ತಾಣವಾಗುವುದು. ಇದರಿಂದ ಸೋಂಕು ಉಂಟಾಗಿ ಬಿಳಿ ಕಲೆಗಳು ಮೂಡುವುದು.

ಆದರೆ ನೀವು ಈ ಸಮಸ್ಯೆಯನ್ನು ಎದುರಿಸುತ್ತಾ ಇದ್ದರೆ ಅದರ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಕೆಲವೊಂದು ಮನೆಮದ್ದುಗಳನ್ನು ಹೇಳಿಕೊಡಲಿದೆ. ತುಟಿಗಳಲ್ಲಿ ಇರುವಂತಹ ಬಿಳಿ ಕಲೆಗಳ ನಿವಾರಿಸಲು ಇದು ತುಂಬಾ ಪರಿಣಾಮಕಾರಿ ಮತ್ತು ಅವುಗಳು ಮತ್ತೆ ಬರದಂತೆ ತಡೆಯುವುದು. ಈ ಮನೆಮದ್ದುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿವೆ. ಇದು ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ನಿವಾರಿಸುವುದು. ತುಟಿ ಮೇಲಿರುವಂತಹ ಬಿಳಿ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಈ ಮನೆಮದ್ದುಗಳನ್ನು ಪ್ರಯತ್ನಿಸುವುದು ಹೇಗೆ ಎಂದು ತಿಳಿಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬಳಸುವ ವಿಧಾನ

*ಬೆಳ್ಳುಳ್ಳಿ ಎಸಲುಗಳನ್ನು ಜಜ್ಜಿಕೊಳ್ಳಿ ಮತ್ತು ಅದಕ್ಕೆ ಬಾದಾಮಿ ಎಣ್ಣೆ ಹಾಕಿ.

*ಇದನ್ನು ತುಟಿಗಳಿಗೆ ಹಚ್ಚಿಕೊಳ್ಳಿ.

*ಕೆಲವು ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಪರಿಣಾಮಕಾರಿ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಇದು ಹೇಗೆ ಕೆಲಸ ಮಾಡುವುದು: ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು ಮತ್ತು ಬಿಳಿ ಕಲೆ ಹೋಗಲಾಡಿಸುವುದು.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

*ಸ್ವಲ್ಪ ತೆಳುಗೊಳಿಸಿರುವ ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಹತ್ತಿ ಉಂಡೆ ಅದ್ದಿಡಿ.

*ಇದನ್ನು ತುಟಿಗಳಲ್ಲಿ ಕಲೆ ಇರುವಲ್ಲಿಗೆ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಹಾಗೆ ಇರಲಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವೇಗವಾದ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಇದು ಹೇಗೆ ಪರಿಣಾಮಕಾರಿ: ಆಪಲ್ ಸೀಡರ್ ವಿನೇಗರ್ ನಲ್ಲಿರುವಂತಹ ಆಸಿಡ್ ನಂತಹ ಗುಣಗಳು ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಬಿಳಿ ಕಲೆ ಹೋಗಲಾಡಿಸುವುದು.

ಮಜ್ಜಿಗೆ

ಮಜ್ಜಿಗೆ

*ಒಂದು ಹತ್ತಿ ಉಂಡೆಯನ್ನು ಮಜ್ಜಿಗೆಯಲ್ಲಿ ಅದ್ದಿಕೊಳ್ಳಿ ಮತ್ತು ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

*10-15 ನಿಮಿಷ ಕಾಲ ಇದನ್ನು ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ.

*ವಾರದಲ್ಲಿ 4-5 ಸಲ ಇದನ್ನು ಬಳಸಿದರೆ ಖಂಡಿತವಾಗಿಯೂ ಒಳ್ಳೆಯ ಫಲಿತಾಂಶ ಸಿಗುವುದು.

ಇದು ಹೇಗೆ ಕೆಲಸ ಮಾಡುವುದು

ಮಜ್ಜಿಗೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಇವೆ. ಇದು ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳ ವಿರುದ್ಧ ಹೋರಾಡುವುದು ಮತ್ತು ಕಲೆ ತೆಗೆದುಹಾಕುವುದು.

ಜೊಜೊಬಾ ಸಾರಭೂತ ತೈಲ

ಜೊಜೊಬಾ ಸಾರಭೂತ ತೈಲ

*2-3 ಹನಿ ಜೊಜೊಬಾ ಸಾರಭೂತ ತೈಲ ಮತ್ತು ವಿಟಮಿನ್ ಇ ತೈಲ ಮಿಶ್ರಣ ಮಾಡಿ.

*ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಹಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

*ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಬಿಳಿ ಕಲೆಗಳು ಮಾಯವಾಗುವುದು.

ಇದು ಹೇಗೆ ಕೆಲಸ ಮಾಡುವುದು

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಜೊಜೊಬಾ ಸಾರಭೂತ ತೈಲವು ಬಿಳಿ ಕಲೆ ನಿವಾರಣೆ ಮಾಡಿ ಮತ್ತೆ ಬರದಂತೆ ನೋಡಿಕೊಳ್ಳುವುದು.

ತೆಂಗಿನೆಣ್ಣೆ

ತೆಂಗಿನೆಣ್ಣೆ

*ತೆಂಗಿನೆಣ್ಣೆಯನ್ನು ತುಟಿಗಳಿಗೆ ನಿಧಾನವಾಗಿ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ.

*ಬೆಳಗ್ಗೆ ಎದ್ದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಪರಿಣಾಮಕಾರಿಯಾಗಲು ಪ್ರತಿನಿತ್ಯ ಇದನ್ನು ಬಳಸಿ.

ಹೇಗೆ ಪರಿಣಾಮಕಾರಿ:

ಇದರಲ್ಲಿ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಈ ಅಂಶವು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ ಬಿಳಿ ಕಲೆ ನಿವಾರಿಸುವುದು.

ಆಲಿವ್ ತೈಲ

ಆಲಿವ್ ತೈಲ

*ಎಕ್ಸಟ್ರಾ ವರ್ಜಿನ್ ಆಲಿವ್ ತೈಲ ತೆಗೆದುಕೊಂಡು ಅದನ್ನು ತುಟಿಗಳಲ್ಲಿ ಕಲೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.

* ಒಂದು ಗಂಟೆ ಕಾಲ ಹಾಗೆ ಬಿಡಿ ಬಳಿಕ ತಣ್ಣೀರಿನಿಂದ ತೊಳೆಯಿರಿ.

* ದಿನದಲ್ಲಿ 2-3 ಸಲ ಈ ಮನೆಮದ್ದನ್ನು ಕೆಲವು ವಾರಗಳ ಕಾಲ ಬಳಸಿ ನೋಡಿ. ಇದು ಬಿಳಿ ಕಲೆ ನಾಶಮಾಡುವುದು.

ಹೇಗೆ ಕೆಲಸ ಮಾಡುವುದು

ಔಷಧೀಯ ಗುಣಗಳನ್ನು ಹೊಂದಿರುವ ಆಲಿವ್ ತೈಲವು ತುಟಿಗಳಲ್ಲಿ ಇರುವಂತಹ ಬಿಳಿ ಕಲೆ ನಿವಾರಿಸಲು ತುಂಬಾ ಅದ್ಭುತವಾದ ಮನೆಮದ್ದು.

ಅರ್ಗಾನ್ ತೈಲ

ಅರ್ಗಾನ್ ತೈಲ

*3-4 ಹನಿ ಆರ್ಗಾನ್ ತೈಲ ಮತ್ತು ಒಂದು ಚಮಚ ಅಲೋವೆರಾ ಜೆಲ್ ಸೇರಿಸಿಕೊಳ್ಳಿ.

*ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

*15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಶ್ರೇಷ್ಠ ಫಲಿತಾಂಶ ಪಡೆಯಲು ವಾರಕ್ಕೊಂದು ಸಲ ಇದನ್ನು ಬಳಸಿ.

ಹೇಗೆ ಪರಿಣಾಮಕಾರಿ

ಅರ್ಗಾನ್ ತೈಲವು ಶಿಲೀಂಧ್ರ ವಿರೋಧಿ ಅಂಶಗಳನ್ನು ಹೊಂದಿದೆ ಮತ್ತು ಇದು ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ ತುಟಿಗಳ ಮೇಲಿನ ಬಿಳಿ ಕಲೆ ನಿವಾರಿಸುವುದು.

English summary

Effective Remedies To Get Rid Of White Spots On Lips

White spots on lips are also known as Fordyce spots. Though they are mostly harmless in nature, they may look unappealing and bring down your beauty quotient. These spots are usually caused by excessive secretion of sebum in the skin. The accumulated sebum becomes a breeding ground for bacteria and germs that cause an infection, which leads to prominent white spots. So, read on to know more about these remedies here and the most effective way to use them for banishing white spots.
Story first published: Friday, February 2, 2018, 18:00 [IST]