ಹದಿಹರೆಯದಲ್ಲಿ ಮೂಡುವ ಹಣೆಯ ಮೇಲಿನ ನೆರಿಗೆಗೆ ಪರಿಹಾರಗಳು

Posted By: Arshad
Subscribe to Boldsky

ಹಣೆಯಲ್ಲಿ ನೆರಿಗೆಗಳು ಮೂಡಿದರೆ ಅದು ವಯಸ್ಸಾಗುವುದರ ಲಕ್ಷಣವೆಂದರ್ಥ. ಆದರೆ ಇಂದಿನ ದಿನಗಳಲ್ಲಿ ಹದಿಹರೆಯದವರಲ್ಲೂ ಇದು ಕಾಣಿಸಿಕೊಳ್ಳುವುದು. ಇದಕ್ಕೆ ಪ್ರಮುಖ ಕಾರಣವೆಂದರೆ ಸ್ನಾಯುಗಳ ಕೋಶಗಳು ತುಂಬಾ ದುರ್ಬಲವಾಗುವುದು. ಅತಿಯಾದ ಒತ್ತಡ, ಜೀವನಶೈಲಿ, ಅತಿಯಾದ ಮೇಕಪ್ ಮತ್ತು ಅತಿಯಾದ ಮುಖದ ಹಾವಭಾವ ಕೂಡ ನೆರಿಗೆ ಮೂಡಿಸುತ್ತದೆ. ಎಂದು ಹೇಳಲಾಗುತ್ತದೆ.

ಹಣೆ ಮೇಲೆ ನೆರಿಗೆ ಮೂಡಿದೆಯೇ? ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

ಆದರೆ ಇಂತಹ ಮುಖದ ಹಾವಭಾವವನ್ನು ನಾವು ಯಾವತ್ತೂ ಕಡೆಗಣಿಸುವ ಹಾಗಿಲ್ಲ. ಯಾಕೆಂದರೆ ಸಂವಹನಕ್ಕೆ ಇದು ಪ್ರಮುಖ ಅಸ್ತ್ರ. ಆದರೆ ಹಣೆ ಮೇಲಿನ ನೆರಿಗೆ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ಲಭ್ಯವಿದೆ. ಇವುಗಳು ನೈಸರ್ಗಿಕವಾಗಿದ್ದು, ಇದನ್ನು ಬಳಸಿದರೆ ನೆರಿಗೆ ನಿವಾರಣೆಯಾಗಿ ನಿಮ್ಮ ಸೌಂದರ್ಯವು ಮರಳುವುದು. ಆ ಮನೆಮದ್ದುಗಳು ಯಾವುದೆಂದು ತಿಳಿದುಕೊಳ್ಳುವ.

ಜೀವನ ಶೈಲಿ ಸುಧಾರಿಸಿಕೊಳ್ಳಿ

ಜೀವನ ಶೈಲಿ ಸುಧಾರಿಸಿಕೊಳ್ಳಿ

ಆರೋಗ್ಯಕಾರಿ ಜೀವನಶೈಲಿಯು ಪ್ರತಿಯೊಂದು ಸಮಸ್ಯೆಗೂ ಪರಿಹಾರವೆಂದು ಹೇಳಲಾಗುತ್ತದೆ. ನಿಮ್ಮ ಜೀವನಶೈಲಿ ಸುಧಾರಿಸಿಕೊಂಡು ಹಣೆಯ ಮೇಲಿನ ನೆರಿಗೆ ನಿವಾರಣೆ ಮಾಡಿಕೊಳ್ಳಬಹುದು. ಅತಿಯಾದ ಒತ್ತಡ ಮತ್ತು ಆತಂಕಕ್ಕೆ ಒಳಗಾಗಬೇಡಿ. ವಿಟಮಿನ್ ಗಳಿರುವ ಆಹಾರ ಮತ್ತು ಅತಿಯಾಗಿ ನೀರು ಸೇವನೆ ಮಾಡಿ ಆರೋಗ್ಯಕರ ಆಹಾರ ಕ್ರಮ ಪಾಲಿಸಿ. ವಿಟಮಿನ್ ಎ, ಸಿ ಮತ್ತು ಇ ಇರುವ ಆಹಾರ ಸೇವನೆ ಮಾಡಿದರೆ ಹಣೆಯ ನೆರಿಗೆ ಕಡಿಮೆಯಾಗುವುದು.

ಹಣೆಗೆ ಮಸಾಜ್

ಹಣೆಗೆ ಮಸಾಜ್

ನೆರಿಗೆ ಕಡಿಮೆ ಮಾಡಲು ಹಿಂದಿನಿಂದಲೂ ಹೆಚ್ಚಿನವರು ಮಸಾಜ್ ಗೆ ಮೊರೆ ಹೋಗುತ್ತಿದ್ದಾರೆ. ಇದು ಮುಖದಲ್ಲಿನ ಕೋಶಗಳಲ್ಲಿ ರಕ್ತಸಂಚಾರವನ್ನು ಸುದಾರಣೆ ಮಾಡುವುದು. ಮನೆಯಲ್ಲೇ ನೀವು ಹಣೆಗೆ ಮಸಾಜ್ ಮಾಡಿಕೊಳ್ಳಬಹುದು.

ಹಣೆಗೆ ಮಸಾಜ್ ಮಾಡುವುದು ಹೇಗೆ?

ಆಲಿವ್ ತೈಲದ ಕೆಲವು ಹನಿಗಳನ್ನು ಹಾಕಿಕೊಂಡು ಹಣೆಗೆ 8-10 ನಿಮಿಷ ಕಾಲ ಮೇಲಕ್ಕೆ ಮತ್ತು ಕೆಳಕ್ಕೆ ಮಸಾಜ್ ಮಾಡಿ. ವೇಗವಾಗಿ ಫಲಿತಾಂಶ ಪಡೆಯಲು ದಿನದಲ್ಲಿ ಒಂದೆರಡು ಸಲ ಹೀಗೆ ಮಾಡಿ. ಆಲಿವ್ ತೈಲವು ಚರ್ಮಕ್ಕೆ ಮಾಯಿಶ್ಚರೈಸ್ ನೀಡುವುದು ಮತ್ತು ಇದರಿಂದ ತ್ವಚೆಗೆ ತೇವಾಂಶ ಸಿಕ್ಕಿ ನೆರಿಗೆ ಉಂಟು ಮಾಡುವ ಕೋಶಗಳನ್ನು ಕಡಿಮೆಯಾಗುವುದು.

ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡಬೇಡಿ

ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡಬೇಡಿ

ಅತಿಯಾಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ಚರ್ಮಕ್ಕೆ ಹಾನಿಯಾಗುವುದು ಮಾತ್ರವಲ್ಲದೆ ಹಣೆಯಲ್ಲಿನ ನೆರಿಗೆ ಕೂಡ ಹೆಚ್ಚಾಗುವುದು. ಇದಕ್ಕೆ ಮನೆಯಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹೆಚ್ಚಿಕೊಳ್ಳಿ ಮತ್ತು ದುಪಟ್ಟಾ ಹಾಕಿಕೊಳ್ಳಿ. ಹಾನಿಕಾರಕ ಕಿರಣಗಳು ಮತ್ತು ಸೂರ್ಯನ ಬಿಸಿಲು ಚರ್ಮಕ್ಕೆ ಹಾನಿ ಉಂಟು ಮಾಡುವುದು.

ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿ

ಪ್ರತಿಯೊಂದು ಮನೆಯಲ್ಲೂ ಕಾಣಸಿಗುವಂತಹ ಪೆಟ್ರೋಲಿಯಂ ಜೆಲ್ಲಿ ಹಣೆಯಲ್ಲಿನ ನೆರಿಗೆ ತಡೆಯುವುದು. ಹಣೆಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿಕೊಂಡು ನಿಧಾನವಾಗಿ ವೃತ್ತಾಕಾರದಲ್ಲಿ ಐದು ನಿಮಿಷ ಕಾಲ ಮಸಾಜ್ ಮಾಡಿ. ಮಲಗುವ ಮೊದಲು ಪ್ರತಿನಿತ್ಯ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನಿಮಗೆ ಪರಿಣಾಮ ಕಂಡುಬರುವುದು. ಆದರೆ ಮೊಡವೆ ಇರುವಂತಹ ಚರ್ಮಕ್ಕೆ ಇದು ಒಳ್ಳೆಯದಲ್ಲ. ಯಾಕೆಂದರೆ ಪೆಟ್ರೋಲಿಯಂ ಜೆಲ್ಲಿ ಮೊಡವೆ ಹೆಚ್ಚಿಸಬಹುದು.

ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

ಮೊಟ್ಟೆಯ ಬಿಳಿ ಲೋಳೆಯ ಮಾಸ್ಕ್

ಮೊಟ್ಟೆಯಲ್ಲಿ ಇರುವಂತಹ ಕಾಲಜನ್ ಮತ್ತು ಪ್ರೋಟೀನ್ ಚರ್ಮವನ್ನು ಬಿಗಿಗೊಳಿಸುವುದು ಮತ್ತು ನೆರಿಗೆ ಕಡಿಮೆ ಮಾಡುವುದು. ಒಂದು ಮೊಟ್ಟೆಯಿಂದ ಅದರ ಬಿಳಿ ಲೋಳೆ ಹೊರತೆಗೆಯಿರಿ ಮತ್ತು ಹಣೆಗೆ ಪದರಗಳಾಗಿ ಇದನ್ನು ಹಚ್ಚಿಕೊಳ್ಳಿ. ಹತ್ತು ನಿಮಿಷ ಒಣಗಿದ ಬಳಿಕ ಇದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನನಿತ್ಯ ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪವು ನೆರಿಗೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಚರ್ಮವನ್ನು ಬಿಳಿಗೊಳಿಸುವುದು. ತಾಜಾ ಜೇನುತುಪ್ಪವನ್ನು ನೇರವಾಗಿ ಹಣೆಗೆ ಹಚ್ಚಿಕೊಳ್ಳಬಹುದು ಅಥವಾ ಅಕ್ಕಿ ಹಿಟ್ಟಿನ ಜತೆಗೆ ಸೇರಿಸಿ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು. ಅಕ್ಕಿಹಿಟ್ಟಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮಕ್ಕೆ ತೇವಾಂಶ ನೀಡುವುದು. ಒಂದು ಚಮಚ ಅಕ್ಕಿಹಿಟ್ಟು ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಪೇಸ್ಟ್ ದಪ್ಪ ಆಗಿದೆಯೆಂದು ನಿಮಗನಿಸಿದರೆ ಆಗ ನೀವು ಜೇನುತುಪ್ಪ ಹೆಚ್ಚು ಹಾಕಿ. ಇದನ್ನು ಹಣೆಗೆ ಹಚ್ಚಿಕೊಂಡು ಒಣಗಲು ಬಿಸಿ ಮತ್ತು ಬಳಿಕ ತೊಳೆಯಿರಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಮಲಗುವ ಭಂಗಿ ಬದಲಾಯಿಸಿ

ಮಲಗುವ ಭಂಗಿ ಬದಲಾಯಿಸಿ

ಹೊಟ್ಟೆಯ ಮೇಲೆ ಮಲಗಿ ಹಣೆಗೆ ಒತ್ತಡ ಹಾಕಿದರೆ ಆಗ ತಲೆದಿಂಬು ಅಥವಾ ಹಾಸಿಗೆಯಿಂದಾಗಿ ಹಣೆಯ ಮೇಲೆ ಬೇಗನೆ ನೆರಿಗೆ ಮೂಡಬಹುದು. ಇದರಿಂದ ಯಾವಾಗಲೂ ಬೆನ್ನಿನಲ್ಲಿ ಮಲಗಿ. ಇದರಿಂದ ಹಣೆಯಲ್ಲಿ ಕಲೆಗಳು ಮತ್ತು ನೆರಿಗೆ ಉಂಟಾಗದು.

ಯೋಗ

ಯೋಗ

ಮೊದಲೇ ನಿಮಗೆ ತಿಳಿಸಿರುವ ಜೀವನಶೈಲಿ ಮತ್ತು ಒತ್ತಡದಿಂದ ಹಣೆಯಲ್ಲಿ ನೆರಿಗೆ ಮೂಡುವುದು. ಇದಕ್ಕೆ ಒಳ್ಳೆಯ ಪರಿಹಾರವೆಂದರೆ ಅದು ಯೋಗ. ಒತ್ತಡ ನಿವಾರಣೆ ಮಾಡುವಲ್ಲಿ ಯೋಗವು ತುಂಬಾ ಪರಿಣಾಮಕಾರಿ. ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಅದರಿಂದ ಮಾನಸಿಕ ಶಾಂತಿ ಸಿಗುವುದು ಮಾತ್ರವಲ್ಲದೆ, ಒತ್ತಡ ಮತ್ತು ಆತಂಕ ಕಡಿಮೆಯಾಗುವುದು.

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರಿಂದ ಚರ್ಮ ಮೊಶ್ಚಿರೈಸ್ ಆಗಿ, ಅದನ್ನು ಆರೋಗ್ಯವಾಗಿಡುವುದು. ಫ್ರೀ ರ್ಯಾಡಿಕಲ್ ನ್ನು ತಡೆಯಲು ಇದು ನೆರವಾಗುವುದು ಮತ್ತು ಇದರಿಂದ ಚರ್ಮವು ಕಾಂತಿಯುತವಾಗಿ ಕಾಣುವುದು. ಸ್ವಲ್ಪ ತೆಂಗಿನೆಣ್ಣೆ ತೆಗೆದುಕೊಂಡು ಅದನ್ನು ಹಣೆಗೆ ಹಚ್ಚಿಕೊಂಡು ಹೀರಿಕೊಳ್ಳುವ ತನಕ ಸರಿಯಾಗಿ ಉಜ್ಜಿಕೊಳ್ಳಿ. ಮಲಗುವ ಮೊದಲು ಪ್ರತಿನಿತ್ಯ ಹೀಗೆ ಮಾಡಿ ಮತ್ತು ಕೆಲವೇ ವಾರಗಳಲ್ಲಿ ಫಲಿತಾಂಶ ಸಿಗುವುದು.

ಸಿಟ್ರಸ್ ಫೇಸ್ ಪ್ಯಾಕ್

ಸಿಟ್ರಸ್ ಫೇಸ್ ಪ್ಯಾಕ್

ಸಿಟ್ರಸ್ ಹಣ್ಣುಗಳು ಮತ್ತು ಲಿಂಬೆಯಲ್ಲಿ ಕಂಡುಬರುವಂತಹ ವಿಟಮಿನ್ ಸಿ ಮತ್ತು ಇ ಚರ್ಮಕ್ಕೆ ತೇವಾಂಶ ನೀಡಿ, ಚರ್ಮವನ್ನು ನಯವಾಗಿಡುವುದು. ಸಿಟ್ರಸ್ ಹಣ್ಣುಗಳಾದ ಲಿಂಬೆ ಅಥವಾ ಕಿತ್ತಳೆಯನ್ನು ನೇರವಾಗಿ ಹಣೆಗೆ ಹಚ್ಚಿಕೊಳ್ಳಬಹುದು. ಒಣಗಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

1/4 ಕಪ್ ಕಿತ್ತಳೆ ತಿರುಳು ಮತ್ತು ಅಕ್ಕಿಹಿಟ್ಟನ್ನು ಹಾಕಿಕೊಂಡು ಪೇಸ್ಟ್ ಮಾಡಿ ಅದನ್ನು ಹಣೆಗೆ ಹಚ್ಚಿದರೆ ಒಳ್ಳೆಯದು. 25 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ನೆರಿಗೆಗೆ ಅಲೋವೆರಾ

ನೆರಿಗೆಗೆ ಅಲೋವೆರಾ

ಅಲೋವೆರಾದಲ್ಲಿ ಇರುವಂತಹ ಕೆಲವು ಅಂಶಗಳು ಚರ್ಮವನ್ನು ಪುನಃಶ್ಚೇತನಗೊಳಿಸಿ, ತೇವಾಂಶದಿಂದ ಇಡುವುದು. ಅಲೋವೆರಾ ಲೋಳೆಯನ್ನು ಹಾಕಿ ಹಣೆಗೆ ಮಸಾಜ್ ಮಾಡಿ. ಮಲಗುವ ಮೊದಲು ಹೀಗೆ ಮಾಡಿ. ಬೆಳಗ್ಗೆ ಎದ್ದ ಬಳಿಕ ಮುಖ ತೊಳೆಯಿರಿ. 15 ನಿಮಿಷ ಒಣಗಲು ಬಿಟ್ಟು ಉಗುರುಬೆಚ್ಚಗಿನ ನೀರಿನಿಂದಲೂ ತೊಳೆಯಬಹುದು. ಹಣೆ ನೆರಿಗೆ ನಿವಾರಣೆಗೆ ಪ್ರತಿನಿತ್ಯ ಹೀಗೆ ಮಾಡಿ.

ಹುಬ್ಬೇರಿಸಿಕೊಳ್ಳುವುದ ನಿಲ್ಲಿಸಿ

ಹುಬ್ಬೇರಿಸಿಕೊಳ್ಳುವುದ ನಿಲ್ಲಿಸಿ

ಓದುವಾಗ ನಿಮಗೆ ಹುಬ್ಬೇರಿಸುವಂತಹ ಅಭ್ಯಾಸವಿದೆ ಎಂದಾದರೆ ಅದನ್ನು ಈಗಲೇ ನಿಲ್ಲಿಸಿಬೇಕು. ನೀವು ಹೀಗೆ ಮಾಡುವಾಗ ಹಣೆ ಮತ್ತು ಕಣ್ಣಿನ ಸುತ್ತಲಿನ ಸ್ನಾಯುಗಳು ಒತ್ತಡಕ್ಕೆ ಒಳಗಾಗುವುದು. ಇದರಿಂದ ಹಣೆಯಲ್ಲಿ ನೆರಿಗೆ ಮೂಡುವುದ. ಓದಲು ಬಳಸುವ ಕನ್ನಡಕ ತೆಗೆದುಕೊಂಡರೆ ಇಂತಹ ಸಮಸ್ಯೆ ನಿವಾರಣೆಯಾಗುವುದು.

ಆಲ್ಕೋಹಾಲ್ ಮತ್ತು ಸಿಗರೇಟ್ ಬಿಡಿ

ಆಲ್ಕೋಹಾಲ್ ಮತ್ತು ಸಿಗರೇಟ್ ಬಿಡಿ

ಹದಿಹರೆಯದಲ್ಲೇ ಹಣೆಯಲ್ಲಿ ನೆರಿಗೆ ಮೂಡಲು ಆಲ್ಕೋಹಾಲ್ ಮತ್ತು ಸಿಗರೇಟ್ ಪ್ರಮುಖ ಕಾರಣವಾಗಿದೆ. ಆಲ್ಕೋಹಾಲ್ ಮತ್ತು ಸಿಗರೇಟಿನಲ್ಲಿರುವ ಅಂಶಗಳಿಂದ ವಯಸ್ಸಾಗುವ ಕೋಶಗಳು ಹೆಚ್ಚಾಗುವುದು. ಇದು ಕಾಲಜನ್ ವಿಘಟಿಸುವುದು ಮತ್ತು ಚರ್ಮದ ಬಿಗಿತ ಕಡಿಮೆ ಮಾಡುವುದು. ಇದರಿಂದ ಹಣೆಯಲ್ಲಿ ನೆರಿಗೆ ಉಂಟಾಗುವುದು.

ಮುಖವನ್ನು ತೇವಾಂಶದಿಂದ ಇಡಿ

ಮುಖವನ್ನು ತೇವಾಂಶದಿಂದ ಇಡಿ

ನೆರಿಗೆ ನಿವಾರಣೆ ಮಾಡಲು ಮುಖವನ್ನು ತೇವಾಂಶದಿಂದ ಇಡುವುದು ಪ್ರಮುಖ ಅಂಶ. ಚರ್ಮ ಒಣಗುವುದನ್ನು ತಪ್ಪಿಸಲು ಮೊಶ್ಚಿರೈಸ್ ಮಾಡಿ. ಚರ್ಮಕ್ಕೆ ತುಂಬಾ ಗಡುಸಾದ ಸೋಪ್ ಬಳಸಬೇಡಿ. ಪ್ರತಿನಿತ್ಯ ಮುಖ ತೊಳೆಯಲು ಕಡಿಮೆ ರಾಸಾಯನಿಕ ಇರುವ ಸೋಪ್ ಬಳಸಿ. ಇದರಿಂದ ಹಣೆಯ ಮೇಲಿನ ನೆರಿಗೆ ಕಡಿಮೆಯಾಗುವುದು.

ಸರಿಯಾಗಿ ನಿದ್ರೆ ಮಾಡಿ

ಸರಿಯಾಗಿ ನಿದ್ರೆ ಮಾಡಿ

ನಿದ್ರೆ ನಮ್ಮ ಆರೋಗ್ಯಕ್ಕೆ ಅತೀ ಅಗತ್ಯ. ಇದರಿಂದ ದೇಹಕ್ಕೆ ಬೇಕಾಗಿರುವ ವಿಶ್ರಾಂತಿ ಸಿಗುವುದು. ನಿದ್ರಾಹೀನತೆ ಉಂಟಾದರೆ ಅದರಿಂದ ಚರ್ಮದ ಕೋಶಗಳು ವಿಘಟನೆಯಾಗಿ ಹಣೆಯಲ್ಲಿ ನೆರಿಗೆ ಮೂಡುವಂತೆ ಮಾಡುವುದು. ಪ್ರತಿನಿತ್ಯ ನೀವು 8 ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಿ. ಇದು ಹಣೆ ಮೇಲಿನ ನೆರಿಗೆಯನ್ನು ನೈಸರ್ಗಿಕವಾಗಿ ನಿವಾರಿಸುವುದು.

English summary

15-natural-ways-to-fight-forehead-wrinkles-at-a-young-age

Facial expressions like smiling and frowning can also cause forehead wrinkles due to the movement of the muscles. However, we cannot avoid such things, as these are an essential part in communication. Many of you who face this might be looking at some natural remedies to erase forehead wrinkles, isn't it? Well, you are at the right place! Presenting to you are the natural ways of erasing forehead wrinkles without affecting your skin. Take a look.
Story first published: Friday, March 9, 2018, 17:00 [IST]