For Quick Alerts
ALLOW NOTIFICATIONS  
For Daily Alerts

ಕಣ್ಣುಗಳ ರಕ್ಷಣೆಗಾಗಿ ಇಲ್ಲಿದೆ ನೋಡಿ 15 ಅದ್ಭುತ ಸಲಹೆಗಳು

By Sushma Charhra
|

ಮುಖದ ವೈಶಿಷ್ಟ್ಯಕ್ಕೆ ನಮ್ಮ ಕಣ್ಣುಗಳೇ ಪ್ರಮುಖ ಅಂಗ. ಬೇರೆಯವರನ್ನು ಸೆಳೆಯುವ ಮತ್ತು ಅವರ ಗಮನವನ್ನು ನಿಮ್ಮೆಡೆಗೆ ಕೇಂದ್ರಿಕರಿಸುವ ಸಾಮರ್ಥ್ಯವಿರುವ ಅಂಗವೆಂದರೆ ಅದು ನಿಮ್ಮ ಕಣ್ಣುಗಳು. ಹೊರಗಿನಿಂದ ಚೆನ್ನಾಗಿ ಕಾಣಬೇಕು ಎಂದರೆ, ನೀವು ನಿಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಪ್ಪು ವರ್ತುಲ, ಕಣ್ಣುಗಳ ಕೆಳಗೆ ಚರ್ಮ ಜೋತುಬಿದ್ದಂತಾಗುವುದು, ಕಣ್ಣು ಉರಿ, ಕಣ್ಣಿನ ಊತ, ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ನಿಮಗೆ ಎದುರಾಗಬಹುದು. ಈ ಸಮಸ್ಯೆಯಿಂದ ಬಳಲುವವರು ಪ್ರತಿನಿತ್ಯ ಹಲವು ಪರಿಹಾರಗಳಿಗಾಗಿ ತಡಕಾಡುತ್ತಾರೆ.

ಮಾಲಿನ್ಯ, ಧೂಳು ಮತ್ತು ಕೊಳೆಯಿಂದ ನಿಮ್ಮ ಕಣ್ಣುಗಳಿಗೆ ಸಾಕಷ್ಟು ತೊಂದರೆಯಾಗುತ್ತೆ, ಮೇಕಪ್ ಮತ್ತು ಮೇಕಪ್ ರಿಮೂವರ್ ಗಳನ್ನು ಬಳಕೆ ಮಾಡುವುದರಿಂದಲೂ ಕೂಡ ನಿಮ್ಮ ಕಣ್ಣಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗುತ್ತೆ. ಕೆಲವರಿಗೆ ಹಲವಾರು ಕಾರಣಗಳಿಂದಾಗಿ ಕಪ್ಪು ವರ್ತುಲ ಕಾಣಿಸಿಕೊಂಡಿರುತ್ತೆ. ಇಂತಹ ಸಮಸ್ಯೆಗಳು ನಿಮ್ಮ ಕಣ್ಣುಗಳನ್ನು ನಿಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವಂತೆ ಮಾಡಿಬಿಡುತ್ತೆ.

Eyes care

ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು ಬೇಗನೆ ಗ್ರಹಿಕೆಗೆ ಒಳಪಡುವ ನಮ್ಮ ದೇಹದ ಅಂಗವೆಂದರೆ ಅದು ಕಣ್ಣುಗಳು. ಹಾಗಿರುವಾಗ ನಾವು ಅವುಗಳಿಗೆ ಯಾವಾಗಲೂ ತೊಂದರೆ ಕೊಡುವುದು ಸರಿಯಲ್ಲ. ಸ್ವಲ್ಪ ಮಟ್ಟಿನ ಕಾಳಜಿಯನ್ನಾದರೂ ನಮ್ಮ ಕಣ್ಣುಗಳ ಬಗ್ಗೆ ನಾವು ತೆಗೆದುಕೊಳ್ಳಲೇಬೇಕು. ಕಣ್ಣುಗಳಲ್ಲಿ ಬಳಲಿಕೆ, ಕಣ್ಣುಗಳ ಕೆಳಭಾಗದಲ್ಲಿ ಚರ್ಮ ಜೋತುಬಿದ್ದಂತಾಗಿರುವುದು, ಹೀಗೆ ಕಣ್ಣಿನ ಯಾವುದಾದರೂ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಕೂಡಲೇ ಅದನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಇಲ್ಲಿ ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವನ್ನು ಕಾಂತಿಯುತಗೊಳಿಸಿಕೊಳ್ಳಲು ಮತ್ತು ಅವುಗಳ ರಕ್ಷಣೆಗೆ ಸಹಕಾರಿಯಾಗುವಂತ 15 ಸಲಹೆಗಳನ್ನು ನೀಡಲಾಗಿದೆ.

ಸೌತೆಕಾಯಿ ಮತ್ತು ಆಲೂಗಡ್ಡೆ ರಸ
ಸೌತೆಕಾಯಿ ಕಣ್ಣಿಗೆ ತಂಪು ನೀಡುತ್ತೆ ಮತ್ತು ಆಲೂಗಡ್ಡೆ ರಸ ನಿಮ್ಮ ಕಣ್ಣುಗಳ ಸುತ್ತಲಿನ ಕಪ್ಪು ವರ್ತುಲವನ್ನು ನಿವಾರಿಸುತ್ತೆ. ಇದನ್ನು ಬಳಸಿದ ನಂತರ ನಿಮ್ಮ

ಕಣ್ಣುಗಳಿಗೆ ಹೊಳಪು ಬರಲಿದೆ
ಬೇಕಾಗುವ ವಸ್ತುಗಳು - ಮುಕ್ಕಾಲು ಸೌತೆಕಾಯಿ, ಅರ್ಧ ಆಲೂಗಡ್ಡೆ, ಸ್ವಚ್ಛವಾಗಿರುವ ಹತ್ತಿಯ ತುಂಡುಗಳು
ಮಾಡುವ ವಿಧಾನ - 1) ಸೌತೆಕಾಯಿ ಮತ್ತು ಆಲೂಗಡ್ಡೆಯನ್ನು ತುರಿದುಕೊಳ್ಳಿ
2) ಒಂದು ಬಟ್ಟೆಯ ಮೂಲಕ ಅದರ ರಸವನ್ನು ತೆಗೆದುಕೊಳ್ಳಿ
3) ಹತ್ತಿಯನ್ನು ಆ ರಸದಲ್ಲಿ ಅದ್ದಿ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ
4) 15 ನಿಮಿಷ ಅವು ನಿಮ್ಮ ಕಣ್ಣುಗಳ ಮೇಲಿರಲಿ

ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ
ನಿಮ್ಮ ಕಣ್ಣಿನ ಸುತ್ತದ ತೇವಾಂಶ ಕಾಪಾಡಲು ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ಸಹಕಾರಿ. ಸಣ್ಣಸಣ್ಣ ಗೆರೆಗಳಾಗುವುದನ್ನು ಇದು ತಪ್ಪಿಸುತ್ತೆ. ಜೇನುತುಪ್ಪವು ನಿಮ್ಮ ಕಣ್ಣಿನ ಸುತ್ತದ ಚರ್ಮವನ್ನು ಬಿಳಿಗೊಳಿಸುತ್ತೆ.
ಬೇಕಾಗುವ ಪದಾರ್ಥಗಳು -
ಅರ್ಧ ಟೀ ಸ್ಪೂನ್ ಬಾದಾಮಿ ಎಣ್ಣೆ, ಅರ್ಧ ಟೀ ಸ್ಪೂನ್ ಜೇನುತುಪ್ಪ
ಮಾಡುವ ವಿಧಾನ
1) ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ
2)ರಾತ್ರಿಯೆಲ್ಲಾ ಹಾಗೆಯೇ ಇರಲಿ ಮತ್ತು ಬೆಳಿಗ್ಗೆ ಎದ್ದು ಅದನ್ನು ವಾಷ್ ಮಾಡಿ

ಮೊಟ್ಟೆಯ ಬಿಳಿಭಾಗ
ಮೊಟ್ಟೆಯ ಬಿಳಿಭಾಗವು ಹಲವು ಬ್ಯೂಟಿ ಲಾಭಗಳಿಂದಾಗಿ ಎಲ್ಲರಿಗೂ ತಿಳಿದಿರುವ ವಸ್ತುವೇ ಆಗಿದೆ. ಇದನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತಲಿನ ಚರ್ಮ ದೃಢವಾಗುತ್ತೆ ಮತ್ತು ಗೆರೆಗಳು ಬೀಳುವುದು ನಿಯಂತ್ರಣಕ್ಕೆ ಬರುತ್ತೆ.
ಬೇಕಾಗುವ ವಸ್ತುಗಳು
1 ಮೊಟ್ಟೆಯ ಬಿಳಿಭಾಗ, ಅರ್ಥ ಟೀ ಸ್ಪೂನ್ ಕಾರ್ನ್ ಫ್ಲೋರ್
ಮಾಡುವ ವಿಧಾನ -
1) ಮೊದಲು ಮೊಟ್ಟೆಯ ಬಿಳಿಭಾಗವನ್ನು ಚೆನ್ನಾಗಿ ಕಲಕಿ
2)ಕಾರ್ನ್ ಫ್ಲೋರ್ ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ
3) ಇದನ್ನು ನಿಮ್ಮ ಕಣ್ಣಿನ ಸುತ್ತ ಹಚ್ಚಿ ಮತ್ತು ಅದು ಒಣಗಲು ಬಿಡಿ
4)ನಂತರ ತಣ್ಣೀರಿನಿಂದ ತೊಳೆಯಿರಿ

ಟೋಮೆಟೋ ಪಲ್ಪ್ ಮತ್ತು ಅರಿಶಿನದ ಪುಡಿ
ಟೋಮೆಟೋದಲ್ಲಿ ಆಲಿಯಿಕ್ ಆಸಿಡ್ ಇರುತ್ತೆ. ಇದು ನಿಮ್ಮ ಕಪ್ಪು ವರ್ತುಲವನ್ನು ಕಡಿಮೆ ಮಾಡುತ್ತೆ. ಕಣ್ಣಿನ ಸುತ್ತಲಿನ ಚರ್ಮದ ಕಾಂತಿಗೆ ಅರಿಶಿನ ಸಹಕಾರಿಯಾಗಿದೆ
ಬೇಕಾಗುವ ವಸ್ತುಗಳು -
ಒಂದು ಟೀ ಸ್ಪೂನ್ ಟೋಮೆಟೋ ಜ್ಯೂಸ್
ಸ್ವಲ್ಪವೇ ಸ್ವಲ್ಪ ಅರಿಶಿನದ ಪುಡಿ
ಒಂದು ಟೀ ಸ್ಪೂನ್ ಕಡಲೆ ಹಿಟ್ಟು
. ಮಾಡುವ ವಿಧಾನ
1) ಕಡಲೆ ಹಿಟ್ಟು, ಅರಿಶಿನ ಮತ್ತು ಟೆಮೆಟೋ ಜ್ಯೂಸ್ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ
2) ಇದನ್ನು ನಿಮ್ಮ ಕಣ್ಣಿನ ಭಾಗಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆಯೇ ಬಿಡಿ.
3)ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ.

ನೆಲ್ಲಿಕಾಯಿ ರಸ
ನೆಲ್ಲಿಕಾಯಿ ರಸವೂ ತಕ್ಷಣವೇ ನಿಮ್ಮ ಕಣ್ಣುಗಳನ್ನು ರಿಪ್ರೆಶ್ ಮಾಡುತ್ತೆ ಮತ್ತು ಆರೋಗ್ಯಯುತವಾಗಿ ಕಾಣಿಸುವಂತೆ ಮಾಡುತ್ತೆ.
ಬೇಕಾಗುವ ವಸ್ತುಗಳು -
ಒಂದು ಮುಷ್ಟಿಯಷ್ಟು ನೆಲ್ಲಿಕಾಯಿ, ಸ್ವಲ್ಪ ನೀರು, ಎರಡು ಹತ್ತಿ ಬಟ್ಟೆ
ಮಾಡುವ ವಿಧಾನ -
1) ಒಂದು ರಾತ್ರಿ ನೆಲ್ಲಿಕಾಯಿಯನ್ನು ನೀರಿನಲ್ಲಿ ನೆನೆಸಿಡಿ
2) ಮಾರನೇ ದಿನ ಬೆಳಿಗ್ಗೆ ಆ ನೀರಿನಲ್ಲಿ ಹತ್ತಿಯನ್ನು ಅದ್ದಿ ನಿಮ್ಮ ಕಣ್ಣುಗಳ ಸುತ್ತ ಅಪ್ಲೈ ಮಾಡಿಕೊಳ್ಳಿ. 15 ನಿಮಿಷ ಹಾಗೆಯೇ ಬಿಡಿ..

ವಿಟಮಿನ್ ಇ ಆಯಿಲ್
ನಿಮ್ಮ ಕಣ್ಣಿನ ಸುತ್ತ ಇರುವ ಸೂಕ್ಷ್ಮ ಚರ್ಮವನ್ನು ತಿಳಿಗೊಳಿಸಿ, ಸುಂದರವಾಗಿಸಲು ಈ ವಿಟಮಿನ್ ಇ ನೆರವಾಗಲಿದೆ. ಕೆಟ್ಟ ಕೆಮಿಕಲ್ ಗಳಿಂದ ಆಗಿರುವ ಹಾನಿಯನ್ನು ಅಥವಾ ಕಣ್ಣು ಉಜ್ಜಿಕೊಂಡಿರುವುದರಿಂದಾ ಆಗಿರುವ ಹಾನಿಯನ್ನು ತಪ್ಪಿಸಲು ಇದು ನಿಮಗೆ ನೆರವಾಗುತ್ತದೆ.
ಬೇಕಾಗುವ ವಸ್ತುಗಳು - ವಿಟಮಿನ್ ಇ ಮಾತ್ರೆಗಳು, ಒಂದು ಚಿಕ್ಕ ಪಾತ್ರೆಯಲ್ಲಿ ನೀರು, ಎರಡು ಹತ್ತಿಯ ತುಂಡುಗಳು
ಮಾಡುವ ವಿಧಾನ
1) ವಿಟಮಿನ್ ಇ ಮಾತ್ರೆಗಳನ್ನು ಕತ್ತರಿಸಿ ತಣ್ಣನೆಯ ನೀರಿನಲ್ಲಿ ಹಾಕಿ
2) ಅದರಲ್ಲಿ ಹತ್ತಿಯನ್ನು ಅದ್ದಿ ನಿಮ್ಮ ಕಣ್ಣುಗಳ ಮೇಲೆ 10 ನಿಮಿಷ ಇಟ್ಟುಕೊಳ್ಳಿ.

ಗ್ರೀನ್ ಟೀ ಬ್ಯಾಗ್ಸ್
ಗ್ರೀನ್ ಟೀ ಬ್ಯಾಗ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಅಧಿಕವಾಗಿರುತ್ತೆ. ಕಣ್ಣಿನ ಸುತ್ತಲಿನ ಬೊಜ್ಜಿನ ಅಂಶವನ್ನು ತೆಗೆಯಲು ಇದು ನೆರವಾಗುತ್ತೆ.
ಬೇಕಾಗುವ ವಸ್ತುಗಳು - ಎರಡು ಗ್ರೀನ್ ಟೀ ಬ್ಯಾಗ್ ಗಳು
ಮಾಡುವ ವಿಧಾನ -
1) ಒಂದು ನಿಮಿಷ ಗ್ರೀನ್ ಟೀ ಬ್ಯಾಗ್ ನ್ನು ಬಿಸಿ ನೀರಿನಲ್ಲಿ ಕುದಿಸಿ.
2) ಅದು ತಣಿದ ನಂತರ 15 ನಿಮಿಷ ಅವುಗಳನ್ನು ನಿಮ್ಮ ಕಣ್ಣಿನ ಮೇಲ್ಬಾಗದಲ್ಲಿ ಇಟ್ಟುಕೊಳ್ಳಿ

ಹರಳೆಣ್ಣೆ
ಹರಳೆಣ್ಣೆಯು ನಿಮ್ಮ ಕಣ್ಣುಗಳ ರೆಪ್ಪೆಗಳ ಬೆಳವಣಿಗೆಗೆ ಸಹಕಾರಿ. ಇದು ನಿಮಗೆ ಕಣ್ಣಿಗೆ ಹಾನಿಯುಂಟುಮಾಡುವ ಇತರೆ ಪದಾರ್ಥಗಳಿಂದ ರಕ್ಷಿಸುತ್ತೆ. ಹರಳೆಣ್ಣೆ ನಿಮ್ಮ ಕಣ್ಣುಗಳನ್ನು ತಂಪಾಗಿಡಲೂ ಕೂಡ ನೆರವಾಗುತ್ತೆ.
ಬೇಕಾಗುವ ವಸ್ತುಗಳು
ಹರಳೆಣ್ಣೆ ಮತ್ತು ಹತ್ತಿಯ ತುಂಡುಗಳು
ಮಾಡುವ ವಿಧಾನ -
1) ಹರಳೆಣ್ಣೆಯನ್ನು ನಿಮ್ಮ ಕಣ್ಣಿನ ರೆಪ್ಪೆಗಳಿಗೆ ಮತ್ತು ಕಣ್ಣಿನ ಸುತ್ತಲೂ ಹತ್ತಿಯ ಸಹಾಯದಿಂದ ಅಪ್ಲೈ ಮಾಡಿ.
2) ಪ್ರತಿ ದಿನ ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ ನಿಮ್ಮ ಕಣ್ಣುಗಳಿಗೆ ತುಂಬಾ ಒಳ್ಳೆಯದು. ಬೆಳಿಗ್ಗೆ ಎದ್ದ ಕೂಡಲೇ ತಣ್ಣನೆಯ ನೀರಿನಿಂದ ತೊಳೆಯಿರಿ

ರೋಸ್ ವಾಟರ್
ನೈಸರ್ಗಿಕವಾಗಿ ನಿಮ್ಮ ಕಣ್ಣುಗಳನ್ನು ಟೋನ್ ಮಾಡುವ ಮತ್ತು ತಂಪು ಮಾಡುವ ವಸ್ತುವೆಂದರೆ ಅದು ರೋಸ್ ವಾಟರ್, ಇದು ಕೇವಲ ಕಣ್ಣಿನ ಆರೋಗ್ಯಕ್ಕೆ ಅಷ್ಟೇ ಅಲ್ಲ, ಕಪ್ಪು ವರ್ತುಲದ ನಿವಾರಣೆಗೂ ಇದು ಸಹಕಾರಿಯಾಗಿದೆ.
ಬೇಕಾಗುವ ವಸ್ತುಗಳು
- ರೋಸ್ ವಾಟರ್, ಹತ್ತಿಯ ತುಂಡುಗಳು
ಮಾಡುವ ವಿಧಾನ -
1) ಹತ್ತಿಯ ತುಂಡುಗಳನ್ನು ರೋಸ್ ವಾಟರ್ ನಲ್ಲಿ ಅದ್ದಿ. 10 ನಿಮಿಷ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ
2) ರಾತ್ರಿ ಮಲಗುವ ಮುನ್ನ ಪ್ರತಿದಿನ ನೀವು ರೋಸ್ ವಾಟರ್ ನಿಂದ ನಿಮ್ಮ ಕಣ್ಣುಗಳಿಗೆ ಮಸಾಜ್ ಮಾಡಿಕೊಳ್ಳುವುದು ಕೂಡ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಬಹಳ ಉಪಕಾರಿ.

ಜೋಜೋಬಾ ಆಯಿಲ್
ಆಯಾಸವಾದ ಕಣ್ಣುಗಳಿಗೆ ಆರಾಮ ಒದಗಿಸಲು, ಬಳಲಿದ ಕಣ್ಣುಗಳನ್ನು ರಿಫ್ರೆಶ್ ಮಾಡಲು ಮತ್ತು ಕಣ್ಣಿನ ಸುತ್ತಲಿನ ಚರ್ಮದ ಆರೈಕೆಗೆ ಜೋಜೋಬಾ ಎಣ್ಣೆ ನೆರವು ನೀಡುತ್ತೆ.
ಬೇಕಾಗುವ ಸಾಮಗ್ರಿಗಳು
-10 ಹನಿ ಜೋಜೋಬಾ ಎಣ್ಣೆ, 5 ಹನಿ ಬಾದಾಮಿ ಎಣ್ಣೆ

ಮಾಡುವ ವಿಧಾನ -
1) ಒಂದು ಸಣ್ಣ ಬೌಲ್ ನಲ್ಲಿ ಎರಡೂ ಎಣ್ಣೆಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ
2) 10 ನಿಮಿಷ ವೃತ್ತಾಕಾರದಲ್ಲಿ ಆ ಎಣ್ಣೆ ಬಳಸಿ ನಿಮ್ಮ ಕಣ್ಣುಗಳಿಗೆ ಮಸಾಜ್ ಮಾಡಿ
3) ನಂತರ ಸ್ವಚ್ವಗೊಳಿಸಿ ಮೃದು ಬಟ್ಟೆಯಿಂದ ಒರೆಸಿಕೊಳ್ಳಿ. ಇದನ್ನು ಹೊರತು ಪಡಿಸಿ ನಿಮ್ಮ ಕಣ್ಣುಗಳ ಆರೋಗ್ಯಕ್ಕಾಗಿ ನೀವು ಇನ್ನೇನನ್ನು ಮಾಡಬಹುದು ಎಂಬ ಸರಳ ಸಲಹೆಗಳು ಇಲ್ಲಿವೆ ನೋಡಿ..

ಮೇಕಪ್ ತೆಗೆಯಲು ಬೇಬಿ ಆಯಿಲ್ ಬಳಸಿ
ಅತಿಯಾಗಿ ಕೆಮಿಕಲ್ ಮಿಶ್ರಿತ ಮೇಕಪ್ ವಸ್ತುಗಳನ್ನು ಬಳಸುವುದರಿಂದಾಗಿ ಕಣ್ಣುಗಳಿಗೆ ಹಾನಿಯಾಗುತ್ತೆ. ಅದು ಕಣ್ಣುಗಳ ಸುತ್ತ ಗೆರೆಗಳು ಏಳುವಂತೆ ಮಾಡಬಹುದು. ಹಾಗಾಗಿ ಮೇಕಪ್ ತೆಗೆಯಲು ಮಕ್ಕಳ ಎಣ್ಣೆಯನ್ನು ಬಳಸಿ. ಇದು ಮೈಲ್ಡ್ ಆಗಿರುವುದರಿಂದ ಕಣ್ಣಿನ ಮೇಕಪ್ ತೆಗೆಯುವಾಗ ಯಾವುದೇ ಹಾನಿಯಾಗುವುದಿಲ್ಲ.

ಹೊರಗಡೆ ಬಿಸಿಲಿನಲ್ಲಿ ಹೋಗುವಾಗ ಸನ್ ಗ್ಲಾಸ್ ಬಳಕೆ ಮಾಡಿ
ಸನ್ ಗ್ಲಾಸ್ ಗಳನ್ನು ಬಳಕೆ ಮಾಡುವುದರಿಂದಾಗಿ ನಿಮ್ಮ ಕಣ್ಣುಗಳಿಗೆ ಸೂರ್ಯನ ನೇರಳಾತೀತ ಕಿರಣಗಳು ಮಾಡುವ ಹಾನಿಯನ್ನು ತಪ್ಪಿಸಿಕೊಳ್ಳಬಹುದು. ಮತ್ತು ಇದರಿಂದಾಗಿ ಕಣ್ಣುಗಳ ಚರ್ಮದಲ್ಲಿ ನೆರಿಗೆಗಳಾಗುವುದು ತಪ್ಪುತ್ತದೆ.

ಅತಿಯಾಗಿ ಉಪ್ಪು ಸೇವಿಸುವುದನ್ನು ಬಿಡಿ
ಅತಿಯಾಗಿ ಉಪ್ಪು ಸೇವಿಸುವುದರಿಂದಾಗಿ ದೇಹದ ನೀರಿನ ಅಂಶ ಕುಗ್ಗುತ್ತದೆ. ಇದು ಕಣ್ಣಿನ ಮೇಲೆ ಪರಿಣಾಮ ಬೀರುತ್ತೆ. ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ಉಪ್ಪು ಸೇವನೆ ಸಾಕು. ಅದರ ಬಗ್ಗೆ ನಿಮ್ಮ ನಿಯಂತ್ರಣವಿರಲಿ

ಕಣ್ಣಿನ ಆರೋಗ್ಯಕ್ಕೆ ಅಗತ್ಯವಿರುವಷ್ಟು ನಿದ್ರಿಸಿ
ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಎಂದರೆ ಚೆನ್ನಾಗಿ ನಿದ್ರಿಸಬೇಕು. ನಿಮ್ಮ ಕಣ್ಣುಗಳು ಸುಂದರವಾಗಿ ಕಾಣಬೇಕು ಎಂದರೆ 8 ತಾಸುಗಳ ನಿದ್ದೆ ಪ್ರತಿ ಮನುಷ್ಯನಿಗೂ ಅಗತ್ಯವಿದೆ. ಅದನ್ನು ತಪ್ಪಿಸಬೇಡಿ. ನಿದ್ದೆ ಗೆಟ್ಟರೆ ಖಂಡಿತ ನಿಮ್ಮ ಕಣ್ಣಿನ ಆರೋಗ್ಯ ಹಾಳಾಗುತ್ತದೆ.

ಸರಿಯಾದ ಆಹಾರ ಸೇವನೆ
ಪೌಷ್ಟಿಕಾಂಶ ಭರಿತ ಆಹಾರ ಸೇವಿಸಿದರೆ ನಿಮ್ಮ ದೇಹವು ಸರಿಯಾದ ಹೋರಾಟ ಮಾಡುವ ಸಾಮರ್ಥ್ಯವನ್ನು ಹೊಂದುತ್ತದೆ. ಪ್ರತಿಯೊಬ್ಬರೂ ಕೂಡ ಯಾವುದೇ ಪರಿಶ್ರಮವಿಲ್ಲದೆ ಆರೋಗ್ಯವಾಗಿರಬೇಕು ಎಂದು ಬಯಸುತ್ತಾರೆ. ಅಂತೆಯೇ ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಿಮ್ಮ ಆಹಾರ ಸರಿಯಾಗಿರಬೇಕು. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ ಕಣ್ಣುಗಳಿಗೆ ಯಾವುದೇ ಸೋಂಕು ಇಲ್ಲವೆ ತೊಂದರೆ ಬರಲು ಸಾಧ್ಯವಿಲ್ಲ.

English summary

15 Best Eye Care Tips To Protect Your Eyes in Kannada

If you are battling with eye issues such as tired eyes, under-eye bags or puffiness, it is important you address these issues right away. Here are top 15 tips that will brighten the area around your eyes and make them feel rejuvenated.
X
Desktop Bottom Promotion