ಹಿಮ್ಮಡಿ ಕಾಲು ಒಡೆದಿದ್ರೆ, ಒಮ್ಮೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ...

Posted By: Lekhaka
Subscribe to Boldsky

ಪಾದಗಳ ಹಿಮ್ಮಡಿ ಒಡೆದಾಗ ಕಾಣಿಸಿಕೊಳ್ಳುವ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದರಲ್ಲೂ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವಂತಹ ಸಮಸ್ಯೆ ತೀವ್ರವಾಗಿ ಕಾಡುವುದು. ಹಿಮ್ಮಡಿ ಒಡೆಯಲು ಪ್ರಮುಖ ಕಾರಣವೆಂದರೆ ಮೊಶ್ವಿರೈಶ್ ಇಲ್ಲದೆ ಇರುವುದು, ನಿರ್ಜಲೀಕರಣ, ಚಳಿ ಮತ್ತು ಒಣ ಹವಾಮಾನ, ಮಾಲಿನ್ಯ, ದೀರ್ಘಕಾಲ ತನಕ ಕಾಲನ್ನು ನೀರಿನಲ್ಲಿ ಇಡುವುದು, ವಯಸ್ಸಾಗುವುದು ಮತ್ತು ಗಡುಸಾದ ಸೋಪುಗಳನ್ನು ಬಳಸುವುದು. ಹಿಮ್ಮಡಿಯಲ್ಲಿ ಯಾವುದೇ ರೀತಿಯ ತೈಲಗ್ರಂಥಿಗಳು ಇಲ್ಲದೆ ಇರುವ ಕಾರಣದಿಂದಾಗಿ ಅದು ತುಂಬಾ ಒಣಗಿರುವುದು.

ಒಡೆಯುವ ಪಾದಗಳ ಆರೈಕೆಗೆ ಪವರ್‌ಫುಲ್ ಮನೆಮದ್ದುಗಳು

ಗಡುಸಾದ ನೆಲ, ಶೀತವಿರುವ ಜಾಗದಲ್ಲಿ ದೀರ್ಘಕಾಲ ನಿಲ್ಲುವುದು, ಅತಿಯಾಗಿ ನಡೆಯುವುದು ಮತ್ತು ಅತಿ ದೇಹಭಾರ ಕೂಡ ಹಿಮ್ಮಡಿ ಒಡೆಯಲು ಪ್ರಮುಖ ಕಾರಣಗಳು. ಇದಕ್ಕೆ ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ನೀಡಬೇಕು. ಇಲ್ಲದೆ ಇದ್ದರೆ ನಡೆದಾಡಲು ಕಷ್ಟವಾಗುವುದು ಮತ್ತು ಅದರಿಂದ ಸೋಂಕು ಕಾಣಿಸಿಕೊಳ್ಳುವುದು. ಹಿಮ್ಮಡಿ ಒಡೆಯುವುದನ್ನು ಕಡೆಗಣಿಸಿದರೆ ಆಗ ದೊಡ್ಡ ಬಿರುಕು ಕಾಣಿಸಬಹುದು. ಮಾರುಕಟ್ಟೆಯಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಹಲವಾರು ಕ್ರೀಮ್ ಗಳು ಲಭ್ಯವಿದೆ. ಆದರೆ ಮನೆಯಲ್ಲೇ ತಯಾರಿಸಿದ ಕೆಲವೊಂದು ಮಾಸ್ಕ್‌ಗಳು ತುಂಬಾ ಪರಿಣಾಮಕಾರಿ. ಹಿಮ್ಮಡಿ ಒಡೆಯುವುದಕ್ಕೆ ಇರುವ ಮನೆಮದ್ದುಗಳು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ....

ಅವಕಾಡೋ ಮತ್ತು ಬಾಳೆಹಣ್ಣಿನ ಕಾಲಿನ ಮಾಸ್ಕ್

ಅವಕಾಡೋ ಮತ್ತು ಬಾಳೆಹಣ್ಣಿನ ಕಾಲಿನ ಮಾಸ್ಕ್

ಅವಕಾಡೋವಿನಲ್ಲಿ ಇರುವಂತಹ ತೈಲ, ವಿಟಮಿನ್ ಮತ್ತು ಕೊಬ್ಬು ಹಾನಿಗೊಳಗಾಗಿರುವ ಚರ್ಮವನ್ನು ಸರಿಪಡಿಸುವುದು. ಇದನ್ನು ನೈಸರ್ಗಿಕ ಬೆಣ್ಣೆ ಎಂದೇ ಕರೆಯಲಾಗುವುದು. ಬಾಳೆಹಣ್ಣಿನಲ್ಲಿ ಒಳ್ಳೆಯ ಮಾಯಿಶ್ಚರೈಸರ್ ಇದೆ ಮತ್ತು ಚರ್ಮವನ್ನು ತುಂಬಾ ನಯವಾಗಿಸುವುದು.

ವಿಧಾನ

*ಒಂದು ಹಣ್ಣಾದ ಬಾಳೆಹಣ್ಣು ಮತ್ತು ಅರ್ಧ ಅವಕಾಡೋವನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

*ಇದನ್ನು ಪಾದ ಮತ್ತು ಹಿಮ್ಮಡಿಗೆ ಹಚ್ಚಿಕೊಳ್ಳಿ.

*15-20 ನಿಮಿಷ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

*ಹಿಮ್ಮಡಿ ನಯವಾಗುವ ತನಕ ಪ್ರತಿನಿತ್ಯ ನೀವು ಹೀಗೆ ಮಾಡಿ.

ಲಿಂಬೆರಸ ಮತ್ತು ಪೆಟ್ರೋಲಿಯಂ ಜೆಲ್

ಲಿಂಬೆರಸ ಮತ್ತು ಪೆಟ್ರೋಲಿಯಂ ಜೆಲ್

ಲಿಂಬೆರಸದಲ್ಲಿ ಇರುವಂತಹ ಆಮ್ಲೀಯ ಗುಣವು ಒಣಚರ್ಮವನ್ನು ತೆಗೆದುಹಾಕುವುದು.

ಪೆಟ್ರೋಲಿಯಂ ಜೆಲ್ ನಲ್ಲಿ ಒಳ್ಳೆಯ ಮೊಶ್ಚಿರೈಸರ್ ಇದ್ದು, ಇದು ಚರ್ಮವನ್ನು ನಯ ಹಾಗೂ ಸುಂದರವಾಗಿಸುವುದು.

ವಿಧಾನ

*20 ನಿಮಿಷ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ಕಾಲನ್ನು ಇಡಿ. ಇದರ ಬಳಿಕ ಕಾಲನ್ನು ಒಣ ಟವೆಲ್ ನಿಂದ ಒರೆಸಿಕೊಳ್ಳಿ.

*ಒಂದು ಬೌಲ್ ನಲ್ಲಿ ಒಂದು ಚಮಚ ಪೆಟ್ರೋಲಿಯಂ ಜೆಲ್ ಮತ್ತು ಅದಕ್ಕೆ ಕೆಲವು ಹನಿ ನಿಂಬೆರಸ ಹಾಕಿ.

*ಈ ಮಿಶ್ರಣವನ್ನು ಹಿಮ್ಮಡಿ ಹಾಗೂ ಪಾದಕ್ಕೆ ಹಚ್ಚಿಕೊಳ್ಳಿ ಮತ್ತು ಚರ್ಮವು ಸರಿಯಾಗಿ ಇದನ್ನು ಹೀರಿಕೊಳ್ಳುವ ತನಕ ಮಸಾಜ್ ಮಾಡಿ.

* ಕಾಟನ್ ಸಾಕ್ಸ್ ಧರಿಸಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ.

* ಪ್ರತಿನಿತ್ಯ ಮಲಗುವ ಮೊದಲು ಹೀಗೆ ಮಾಡಿ.

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಹಗುರವಾದ ಆಮ್ಲೀಯ ಗುಣವಿದೆ. ಇದು ಚರ್ಮವನ್ನು ನಯವಾಗಿಸಿ, ಸತ್ತ ಚರ್ಮಗಳನ್ನು ತೆಗೆದುಹಾಕುವುದು.

ವಿಧಾನ

*ಬಿಸಿ ನೀರಿನಲ್ಲಿ ಕಾಲನ್ನು ಅದ್ದಿಟ್ಟುಕೊಳ್ಳಿ.

*ಒಂದು ಕಪ್ ಆ್ಯಪಲ್ ಸೀಡರ್ ವಿನೇಗರ್ ನ್ನು ಬಿಸಿ ನೀರಿಗೆ ಹಾಕಿ.

*15 ನಿಮಿಷ ಕಾಲ ಕಾಲನ್ನು ಇದರಲ್ಲಿ ಮುಳುಗಿಸಿಡಿ.

*15 ನಿಮಿಷ ಬಿಟ್ಟು ಕಾಲನ್ನು ಒರಟು ಕಲ್ಲಿಗೆ ಉಜ್ಜಿಕೊಳ್ಳಿ.

* ಒಣಗಿದ ಟವೆಲ್ ನಿಂದ ಕಾಲು ಒರೆಸಿಕೊಳ್ಳಿ.

* ಹಿಮ್ಮಡಿ ಸಂಪೂರ್ಣವಾಗಿ ಶಮನವಾಗುವ ತನಕ ಹೀಗೆ ಮಾಡಿ.

ಓಟ್ ಮೀಲ್ ಮತ್ತು ಆಲಿವ್ ತೈಲ

ಓಟ್ ಮೀಲ್ ಮತ್ತು ಆಲಿವ್ ತೈಲ

ಓಟ್ ಮೀಲ್ ನಲ್ಲಿ ಉರಿಯೂತ ಶಮನಕಾರಿ ಮತ್ತು ಮೊಶ್ಚಿರೈಸರ್ ಗುಣಗಳು ಇವೆ. ಇದು ಸತ್ತ ಚರ್ಮವನ್ನು ತೆಗೆದು ಚರ್ಮವನ್ನು ತುಂಬಾ ನಯವಾಗುವುದು. ಆಲಿವ್ ತೈಲದಲ್ಲಿ ವಿಟಮಿನ್ ಇ ಲಭ್ಯವಿದ್ದು, ಇದು ಚರ್ಮವನ್ನು ರಕ್ಷಿಸುವುದು ಮತ್ತು ಚರ್ಮದ ಕೋಶಗಳು ಮತ್ತೆ ಬೆಳೆಯಲು ನೆರವಾಗುವುದು. ಇದು ಸತ್ತ ಚರ್ಮವನ್ನು ತೆಗೆದು ಒಣ ಚರ್ಮದ ಗಡುಸಾದ ಭಾಗ ನಯವಾಗಿಸುವುದು.

ವಿಧಾನ

*ಒಂದು ಬೌಲ್ ಗೆ ಒಂದು ಚಮಚ ಓಟ್ ಮೀಲ್ ಹುಡಿ ಮತ್ತು ಕೆಲವು ಹನಿ ಆಲಿವ್ ತೈಲ ಹಾಕಿ.

*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಇದರ ದಪ್ಪಗಿನ ಪೇಸ್ಟ್ ಮಾಡಿ.

*ಈ ಪೇಸ್ಟ್ ಅನ್ನು ಹಿಮ್ಮಡಿ ಮತ್ತು ಕಾಲಿಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ.

 ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆಯಲ್ಲಿ ಕೊಬ್ಬಿನಾಮ್ಲವು ಸಮೃದ್ಧವಾಗಿದೆ ಮತ್ತು ಇದರಿಂದ ಅದು ಚರ್ಮಕ್ಕೆ ತೇವಾಂಶ ನೀಡುವುದು. ಹರಳೆಣ್ಣೆಯು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕು ಬರದಂತೆ ತಡೆದು ಚರ್ಮವನ್ನು ನಯವಾಗಿಸುವುದು.

ವಿಧಾನ

*ಬಿಸಿ ನೀರಿನಲ್ಲಿ ಚರ್ಮವನ್ನು ಅದ್ದಿಡಿ ಮತ್ತು ಒರಟು ಕಲ್ಲು ಬಳಸಿ ಹಿಮ್ಮಡಿ ಸ್ಕ್ರಬ್ ಮಾಡಿ.

*ಟವೆಲ್ ನಿಂದ ಕಾಲನ್ನು ಒರೆಸಿಕೊಳ್ಳಿ.

*ಈಗ ಒಡೆದಿರುವಂತಹ ಹಿಮ್ಮಡಿ ಮೇಲೆ ಹರಳೆಣ್ಣೆಯನ್ನು ಸರಿಯಾಗಿ ಹಚ್ಚಿಕೊಳ್ಳಿ.

*ಕಾಟನ್ ಸಾಕ್ಸ್ ಧರಿಸಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ.

*ಇದನ್ನು ಪ್ರತಿನಿತ್ಯ ಮಾಡಿದರೆ ಒಡೆದ ಹಿಮ್ಮಡಿ ಸಮಸ್ಯೆಯು ಬೇಗನೆ ನಿವಾರಣೆಯಾಗುವುದು.

ಅಕ್ಕಿಹಿಟ್ಟು, ಜೇನುತುಪ್ಪ ಮತ್ತು ಆ್ಯಪಲ್ ಸೀಡರ್ ವಿನೇಗರ್ ಮಾಸ್ಕ್

ಅಕ್ಕಿಹಿಟ್ಟು, ಜೇನುತುಪ್ಪ ಮತ್ತು ಆ್ಯಪಲ್ ಸೀಡರ್ ವಿನೇಗರ್ ಮಾಸ್ಕ್

ಅಕ್ಕಿ ಹಿಟ್ಟು ಒಡೆದ ಹಿಮ್ಮಡಿಯ ನಿವಾರಣೆಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಕಿತ್ತುಹಾಕುವ ಗುಣವಿದೆ ಮತ್ತು ಸತ್ತ ಕೋಶಗಳನ್ನು ತೆಗೆದುಹಾಕುವುದು. ಇದರಿಂದ ಒಡೆಯುವುದು ಹಾಗೂ ಒಣಗುವುದನ್ನು ತಡೆಯಬಹುದು. ಜೇನುತುಪ್ಪವು ನೈಸರ್ಗಿಕ ಮಾಯಿಶ್ಚರೈಸರ್ ಮತ್ತು ಚರ್ಮವನ್ನು ನಯವಾಗಿಸುವುದು.

ವಿಧಾನ

*ಒಂದು ಬೌಲ್ ನಲ್ಲಿ 2-3 ಚಮಚ ಅಕ್ಕಿಹಿಟ್ಟು ಹಾಕಿ ಮತ್ತು ಅದಕ್ಕೆ ಕೆಲವು ಹನಿ ಜೇನುತುಪ್ಪ ಮತ್ತು ಆ್ಯಪಲ್ ಸೀಡರ್ ವಿನೇಗರ್ ಹಾಕಿ.

*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಒಡೆದ ಹಿಮ್ಮಡಿಗೆ ಹಚ್ಚಿಕೊಳ್ಳಿ.

* ಹಚ್ಚುವ ಮೊದಲು ಕಾಲನ್ನು 10 ನಿಮಿಷ ಕಾಲ ಬಿಸಿನೀರಿನಲ್ಲಿ ಇಡಿ ಮತ್ತು ಹಿಮ್ಮಡಿಯನ್ನು ಸ್ಕ್ರಬ್ ಮಾಡಿ. ಫಲಿತಾಂಶ ಕಂಡುಬರುವ ತನಕ ಇದನ್ನು ಬಳಸಿ.

ಬೇವಿನ ಎಲೆಗಳು

ಬೇವಿನ ಎಲೆಗಳು

ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿ ಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕು ಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

ಬಾಳೆಹಣ್ಣಿನ ಪೇಸ್ಟ್

ಬಾಳೆಹಣ್ಣಿನ ಪೇಸ್ಟ್

ಒಂದು ದೊಡ್ಡ ಬಾಳೆಹಣ್ಣನ್ನು ಕಿವುಚಿ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬಾಳೆಹಣ್ಣು ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡುವ ಕಾರಣ ಹೊರಚರ್ಮ ಶೀಘ್ರವಾಗಿ ಕಳಚಿಕೊಂಡು ಒಳಚರ್ಮಕ್ಕೆ ಆರೋಗ್ಯಕರವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಮಯದ ಆಭಾವವಿರುವವರು ಈ ವಿಧಾನವನ್ನು ಅನುಸರಿಸುವುದು ಒಳ್ಳೆಯದು.

ಮೊಸರಿನ ರೆಸಿಪಿ

ಮೊಸರಿನ ರೆಸಿಪಿ

ತನ್ನ ತೇವಕಾರಕ ಹಾಗೂ ಸೂಕ್ಷ್ಮಾಣುಜೀವಿ ಪ್ರತಿಬ೦ಧಕ ಗುಣಧರ್ಮಗಳ ಕಾರಣದಿ೦ದಾಗಿ ಒಡೆದ ಹಿಮ್ಮಡಿಗಳಿಗೆ ಮನೆಮದ್ದಿನ ರೂಪದಲ್ಲಿ ಮೊಸರು ಚಿರಪರಿಚಿತವಾಗಿದೆ. ಬಿಳಿ ವಿನೆಗರ್ ನೊ೦ದಿಗೆ ಬೆರೆಸಿದಾಗ, ದ್ರಾವಣವು ಎಲ್ಲಾ ಮೃತ ಚರ್ಮವನ್ನೂ ನಿವಾರಿಸಿಬಿಡುತ್ತದೆ ಹಾಗೂ ಜೊತೆಗೆ ಬಿರುಕುಗಳ ಆಳದಲ್ಲಿ ಸ೦ಚಯಗೊ೦ಡಿರಬಹುದಾದ ಧೂಳುಕೊಳೆಗಳೆಲ್ಲವನ್ನೂ ತೊಡೆದುಹಾಕುತ್ತದೆ.

English summary

Treating Cracked Heels At Home: Simple Home Remedies

Cracked heels are also called heel fissures and can be very painful if left untreated. The cracks that we see on our heels are caused by various reasons, like lack of moisturization, dehydration, cold and dry weather, overexposure to pollution, soaking the foot in water for a long time, ageing, and using harsh soaps on your feet. Go ahead, take a look and do try these out if you find them to be suitable for your skin. Home Remedies For Cracked Heels