For Quick Alerts
ALLOW NOTIFICATIONS  
For Daily Alerts

ಅಲ್ಲಿ ಇಲ್ಲಿ ಏಕೆ ಹೋಗುವಿರಿ? ಮನೆಯಲ್ಲಿ ಮಾಡಿ ಸರಳವಾದ ಮಸಾಜ್

By Divya
|

ಅತಿಯಾದ ದಣಿವು, ಮೈಕೈ ನೋವು ಹಾಗೂ ತಲೆ ನೋವು ಬಂದಾಗ ಮನಸ್ಸು ಬಯಸುವುದು ಮಸಾಜ್‍ನ್ನು. ಮಸಾಜ್ ಎಂದ ಮಾತ್ರಕ್ಕೆ ಅದನ್ನು ಮನಸ್ಸಿಗೆ ಬಂದಂತೆ ಮಾಡಿಸಿಕೊಂಡರೆ ದೇಹದಲ್ಲಿ ಇನ್ನಷ್ಟು ನೋವು ಹೆಚ್ಚಾಗುವುದು. ಹಾಗಾಗಿ ಅದಕ್ಕೆ ಸೂಕ್ತ ವ್ಯಕ್ತಿಗಳಿಂದ ಮಸಾಜ್ ಮಾಡಿಸಬೇಕು. ಇಲ್ಲವೇ ಸೆಲೂನ್ ಅಥವಾ ಬಾಡಿ ಮಸಾಜ್ ಸೆಂಟರ್‌ಗಳಿಗೆ ತೆರಳಬೇಕು. ಆದರೆ ನಿತ್ಯವೂ ಈ ಆರೈಕೆಗೆ ಒಳಪಡುವುದು ದುಬಾರಿಯಾದ ಮಾರ್ಗ.

ತ್ವಚೆಯ ಸೌಂದರ್ಯಕ್ಕಾಗಿ ಫೇಶಿಯಲ್ ಮಸಾಜ್‌

ಮನೆ ಮಂದಿಯಿಂದಲೇ ಕೆಲವು ಸುಲಭ ದೇಹದ ಮಸಾಜ್‍ಅನ್ನು ಮಾಡಿಸಿಕೊಳ್ಳಬಹುದು. ಆದರೆ ಅವರು ಅವರದ್ದೇ ಆದ ಕೆಲಸದ ಒತ್ತಡದಲ್ಲಿರುವಾಗ ನಮ್ಮ ದೇಹದ ಮಸಾಜ್ ಮಾಡಿಸಿಕೊಳ್ಳುವುದು ಕಷ್ಟ. ಹಾಗಾಗಿ ಮನೆಯಲ್ಲಿ ನಾವೇ ಸುಲಭವಾದ ರೀತಿಯಲ್ಲಿ ಮಸಾಜ್ ಮಾಡಿಕೊಳ್ಳಬೇಕು. ಅದು ಹೇಗೆ ಎನ್ನುವ ಸಮಸ್ಯೆಯಲ್ಲಿದ್ದರೆ ಇಲ್ಲಿದೆ ನೋಡಿ ಸರಳ ವಿರಣೆ. ಮಸಾಜ್ ಪ್ರಕ್ರಿಯೆಯ ಬಗ್ಗೆ ಹಂತ ಹಂತವಾದ ಸರಳ ಹಾಗೂ ಸುಲಭ ರೀತಿಯ ವಿವರಣೆ ನೀಡಲಾಗಿದೆ. ಇದನ್ನು ತಿಳಿದ ಮೇಲೆ ತಪ್ಪದೆ ಮಾಡಿ ನೋಡಿ...

ಹಂತ-1

ಹಂತ-1

ಮಸಾಜ್ ಮಾಡಲು, ನಿತ್ಯ ದೇಹಕ್ಕೆ ಅನ್ವಯಿಸಿಕೊಳ್ಳುವ ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ(ನೀವು ಕೆಮ್ಮು ಮತ್ತು ಶೀತ ಹೊಂದಿದ್ದರೆ), ಎಳ್ಳಿನ ಎಣ್ಣೆ ಅಥವಾ ಹೆಚ್ಚು ನೀರಿನಂಶ ಇರುವ ಬಾಡಿ ಲೋಷನ್‍ಗಳನ್ನು ಬಳಸಬಹುದು. ಮಸಾಜ್ ಮಾಡುವ ಮೊದಲು ಎಣ್ಣೆಯನ್ನು ಬಿಸಿ ಮಾಡಿಕೊಂಡಿರಬೇಕು. ಅದು ಹಚ್ಚಿಕೊಳ್ಳುವಷ್ಟು ತಾಪದಲ್ಲಿರಬೇಕು.

ಹಂತ-2

ಹಂತ-2

ಯಾರು ಇಲ್ಲದ ವಾತಾವರಣದಲ್ಲಿ ಅಥವಾ ನಿಮ್ಮ ಕೋಣೆಯಲ್ಲಿ ಬಾಗಿಲು ಮುಚ್ಚಿಕೊಂಡು ಬಿಸಿ ಎಣ್ಣೆಯ ಮಸಾಜ್ ಮಾಡಿ. ಏಕೆಂದರೆ ಎಣ್ಣೆ ಮಸಾಜ್ ಮಾಡಿಕೊಳ್ಳುವಾಗ ಕಡಿಮೆ ಬಟ್ಟೆಯನ್ನು ತೊಟ್ಟಿರಬೇಕಾಗುತ್ತದೆ.

ಹಂತ-3

ಹಂತ-3

ನಿಮ್ಮ ದೇಹದ ಮಸಾಜ್‍ಅನ್ನು ಪಾದದಿಂದ ಪ್ರಾರಂಭಿಸಬೇಕು.

-ಮೊದಲು ಕಾಲ್ಬೆರಳುಗಳ ಮಧ್ಯೆ ಸ್ವಲ್ಪ ಎಣ್ಣೆಯನ್ನು ಅನ್ವಯಿಸುತ್ತಾ ಪಾದದ ಮಧ್ಯ ಭಾಗಕ್ಕೆ ಬನ್ನಿ.

-ನಂತರ ಪಾದದ ಅಡಿಗಳನ್ನು ರೇಖಿಯ ದಿಕ್ಕಿನಲ್ಲಿ ಮಸಾಜ್ ಮಾಡಬೇಕು. ಅಂದರೆ ಕಾಲಿನಿಂದ ಪಾದದ ಹೆಬ್ಬೆಟ್ಟಿನ ನೇರಕ್ಕೆ ಮಸಾಜ್ ಮಾಡಬೇಕು.

-ನಿಧಾನವಾಗಿ ಪಾದದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಮಸಾಜ್ ಮಾಡಿ 5 ನಿಮಿಷ ಬಿಡಬೇಕು. ತೈಲ ಒಣಗಿದಂತೆ ಅನಿಸಿದರೆ ಸ್ವಲ್ಪ ಎಣ್ಣೆಯನ್ನು ಅನ್ವಯಿಸಿಕೊಳ್ಳಿ.

ಹಂತ-4

ಹಂತ-4

ಪಾದದಿಂದ ನಿಧಾನವಾಗಿ ಎರಡರಿಂದ ಮೂರು ಬಾರಿ ಕಾಲನ್ನು ತಿಕ್ಕುತ್ತಾ ಮೊಣಕಾಲಿನ ಭಾಗಕ್ಕೆ ಬನ್ನಿ.

-ಮೊಣಕಾಲಿನ ಪ್ರದೇಶವನ್ನು ಮಸಾಜ್ ಮಾಡುವುದು ಸಹ ಮುಖ್ಯ. ನೋವು ಇಲ್ಲದಿದ್ದರೂ ಮಸಾಜ್ ಮಾಡಬೇಕು. ಇದು ದೇಹದ ಕೆಳಭಾಗದಲ್ಲಿ ರಕ್ತ ಸಂಚಲನಕ್ಕೆ ಅನುಕೂಲವಾಗುವುದು.

- ಮೊಣಕಾಲಿನ ಮಸಾಜ್‍ಅನ್ನು ಎರಡು ಕೈಗಳಿಂದ, ವೃತ್ತಾಕಾರದ ಚಲನೆಯಲ್ಲಿ ಮಾಡಬೇಕು.

-ಮೊಣಕಾಲಿನ ಚರ್ಮವು ಶಾಂತವಾಗಿರುತ್ತದೆ.

ಹಂತ-5

ಹಂತ-5

ಮೊಣಕಾಲಿನಿಂದ ಕೆಳತೊಡೆಯ ಭಾಗಕ್ಕೆ ಬನ್ನಿ. ಈ ಭಾಗದಲ್ಲಿ ಹೆಚ್ಚು ಎಣ್ಣೆಯ ಅಗತ್ಯವಿರುತ್ತದೆ. ಸ್ವಲ್ಪ ಬೆಚ್ಚಗಿರುವ ಎಣ್ಣೆಯನ್ನೇ ಅನ್ವಯಿಸಿ.

-ಮೊದಲು ಕೆಳ ತೊಡೆಯನ್ನು ಮಸಾಜ್ ಮಾಡಿ. ನಂತರ ಮೇಲ್ಭಾಗಕ್ಕೆ ಬನ್ನಿ. ಒಳತೊಡೆಯ ಮಸಾಜ್ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಿ.

-ತೊಡೆಯ ಮಸಾಜ್ ಮಾಡುವಾಗ ಮೊಣಕಾಲಿನಿಂದ ಹೊಟ್ಟೆಯ ಭಾಗದ ಕಡೆಗೆ ಮಸಾಜ್ ಮಾಡಬೇಕು.

ಹಂತ-6

ಹಂತ-6

ಇಲ್ಲಿ ನಿಮ್ಮ ಮಸಾಜ್ ಕ್ರಿಯೆಯು ಹೊಟ್ಟೆಯನ್ನು ಕೇಂದ್ರಿಕರಿಸುತ್ತದೆ. ಈಗ ಸ್ವಲ್ಪ ಸಮಯ ಬೇಕಾಗುವುದು.

- ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಎಣ್ಣೆಯನ್ನು ಬಳಸಬೇಕು.

-ವೃತ್ತಾಕಾರದ ಚಲನೆಯಲ್ಲಿ ಹೊಟ್ಟೆ ಪ್ರದೇಶವನ್ನು ಮಸಾಜ್ ಮಾಡಬೇಕು.

- ಎಣ್ಣೆಯನ್ನು ಅಂಗೈಅಲ್ಲಿ ಸುರಿದುಕೊಂಡು, ಸ್ತನದ ಕೇಂದ್ರ ಭಾಗದಿಂದ ಹರಡಿ.

-ಎಣ್ಣೆ ವಿಶಾಲ ಜಾಗದಲ್ಲಿ ಹರಡಿಕೊಂಡು ಹೊಟ್ಟೆ ಮಸಾಜ್ ಮಾಡಲು ಸಹಾಯವಾಗುವುದು.

 ಹಂತ-7

ಹಂತ-7

ಇದು ಕೊನೆಯ ಹಂತ ಎನ್ನಬಹುದು. ಈಗ ಭುಜದ ಮಸಾಜ್ ಮಾಡಿಕೊಳ್ಳುವುದು.

-ಒಂದೇ ಕೈಗಳಿಂದ ಮಾಡಿಕೊಳ್ಳಬೇಕಾಗುವುದರಿಂದ ಹೆಚ್ಚಿನ ಸಮಯ ಬೇಕಾಗುವುದು.

- ಕುತ್ತಿಗೆಯ ತುದಿಯಿಂದ ಭುಜದ ತುದಿಯವರೆಗೆ ವೃತ್ತಾಕಾರದ ಮಾದರಿಯಲ್ಲಿ ಮಸಾಜ್ ಮಾಡಬೇಕು.

- ಕೈಗಳ ಮೇಲೆ, ಭುಜದ ಮೇಲೆ ಬಟ್ಟೆಗಳು ಇರಬಾರದು. ಮಸಾಜ್ ಮಾಡಲು ಸಾಧ್ಯವಾಗದು.

ಹಂತ-8

ಹಂತ-8

ದೇಹದ ಕೊನೆಯ ಮಸಾಜ್ ರೂಪದಲ್ಲಿ ಅಂಗೈಗಳನ್ನು ಮಸಾಜ್ ಮಾಡಬೇಕು.

-ಅಂಗೈ ಮೇಲೆ, ಕೆಳಗೆ ಎಲ್ಲಾ ಭಾಗದಲ್ಲೂ ಎಣ್ಣೆಯನ್ನು ಅನ್ವಯಿಸಿ ಮಸಾಜ್ ಮಾಡಿ. ಜೊತೆಗೆ ನಿಧಾನವಾಗಿ ತಿಕ್ಕಿರಿ.

English summary

Step-by-step Guide For Doing A Body Massage At Home

Body massage is expensive and time-consuming at the salon. However, our body does not abide by any such techniques and often continues with all its problems that become gross and unbearable.
X
Desktop Bottom Promotion