Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಟ್ಯಾಟೂ ಹಾಕಿಸಿಕೊಂಡ ಬಳಿಕ, ಅದರ ಆರೈಕೆ ಹೀಗಿರಲಿ...
ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯ ವಿಷಯವೆನ್ನುವಂತಾಗಿದೆ. ಯಾಕೆಂದರೆ ಪ್ರತಿಯೊಬ್ಬರು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದಕ್ಕೆ ಮಹಿಳೆಯರು ಮತ್ತು ಪುರುಷರು ಎನ್ನುವ ಭೇದವಿಲ್ಲ. ಕೆಲವರು ಎಲ್ಲರಿಗೂ ತೋರುವಂತಹ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡರೆ ಇನ್ನು ಕೆಲವರು ಯಾರಿಗೂ ಕಾಣದ ಹಾಗೆ ಟ್ಯಾಟೂ ಹಾಕಿಸಿಕೊಳ್ಳುವರು. ತಮಗೆ ಇಷ್ಟದ ದೇವರು, ತಮ್ಮ ಹೆಸರು, ಪ್ರೀತಿಪಾತ್ರರ ಹೆಸರು ಹಾಗೂ ಬೇರೆ ಬೇರೆ ವಿನ್ಯಾಸದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವರು.
ಅದರಲ್ಲೂ ಇಂದಿನ ಯುವಜನತೆಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಆದರೆ ಟ್ಯಾಟೂ ಹಾಕಿಸಿಕೊಂಡ ಜಾಗದ ಬಗ್ಗೆ ಆರೈಕೆ ತುಂಬಾ ಮುಖ್ಯವಾಗಿ ಬೇಕು. ಟ್ಯಾಟೂ ಹಾಕಿಸಿಕೊಂಡ ಆರಂಭದಲ್ಲಿ ಆ ಜಾಗದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಟ್ಯಾಟೂದಿಂದ ಯಾವುದೇ ರೀತಿಯ ಸೋಂಕು ಆಗಿಲ್ಲವೆನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಆರಂಭಿಕ ದಿನಗಳಲ್ಲಿ ಟ್ಯಾಟೂ ಹಾಕಿದ ಜಾಗದ ಬಗ್ಗೆ ಆರೈಕೆ ಮಾಡಿದರೆ ಮತ್ತೆ ಚಿಂತೆ ಮಾಡಬೇಕಿಲ್ಲ. ಟ್ಯಾಟೂ ಹಾಕಿಸಿಕೊಂಡ ಬಳಿಕ ಏನು ಮಾಡಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಟ್ಯಾಟೂ ಹಾಕಿಸಿದ ಬಳಿಕ ಅದನ್ನು ಮುಚ್ಚಬೇಡಿ
ಟ್ಯಾಟೂ ಹಾಕಿಸಿಕೊಂಡ ಬಳಿಕ ಅದನ್ನು ಮುಚ್ಚಬಾರದು. ಯಾಕೆಂದರೆ ಮುಚ್ಚಿದರೆ ಒಣಗಲು ಸಮಸ್ಯೆಯಾಗುವುದು. ಬಟ್ಟೆಯಿಂದ ಮುಚ್ಚಿದರೆ ಅದು ಚರ್ಮಕ್ಕೆ ಉಜ್ಜಿಕೊಂಡು ಒಣಗಲು ಸಮಯ ಬೇಕಾಗಬಹುದು.

ಟ್ಯಾಟೂ ಹಾಕಿದ ಜಾಗ ಸ್ವಚ್ಛಗೊಳಿಸಲು ಬಿಸಿ ನೀರು ಬಳಸಿ
ಟ್ಯಾಟೂ ಹಾಕಿಸಿಕೊಂಡ ಮೊದಲ ಕೆಲವು ದಿನಗಳಲ್ಲಿ ಬಿಸಿ ನೀರಿನಿಂದ ಅದನ್ನು ಸ್ವಚ್ಛಗೊಳಿಸಬೇಕು. ಈ ವೇಳೆ ಚರ್ಮವು ಒಣಗುತ್ತಾ ಇರುತ್ತದೆ. ಬಿಸಿ ನೀರು ಚರ್ಮವು ಶಮನವಾಗಲು ನೆರವಾಗುವುದು. ಟ್ಯಾಟೂ ಹಾಕಿದ ಜಾಗವನ್ನು ಉಜ್ಜಬೇಡಿ. ಇದರಿಂದ ಆ ಭಾಗವು ಕೆಂಪು ಬಣ್ಣಕ್ಕೆ ತಿರುಗಬಹುದು. ಈ ರೀತಿ ಟ್ಯಾಟೂ ಆರೈಕೆ ಮಾಡಬಹುದು.

ಮಾಯಿಶ್ಚರೈಸರ್ ಕ್ರೀಮ್ ಬಳಸಿ
ಟ್ಯಾಟೂ ಹಾಕಿಸಿಕೊಂಡ ಕೆಲವು ದಿನಗಳ ಕಾಲ ಚರ್ಮವು ಒಣಗುವುದು ಮತ್ತು ತುರಿ ಇದರಲ್ಲಿ ತುಂಬಿಕೊಳ್ಳುವುದು. ಇದರಿಂದಾಗಿ ಶಮನವಾಗುವ ತುರಿಕೆ ಹಾಗೂ ಕಿರಿಕಿರಿ ಉಂಟಾಗಬಹುದು. ಚರ್ಮಕ್ಕೆ ಮೊಶ್ಚಿರೈಸರ್ ಹಚ್ಚಿಕೊಂಡರೆ ತುಂಬಾ ಒಳ್ಳೆಯದು.

ಟ್ಯಾಟೂ ಮುಟ್ಟಬೇಡಿ
ಟ್ಯಾಟೂ ಹಾಕಿಸಿಕೊಂಡ ಮೊದಲ ಕೆಲವು ದಿನಗಳು ತುಂಬಾ ಪ್ರಾಮುಖ್ಯವಾಗಿರುತ್ತದೆ. ಯಾಕೆಂದರೆ ಚರ್ಮವು ಶಮನವಾಗುತ್ತಿರುತ್ತದೆ. ಈ ವೇಳೆ ಟ್ಯಾಟೂವನ್ನು ಮುಟ್ಟಬಾರದು ಅಥವಾ ಅದನ್ನು ಉಜ್ಜಬಾರದು. ಇದನ್ನು ನೀವು ಪ್ರಮುಖ ಆರೈಕೆಯೆಂದು ಪರಿಗಣಿಸಿ.

ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಾಕಿ
ಟ್ಯಾಟೂ ಹಾಕಿಸಿಕೊಂಡ ಆರಂಭದಲ್ಲಿ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಾಕಿಕೊಳ್ಳಿ. ಇದರಿಂದ ಟ್ಯಾಟೂ ತನ್ನ ಬಣ್ಣ ಕಳಕೊಳ್ಳುವುದಿಲ್ಲ.



Click it and Unblock the Notifications
