ಕುತ್ತಿಗೆಯಲ್ಲಿ ನೆರಿಗೆಗಳಿವೆಯೇ? ಈ ಸರಳ ಮನೆಮದ್ದುಗಳೇ ಸಾಕು

By: Arshad
Subscribe to Boldsky

ಬಿಸಿಲಿಗೆ ನೇರವಾಗಿ ಒಡ್ಡಿದ ಪರಿಣಾಮವಾಗಿ ಮುಖ, ಕೈ ಮತ್ತು ಕುತ್ತಿಗೆಗಳ ಚರ್ಮ ಕಪ್ಪಗಾಗುತ್ತವೆ. ಆದರೆ ಕುತ್ತಿಗೆಯ ಚರ್ಮದಲ್ಲಿ ಇನ್ನೂ ಹೆಚ್ಚಾಗಿ ನೆರಿಗೆಗಳು ಮೂಡುತ್ತವೆ. ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ಕಿರಣಗಳು ಈ ನೆರಿಗೆಗಳ ಹೊರಭಾಗ ಹೆಚ್ಚು ಕಪ್ಪಾಗಿ ಮಡಚಿದ್ದ ಭಾಗ ಕಡಿಮೆ ಕಪ್ಪಾಗುವ ಕಾರಣ ಈ ನೆರಿಗೆಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ. ಈ ನೆರಿಗೆಗಳಿಗೆ ಇನ್ನೂ ಕೆಲವಾರು ಕಾರಣಗಳಿವೆ.  ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!

ಆದರೆ ಇದು ಮೂಡಿದುದನ್ನು ಗಮನಿಸಿದ ಬಳಿಕ ತಡಮಾಡದೇ ತಕ್ಷಣವೇ ಸರಿಪಡಿಸಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಮುಖದ ಚರ್ಮದಂತೆಯೇ ಕುತ್ತಿಗೆಯ ಚರ್ಮವೂ ಸೂಕ್ಷ್ಮವಾಗಿದ್ದು ಹೆಚ್ಚಿನ ಕಾಳಜಿಯ ಅಗತ್ಯವಾಗಿದೆ. ಸೂಕ್ತ ಆರೈಕೆಯ ಮೂಲಕ ಕುತ್ತಿಗೆಯಲ್ಲಿ ನೆರಿಗೆಗಳನ್ನು ಮೂಡದಿರುವಂತೆ ನೋಡಿಕೊಳ್ಳಬಹುದು. ಮುಖ್ಯವಾಗಿ ಈ ಚರ್ಮದಲ್ಲಿಯೂ ಸಾಕಷ್ಟು ಆರ್ದ್ರತೆ ಇರುವಂತೆ ನೋಡಿಕೊಳ್ಳುವ ಮೂಲಕ ನೆರಿಗೆಗಳು ಮೂಡುವುದಿಲ್ಲ. ಬನ್ನಿ, ಈ ನೆರಿಗೆಗಳಿಗೆ ಸೂಕ್ತ ಮನೆಮದ್ದುಗಳು ಏನಿವೆ ಎಂಬುದನ್ನು ನೋಡೋಣ....  

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಚರ್ಮದಲ್ಲಿ ನೆರಿಗೆ ಮೂಡುವುದನ್ನು ತಡೆಯುತ್ತವೆ. ಇದಕ್ಕಾಗಿ ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಲೇಪನ ತಯಾರಿಸಿ. ಇದಕ್ಕೆ ಕೊಂಚವೇ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖ ಮೇಲೆತ್ತಿ ಕುತ್ತಿಗೆಯ ಮೇಲೆ ತೆಳುವಾಗಿ ಲೇಪಿಸಿ ಮುಖ ಮೇಲೆತ್ತಿರುವಂತೆಯೇ ಸುಮಾರು ಹತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ವೃದ್ದಾಪ್ಯದ ಚಿಹ್ನೆಗಳನ್ನು ದೂರಾಗಿಸಲು ನೆರವಾಗುತ್ತದೆ. ಕೆಲವು ಹನಿ ಬಾದಾಮಿ ಎಣ್ಣೆಯನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಕೊಂಚವೇ ಬಿಸಿ ಮಾಡಿ ಬೆರಳುಗಳಿಂದ ಮುಖ ಮೇಲೆತ್ತಿರುವಂತೆ ಕುತ್ತಿಗೆಯ ಕೆಳಭಾಗದಿಂದ ಮೇಲಕ್ಕೆ ಬರುವಂತೆ ನಯವಾಗಿ ಮಸಾಜ್ ಮಾಡಿ. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಪುನರಾವರ್ತಿಸಿದರೆ ಕುತ್ತಿಗೆಯ ನೆರಿಗೆಗಳು ಶೀಘ್ರವೇ ಕಡಿಮೆಯಾಗುತ್ತವೆ. ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಚೆನ್ನಾಗಿ ಹಣ್ಣಾದ ಪಪ್ಪಾಯಿಯಲ್ಲಿಯೂ ಉತ್ತಮ ಪ್ರಮಾನದ ಆಂಟಿ ಆಕ್ಸಿಡೆಂಟುಗಳಿದ್ದು ಕುತ್ತಿಗೆಯ ನೆರಿಗೆಗಳನ್ನು ನಿವಾರಿಸಲು ಅತ್ಯುತ್ತಮವಾಗಿದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಕೆಲವು ತುಂಡುಗಳನ್ನು ಚೆನ್ನಾಗಿ ಕಿವುಚಿ ಇದಕ್ಕೆ ಕೆಲವು ಹನಿ ಜೇನು ಮತ್ತು ಲಿಂಬೆರಸದ ಕೆಲವು ಹನಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿಯಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ನೆರಿಗೆಗಳನ್ನು ನಿವಾರಿಸುವಲ್ಲಿ ಅದ್ಭುತ ಪರಿಣಾಮ ಬೀರುತ್ತದೆ. ಸುಮಾರು ಒಂದಿಂಚಿನಷ್ಟು ಹಸಿಶುಂಠಿಯನ್ನು ತುರಿದು ಇದನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸಕ್ಕೆ ಕೆಲವು ಹನಿ ಜೇನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕುತ್ತಿಗೆಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

 
English summary

Simple Home Remedies To Treat Neck Wrinkles

Neck wrinkles can look quite unsightly and hence you must make sure to treat these wrinkles at the earliest. Here are perfect home remedies for the same.
Subscribe Newsletter