ಕಾಲಿನಿಂದ ಶೂ ತೆಗೆದ ತಕ್ಷಣ ದುರ್ವಾಸನೆ ಬರುತ್ತಿದೆಯೇ? ಇಲ್ಲಿದೆ ಪರಿಹಾರ

Posted By: Staff
Subscribe to Boldsky

ಯಾರನ್ನಾದರೂ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಬೇಕಿದ್ದರೆ ಕಾಲ್ಚೀಲ(ಸಾಕ್ಸ್) ಮುಖಕ್ಕೆ ಹಿಡಿದರೆ ಸಾಕು ಎಂದು ಸ್ನೇಹಿತರ ಮಧ್ಯೆ ತಮಾಷೆ ನಡೆಯುವುದು ಇದೆ! ಸಾಕ್ಸ್ ಎನ್ನುವುದು ತುಂಬಾ ದುರ್ವಾಸನೆ ಉಂಟುಮಾಡುವಂತಹ ನಾವು ಧರಿಸುವ ವಸ್ತು. ಕೆಲವರು ಕಾಲಿನಿಂದ ಶೂ ತೆಗೆದ ತಕ್ಷಣ ದುರ್ವಾಸನೆ ಹಬ್ಬಲು ಆರಂಭವಾಗುತ್ತದೆ. ಈ ವಾಸನೆ ಎಲ್ಲಿಂದ ಬರುತ್ತಿದೆ ಎಂದು ಹಲವಾರು ಸಲ ಹುಡುಕಾಡಿದ್ದು ಇದೆ. ಇಂತಹ ಸಮಸ್ಯೆ ಹೆಚ್ಚಿನವರಿಗೆ ಇರುತ್ತದೆ. ಆದರೆ ಇದರ ಬಗ್ಗೆ ಅವರು ಹೆಚ್ಚಿಗೆ ತಲೆಕೆಡಿಸಿಕೊಂಡಿರುವುದಿಲ್ಲ.

ನಾಲ್ಕು ಜನರ ಮಧ್ಯೆ ಶೂ ತೆಗೆದಾಗ ದುರ್ವಾಸನೆ ಬಂದರೆ ಅದರಿಂದ ನಮಗೆ ತುಂಬಾ ಮುಖಭಂಗವಾಗುತ್ತದೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಬೋಲ್ಡ್ ಸ್ಕೈ ಸುಲಭವಾದ ಪರಿಹಾರವನ್ನು ನಿಮಗೆ ಹೇಳಿಕೊಡಲಿದೆ. ಕಾಲು ಹೆಚ್ಚಾಗಿ ಧೂಳು ಮತ್ತು ಕಲ್ಮಶಕ್ಕೆ ಒಳಗಾಗುವ ಕಾರಣದಿಂದ ಇದು ಬ್ಯಾಕ್ಟೀರಿಯಾಗಳಿಗೆ ತವರು ಮನೆ ಇದ್ದಂತೆ. ಕೆಲವರ ಕಾಲಿನಲ್ಲಿ ಬೆವರು ಬರುವುದು ಇದೆ. ಇಂತಹ ಸಂದರ್ಭದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಅತಿಯಾಗಿರುತ್ತದೆ. 

ಮಳೆಗಾಲದಲ್ಲಿ ಕಾಡುವ ಪಾದಗಳ ದುರ್ವಾಸನೆಗೆ ಸರಳ ಟಿಪ್ಸ್

ಇದಕ್ಕೆ ಮೇಲಿನ ಭಾಗ ತೆರೆದುಕೊಂಡಿರುವ ಶೂ ಧರಿಸಬೇಕು ಅಥವಾ ಹತ್ತಿಯ ಬಟ್ಟೆಯ ಸಾಕ್ಸ್ ಧರಿಸಬೇಕು ಮತ್ತು ನಿಯಮಿತವಾಗಿ ಸಾಕ್ಸ್ ತೊಳೆದರೆ ಅದರಿಂದ ಯಾವುದೇ ಸಮಸ್ಯೆಯಾಗದು. ಇಲ್ಲಿ ನೀಡಿರುವಂತಹ ಕೆಲವೊಂದು ಮನೆಮದ್ದುಗಳು ಸಾಕ್ಸ್‌ನಿಂದ ಬರುವಂತಹ ಸಮಸ್ಯೆ ನಿವಾರಣೆ ಮಾಡಲಿದೆ. ಇದು ಹೇಗೆಂದು ತಿಳಿಯಿರಿ....

ಆ್ಯಪಲ್ ಸೀಡರ್ ವಿನೇಗರ್ ಮತ್ತು ಜೇನುತುಪ್ಪ

ಆ್ಯಪಲ್ ಸೀಡರ್ ವಿನೇಗರ್ ಮತ್ತು ಜೇನುತುಪ್ಪ

ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು. ಇದು ಕಾಲಿಗೆ ಮಾಯಿಶ್ಚರೈಸ್ ನೀಡಿ ಬ್ಯಾಕ್ಟೀರಿಯಾಗಳು ನೆಲೆ ನಿಲ್ಲದಂತೆ ಮಾಡುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಜೇನುತುಪ್ಪವು ಚರ್ಮಕ್ಕೆ ಪೋಷಣೆ ನೀಡುವುದು. ಒಂದು ಪಾತ್ರೆಯಲ್ಲಿ ನೀರನ್ನು ಇಟ್ಟು ಅದಕ್ಕೆ ಒಂದು ಕಪ್ ಆ್ಯಪಲ್ ಸೀಡರ್ ವಿನೇಗರ್ ಮತ್ತು ಎರಡು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅದರಲ್ಲಿ ಕಾಲನ್ನು ಮುಳುಗಿಸಿಡಿ. ಸುಮಾರು 45 ನಿಮಿಷ ಕಾಲ ನೀರಿನಲ್ಲಿ ಕಾಲನ್ನು ಮುಳುಗಿಸಿಡಿ. ಇದು ತುಂಬಾ ಸರಳ ವಿಧಾನವಾಗಿದೆ. ನಿಯಮಿತವಾಗಿ ಇದನ್ನು ಮಾಡಿದರೆ ನಿಮ್ಮ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಸಿಗಬಹುದು.

ಎಪ್ಸೊಮ್ ಉಪ್ಪು ನೀರು

ಎಪ್ಸೊಮ್ ಉಪ್ಪು ನೀರು

ಎಪ್ಸೊಮ್ ಉಪ್ಪು ಎಂದರೆ ಏನಪ್ಪಾ ಎಂದು ನೀವು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಫಾರ್ಮಸಿಗಳಲ್ಲಿ ಸುಲಭವಾಗಿ ಸಿಗುವಂತಹ ಮೆಗ್ನಿಶಿಯಂ ಸಲ್ಫೇಟ್ ಈ ಎಪ್ಸೊಮ್ ಉಪ್ಪು. ಇದರಲ್ಲಿ ಶಮನಕಾರಿ ಮತ್ತು ಒತ್ತಡ ನಿವಾರಣೆ ಮಾಡುವ ಗುಣಗಳು ಇವೆ. ದುರ್ವಾಸನೆ ಮೂಡಿಸುವಂತಹ ಕಾಲಿಗೆ ಇದು ಒಳ್ಳೆಯ ಮದ್ದು.

ಎಪ್ಸೊಮ್ ಉಪ್ಪು ನೀರು

ಎಪ್ಸೊಮ್ ಉಪ್ಪು ನೀರು

ಎರಡು ಚಮಚ ಎಪ್ಸೊಮ್ ಉಪ್ಪನ್ನು ಒಂದು ಪಾತ್ರೆ ಬಿಸಿ ನೀರಿಗೆ ಹಾಕಿಕೊಳ್ಳಿ ಮತ್ತು ಸುಮಾರು 45 ನಿಮಿಷ ಕಾಲನ್ನು ಇದರಲ್ಲಿ ಮುಳಗಿಸಿಡಿ. ನಿಮ್ಮ ಒತ್ತಡ ಕಡಿಮೆಯಾಗಿ ಕಾಲು ಕೂಡ ದುರ್ವಾಸನೆಯಿಂದ ಮುಕ್ತವಾಗುವುದು. ಇದನ್ನು ನಿಯಮಿತವಾಗಿ ಮಾಡಿದರೆ ಫಲಿತಾಂಶ ಖಚಿತ.

ಅಂಟಾಸಿಡ್ ಮಾತ್ರೆ

ಅಂಟಾಸಿಡ್ ಮಾತ್ರೆ

ಒಂದು ಅಗಲವಾದ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದರಲ್ಲಿ ಎರಡು ಅಂಟಾಸಿಡ್ ಮಾತ್ರೆ ಹಾಕಿಕೊಳ್ಳಿ ಮತ್ತು ಸುಮಾರು 45 ನಿಮಿಷ ಕಾಲನ್ನು ಅದರಲ್ಲಿ ಮುಳುಗಿಸಿಡಿ. ಅಂಟಾಸಿಡ್ ಮಾತ್ರೆಯಲ್ಲಿ ಸಿಟ್ರಿಕ್ ಆ್ಯಸಿಡ್, ಅಡುಗೆ ಸೋಡಾ ಮತ್ತು ಇತರ ಕೆಲವು ಉಪ್ಪುಗಳು ಇರುವುದರಿಂದ ಇದು ಕಾಲಿಗೆ ಒಳ್ಳೆಯದು. ನಿಯಮಿತವಾಗಿ ಹೀಗೆ ಮಾಡಿದರೆ ಕಾಲಿನಿಂದ ಬರುವ ವಾಸನೆಯು ಪರಿಣಾಮಕಾರಿಯಾಗಿ ಕಡಿಮೆಯಾಗುವುದು.

ಸೇಜ್ ಮತ್ತು ರೋಸ್ಮೆರಿ

ಸೇಜ್ ಮತ್ತು ರೋಸ್ಮೆರಿ

ಅಗಲವಾದ ಪಾತ್ರೆಯಲ್ಲಿ ಕುದಿಯುವ ನೀರನ್ನು ಹಾಕಿಕೊಂಡು ಅದಕ್ಕೆ ಎರಡು ಚಮಚ ಒಣಗಿದ ಸೇಜ್ ಮತ್ತು ಎರಡು ಚಮಚ ಒಣಗಿದ ರೋಸ್ಮೆರಿ ಹಾಕಿಕೊಳ್ಳಿ. ಸೇಜ್ ನ ಸುಗಂಧ ಹಾಗೂ ರೋಸ್ಮೆರಿ ಚಹಾದ ಸುವಾಸನೆ ಬರುವ ತನಕ ಕಾಯಬೇಕು. ಇದರ ಬಳಿಕ ಕಾಲನ್ನು ನೀರಿನಲ್ಲಿ ಅದ್ದಿಡಿ. ನೀರು ತಣ್ಣಗಾಗಿದೆಯಾ ಎಂದು ನೋಡಿಕೊಳ್ಳಿ. ಕಾಲು ಅದ್ದಿಡುವಾಗ ನೀರು ಹೆಚ್ಚು ಬಿಸಿಯಾಗಿರಬಾರದು. ಉಗುರುಬೆಚ್ಚಗಿನ ನೀರಾಗಿರಬೇಕು. ಈ ಗಿಡಮೂಲಿಕೆಯ ನೀರನ್ನು ನಿಯಮಿತವಾಗಿ ಬಳಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಚಹಾ

ಚಹಾ

ಯಾವುದೇ ವಿಧದ ಚಹಾವನ್ನು ಇದಕ್ಕೆ ಬಳಸಿಕೊಳ್ಳಬಹುದು. ಕಪ್ಪು ಚಹಾವು ಇದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಚಹಾವನ್ನು ಮೊದಲು ಕುದಿಸಿಕೊಳ್ಳಿ ಮತ್ತು ಇದನ್ನು ಅಗಲವಾಗಿರುವ ಬಿಸಿ ನೀರಿನ ಪಾತ್ರೆಗೆ ಹಾಕಿ. ಚಹಾದಲ್ಲಿ ಇರುವ ಟ್ಯಾನಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಬ್ಯಾಕ್ಟೀರಿಯಾದ ಬೆಳವಣಿಗೆ ತಡೆಯುತ್ತದೆ ಮತ್ತು ಕಾಲಿನಿಂದ ದುರ್ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

ಚಹಾ

ಚಹಾ

ನಿಯಮಿತವಾಗಿ ಇದನ್ನು ಬಳಸಿಕೊಂಡರೆ ಬೇಗನೆ ಕಾಲಿನ ದುರ್ವಾಸನೆಯನ್ನು ನಿವಾರಣೆ ಮಾಡಬಹುದು. ಅದ್ಭುತವಾಗಿರುವ ಮತ್ತು ಸರಳವಾಗಿರುವ ಈ ಮನೆಮದ್ದನ್ನು ಪ್ರಯೋಗಿಸಲು ನೀವು ಹಿಂದೇಟು ಹಾಕಬೇಡಿ. ಸಾಕ್ಸ್ ನಿಂದ ಹೊರಬರುವ ದುರ್ವಾಸನೆ ತಡೆಯಲು ಇದು ತುಂಬಾ ಸುಲಭ ಹಾಗೂ ಆಗ್ಗದ ವಿಧಾನಗಳಾಗಿವೆ.

ಶೂನಿಂದ ಕೆಟ್ಟ ವಾಸನೆ ಬರುತ್ತಿದೆಯೇ? ಇನ್ನು ಚಿಂತೆ ಬಿಡಿ...

English summary

Quick DIY Solutions For Smelly Feet

Remedies for smelly feet are a dime a dozen, but which ones actually work is usually a mystery. Today we sift through some effective remedies for smelly feet that make sure your feet are healthy and happy, for the long term. Our feet provide a fertile breeding ground for bacteria because they're exposed to so much dirt and pollution, and also because of closed shoes and thick socks, which suffocate them
Story first published: Thursday, July 6, 2017, 13:43 [IST]
Subscribe Newsletter