ಮಚ್ಚೆಗಳ ನಿವಾರಣೆಗೆ ಸರಳ ಮನೆಮದ್ದುಗಳು, ಪ್ರಯತ್ನಿಸಿ ನೋಡಿ

By: Jaya subramanya
Subscribe to Boldsky

ಮಚ್ಚೆ ಎಂಬುದು ಸೌಂದರ್ಯದ ಪ್ರತೀಕವಾಗಿದ್ದರೂ ಅಗತ್ಯಕ್ಕಿಂತ ಮಚ್ಚೆ ನಿಮ್ಮ ಮುಖದಲ್ಲಿ ದೇಹದಲ್ಲಿ ಇದೆ ಎಂದರೆ ಅದು ನಿಮ್ಮ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗುತ್ತದೆ. ಇದನ್ನು ಔಷಧಗಳ ಮೂಲಕ ಹೋಗಲಾಡಿಸುವುದಕ್ಕಿಂತ ನೈಸರ್ಗಿಕ ವಿಧಾನದಲ್ಲಿ ಹೋಗಲಾಡಿಸಬಹುದಾಗಿದೆ. ನಿಮ್ಮ ತ್ವಚೆಗೆ ಮಚ್ಚೆಗಳು ಅಪಾಯವನ್ನುಂಟು ಮಾಡದೇ ಇದ್ದರೂ ಹೆಚ್ಚಿನ ಮಚ್ಚೆಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ದೇಹದ ಮೇಲಿರುವ ಮಚ್ಚೆ ನಿಮ್ಮ ಭವಿಷ್ಯದ ಬಗ್ಗೆ ಹೇಳುತ್ತೇ!

ಅಂತೆಯೇ ಈ ಮಚ್ಚೆಗಳು ನಿಧಾನಕ್ಕೆ ತಮ್ಮ ಬಣ್ಣ ಗಾತ್ರವನ್ನು ಬದಲಾಯಿಸುವುದರ ಮೂಲಕ ಕ್ಯಾನ್ಸರ್‌ ರೋಗದ ಗುರುತನ್ನು ಉಂಟುಮಾಡುತ್ತವೆ. ಈ ಬದಲಾವಣೆಗಳು ನಿಮ್ಮ ಗಮನಕ್ಕೆ ಬಂದಿದೆ ಎಂದಾದಲ್ಲಿ ಕೂಡಲೇ ಅವುಗಳನ್ನು ಪರಿಹರಿಸಿ. ಅಂತೆಯೇ ಮಚ್ಚೆಗಳ ನಿವಾರಣೆಗೆ ನೀವು ಮಾಡಬೇಕಾಗಿರುವ ಹಂತಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ...  

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಮುಖದಲ್ಲಿ ಮಚ್ಚೆಗಳ ಚಟುವಟಿಕೆಯನ್ನು ನಿರ್ಬಂಧಿಸುತ್ತವೆ. ಬಾಳೆ ಹಣ್ಣು ಸಿಪ್ಪೆಯನ್ನು ನಿಮ್ಮ ಮುಖಕ್ಕೆ ಉಜ್ಜಿಕೊಳ್ಳಿ. ನಂತರ ಬ್ಯಾಂಡೇಜ್ ಪಟ್ಟಿಯಿಂದ ಇದನ್ನು ಬಂಧಿಸಿ. 24 ಗಂಟೆಗಳ ಕಾಲ ಹಾಗೆಯೇ ಇರಿಸಿಕೊಳ್ಳಿ ಇದರಿಂದ ಮಚ್ಚೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಹರಳೆಣ್ಣೆ

ಹರಳೆಣ್ಣೆ

ನಿಯಮಿತವಾಗಿ ಹರಳೆಣ್ಣೆಯನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳುವುದರಿಂದ ಮಚ್ಚೆಗಳನ್ನು ಸುಲಭವಾಗಿ ನಿವಾರಿಸಿ ಕೊಳ್ಳಬಹುದಾಗಿದೆ. ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿಕೊಳ್ಳಿ ಮತ್ತು ಮಚ್ಚೆಗಳ ಮೇಲೆ ಇರಿಸಿ. ಬ್ಯಾಂಡೇಜ್‌ನಿಂದ ಇದನ್ನು ರಕ್ಷಿಸಿಕೊಳ್ಳಿ ಕನಿಷ್ಟ ಪಕ್ಷ 12 ಗಂಟೆಗಳ ಹಾಗೆಯೇ ಇರಿಸಿಕೊಳ್ಳಿ. ಇದು ಮಚ್ಚೆಯನ್ನು ಒಣಗಿಸುತ್ತದೆ ನಂತರ ಅದನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಮಚ್ಚೆಗಳನ್ನು ಸುಲಭವಾಗಿ ನಿವಾರಿಸುವಲ್ಲಿ ಆಪಲ್ ಸೀಡರ್ ವಿನೇಗರ್ ಸಹಾಯ ಮಾಡಲಿದೆ. ಇದು ನಿಧಾನವಾಗಿ ಮಚ್ಚೆಗಳನ್ನು ಹೋಗಲಾಡಿಸಲಿದ್ದು ಸಮಸ್ಯೆಯನ್ನು ನಿವಾರಿಸಲಿದೆ.

ಅನಾನಸ್

ಅನಾನಸ್

ಅನಾನಸ್‌ನಲ್ಲಿ ಹೆಚ್ಚು ಪ್ರಮಾಣದ ಎಂಜೀಮ್‌ಗಳು ಪ್ರಸ್ತುತವಾಗಿವೆ ಈ ಎಂಜೀಮ್‌ಗಳು ನಿಮ್ಮ ಮಚ್ಚೆಯನ್ನು ಹೋಗಲಾಡಿಸುತ್ತವೆ. ಅನಾನಸ್ ಅನ್ನು ತುಂಡರಿಸಿಕೊಂಡು ರಸವನ್ನು ಮಚ್ಚೆಗಳ ಮೇಲೆ ಹಚ್ಚಿರಿ. ಈಗ ಎಪ್ಸಾಮ್ ಉಪ್ಪನ್ನು ಈ ರಸಕ್ಕೆ ಸೇರಿಸಿ ಅಂತೆಯೇ ನಿಮ್ಮ ಮಚ್ಚೆಗಳ ಮೇಲೆ ಹಚ್ಚಿ. ಸ್ವಲ್ಪ ಸಮಯ ಕಾಯಿರಿ ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ.

ಜೇನು

ಜೇನು

ಮಚ್ಚೆಯನ್ನು ಹೋಗಲಾಡಿಸುವ ನೈಸರ್ಗಿಕ ವಿಧಾನವಾಗಿ ಜೇನನ್ನು ನಿಮಗೆ ಬಳಸಬಹುದಾಗಿದ್ದು, ಇದನ್ನು ಮಚ್ಚೆಗಳ ಮೇಲೆ ಹಚ್ಚಿಕೊಂಡು ಸ್ವಲ್ಪ ಸಮಯ ಕಾಯಿರಿ. ಇದನ್ನು ಬ್ಯಾಂಡೇಜ್‌ನಿಂದ ರಕ್ಷಿಸಿಕೊಂಡು 12-15 ನಿಮಿಷಗಳ ಕಾಲ ಹಾಗೆಯೇ ಇರಿ. ಒಂದು ತಿಂಗಳ ಕಾಲ ಇದನ್ನು ಮಾಡಿ ಮತ್ತು ಫಲಿತಾಂಶಗಳನ್ನು ನಿಮಗೆ ಕಂಡುಕೊಳ್ಳಬಹುದು. ಇದು ಮಚ್ಚೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಗುರುತು ಇಲ್ಲದಂತೆ ಮಾಡುತ್ತದೆ.

ಫ್ಲ್ಯಾಕ್ಸ್ ಸೀಡ್ ಆಯಿಲ್

ಫ್ಲ್ಯಾಕ್ಸ್ ಸೀಡ್ ಆಯಿಲ್

ಫ್ಲ್ಯಾಕ್ಸ್ ಸೀಡ್‌ಗಳನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಅರೆದುಕೊಳ್ಳಿ. ಈಗ ಫ್ಲ್ಯಾಕ್ಸ್ ಎಣ್ಣೆಯನ್ನು ತೆಗೆದುಕೊಂಡು ಮಿಶ್ರಣ ತಯಾರಿಸಿ. ಇದಕ್ಕೆ ಸ್ವಲ್ಪ ಜೇನು ಬೆರೆಸಿ ಮತ್ತು ಜೊತೆಯಾಗಿ ಕಲಸಿ.

ಈರುಳ್ಳಿ ರಸ

ಈರುಳ್ಳಿ ರಸ

ತ್ವಚೆಯಲ್ಲಿ ಮಚ್ಚೆಗಳನ್ನು ನಿವಾರಿಸಲು ಈರುಳ್ಳಿ ರಸವನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಈರುಳ್ಳಿ ರಸವನ್ನು ಹಿಂಡಿಕೊಂಡು ಅದನ್ನು ಹತ್ತಿಯ ಸಹಾಯದಿಂದ ಮಚ್ಚೆಯ ಮೇಲೆ ಹಚ್ಚಿಕೊಳ್ಳಿ. ಈ ರಸಕ್ಕೆ ಜೇನನ್ನು ಸೇರಿಸಿಕೊಂಡು ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು. ಅಂತೆಯೇ ಮಚ್ಚೆಗಳ ಹೆಚ್ಚುವಿಕೆಯನ್ನು ಇದು ಹೋಗಲಾಡಿಸುತ್ತದೆ.

ಫ್ರಾಂಕಿನ್‌ಸನ್ ಎಣ್ಣೆ

ಫ್ರಾಂಕಿನ್‌ಸನ್ ಎಣ್ಣೆ

ಹೆಚ್ಚಿನ ಜನರಿಗೆ ಈ ಎಣ್ಣೆಯ ಬಗ್ಗೆ ತಿಳಿದಿಲ್ಲ ಆದರೂ ಮಚ್ಚೆಯನ್ನು ಹೋಗಲಾಡಿಸುವ ವಿಷಯದಲ್ಲಿ ಇದು ಅದ್ಭುತ ಪರಿಣಾಮಕಾರಿಯಾಗಲಿದೆ. ಇದು ನೈಸರ್ಗಿಕ ನಿವಾರಕವಾಗಿ ಕೆಲಸ ಮಾಡಲಿದ್ದು ಮಚ್ಚೆಗಳನ್ನು ಮತ್ತೆಬಾರದಂತೆ ನೋಡಿಕೊಳ್ಳುತ್ತವೆ. 5 ಹನಿಗಳಷ್ಟು ಈ ಎಣ್ಣೆಯನ್ನು ಅಷ್ಟೇ ಪ್ರಮಾಣದ ಆಲೀವ್ ಆಯಿಲ್‌ನೊಂದಿಗೆ ಬೆರೆಸಿಕೊಳ್ಳಿ ಮತ್ತು ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ. ದಿನಕ್ಕೆರಡು ಬಾರಿ ಈ ಮನೆಮದ್ದನ್ನು ಬಳಸಿ.

ಅಲೊವೇರಾ ಜೆಲ್

ಅಲೊವೇರಾ ಜೆಲ್

ಇದು ಆಸಿಡಿಕ್ ಅಂಶಗಳನ್ನು ಹೊಂದಿಲ್ಲ ಎಂಬುದೇ ಇದರ ಉತ್ತಮ ವಿಶೇಷತೆಯಾಗಿದೆ. ಅಲೊವೇರಾ ಎಲೆಯನ್ನು ತುಂಡರಿಸಿಕೊಂಡು ಅದನ್ನು ಹಾಗೆಯೇ ಮಚ್ಚೆಗಳ ಮೇಲೆ ಹಚ್ಚಿರಿ. 3-4 ಗಂಟೆಗಳ ಕಾಲ ಕಾಯಿರಿ ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ. ಮಚ್ಚೆಗಳ ನಿವಾರಣೆಯಾಗುವವರೆಗೂ ಇದನ್ನು ಪ್ರಯೋಗಿಸಿ.

 ಟೀ ಟ್ರಿ

ಟೀ ಟ್ರಿ

ಟೀ ಟ್ರಿ ಆಯಿಲ್ ಪರಿಣಾಮಕಾರಿಯಾಗಿ ಮಚ್ಚೆಯನ್ನು ನಿವಾರಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ. ಇದು ಮಚ್ಚೆಗಳು ಮಾತ್ರವಲ್ಲದೆ ಕಲೆಗಳು, ಮೊಡವೆಗಳನ್ನು ಹೋಗಲಾಡಿಸುತ್ತವೆ. ಟ್ರಿ ಟ್ರಿ ಎಣ್ಣೆಯನ್ನು ಮಚ್ಚೆಗಳ ಮೇಲೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ದಿನಕ್ಕೆ ಮೂರು ಬಾರಿಯಾದರೂ ಈ ಕ್ರಿಯೆಯನ್ನು ಅನುಸರಿಸಿ. ಮಚ್ಚೆಗಳು ನಿಧಾನವಾಗಿ ಒಣಗುತ್ತವೆ ಮತ್ತು ಹೋಗುತ್ತವೆ.

 
English summary

Natural Remedy To Treat Moles On Face And Body

Moles are usually not harmful; however, some of them may turn out to be cancerous. Read here to know about the ways to treat moles on face and body and prevent them from growing any further.
Story first published: Thursday, March 23, 2017, 23:41 [IST]
Please Wait while comments are loading...
Subscribe Newsletter