For Quick Alerts
ALLOW NOTIFICATIONS  
For Daily Alerts

ನೀರಿಗೆ ಈ ಸಾಮಗ್ರಿಗಳನ್ನು ಬೆರೆಸಿ ಸ್ನಾನ ಮಾಡಿ ನೋಡಿ...

By Deepak M
|

ಸ್ನಾನ ಎನ್ನುವುದು ಮೈಮನಗಳಿಗೆ ಮುದ ನೀಡುವ ಕ್ರಿಯೆಯಾಗಿರುತ್ತದೆ. ನಾವಷ್ಟೇ ಅಲ್ಲದೆ ಪ್ರಾಣಿ ಮತ್ತು ಪಕ್ಷಿಗಳೂ ಸಹ ಸ್ನಾನ ಮಾಡುತ್ತವೆ. ನಮ್ಮ ದೇಹ ಸ್ವಚ್ಛಗೊಳಿಸಲು ಮತ್ತು ನಮಗೆ ಇರುವ ಒತ್ತಡದಿಂದ ಮುಕ್ತಿ ಪಡೆಯಲು ಸ್ನಾನ ನಮಗೆ ಸಹಾಯ ಮಾಡುತ್ತದೆ. ರಿಲ್ಯಾಕ್ಸಿಂಗ್ ಬಾತ್ ಅಥವಾ ಸ್ನಾನ ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿದೆ. ಇದು ಮುಖ್ಯವಾಗಿ ಮಾನಸಿಕ ಒತ್ತಡದಿಂದ ನಿಮ್ಮನ್ನು ಮುಕ್ತಗೊಳಿಸಲು ನೆರವು ನೀಡುತ್ತದೆ.

ಜೊತೆಗೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಸ್ನಾನದ ಪ್ರಕಾರಗಳು ಸಹ ಈಗ ಜನಪ್ರಿಯಗೊಳ್ಳುತ್ತಿವೆ. ಒಂದು ವೇಳೆ ನೀವು ಅದ್ಧೂರಿಯಾದ ರಿಲ್ಯಾಕ್ಸಿಂಗ್ ಬಾತ್ ಅನ್ನು ಮಾಡಲು ಇಷ್ಟಪಡುತ್ತಿದ್ದಲ್ಲಿ ಈ ಕೆಳಕಂಡ ವಸ್ತುಗಳನ್ನು ಸ್ನಾನದ ನೀರಿನಲ್ಲಿ ಬೆರೆಸಿಕೊಂಡು ಸ್ನಾನ ಮಾಡಿ. ಬನ್ನಿ ಯಾವ ಯಾವ ಪದಾರ್ಥಗಳನ್ನು ಬೆರೆಸಿಕೊಂಡು ಸ್ನಾನ ಮಾಡಬಹುದು ಎಂಬ ಪಟ್ಟಿಯನ್ನು ನೋಡೋಣ....

ಜೇನು

ಜೇನು

ಜೇನು ತುಪ್ಪವು ಸೌಂದರ್ಯವರ್ಧಕ ಗುಣಗಳನ್ನು ಒಳಗೊಂಡಿರುತ್ತದೆ. ತ್ವಚೆಯ ಮೇಲೆ ಜೇನು ತುಂಬಾ ಪರಿಣಾಮಗಳನ್ನು ಉಂಟು ಮಾಡುತ್ತದೆ. ತ್ವಚೆಯನ್ನು ಪೋಷಕಾಂಶಗೊಳಿಸುವುದರಿಂದ ಹಿಡಿದು ತುರಿಕೆ ಇತ್ಯಾದಿಗಳನ್ನು ಪರಿಹರಿಸುವವರೆಗೆ ಜೇನು ತುಪ್ಪ ಉಪಯೋಗಕಾರಿಯಾಗಿರುತ್ತದೆ. ಜೇನು ತುಪ್ಪದಲ್ಲಿ ಆಂಟಿಆಕ್ಸಿಡೆಂಟ್‌ಗಳ ಗಣಿಯೇ ಇರುತ್ತದೆ. ಹೀಗಾಗಿ ಜೇನು ತುಪ್ಪವನ್ನು ನಿಮ್ಮ ಸ್ನಾನದ ನೀರಿನಲ್ಲಿ ಬೆರೆಸಿಕೊಳ್ಳುವುದರಿಂದ ತ್ವಚೆಯು ಒಣಗುವಿಕೆಯನ್ನು ತಡೆಯಬಹುದು.

ಓಟ್‍ಮೀಲ್

ಓಟ್‍ಮೀಲ್

ಓಟ್‌ಮೀಲ್ ತ್ವಚೆಗೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಓಟ್‍ಮೀಲ್ ಹಲವಾರು ಲೋಶನ್‌ಗಳಲ್ಲಿ ಮತ್ತು ಕ್ರೀಮ್‌ಗಳಲ್ಲಿ ಕಂಡು ಬರುತ್ತದೆ. ಓಟ್‍ಮೀಲ್ ತ್ವಚೆಯ ಮೇಲೆ ಉಪಶಮನಕಾರಿ ಗುಣವನ್ನು ವ್ಯಕ್ತಪಡಿಸುತ್ತದೆ. ಅದರಲ್ಲೂ ಒಣ ಮತ್ತು ತುರಿಕೆ ಇರುವ ತ್ವಚೆಗೆ ಇದು ಒಳ್ಳೆಯದು. ಓಟ್‍ಮೀಲ್ ಬಾತ್ ನಿಮ್ಮ ತ್ವಚೆಗೆ ಆಹ್ಲಾದಕತೆಯನ್ನು ಒದಗಿಸುತ್ತದೆ. ಇದಕ್ಕಾಗಿ ಒಂದು ಕಪ್ ಓಟ್ಸ್ ಅನ್ನು ತೆಗೆದುಕೊಂಡು ಒಂದು ಟಬ್‍ನಲ್ಲಿ ಹಾಕಿ. ಈಗ ಇದರಲ್ಲಿ ನೀವು ಸಹ ಮುಳುಗಿ. ಹೀಗೆ ಓಟ್‍ಮೀಲ್ ಬಾತ್ ನಿಮಗೆ ಯಾವಾಗಲೂ ರಿಲ್ಯಾಕ್ಸಿಂಗ್ ನೀಡುತ್ತದೆ.

ಹಾಲು

ಹಾಲು

ಹಾಲು ಅಂದಿನ ಕಾಲದಿಂದಲೂ ಸ್ನಾನದಲ್ಲಿ ಬಳಸಲ್ಪಡುತ್ತಿದೆ. ತ್ವಚೆಯ ಒಣಗುವಿಕೆಯನ್ನು ಮತ್ತು ಉರಿಯೂತ ಹಾಗು ಕೆಂಪಾಗುವಿಕೆಯನ್ನು ನಿವಾರಿಸಲು ಹಾಲು ಒಳ್ಳೆಯದು. ಮೊಡವೆ ಮುಂತಾದ ಗುಳ್ಳೆಗಳನ್ನು ನಿವಾರಿಸಲು ಸಹ ಹಾಲು ಸಹಾಯ ಮಾಡುತ್ತದೆ. ಬಾತ್ ಟಬ್‌ಗೆ ಎರಡು ಕಪ್ ಹಾಲನ್ನು ಹಾಕಿ ಅದರಲ್ಲಿ ನಿಮ್ಮನ್ನು ನೀವು ನೆನೆಸಿಕೊಳ್ಳಿ. ಹಾಲು ನಿಮ್ಮ ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಆರೋಗ್ಯಕರವಾದ ಆಕರ್ಷಕ ತ್ವಚೆಯನ್ನು ನೀಡುತ್ತದೆ.

ಗ್ರೀನ್ ಟೀ

ಗ್ರೀನ್ ಟೀ

ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಗ್ರೀನ್ ಟೀ ಬ್ಯಾಗನ್ನು ಬಿಸಿ ನೀರಿನಲ್ಲಿ ನೆನೆಸಿದರೆ ಅದರಲ್ಲಿರುವ ಪೋಷಕಾಂಶಗಳು ನೀರನ್ನು ಸೇರುತ್ತವೆ. ಹದಿನೈದು ನಿಮಿಷ ಬಿಟ್ಟು ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಫ್ರೀ ರ‍್ಯಾಡಿಕಲ್‌ಗಳಿಂದ ತ್ವಚೆಯ ಮೇಲೆ ಉಂಟಾಗಿರುವ ಹಾನಿಯನ್ನು ತಪ್ಪಿಸಬಹುದು. ಜೊತೆಗೆ ಇದು ಸುಕ್ಕುಗಳನ್ನು ಮತ್ತು ಕಲೆಗಳನ್ನು ನಿವಾರಿಸುತ್ತದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಕೇವಲ ಅಡುಗೆ ಮತ್ತು ಕೂದಲಿಗೆ ಮಾತ್ರ ಬಳಸಲ್ಪಡುವುದಿಲ್ಲ. ಇದನ್ನು ಸ್ನಾನಕ್ಕೂ ಸಹ ಬಳಸಬಹುದು. ತೆಂಗಿನ ಎಣ್ಣೆಯು ತ್ವಚೆಯನ್ನು ಮೃದು ಮಾಡುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ. ಇದರಿಂದ ನಿಮ್ಮ ಕೂದಲು ಸಹ ಮೃದುವಾಗುವುದರ ಜೊತೆಗೆ ರೇಷ್ಮೆಯಂತೆ ಹೊಳೆಯುತ್ತದೆ. ಆದ್ದರಿಂದ ನಿಮ್ಮ ಸ್ನಾನದ ನೀರಿಗೆ ಒಂದೆರಡು ಕಪ್ ತೆಂಗಿನಎಣ್ಣೆಯನ್ನು ಬೆರೆಸಿಕೊಂಡು ಅದರಲ್ಲಿ ನಿಮ್ಮನ್ನು ನೀವು ನೆನೆಸಿಕೊಳ್ಳಿ. ಈ ಸ್ನಾನವನ್ನು ವಾರಕ್ಕೆ ಎರಡು ಬಾರಿ ಮಾಡಿ. ಮೃದು ತ್ವಚೆಯನ್ನು ಪಡೆಯಿರಿ.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ತೆಂಗಿನ ಎಣ್ಣೆಯಂತೆಯೇ ಆಲೀವ್ ಎಣ್ಣೆ ಸಹ ನಿಮಗೆ ಮೃದು ತ್ವಚೆಯನ್ನು ನೀಡುತ್ತದೆ. ಆಲೀವ್ ಎಣ್ಣೆಯು ತ್ವಚೆಯನ್ನು ಮೃದು ಮಾಡುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಒಣ ಹಾಗು ನಿರ್ಜೀವ ತ್ವಚೆಯನ್ನು ನಿವಾರಿಸುತ್ತದೆ. ಹಾಗು ನಿಮ್ಮ ಕೂದಲು ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತದೆ. ಅದಕ್ಕಾಗಿ ಆಲೀವ್ ಎಣ್ಣೆಯಲ್ಲಿ ಸ್ನಾನ ಮಾಡಿ.

ನಿಂಬೆರಸ

ನಿಂಬೆರಸ

ನಿಮ್ಮ ಸ್ನಾನದ ನೀರಿಗೆ ನಿಂಬೆರಸವನ್ನು ಹಾಕುವುದರಿಂದ ಉತ್ತಮ ಫಲಿತಾಂಶಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ನಿಂಬೆ ರಸವು ನಿಮ್ಮ ತ್ವಚೆಯಲ್ಲಿನ ರಂಧ್ರಗಳನ್ನು ಬಿಗಿಯಾಗಿರಿಸುತ್ತದೆ ಮತ್ತು ಮುಚ್ಚಿರುತ್ತದೆ. ಇದರಿಂದ ಮೊಡವೆ ಇತ್ಯಾದಿ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ತ್ವಚೆಯನ್ನು ನೀವು ಎಕ್ಸ್‌ಫೋಲಿಯೇಟ್ ಮಾಡಬೇಕು ಎಂದು ಬಯಸಿದಲ್ಲಿ, ನಿಂಬೆರಸವನ್ನು ಸ್ನಾನದ ನೀರಿಗೆ ಹಾಕಿಕೊಳ್ಳಿ. ಇದು ಆರೋಗ್ಯಕರವಾದ ಹೊಳೆಯುವ ತ್ವಚೆಯನ್ನು ನಿಮಗೆ ನೀಡುತ್ತದೆ.

English summary

Natural Ingredients To Include In A Bath

A relaxing bath can be the best way to end a long tiring day. Taking a bath with adding other ingredients to the bathing water can be much more beneficial than keeping your body clean and tidy with just plain water. It plays an important role in relieving stress and tension of a person. Taking a relaxing bath can help to slip the worries away and turn out to do wonders on the state of the skin. So, whenever you are looking for a luxurious and relaxing bath, make sure you use these essentials in your bathing routine. These are the perfect essentials to include in a bath.
Story first published: Wednesday, June 28, 2017, 9:51 [IST]
X
Desktop Bottom Promotion