ಬಾಳೆಹಣ್ಣಿನ ಸಿಪ್ಪೆ ಎಸೆಯಬೇಡಿ! ಇದರಿಂದ ಬಹಳಷ್ಟು ಪ್ರಯೋಜನಗಳಿವೆ...

By: Hemanth
Subscribe to Boldsky

ಬಾಳೆಹಣ್ಣು ತಿಂದರೆ ಅದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದಿದೆ. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಸಹಿತ ಹಲವಾರು ರೀತಿಯ ಪೊಷಕಾಂಶಗಳು ಇವೆ. ಇದು ದೇಹಕ್ಕೆ ಶಕ್ತಿ ಒದಗಿಸುವುದು. ಈ ಕಾರಣದಿಂದ ದಿನಕ್ಕೆ ಒಂದೆರಡು ಬಾಳೆಹಣ್ಣು ತಿಂದರೆ ಅದು ಆರೋಗ್ಯಕಾರಿ ಎಂದು ಹಲವಾರು ಅಧ್ಯಯನಗಳಿಂದಲೂ ತಿಳಿದುಬಂದಿದೆ.

ಕಿತ್ತಳೆ- ಬಾಳೆಹಣ್ಣಿನ ಸಿಪ್ಪೆಯ ಪವರ್‌ಗೆ ಬೆರಗಾಗಲೇಬೇಕು..!

ಸಾಮಾನ್ಯವಾಗಿ ಬಾಳೆಹಣ್ಣನ್ನು ತಿಂದ ಬಳಿಕ ಸಿಪ್ಪೆಯ ಕೆಲಸ ಏನು ಎಂದು ನಾವು ಅದನ್ನು ತೆಗೆದು ಕಸದಬುಟ್ಟಿಗೆ ಎಸೆಯುತ್ತೇವೆ. ಆದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಕೂಡ ಹಲವಾರು ರೀತಿಯ ಅಂಶಗಳು ಇವೆ. ಇದು ತ್ವಚೆಯ ಆರೈಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. 

ನಿಮಗೆ ಗೊತ್ತಾ? ಬಾಳೆಹಣ್ಣಿನ ಸಿಪ್ಪೆಯಿಂದ ಮೊಡವೆ ನಿಯಂತ್ರಿಸಬಹುದು!

ನೀವು ಪುರುಷ ಅಥವಾ ಮಹಿಳೆ, ಯಾರೇ ಆಗಿದ್ದರೂ ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ಚರ್ಮದಲ್ಲಿರುವ ಕಲೆಗಳ ನಿವಾರಣೆ ಮಾಡುವುದು. ಬಾಳೆಹಣ್ಣಿನ ಸಿಪ್ಪೆಯಿಂದ ಹಲವಾರು ರೀತಿಯ ಲಾಭಗಳು ಇವೆ. ಆದರೆ ಇದನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ಯಾವುದೇ ವಯಸ್ಸಿನವರು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡಬಹುದು. ಬಾಳೆಹಣ್ಣಿನ ಸಿಪ್ಪೆಯಿಂದ ಯಾವೆಲ್ಲಾ ಲಾಭಗಳು ಇವೆ ಎಂದು ತಿಳಿಯಿರಿ.....

ನೆರಿಗೆ ಮತ್ತು ವಯಸ್ಸಾಗುವ ಚರ್ಮಕ್ಕೆ

ನೆರಿಗೆ ಮತ್ತು ವಯಸ್ಸಾಗುವ ಚರ್ಮಕ್ಕೆ

ಚರ್ಮವು ವಯಸ್ಸಾಗುತ್ತಿರುವ ಲಕ್ಷಣ ತೋರಿಸುತ್ತಾ ಇದ್ದರೆ ಬಾಳೆಹಣ್ಣಿನ ಸಿಪ್ಪೆಯು ಪರಿಣಾಮಕಾರಿಯಾಗಲಿದೆ.

*ಬಾಳೆಹಣ್ಣಿನ ಸಿಪ್ಪೆಗಳನ್ನು ತೊಳೆದು ಒಂದು ಮಿಕ್ಸಿಗೆ ಹಾಕಿ ರುಬ್ಬಿ. ಎರಡು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡರೆ ಒಳ್ಳೆಯದು.

*ರುಬ್ಬಿಕೊಂಡಿರುವ ಬಾಳೆಹಣ್ಣಿನ ಸಿಪ್ಪೆಗೆ ಒಂದು ಮೊಟ್ಟೆಯ ಲೋಳೆ ಹಾಕಿ. ಇದನ್ನು ಒಡೆಯಬೇಡಿ. ಚಮಚ ತೆಗೆದುಕೊಂಡು ಎರಡನ್ನು ಮಿಶ್ರಣ ಮಾಡಿಕೊಳ್ಳಿ.

*ಇದನ್ನು ತ್ವಚೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ವಿಶ್ರಾಂತಿ ವೇಳೆ ನೀವು ತುಂಬಾ ಆರಾಮದಾಯಕವಾಗಿರಿ.

*ಸ್ನಾನ ಮಾಡುವ ಮೊದಲು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಇದರ ಬಳಿಕ ಸ್ನಾನ ಮಾಡಿ.

ಮೊಡವೆ, ಬೊಕ್ಕೆ ಮತ್ತು ಕಲೆಗಳಿಗೆ

ಮೊಡವೆ, ಬೊಕ್ಕೆ ಮತ್ತು ಕಲೆಗಳಿಗೆ

ನೇರವಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜಿಕೊಂಡರೆ ಅದರಿಂದ ಮೊಡವೆ, ಬೊಕ್ಕೆ ಮತ್ತು ಕಲೆಗಳು ಪರಿಣಾಮಕಾರಿಯಾಗಿ ನಿವಾರಣೆಯಾಗುವುದು. ಆದರೆ ಇಲ್ಲಿನ ಮಾಸ್ಕ್ ನಿಂದ ತ್ವಚೆಗೆ ಪುನರುಜ್ಜೀವನ ಬಂದ ಅನುಭವವಾಗಬಹುದು.

*ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಅದಕ್ಕೆ ಎರಡು ಚಮಚ ಜೇನುತುಪ್ಪ ಹಾಕಿ.

*ಸ್ವಚ್ಛಗೊಳಿಸಿರುವ ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಳ್ಳಿ ಮತ್ತು ಅದಕ್ಕೆ ಜೇನುತುಪ್ಪ ಸವರಿಕೊಳ್ಳಿ.

*ಈ ಸಿಪ್ಪೆಯನ್ನು ನೇರವಾಗಿ ಮೊಡವೆ, ಬೊಕ್ಕೆ ಮತ್ತು ಕಲೆಗಳು ಇವರು ಜಾಗಕ್ಕೆ ಉಜ್ಜಿ.

*ಜೇನುತುಪ್ಪ ಖಾಲಿಯಾದ ಬಳಿಕವೂ ಉಜ್ಜಿಕೊಳ್ಳಬಹುದು.

*ಹೀಗೆ ಮಾಡಿದ ತಕ್ಷಣ ಮುಖ ತೊಳೆಯಬೇಡಿ. ಮೊಡವೆಗಳ ಮೇಲೆ ಬಾಳೆಹಣ್ಣಿನ ಸಿಪ್ಪೆಯ ಪರಿಣಾಮವಾಗಲು ಸ್ವಲ್ಪ ಸಮಯ ಬಿಡಿ.

ಚರ್ಮ ಬಿಳಿಯಾಗಲು ಮತ್ತು ಕಾಂತಿ ಪಡೆಯಲು

ಚರ್ಮ ಬಿಳಿಯಾಗಲು ಮತ್ತು ಕಾಂತಿ ಪಡೆಯಲು

ಚರ್ಮವು ಬಿಳಿಯಾಗಿ ಹೊಳೆಯಬೇಕೆಂದು ನಿಮಗೆ ಅನಿಸುತ್ತಾ ಇದ್ದರೆ ನೀವು ಬಾಳೆಹಣ್ಣಿನ ಸಿಪ್ಪೆಯ ಸ್ಕ್ರಬ್ ಮಾಡಬೇಕು. ಬಾಳೆಹಣ್ಣಿನ ಸ್ಕ್ರಬ್ ನಿಂದ ಚರ್ಮವು ಬಿಳಿಯಾಗುವುದು ಮಾತ್ರವಲ್ಲದೆ ಕಾಂತಿ ಪಡೆದು ಹೊಳೆಯುವುದು.

*ಒಂದು ಬಾಳೆಹಣ್ಣಿನ ಸಿಪ್ಪೆ, ಎರಡು ಚಮಚ ಓಟ್ ಮೀಲ್ ಹುಡಿ., ಸಕ್ಕರೆ ಹುಡಿ ಎರಡು ಚಮಚ, ಹಸಿ ಹಾಲು ಒಂದು ಚಮಚ.

*ಮಿಕ್ಸಿಗೆ ಹಾಕಿಕೊಂಡು ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಳ್ಳಿ.

*ರುಬ್ಬಿಕೊಂಡ ಬಾಳೆಹಣ್ಣಿನ ಸಿಪ್ಪೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಮತ್ತು ಉಳಿದ ಪದಾರ್ಥಗಳಾದ ಓಟ್ ಮೀಲ್, ಸಕ್ಕರೆ ಹುಡಿ ಮತ್ತು ಹಾಲನ್ನು ಸೇರಿಸಿ. ಒಂದು ಚಮಚ ತೆಗೆದುಕೊಂಡು ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

* ಈ ಮಾಸ್ಕ್ ನ್ನು ಮುಖ ಹಾಗೂ ದೇಹದ ಮೇಲೆ ಸ್ಕ್ರಬ್ ಮಾಡಿ. 20-30 ನಿಮಿಷ ಬಿಟ್ಟು ತೊಳೆಯಿರಿ.

ಒಣ ಚರ್ಮಕ್ಕೆ

ಒಣ ಚರ್ಮಕ್ಕೆ

ಒಣ ಚರ್ಮಕ್ಕೆ ಮಾಯಿಶ್ಚರೈಸ್ ನೀಡಲು ನಿಮಗೆ ಕೇವಲ ಎರಡು ಸಾಮಗ್ರಿಗಳು ಮಾತ್ರ ಬೇಕಾಗಿದೆ. ಬಾಳೆಹಣ್ಣಿನ ಸಿಪ್ಪೆ ಮತ್ತು ಲಿಂಬೆ

*ಇದು ತುಂಬಾ ಸರಳ ವಿಧಾನ. ಬಾಳೆಹಣ್ಣಿನ ಸಿಪ್ಪೆ ಮತ್ತು ಲಿಂಬೆರ ರಸವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

*ಒಂದು ಬಾಳೆಹಣ್ಣಿನ ಸಿಪ್ಪೆ ಮತ್ತು ಮೂರು ಚಮಚ ಲಿಂಬೆರಸ ಬೇಕು.

*ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕಳೆದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

*ಚರ್ಮದಲ್ಲಿ ಬದಲಾವಣೆ ಬರಲು ನೀವು ಇದನ್ನು ದಿನನಿತ್ಯ ಬಳಸಿಕೊಳ್ಳಬಹುದು.

ಎಣ್ಣೆಯುಕ್ತ ಚರ್ಮಕ್ಕೆ

ಎಣ್ಣೆಯುಕ್ತ ಚರ್ಮಕ್ಕೆ

ಎಣ್ಣೆಯುಕ್ತ ಚರ್ಮದ ಆರೈಕೆ ಮಾಡಲು ನಿಮಗೆ ಮೂರು ಸಾಮಗ್ರಿಗಳು ಬೇಕಾಗಿದೆ. ಬಾಳೆಹಣ್ಣಿನ ಸಿಪ್ಪೆ, ಅಡುಗೆ ಸೋಡಾ ಮತ್ತು ನೀರು.

*ಮಿಕ್ಸಿಯಲ್ಲಿ ಬಾಳೆಹಣ್ಣಿನ ಸಿಪ್ಪೆ ರುಬ್ಬಿಕೊಳ್ಳಿ

*ರುಬ್ಬಿಕೊಂಡಿರುವ ಬಾಳೆಹಣ್ಣಿನ ಸಿಪ್ಪೆಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ. ಇದು ತುಂಬಾ ಒಣಗಿದಂತೆ ಇರುವುದು.

*ಬಾಳೆಹಣ್ಣಿನ ಸಿಪ್ಪೆ ಮತ್ತು ಅಡುಗೆ ಸೋಡಾಗೆ ನಿಮಗೆ ಬೇಕಾದಷ್ಟು ನೀರು ಹಾಕಿಕೊಳ್ಳಿ.

*ಇದನ್ನು ಮುಖ ಹಾಗೂ ಚರ್ಮಕ್ಕೆ ಹಚ್ಚಿಕೊಳ್ಳಿ.

*ತಣ್ಣೀರಿನಿಂದ ತೊಳೆಯಿರಿ.

English summary

How To Use Banana Peel For The Skin?

So what do you do after eating a banana? Throw away its peel, right? Well, don't repeat the same, if you are a skin-conscious man or woman. The banana peel that you throw off can be applied on the skin in various ways. Depending on the problem, you have to decide on how to use the banana peel on skin.
Subscribe Newsletter