For Quick Alerts
ALLOW NOTIFICATIONS  
For Daily Alerts

ವ್ಯಕ್ತಿತ್ವ ಅಳೆಯಲು ಸುಲಭ ಉಪಾಯ ಏನು ಗೊತ್ತಾ? ಅದೇ ನಿಮ್ಮ ಮುಷ್ಟಿ!

By Divya
|

ನಮ್ಮ ವರ್ತನೆ, ಸಂವೇದನೆ ಹಾಗೂ ಸಂವಹನಗಳು ಮಾತ್ರ ನಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತವೆ ಎನ್ನುವುದು ನಮಗೆ ಗೊತ್ತಿರುವ ವಿಚಾರ. ನಾವು ಮುಷ್ಟಿಯನ್ನು ಕಟ್ಟುವ ಪರಿಯು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನುವುದು ನಮಗೆ ತಿಳಿಯದ ವಿಚಾರ ಅಲ್ಲವಾ? ನಿಜ, ನಮ್ಮ ದೇಹದ ಪ್ರತಿಯೊಂದು ಗುಣಲಕ್ಷಣಗಳು ವ್ಯಕ್ತಿತ್ವವನ್ನು ವ್ಯಕ್ತಪಡಿಸುತ್ತದೆ ಎನ್ನುವುದನ್ನು ವಿಶೇಷ ಅಧ್ಯಯನಗಳು ವ್ಯಕ್ತ ಪಡಿಸಿದೆ.

ಕೈಯಲ್ಲಿ ಚೀಲವನ್ನು ಹಿಡಿದು ನಡೆಯುವ ರೀತಿ, ನಾವು ಕುಳಿತುಕೊಳ್ಳುವ ಭಂಗಿ, ಮಾತನಾಡುವ ಶೈಲಿ, ನಡೆಯುವ ಬಗೆ ಹಾಗೂ ನಮ್ಮ ಹವ್ಯಾಸಗಳು ನಮ್ಮ ಆಂತರಿಕ ಗುಣ ಹಾಗೂ ಸ್ವಭಾವವನ್ನು ತೋರಿಸುತ್ತದೆ. ಹಾಗೆಯೇ ನಾವು ಐದು ಬೆರಳನ್ನು ಒಟ್ಟುಗೂಡಿಸಿ ಕಟ್ಟುವ ಒಂದು ಮುಷ್ಟಿಯ ಆಕಾರವು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಈ ಒಂದು ವಿಶೇಷ ವಿಚಾರಗಳ ಬಗ್ಗೆ ವಿಭಿನ್ನ ಬಗೆಯ ಮಾಹಿತಿಗಳು ಈ ಲೇಖನದಲ್ಲಿದೆ...

ಹೆಬ್ಬೆರಳು ಮೇಲ್ಭಾಗದಲ್ಲಿರುವಂತೆ ಇದ್ದರೆ

ಹೆಬ್ಬೆರಳು ಮೇಲ್ಭಾಗದಲ್ಲಿರುವಂತೆ ಇದ್ದರೆ

ಮುಷ್ಟಿಕಟ್ಟುವಾಗ ಹೆಚ್ಚೆರಳು ಮೇಲಿರುವಂತೆ ಮಾಡುವವರು ನಿರಂತರವಾಗಿ ಹೊಸ ಜ್ಞಾನಗಳ ಹುಡುಕಾಟ ಹಾಗೂ ಅಧ್ಯಯನದಲ್ಲಿ ತೊಡಗಿರುತ್ತಾರೆ. ಒಂದೇ ಬಾರಿಗೆ ಎಲ್ಲಾ ವಿಚಾರಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇವರ ಕೆಲಸ ಕಾರ್ಯಗಳ ವೇಳಾ ಪಟ್ಟಿಯು ಟಿವಿಯಲ್ಲಿ ತೋರಿಸುವ ಕಾರ್ಯಕ್ರಮಗಳ ರೀತಿಯಲ್ಲಿ ಇರುವುದಿಲ್ಲ. ಇವರ ಆಲೋಚನೆ ಹಾಗೂ ಕಾರ್ಯ ವೈಖರಿಗಳು ವಿಶೇಷವಾಗಿ ಇರುತ್ತವೆ.

ಹೆಬ್ಬೆರಳು ಮೇಲ್ಭಾಗದಲ್ಲಿರುವಂತೆ ಇದ್ದರೆ (ಮುಂದುವರಿದ ಭಾಗ)

ಹೆಬ್ಬೆರಳು ಮೇಲ್ಭಾಗದಲ್ಲಿರುವಂತೆ ಇದ್ದರೆ (ಮುಂದುವರಿದ ಭಾಗ)

ಈ ಬಗೆಯ ಜನರು ಸದಾ ಪರರ ಹಿತ ಚಿಂತನೆಗಳಿಗೆ ಭಾಗಿಯಾಗಿರುತ್ತಾರೆ. ಇವರು ಸದಾ ಎಲ್ಲರಿಗೂ ಸಹಾಯ ಮಾಡುವ ಮತ್ತು ಅವರ ಸುತ್ತಲಿನ ಜನರಿಗೆ ಸದಾ ಭರವಸೆ ನೀಡುತ್ತಿರುತ್ತಾರೆ. ಇವರಿಂದ ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಸಹಾಯ ಮಾಡುತ್ತಾರೆ. ಅಲ್ಲದೆ ವಿಶ್ವಾಸಾರ್ಹತೆ ಹಾಗೂ ದಯೆಗೆ ಹೆಸರುವಾಸಿಯಾಗಿದ್ದಾರೆ, ಜೊತೆಗೆ ಪ್ರತಿಯೊಬ್ಬರಿಂದಲೂ ಗೌರವ ಹಾಗೂ ಪ್ರಶಂಸೆಗೆ ಒಳಗಾಗಿರುತ್ತಾರೆ.

ಹೆಬ್ಬೆರಳು ಒಳ ಮುಖವಾಗಿದ್ದರೆ

ಹೆಬ್ಬೆರಳು ಒಳ ಮುಖವಾಗಿದ್ದರೆ

ಇವರು ಇತರರಿಗೆ ಸುಂದರ ಹಾಗೂ ಸ್ಫೂರ್ತಿದಾಯಕರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ಹೊಸ ಸ್ನೇಹಿತರನ್ನು ಸಂಪಾದಿಸುವಲ್ಲಿ ವಿಫಲರಾಗಿರುತ್ತಾರೆ. ಸುತ್ತಲಿನವರು ಸದಾ ಕಿರಿಕಿರಿ ಹಾಗೂ ಸಿಡುಕು ಮುಖದವರು ಎಂದು ಭಾವಿಸುತ್ತಾರೆ. ಈ ವಿಚಾರವನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಾರೆ.

ಹೆಬ್ಬೆರಳು ಒಳ ಮುಖವಾಗಿದ್ದರೆ (ಮುಂದುವರಿದ ಭಾಗ)

ಹೆಬ್ಬೆರಳು ಒಳ ಮುಖವಾಗಿದ್ದರೆ (ಮುಂದುವರಿದ ಭಾಗ)

ಇವರು ಸಮಸ್ಯೆಯನ್ನು ಬಗೆಹರಿಸುವ ರೀತಿಯು ಇವರದೊಂದು ವಿಶೇಷವಾದ ಕೊಡುಗೆ ಎನ್ನಬಹುದು. ಇವರು ಚುರುಕು ಹಾಗೂ ಸೂಕ್ಷ್ಮ ಗುಣಗಳನ್ನು ಹೊಂದಿದವರಾಗಿದ್ದಾರೆ. ನಿಖರವಾದ ದೃಷ್ಟಿ ಹಾಗೂ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎನ್ನಲಾಗುತ್ತದೆ. ಅದು ಯಾರೂ ಅಪೇಕ್ಷಿಸದೆ ಒಪ್ಪಿಕೊಳ್ಳುವಂತಿರುತ್ತದೆ.

ಹೆಬ್ಬೆರಳು ಒಂದು ಸೈಡ್‍ಗೆ ಬಂದಂತೆ ಮಾಡಿದರೆ

ಹೆಬ್ಬೆರಳು ಒಂದು ಸೈಡ್‍ಗೆ ಬಂದಂತೆ ಮಾಡಿದರೆ

ಇವರು ತಮ್ಮ ಜೀವನದಲ್ಲಿ ಅವರದ್ದೇ ಆದ ವಿಭಿನ್ನ ಮಾರ್ಗ ಹಾಗೂ ಧ್ಯೇಯವನ್ನು ಹೊಂದಿರುತ್ತಾರೆ. ಇವರ ಮಾರ್ಗ ಸದಾ ಕಠಿಣವಾದದ್ದು ಎನ್ನಬಹುದು. ಅವುಗಳ ಪ್ರಾಯೋಗಿಕ ವಿಧಾನ ಹಾಗೂ ಶ್ರದ್ಧೆಯಿಂದ ಇರುವುದನ್ನು ತಿಳಿದಿರುತ್ತಾರೆ.

ಹೆಬ್ಬೆರಳು ಒಂದು ಸೈಡ್‍ಗೆ ಬಂದಂತೆ ಮಾಡಿದರೆ (ಮುಂದುವರಿದ ಭಾಗ)

ಹೆಬ್ಬೆರಳು ಒಂದು ಸೈಡ್‍ಗೆ ಬಂದಂತೆ ಮಾಡಿದರೆ (ಮುಂದುವರಿದ ಭಾಗ)

ವೈಫಲ್ಯದ ಭಯವು ಮುಕ್ತವಾದ ನಿರ್ಣಯ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಅವರ ವಿಶ್ವಾಸ ಅಲ್ಲಾಡುವಂತೆ ಮಾಡುವ ಏಕೈಕ ವಿಷಯ ಎನ್ನಬಹುದು. ಇವರು ಸಾಮಾನ್ಯವಾಗಿ ಅನುಮೋದನೆ ಹಾಗೂ ಮೆಚ್ಚುಗೆ ಪಡೆದುಕೊಳ್ಳಲು ಇಷ್ಟಪಡುತ್ತಾರೆ. ಇವರ ಉಪಸ್ಥಿತಿಯಲ್ಲಿರುವವರನ್ನು ಇವರು ರಕ್ಷಿಸಿ ಖುಷಿಯಾಗಿರುವಂತೆ ಮಾಡುತ್ತಾರೆ.

ಹೆಬ್ಬೆರಳು ಮೇಲ್ಮುಖವಾಗಿದ್ದರೆ

ಹೆಬ್ಬೆರಳು ಮೇಲ್ಮುಖವಾಗಿದ್ದರೆ

ಈ ವ್ಯಕ್ತಿಗಳು ಬಹು ಮುಖ ಜ್ಞಾನವನ್ನು ಹೊಂದಿರುತ್ತಾರೆ. ಇವರು ಒಳಮನಸ್ಸಿನಲ್ಲಿ ಅಸಂಖ್ಯಾತ ವಿಚಾರಗಳನ್ನು ಹೊಂದಿರುತ್ತಾರೆ. ಇವರು ಜಗತ್ತು ಅನ್ವೇಶಿಸುವಂತೆ ಇರುತ್ತಾರೆ. ಆದರೆ ಕೆಲವು ವಿಚಾರಗಳ ಕುರಿತು, ಕೇಂದ್ರೀಕರಿಸಲು ಇವರಿಗೆ ಕಷ್ಟವಾಗುತ್ತದೆ.

ಹೆಬ್ಬೆರಳು ಮೇಲ್ಮುಖವಾಗಿದ್ದರೆ (ಮುಂದುವರಿದ ಭಾಗ)

ಹೆಬ್ಬೆರಳು ಮೇಲ್ಮುಖವಾಗಿದ್ದರೆ (ಮುಂದುವರಿದ ಭಾಗ)

ಪ್ರತಿಯೊಬ್ಬರು ಇವರನ್ನು ನಡೆದಾಡುವ ಎನ್‍ಸೈಕ್ಲೋಪಿಡಿಯಾ ಎಂದು ಬಯಸುತ್ತಾರೆ. ಹೆಚ್ಚಿನವರು ಇವರಲ್ಲಿ ಸಲಹೆ ಹಾಗೂ ಗುರಿಗಳ ಬಗ್ಗೆ ಮಾಹಿತಿ ಕೇಳಿಕೊಳ್ಳುತ್ತಾರೆ. ಇವರು ಕೆಲವು ವಿಚಾರಗಳ ಬಗ್ಗೆ ಮಾಹಿತಿ ನೀಡುವಲ್ಲಿ ಹಿಂದೇಟು ಹಾಕುತ್ತಾರೆ. ಬೇಕಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು, ಅವರಿಗಷ್ಟೇ ಮಾಹಿತಿಯನ್ನು ನೀಡುತ್ತಾರೆ.

English summary

How Does Shape Of The Fist Reveal Your Personality?

From the way they carry their bags, to the way they sit with their legs crossed, certain details help understand the inner traits of a person. By the way of checking on different body parts as well, it has been confirmed in studies that we can get to know the traits and characteristics of a person.
X
Desktop Bottom Promotion