ಕುತ್ತಿಗೆಯ ಸುತ್ತ ಕಪ್ಪಾಗಿದ್ದರೆ ಈ ಮನೆಮದ್ದುಗಳು ಬೆಸ್ಟ್ ಪರಿಹಾರ

Posted By: Jaya subramanya
Subscribe to Boldsky

ಹಿಂದೆ, ವಿಶ್ವದಲ್ಲಿರುವ ಹೆಚ್ಚಿನ ನಾಗರೀಕತೆಗಳು ನೀಳವಾದ ಬಿಳುಪುಳ್ಳ ಕುತ್ತಿಗೆಯನ್ನು ಹೊಂದಿರುವ ಸ್ತ್ರೀಯರು ಸೌಂದರ್ಯದ ಪ್ರತೀಕವೆಂದು ಪರಿಗಣಿಸುತ್ತಿದ್ದರು. ತಾವು ಮದುವೆಯಾಗುವ ಹುಡುಗಿಯ ಕುತ್ತಿಗೆಯ ಅಂದವನ್ನು ನೋಡಿ ರಾಜರು ಅವರನ್ನು ವಿವಾಹವಾಗುತ್ತಿದ್ದರು ಎಂಬುದೂ ಪ್ರತೀತಿಯಲ್ಲಿದೆ. ಇಂದು ಕಾಲ ಬದಲಾದಂತೆ ಸೌಂದರ್ಯದ ಅಂಶವೂ ಬದಲಾಗಿದ್ದರೂ ಕೆಲವೊಂದು ಹಾಗೆಯೇ ಉಳಿದಿದೆ.

ಇಂದಿಗೂ ಹೆಚ್ಚಿನ ಜನರು ಅದರಲ್ಲೂ ಮಹಿಳೆಯರು, ಯಾವುದೇ ಕಲೆಗಳಿಲ್ಲದ ಹೊಳೆಯುವ ಬಿಳುಪಾದ ಕುತ್ತಿಗೆಯನ್ನು ಪಡೆಯುವ ಇರಾದೆಯನ್ನು ಹೊಂದಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆಯ ಬಳಿ ಕಂಡುಬರುವ ಕಲೆ, ಆಕರ್ಷಣೀಯವಾಗಿಲ್ಲದೆ ಇರಬಹುದು, ಹೆಚ್ಚಾಗಿ ಈ ಭಾಗ ಕಾಣುವುದು ಕುತ್ತಿಗೆ ಕಂಡುಬರುವ ದಿರಿಸುಗಳನ್ನು ನೀವು ಧರಿಸಿದಾಗ.

ಸುಂದರವಾದ ನೆಕ್ಲೇಸ್ ಅನ್ನು ಕುತ್ತಿಗೆಗೆ ಧರಿಸುವಾಗ ಈ ಕಲೆಗಳು ನಿಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಮತ್ತು ಕುತ್ತಿಗೆಯ ಕಲೆಗಳನ್ನು ಅಡಗಿಸುವ ಕಸರತ್ತನ್ನು ನೀವು ಮಾಡುತ್ತೀರಿ. ಹೀಗಾದಾಗ ಒಡವೆ ತನ್ನ ಬೆಲೆಯನ್ನೇ ಕಳೆದುಕೊಳ್ಳುತ್ತದೆ. ಕುತ್ತಿಗೆಯ ಕಪ್ಪಾಗುವಿಕೆ ಹಲವಾರು ಕಾರಣಗಳಿಂದ ಉಂಟಾಗಿರಬಹುದು. 

ಕಪ್ಪು ಬಣ್ಣಕ್ಕೆ ತಿರುಗಿದ ಕುತ್ತಿಗೆಯ ಸಮಸ್ಯೆಗೆ-ಲಿಂಬೆಯ ಚಿಕಿತ್ಸೆ!

ವರ್ಣದ್ರವ್ಯ, ಹಾರ್ಮೋನು ಅನಿಯಂತ್ರತೆ, ಸನ್ ಟ್ಯಾನ್, ಕಳಪೆ ನೈರ್ಮಲ್ಯ, ಬಿರುಸುತನ, ಎನ್ಜಿಮಾ, ಅಲರ್ಜಿ ಇತ್ಯಾದಿಗಳು. ವೃತ್ತಿಪರರು ಈ ಸಮಸ್ಯೆಯನ್ನು ಹೋಗಲಾಡಿಸಲು ಕ್ರೀಮ್, ಸೋಪು ಮತ್ತು ಮುಲಾಮುಗಳನ್ನು ನೀಡಿದರೂ ಇದು ನಿಮಗೆ ತೃಪ್ತಿಯನ್ನು ನೀಡುವ ಪರಿಹಾರವನ್ನು ಒದಗಿಸಲಾರದು. ನೀವು ನೈಸರ್ಗಿಕ ವಿಧಾನವನ್ನು ಅನುಸರಿಸಿ ಕುತ್ತಿಗೆಯ ಕಪ್ಪಾಗುವಿಕೆಗೆ ಪರಿಹಾರವನ್ನು ಕಾಣಬೇಕು. ಮುಂದೆ ಓದಿ...

ಶ್ರೀಗಂಧದ ಹುಡಿ

ಶ್ರೀಗಂಧದ ಹುಡಿ

ಇದು ವಿಟಮಿನ್ ಮತ್ತು ನ್ಯೂಟ್ರಿಶಿಯನ್ ಅಂಶಗಳನ್ನು ತನ್ನಲ್ಲಿ ಒಳಗೊಂಡಿದ್ದು ನಿಮ್ಮ ಕುತ್ತಿಗೆ ಕಪ್ಪಗಿನ ಭಾಗಕ್ಕೆ ಅದ್ಭುತವಾಗಿ ಕಾರ್ಯ ನಿರ್ವಹಿಸಲಿದೆ. 1ಚಮಚದಷ್ಟು ಶ್ರೀಗಂಧದ ಹುಡಿಯನ್ನು 2 ಚಮಚ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿ ಮತ್ತು ನಿಮ್ಮ ಕುತ್ತಿಗೆ ಎಲ್ಲಾ ಭಾಗಕ್ಕೂ ಹಚ್ಚಿ. 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಈ ಭಾಗವನ್ನು ಸ್ವಚ್ಛಗೊಳಿಸಿ.

ತೆಂಗಿನ ಹಾಲು

ತೆಂಗಿನ ಹಾಲು

ತೆಂಗಿನ ಹಾಲನ್ನು ಬಳಸಿಕೊಂಡು ನಿಮ್ಮ ಕುತ್ತಿಗೆ ಕಪ್ಪು ಭಾಗವನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದಾಗಿದೆ. ಮೊದಲಿಗೆ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ. ನಂತರ ಹತ್ತಿಯ ಉಂಡೆಯನ್ನು ತೆಂಗಿನ ಹಾಲಿನಲ್ಲಿ ಅದ್ದಿ ಕುತ್ತಿಗೆಯ ಭಾಗಕ್ಕೆ ಹರಡಿ. ಅರ್ಧಗಂಟೆ ಹಾಗೆಯೇ ಬಿಡಿ. ನಂತರ ಈ ಭಾಗವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಅಕ್ಕಿ ಹುಡಿ

ಅಕ್ಕಿ ಹುಡಿ

ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ಪರಿಣಾಮಕಾರಿಯಾಗಿ ನಿಮ್ಮ ಕುತ್ತಿಗೆಯ ಭಾಗಕ್ಕೆ ಕಾರ್ಯನಿರ್ವಹಿಸಲಿದೆ. ಎರಡು ಚಮಚದಷ್ಟು ಅಕ್ಕಿಹುಡಿಯನ್ನು ನೀರಿನಲ್ಲಿ ಕಲಸಿಕೊಂಡು ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿ. 20 ನಿಮಿಷಗಳ ತರುವಾಯ ಈ ಭಾಗವನ್ನು ತೊಳೆದುಕೊಳ್ಳಿ.

ಲಿಂಬೆ ರಸ

ಲಿಂಬೆ ರಸ

ಎಲ್ಲರೂ ತಿಳಿದಿರುವಂತೆ ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣ ಅಧಿಕವಾಗಿದೆ. ಈ ಗುಣದಿಂದಾಗಿ ಚರ್ಮದ ಕಪ್ಪು ಭಾಗವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಎರಡು ಚಮಚ ಗುಲಾಬಿ ನೀರಿನೊಂದಿಗೆ(ರೋಸ್ ವಾಟರ್) ಎರಡು ಟಿ ಚಮಚ ನಿಂಬೆ ರಸ ಮಿಶ್ರಣ ಮಾಡಿ ಮತ್ತು ಹತ್ತಿ ಚೆಂಡನ್ನು ಬಳಸಿ ಕುತ್ತಿಗೆಯ ಕಪ್ಪಾದ ಭಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹಚ್ಚಿದ ಮರುಕ್ಷಣವೇ ತೊಳೆಯಬೇಡಿ. ಅದನ್ನು ಇಡೀ ರಾತ್ರಿ ಹಗೆಯೇ ಬಿಟ್ಟು, ಮರುದಿನ ಬೆಳಿಗ್ಗೆ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ಒಂದು ತಿಂಗಳವರೆಗೆ ಈ ವಿಧಾನವನ್ನು ಪುನರಾವರ್ತಿಸಿ.

ಸ್ಟ್ರಾಬೆರ್ರಿಗಳು

ಸ್ಟ್ರಾಬೆರ್ರಿಗಳು

ಇದು ಹೆಚ್ಚು ಶ್ರೀಮಂತ ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿದ್ದು ನಿಮ್ಮ ಕುತ್ತಿಗೆಯ ಸುತ್ತಲಿನ ಕೊಳೆ ಮತ್ತು ಕಪ್ಪು ಬಣ್ಣವನ್ನು ನಿವಾರಿಸಲಿದೆ. ಮೊದಲಿಗೆ ಎರಡು ಸ್ಟ್ರಾಬೆರ್ರಿಗಳನ್ನು ಜಜ್ಜಿಕೊಂಡು ಅದರ ರಸವನ್ನು ಹಿಂಡಿ ನಿಮ್ಮ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಈ ಭಾಗವನ್ನು ತೊಳೆದುಕೊಳ್ಳಿ.

ಟೊಮೇಟೊ

ಟೊಮೇಟೊ

ಇದು ತ್ವಚೆಯನ್ನು ಬೆಳ್ಳಗಾಗಿಸುವ ಗುಣವನ್ನು ಹೊಂದಿದ್ದು ನಿಮ್ಮ ಕಪ್ಪು ವರ್ತುಲವನ್ನು ಹೋಗಲಾಡಿಸಲಿದೆ. ಟೊಮೇಟೊವನ್ನು ಹಿಸುಕಿಕೊಂಡು ಅದನ್ನು ನಿಮ್ಮ ಕುತ್ತಿಗೆಯ ಸುತ್ತ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ.

ಆಲೂಗಡ್ಡೆ

ಆಲೂಗಡ್ಡೆ

ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಕುತ್ತಿಗೆಯ ಭಾಗವನ್ನು ಫಳಫಳನೆ ಹೊಳೆಯುವಂತೆ ಮಾಡುತ್ತದೆ. ಇದರ ರಸವನ್ನು ಹಿಂಡಿಕೊಂಡು ನಿಮಗೆ ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಬಹುದು ಇಲ್ಲದಿದ್ದರೆ ಆಲೂಗಡ್ಡೆಯನ್ನು ಹಾಗೆಯೇ ಆ ಭಾಗಕ್ಕೆ ಉಜ್ಜಬಹುದಾಗಿದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ನಿಮ್ಮ ಕುತ್ತಿಗೆಯ ಕಪ್ಪು ಬಣ್ಣಕ್ಕೆ ಬಾದಾಮಿ ಎಣ್ಣೆ ಅದ್ಭುತವಾಗಿ ಕಾರ್ಯನಿರ್ವಹಿಸಲಿದೆ. ಎಣ್ಣೆಯನ್ನು ನಿಮ್ಮ ಕತ್ತಿಗೆ ಹಚ್ಚಿಕೊಂಡು 20-30 ಸೆಕೆಂಡ್ ಹಾಗೆಯೇ ಬಿಡಿ. ಸುತ್ತಲೂ ಮಸಾಜ್ ಮಾಡಿಕೊಳ್ಳಿ. ನಿತ್ಯವೂ ಈ ವಿಧಾನವನ್ನು ಕೈಗೊಂಡು ಪರಿಣಾಮಕಾರಿ ಪ್ರಯೋಜವನ್ನು ಪಡೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಹುಡಿ

ಕಿತ್ತಳೆ ಸಿಪ್ಪೆ ಹುಡಿ

ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ ರೋಸ್ ವಾಟರ್‌ನೊಂದಿಗೆ ಮಿಶ್ರ ಮಾಡಿಕೊಂಡು ಈ ಭಾಗಕ್ಕೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷ ಹಾಗೆಯೇ ಬಿಡಿ ಮತ್ತು ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾಳೆಹಣ್ಣಿನ ಪ್ಯಾಕ್

ಬಾಳೆಹಣ್ಣಿನ ಪ್ಯಾಕ್

ನಿಮ್ಮ ಕುತ್ತಿಗೆಯ ಗಾಢ ವಲಯಕ್ಕೆ ಬಾಳೆಹಣ್ಣು ಮತ್ತು ಆಲಿವ್ ಪ್ಯಾಕ್ ತಯಾರಿಸಿ ಹಚ್ಚಿ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣನ್ನು ಮ್ಯಾಶ್ (ಹಿಚುಕಿ) ಎರಡು ಚಮಚ ಆಲಿವ್ ತೈಲದೊಂದಿದೆ ಸೇರಿಸಿ. ಕುತ್ತಿಗೆ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಕಪ್ಪು ಕಲೆಗಳನ್ನು ಮಾಯಮಾಡಲು ಮತ್ತು ಚರ್ಮವನ್ನು ಮೃದುವಾಗಿಸಲು ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಪ್ರಯತ್ನಿಸಿ. ನಿಮ್ಮ ಚರ್ಮದ ಮೇಲೆ ಕಲೆಯನ್ನು ಕಡಿಮೆ ಮಾಡಲು ನೈಸರ್ಗಿಕವಾಗಿ ತಯಾರುಮಾಡಿದ ಈ ಸ್ಕ್ರಬ್ ನ್ನು ಪ್ರಯತ್ನಿಸಿ. ಒಂದು ಬಟ್ಟಲಿನಲ್ಲಿ ಎರಡು ಚಮಚ ಅಡುಗೆ ಸೋಡಾಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇರಿಸಿ. ನಿಮ್ಮ ಬೆರಳಿನಿಂದ ಈ ಪೇಸ್ಟ್ ನ್ನು ಅನ್ವಯಿಸಿ ಮತ್ತು 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅಡುಗೆ ಸೋಡಾವು ನಿಮ್ಮ ತ್ವಚೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಇದು ಕುತ್ತಿಗೆಯ ಮೇಲಿನ ಕಪ್ಪು ವಲಯವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

English summary

Home Remedies That Can Do Wonders On Dark Neck

As, today, we've zeroed in on some of the best home remedies that can actually work wonders on your dark neck problem. All these remedies are laden with natural skin bleaching agents that play an essential role in skin-lightening process. Also, you can easily incorporate them in your skin care routine to reap great benefits. Read on to know more about these home remedies and the right way to use them..