For Quick Alerts
ALLOW NOTIFICATIONS  
For Daily Alerts

ತುಟಿಯ ಬಣ್ಣ ಕಪ್ಪಾಗಿದ್ದರೆ ಚಿಂತಿಸದಿರಿ, ಇಲ್ಲಿದೆ ನೋಡಿ ಸರಳ ಟಿಪ್ಸ್

ತುಟಿ ಒಣಗಿ ಹೊಳಪು ಕಳೆದುಕೊಂಡಿದ್ದರೆ ಮುಖದ ಸೌಂದರ್ಯ ಎಷ್ಟೇ ಆಕರ್ಷಕವಾಗಿದ್ದರೂ ಅದು ಕಳೆಗುಂದುತ್ತದೆ...

By Manu
|

ಈ ಜಗತ್ತಿನಲ್ಲಿ ಎಲ್ಲರಿಗೂ ತಮ್ಮ ತುಟಿಗಳು ಮೃದು ಹಾಗೂ ಗುಲಾಬಿ ಬಣ್ಣದಲ್ಲಿರುವುದು ಇಷ್ಟ. ವಿಶೇಷವಾಗಿ ಮಹಿಳೆಯರು ತಮ್ಮ ತುಟಿಗಳ ಬಣ್ಣದ ಕುರಿತು ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ಕೆಲವರು ನೈಸರ್ಗಿಕವಾಗಿಯೇ ಗುಲಾಬಿ ಬಣ್ಣದ ತುಟಿಗಳನ್ನು ಪಡೆದಿದ್ದು ಕೆಲವರು ಕೊಂಚ ಗಾಢವರ್ಣದ ತುಟಿಗಳನ್ನು ಪಡೆದಿರುತ್ತಾರೆ.

ಉಳಿದವಲ್ಲಿ ನೈಸರ್ಗಿಕವಾಗಿ ಗುಲಾಬಿ ವರ್ಣ ಪಡೆದಿದ್ದರೂ ಕೆಲವಾರು ಕಾರಣಗಳಿಂದ ಇವು ಕೊಂಚ ಸಮಯದ ಬಳಿಕ ಕಪ್ಪು ವರ್ಣಕ್ಕೆ ಬದಲಾಗಿರುತ್ತವೆ. ಈ ವ್ಯಕ್ತಿಗಳಿಗೆ ಸಂತೋಷದ ವಿಷಯವೆಂದರೆ ಕೊಂಚ ಆರೈಕೆಯ ಮೂಲಕ ಇವರು ತಮ್ಮ ತುಟಿಗಳ ಮೂಲ ವರ್ಣವನ್ನು ಮತ್ತೊಮ್ಮೆ ಪಡೆಯಬಹುದು.

ತುಟಿಗಳ ಆರೈಕೆಯನ್ನು ಸರಿಯಾಗಿ ಮಾಡುತ್ತಿದ್ದೀರಿ ತಾನೇ?

ಇದಕ್ಕಾಗಿ ದೂರವೇನೂ ಹೋಗಬೇಕಾಗಿಲ್ಲ. ಬದಲಿಗೆ ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳೇ ಸಾಕು. ಅಷ್ಟೇ ಅಲ್ಲ, ಇವು ಅಗ್ಗವೂ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುವೂ ಆಗಿರುವ ಕಾರಣ ಎರಡನೇ ಬಾರಿ ಯೋಚಿಸಬೇಕಾಗಿಲ್ಲ. ಬನ್ನಿ, ನೈಸರ್ಗಿಕ ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಇಂದಿನ ಲೇಖನದಲ್ಲಿ ವಿವರಿಸಿರುವ ಸೂಕ್ತ ವಿಧಾನವನ್ನು ಅನುಸರಿಸಿ ಹಿಂದಿನ ಸೌಂದರ್ಯವನ್ನು ಮತ್ತೊಮ್ಮೆ ಪಡೆಯಬಹುದು...

ಬೀಟ್ರೂಟ್ ರಸ ಮತ್ತು ಗ್ಲಿಸರಿನ್

ಬೀಟ್ರೂಟ್ ರಸ ಮತ್ತು ಗ್ಲಿಸರಿನ್

ಒಂದು ತುಂಡು ಬೀಟ್ರೂಟ್ ಅನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಒಂದು ದಿನವಿಡೀ ಫ್ರಿಜ್ಜಿನಲ್ಲಿಟ್ಟು ಗಟ್ಟಿಯಾಗುವಂತೆ ಮಾಡಿ. ಬಳಿಕ ಇದರಲ್ಲಿ ಒಂದು ಚಿಕ್ಕ ಚಮಚದಷ್ಟು ಪ್ರಮಾಣವನ್ನು 1/3 ಚಿಕ್ಕ ಚಮಚದಷ್ಟು ಗ್ಲಿಸರಿನ್ ದ್ರವದಲ್ಲಿ ಮಿಶ್ರಣ ಮಾಡಿ ತುಟಿಗಳಿಗೆ ಲೇಪಿಸಿಕೊಳ್ಳಿ. ಇದರ ಬಣ್ಣ ನಿಮ್ಮ ನಿತ್ಯದ ಲಿಪ್ ಸ್ಟಿಕ್ ಗೆ ಸರಿಸಮನಾಗಿರುವ ಕಾರಣ ನಿತ್ಯದ ಲಿಪ್ ಸ್ಟಿಕ್ ಬದಲಿಗೆ ಹಚ್ಚಿಕೊಂಡು ಹೊರಹೋಗಬಹುದು. ಕೆಲವೇ ದಿನಗಳಲ್ಲಿ ಮೃದು ಹಾಗೂ ಗುಲಾಬಿ ವರ್ಣದ ತುಟಿಗಳು ನಿಮ್ಮದಾಗುತ್ತವೆ.

ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

ಬೆಣ್ಣೆ ಮತ್ತು ಜೇನು

ಬೆಣ್ಣೆ ಮತ್ತು ಜೇನು

½ ಚಿಕ್ಕಚಮಚ ಮೃದುವಾಗಿರುವ ಬೆಣ್ಣೆ ಮತ್ತು ½ ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ಚೆನ್ನಾಗಿ ತೊಳೆದ ಹಾಗೂ ಸತ್ತ ಜೀವಕೋಶಗಳನ್ನು ಕೆರೆದು ನಿವಾರಿಸಿರುವ ತುಟಿಗಳಿಗೆ ಹಚ್ಚಿ. ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೆಲವೇ ವಾರಗಳಲ್ಲಿ ತುಟಿ ಗುಲಾಬಿ ವರ್ಣವನ್ನು ಪಡೆಯಲು ಸಾಧ್ಯವಾಗುತ್ತದೆ. ಬೆಣ್ಣೆ ತುಟಿಗಳಿಗೆ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಜೇನು ಆರ್ದ್ರತೆ ನೀಡುತ್ತದೆ. ಅಲ್ಲದೇ ತುಟಿಗೆ ಆವರಿಸಿರುವ ಯಾವುದೇ ಸೋಂಕನ್ನೂ ಇವು ನಿವಾರಿಸುತ್ತವೆ.

ಲಿಂಬೆ ಮತ್ತು ಜೇನು

ಲಿಂಬೆ ಮತ್ತು ಜೇನು

ಲಿಂಬೆರಸ ಒಂದು ನೈಸರ್ಗಿಕವಾದ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ಇದಕ್ಕಾಗಿ. ½ ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ.

ಆಲಿವ್ ಎಣ್ಣೆ ಮತ್ತು ಸಕ್ಕರೆ

ಆಲಿವ್ ಎಣ್ಣೆ ಮತ್ತು ಸಕ್ಕರೆ

ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಸಕ್ಕರೆ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚಿಕ್ಕ ವೃತ್ತಾಕಾರದಲ್ಲಿ ತುಟಿಗಳಿಗೆ ಹಚ್ಚಿ. ಇದರಿಂದ ತುಟಿಗಳ ಹೊರಪದರದ ಸತ್ತ ಜೀವಕೋಶಗಳನ್ನಿ ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಮೃದುವಾಗುತ್ತವೆ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ.

ಕಾಫಿ ಮತ್ತು ಜೇನು

ಕಾಫಿ ಮತ್ತು ಜೇನು

½ ಚಿಕ್ಕ ಚಮಚ ನುಣ್ಣಗೆ ಪುಡಿಮಾಡಿದ ಕಾಫಿ ಪುಡಿ ಹಾಗೂ ½ ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ತುಟಿಗಳಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಸುಮಾರು ಎರಡು ಮೂರು ನಿಮಿಷ ಮಸಾಜ್ ಮಾಡಿದ ಬಳಿಕ ಸುಮಾರು ಅರ್ಧ ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಆಕರ್ಷಕ ತುಟಿಗೆ ಆರೈಕೆ ಮುಖ್ಯ,ಮೇಕಪ್ ಅಲ್ಲ

English summary

Home remedies to lighten dark lips

Especially for women, it adds on to their beauty. Some people naturally have dark lips by birth and for some, the colour of the lips darken over time due to many factors. However, the good news is that you can still regain your pink lips with easy methods and easily available ingredients at home.
X
Desktop Bottom Promotion