ನಯವಾದ ತುಟಿಗಳಿಗೆ ನೈಸರ್ಗಿಕ ಮನೆಮದ್ದುಗಳು

Posted By: Lekhaka
Subscribe to Boldsky

ಚಳಿಗಾಲ ಬರುತ್ತಾ ಇರುವಂತೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯೆಂದರೆ ಪಾದಗಳು ಮತ್ತು ತುಟಿಗಳು ಒಡೆಯುವುದು ಮತ್ತು ಚರ್ಮ ಸುಕ್ಕಗಟ್ಟಿದಂತೆ ಆಗುವುದು. ಹವಾಮಾನದಲ್ಲಿ ವೈಪರಿತ್ಯವಾಗುವ ಕಾರಣ ದೇಹದಲ್ಲಿ ಈ ರೀತಿಯ ಸಮಸ್ಯೆ ಕಾಣುವುದು ಸಹಜವಾಗಿದೆ. ದೇಹದ ಪ್ರಮುಖ ಭಾಗವಾಗಿರುವಂತಹ ತುಟಿಗಳು ತುಂಬಾ ಸೂಕ್ಷ್ಮ. ಇವುಗಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡದಿದ್ದರೆ ಸಮಸ್ಯೆಗಳು ಕಾಣಿಸುವುದು.

ಅದು ಕೂಡ ಚಳಿಗಾಲದಲ್ಲಿ ತುಟಿಗಳು ಒಡೆಯುವ ಕಾರಣದಿಂದ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಮನೆಮದ್ದುಗಳು ಶೇ.100ರಷ್ಟು ನೈಸರ್ಗಿಕ ಮತ್ತು ಸುರಕ್ಷಿತವಾಗಿ ಬಳಸಬಹುದು ಮತ್ತು ನಿಮಗೆ ಅಗ್ಗವಾಗಿಯೂ ದೊರೆಯುವುದು. ಚಳಿಗಾಲದಲ್ಲೂ ನಿಮಗೆ ಮಗುವಿನಂತಹ ಮೃಧುವಾದ ತುಟಿಗಳನ್ನು ನೀಡುವ ಕೆಲವೊಂದು ಮನೆಮದ್ದುಗಳ ಬಗ್ಗೆ ಬೋಲ್ಡ್ ಸ್ಕೈ ತಿಳಿಸಲಿದೆ. ಇದನ್ನು ನೀವು ಬಳಸಿಕೊಂಡರೆ ತುಂಬಾ ಒಳ್ಳೆಯದು. ಸೂಚನೆ: ಈ ಮನೆಮದ್ದನ್ನು ಬಳಸುವ ಮೊದಲು ಚರ್ಮಕ್ಕೆ ಹಚ್ಚಿ ಅಲರ್ಜಿಯಾಗುವುದೇ ಎಂದು ಪರೀಕ್ಷಿಸಿ...

ತುಪ್ಪ

ತುಪ್ಪ

ನಯವಾದ ತುಟಿಗಳನ್ನು ಪಡೆಯಲು ಹಿಂದಿನಿಂದಲೂ ದೇಶೀಯ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಳ್ಳುತ್ತಾ ಇದ್ದರು. ಇದರಲ್ಲಿ ಇರುವಂತಹ ಮೊಶ್ಚಿರೈಸರ್ ಗುಣಗಳು ಗಡಸು ಮತ್ತು ಒಡೆದ ತುಟಿಗಳ ನಿವಾರಣೆ ಮಾಡುವುದು.

ಬಳಸುವುದು ಹೇಗೆ: ಸ್ವಲ್ಪ ದೇಶಿ ತುಪ್ಪನ್ನು ತುಟಿಗಳಿಗೆ ಹಚ್ಚಿಕೊಂಡು ಹಾಗೆ ಬಿಟ್ಟುಬಿಡಿ. ಇದನ್ನು ದಿನದಲ್ಲಿ ಎರಡು ಸಲ ಬಳಸಿದರೆ ನಯವಾದ ತುಟಿಗಳು ನಿಮ್ಮದಾಗುವುದು.

ಹರಳು ಸಕ್ಕರೆ

ಹರಳು ಸಕ್ಕರೆ

ಸಕ್ಕರೆಯಲ್ಲಿ ಇರುವಂತಹ ಕಿತ್ತುಹಾಕುವ ಗುಣಗಳು ತುಟಿಯಲ್ಲಿ ಇರುವಂತಹ ಸತ್ತ ಚರ್ಮವನ್ನು ಕಿತ್ತುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ತುಟಿಗಳನ್ನು ಮೃದುವಾಗಿಸುವುದು.

ಬಳಸುವ ವಿಧಾನ: ½ ಚಮಚ ಹರಳು ಸಕ್ಕರೆಗೆ ಒಂದು ಚಮಚದಷ್ಟು ರೋಸ್ ವಾಟರ್ ಹಾಕಿ. ಈ ಮಿಶ್ರಣವನ್ನು ತುಟಿಗಳಿಗೆ ಉಜ್ಜಿಕೊಳ್ಳಿ. ಕೆಲವು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ 3-4 ಸಲ ಬಳಸಿದರೆ ತುಟಿಗಳು ಮೃಧುವಾಗುವುದು.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆಯು ತುಂಬಾ ಆರೋಗ್ಯಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಇದರ ಜ್ಯೂಸ್ ನ್ನು ತುಟಿಗಳಿಗೆ ಹಚ್ಚಿಕೊಂಡಾಗ ಅದು ತುಟಿಗಳಿಗೆ ಮೊಶ್ಚಿರೈಸರ್ ಮತ್ತು ಕಂಡೀಷನರ್ ಆಗಿ ಕೆಲಸ ಮಾಡುವುದು. ಇದು ತುಟಿಯ ವಿನ್ಯಾಸ ಉತ್ತಮಪಡಿಸುವುದರೊಂದಿಗೆ ನೈಸರ್ಗಿಕವಾಗಿ ತುಟಿಯನ್ನು ಗುಲಾಬಿಯಾಗಿಸುವುದು. ಬಳಸುವ ವಿಧಾನ: ದಾಳಿಂಬೆ ಜ್ಯೂಸ್ ನಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಂಡು ಅದನ್ನು ತುಟಿಗಳಿಗೆ ಹಚ್ಚಿ. ಅರ್ಧ ಗಂಟೆ ಕಾಲ ಇದನ್ನು ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ ಒಂದು ಸಲ ಬಳಸಿಕೊಂಡರೆ ಸುಂದರ ತುಟಿಗಳು ನಿಮ್ಮದಾಗುವುದು.

ತಣ್ಣಗಿನ ಹಾಲು

ತಣ್ಣಗಿನ ಹಾಲು

ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ತುಟಿಯನ್ನು ಮೃಧು ಹಾಗೂ ಸುಂದರವಾಗಿಸುವುದು. ತುಟಿಗಳು ಗಡುಸಾಗದಂತೆ ತಡೆಯಲು ನೀವು ವರ್ಷಪೂರ್ತಿ ಇದನ್ನು ಬಳಸಬಹುದು. ಬಳಸುವ ವಿಧಾನ: ತಣ್ಣಗಿನ ಹಾಲನ್ನು ತುಟಿಗಳಿಗೆ ಸರಿಯಾಗಿ ಉಜ್ಜಿಕೊಳ್ಳಿ. 15 ನಿಮಿಷ ಕಾಲ ಇದು ಹಾಗೆ ಇರಲಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ಗಡುಸಾಗಿರುವ ತುಟಿಗಳಿಗೆ ದಿನದಲ್ಲಿ ಎರಡು ಸಲ ಇದನ್ನು ಬಳಸಬಹುದು.

ಬೀಟ್ ರೂಟ್

ಬೀಟ್ ರೂಟ್

ತುಟಿಗಳ ಆರೈಕೆ ಮಾಡುವಂತಹ ನೈಸರ್ಗಿಕ ಸಾಮಗ್ರಿಗಳಲ್ಲಿ ಬೀಟ್ ರೂಟ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಗಡಸು ತುಟಿಗಳಿಗೆ ಇದು ತುಂಬಾ ಉಪಯುಕ್ತ. ಬಳಸುವುದು ಹೇಗೆ: ಒಂದು ತುಂಡು ಬೀಟ್ ರೂಟ್ ಕತ್ತರಿಸಿಕೊಂಡು ಅದನ್ನು ತುಟಿಗಳಿಗೆ ಉಜ್ಜಿಕೊಳ್ಳಿ. ಕೆಲವು ನಿಮಿಷ ಕಾಲ ಹೀಗೆ ಮಾಡಿ ಬಳಿಕ ನೀರಿನಿಂದ ತೊಳೆಯಿರಿ. ನಯವಾದ ತುಟಿಗಳನ್ನು ಪಡೆಯಬೇಕೆಂದು ಬಯಸಿದರೆ ನೀವು ದಿನದಲ್ಲಿ 2-3 ಸಲ ಇದನ್ನು ಬಳಸಬೇಕು.

ಜೇನುತುಪ್ಪ

ಜೇನುತುಪ್ಪ

ನೈಸರ್ಗಿಕ ಮಾಯಿಶ್ಚರೈಸರ್ ಆಗಿರುವಂತಹ ಜೇನುತುಪ್ಪವು ಗಡುಸಾಗಿರುವ ತುಟಿಗಳಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಚರ್ಮವನ್ನು ಮೃಧುಗೊಳಿಸುವ ಆ್ಯಂಟಿಆಕ್ಸಿಡೆಂಟ್ ಗಡಸು ತುಟಿಗಳ ಸಮಸ್ಯೆಯನ್ನು ಬೇಗನೆ ನಿವಾರಿಸುವಂತೆ ಮಾಡುವುದು. ಬಳಸುವುದು ಹೇಗೆ: ಸ್ವಲ್ಪ ಜೇನುತುಪ್ಪ ತೆಗೆದುಕೊಂಡು ಅದನ್ನು ತುಟಿಗಳಿಗೆ ಸರಿಯಾಗಿ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ನೀವು ಇದನ್ನು ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಬಳಿಕ ತುಟಿಯ ಮಲಾಮ್ ಹಚ್ಚಿಕೊಳ್ಳಿ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ತುಟಿಯನ್ನು ನಯಗೊಳಿಸುವಂತಹ ಮತ್ತೊಂದು ನೈಸರ್ಗಿಕ ಸಾಮಗ್ರಿಯೆಂದರೆ ಅದು ಬಾದಾಮಿ ಎಣ್ಣೆ. ಈ ನೈಸರ್ಗಿಕ ಎಣ್ಣೆಯನ್ನು ಪ್ರತಿನಿತ್ಯ ಬಳಸುವುದರಿಂದ ಗಡಸು ತುಟಿಗಳ ಸಮಸ್ಯೆ ನಿವಾರಣೆಯಾಗುವುದು.ಬಳಸುವುದು ಹೇಗೆ: 3-4 ಹನಿ ಬಾದಾಮಿ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಟ್ಟುಬಿಡಿ. ಮರುದಿನ ಬೆಳಗ್ಗೆ ಅದನ್ನು ತೊಳೆಯಿರಿ. ಮಗುವಿನಂತಹ ಮೃದುವಾದ ತುಟಿಗಳು ನಿಮ್ಮದಾಗುವುದು.

ಆಲಿವ್ ತೈಲ

ಆಲಿವ್ ತೈಲ

ಗಡುಸಾದ ತುಟಿಗಳ ಸಮಸ್ಯೆಗೆ ಆಲಿವ್ ತೈಲವು ತುಂಬಾ ಪರಿಣಾಮಕಾರಿ ಎಂದು ಈಗಾಗಲೇ ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. ಈ ನೈಸರ್ಗಿಕ ಮಾಯಿಶ್ಚರೈಸರ್ ಮಾರುಕಟ್ಟೆಯಲ್ಲಿ ಸಿಗುವ ಮಲಾಮ್ ಗಳಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಬಳಸುವ ವಿಧಾನ: ಅಂಗೈ ಮೇಲೆ ಆಲಿವ್ ತೈಲವನ್ನು ಸ್ವಲ್ಪ ಹಾಕಿಕೊಂಡ ಬಳಿಕ ಬೆರಳಿನಿಂದ ಅದನ್ನು ತುಟಿಗಳಿಗೆ ಹಚ್ಚಿ. ದಿನದಲ್ಲಿ 3-4 ಸಲ ಬಳಸಿದರೆ ಅದರಿಂದ ಹೆಚ್ಚಿನ ಫಲಿತಾಂಶ ಪಡೆಯಬಹುದು.

 ಅಲೋವೆರಾ ಲೋಳೆ

ಅಲೋವೆರಾ ಲೋಳೆ

ತುಟಿಗಳನ್ನು ನೈಸರ್ಗಿಕವಾಗಿ ಮಧುಗೊಳಿಸುವಂತಹ ಸಾಮಗ್ರಿಗಳಲ್ಲಿ ಅಲೋವೆರಾ ಲೋಳೆಯು ಒಂದು. ಅಲೋವೆರಾ ಲೋಳೆ ಬಳಸಿಕೊಂಡರೆ ಅದರಿಂದ ತುಟಿಗಳ ವಿನ್ಯಾಸವು ಸಂಪೂರ್ಣವಾಗಿ ಬದಲಾಗುವುದು. ಇದು ತುಟಿಗಳನ್ನು ಮೃಧುಗೊಳಿಸುವುದು ಮಾತ್ರವಲ್ಲದೆ ತುಟಿಗಳು ಕಪ್ಪಗೆ ಆಗುವುದನ್ನು ತಡೆಯುವುದು. ಬಳಸುವ ವಿಧಾನ: ಅಲೋವೆರಾ ಎಲೆಯಿಂದ ಲೋಳೆ ತೆಗೆದುಕೊಂಡು ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಅರ್ಧಗಂಟೆ ಕಾಲ ಇದು ಹಾಗೆ ಒಣಗಲಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

English summary

Get Baby-Soft Lips By Using These Home Remedies

Drop in temperature can take a serious toll on the health and appearance of your lips. It can leave your lips looking chapped and rough. As the skin on your lips is delicate, ignoring the above-mentioned problems can only worsen the state of your lips. That is why, you should treat this beauty problem on an immediate basis and the best way to do that would be by using home remedies.
Please Wait while comments are loading...
Subscribe Newsletter