ಇದು ತುಟಿಯ ಅಂದ-ಚೆಂದ ಹೆಚ್ಚಿಸುವ ನೈಸರ್ಗಿಕ ರೆಸಿಪಿ!

Posted By: Deepak M
Subscribe to Boldsky

ಈಗ ನಮ್ಮ ಕಾಲವು ಸೆಲ್ಫಿ ಜಮಾನದಲ್ಲಿ ಬದುಕುತ್ತಿರುವ ಬದುಕಾಗಿದೆ. ಮಾತಿಗಿಂತ ನಾವು ಮೊಬೈಲ್‌ನಲ್ಲಿ ಸೆಲ್ಫಿ ಕಳುಹಿಸುವುದರಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದೇವೆ. ಅದಕ್ಕಾಗಿ ನಮ್ಮನ್ನೆ ನಾವು ಗುರಿಯಾಗಿಸಿಕೊಂಡು ಯಾವಾಗಲೂ ಫೋಟೋಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ.

ಫೋಟೋ ತೆಗೆದುಕೊಳ್ಳುವಾಗ ತುಟಿಯನ್ನು ವೃತ್ತಾಕಾರವಾಗಿ ಊಮ್...ಎನ್ನುವುದು ವಾಡಿಕೆ. ಇದರಿಂದ ತುಟಿಗಳು ಫೋಟೋಗಳಲ್ಲಿ ಎದ್ದು ಕಾಣುತ್ತವೆ. ಆದರೆ ಸೆಲ್ಫಿಯಲ್ಲಿ ಆ ನಿಮ್ಮ ತುಟಿಗಳು ದಪ್ಪಗಿಲ್ಲ ಎಂದು ನಿಮಗೆ ಮುಜುಗರವನ್ನುಂಟು ಮಾಡುತ್ತಿದ್ದಲ್ಲಿ ನಿಮಗಾಗಿ ನಾವು ಕೆಲವೊಂದು ರೆಸಿಪಿಗಳ ಕುರಿತು ತಿಳಿಸಿ ಕೊಡುತ್ತಿದ್ದೇವೆ. ಇದನ್ನು ಪ್ರಯತ್ನಿಸಿ ನೋಡಿ ನಿಮ್ಮ ತುಟಿಯು ಮತ್ತೆ ಸೌಂದರ್ಯದಿಂದ ಕಂಗೊಳಿಸುತ್ತದೆ. 

ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

ಕೆಲವರು ಈ ಸಮಸ್ಯೆಯಿಂದ ಹೊರ ಬರಲು ಲಿಪ್ ಫಿಲ್ಟರ್‌ಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ಮನೆಯಲ್ಲಿಯೇ ಇದಕ್ಕೆ ಮದ್ದನ್ನು ಹುಡುಕಿಕೊಳ್ಳುತ್ತಾರೆ. ಜನ ಸಣ್ಣ ತುಟಿಗಳನ್ನು ಸಮಸ್ಯೆಯಾಗಿ ಕಾಣುತ್ತಾರೆ ಏಕೆಂದರೆ ದಪ್ಪ ತುಟಿಗಳು ಅಂದರೆ ಪ್ಲಂಪ್ ತುಟಿಗಳು ಈಗ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಅದೇ ಈಗ ಫ್ಯಾಷನ್ ಆಗಿ ಬಿಂಬಿಸಲ್ಪಡುತ್ತಿವೆ.

ದಪ್ಪನಾದ ತಿಳಿಗುಲಾಬಿ ಬಣ್ಣದ ತುಟಿಗಳು ನಿಮ್ಮ ಆತ್ಮವಿಶ್ವಾಸ ಹಾಗು ನಿಮ್ಮ ಸೌಂದರ್ಯ ಎರಡನ್ನೂ ಸಹ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ನಿಮ್ಮ ತುಟಿಗಳನ್ನು ದಪ್ಪಗೆ ಮಾಡುವ ಹಲವಾರು ಮನೆ ಮದ್ದುಗಳು ಇವೆ. 

ಚಳಿ-ಮಳೆ ಕಾಲದಲ್ಲಿ ತುಟಿಗಳ ಅಂದ ಕಾಪಾಡುವುದು ಹೇಗೆ?

ಇವುಗಳನ್ನು ಪ್ರತಿನಿತ್ಯ ಬಳಸಿ ನಿಮ್ಮ ತುಟಿಯನ್ನು ಮತ್ತೆ ಸೌಂದರ್ಯದಿಂದ ಕಂಗೊಳಿಸುವಂತೆ ಮಾಡಿ. ಇವುಗಳನ್ನು ಮೊದಲು ನೇರವಾಗಿ ತ್ವಚೆಯ ಮೇಲೆ ಪ್ರಯೋಗಿಸುವ ಬದಲಿಗೆ ತ್ವಚೆಯ ಒಂದು ಸಣ್ಣ ಪ್ಯಾಚ್ ಮೇಲೆ ಪ್ರಯೋಗಿಸಿ. ಯಶಸ್ವಿಯಾದರೆ ಮುಂದುವರಿಸಿ. ಬನ್ನಿ ಆ ಮನೆ ಮದ್ದುಗಳು ಯಾವುವು ಎಂದು ಒಮ್ಮೆ ನೋಡೋಣ... 

ಚಕ್ಕೆ ಮತ್ತು ಆಲೀವ್ ಎಣ್ಣೆಯ ಲಿಪ್ ಸ್ಕ್ರಬ್

ಚಕ್ಕೆ ಮತ್ತು ಆಲೀವ್ ಎಣ್ಣೆಯ ಲಿಪ್ ಸ್ಕ್ರಬ್

ಚಕ್ಕೆ ಮತ್ತು ಆಲೀವ್ ಎಣ್ಣೆಯ ಲಿಪ್ ಸ್ಕ್ರಬ್ ಅನ್ನು ಬಳಸಿ ನಿಮ್ಮ ತ್ವಚೆಗೆ ರಕ್ತ ಸಂಚಾರವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ತುಟಿಗೆ ಪ್ಲಂಪ್ ಎಫೆಕ್ಟ್ ಬರುತ್ತದೆ. ಆಲೀವ್ ಎಣ್ಣೆಯು ತುಟಿಗಳಿಗೆ ದೀರ್ಘಕಾಲ ಪೋಷಕಾಂಶವನ್ನು ಒದಗಿಸುತ್ತವೆ. ಇದಕ್ಕಾಗಿ ಒಂದು ಚಮಚ ಆಲೀವ್ ಎಣ್ಣೆಯನ್ನು ಒಂದು ಚಮಚ ಚಕ್ಕೆ ಪುಡಿಯ ಜೊತೆಗೆ ಬೆರೆಸಿಕೊಳ್ಳಿ. ಇದೀಗ ಅದಕ್ಕೆ ಒಂದು ಚಮಚ ಸಮುದ್ರದ ಉಪ್ಪನ್ನು ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ಹಾಕಿ ಸ್ವಲ್ಪ ಸಮಯ ಸ್ಕ್ರಬ್ ಮಾಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

ಪೆಪ್ಪರ್‌ಮಿಂಟ್ ಮತ್ತು ಆಲೀವ್ ಎಣ್ಣೆಯ ಲಿಪ್ ಮಾಸ್ಕ್

ಪೆಪ್ಪರ್‌ಮಿಂಟ್ ಮತ್ತು ಆಲೀವ್ ಎಣ್ಣೆಯ ಲಿಪ್ ಮಾಸ್ಕ್

½ ಚಮಚ ಶುಂಠಿ ಪುಡಿ, ½ ಚಮಚ ಕಯೆನ್ನೆ ಪುಡಿ, ½ ಚಮಚ ಚಕ್ಕೆ ಪುಡಿ ಮತ್ತು ½ ಚಮಚ ಪೆಪ್ಪರ್‌ಮೆಂಟ್ ಆಯಿಲ್ ಅನ್ನು ತೆಗೆದುಕೊಳ್ಳಿ. ಇವುಗಳನ್ನು ಒಟ್ಟಿಗೆ ಹಾಕಿ ಬೆರೆಸಿ, ಅದರ ಮೇಲೆ ಒಂದು ಚಮಚ ಆಲೀವ್ ಎಣ್ಣೆಯನ್ನು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದೀಗ ಈ ಮಾಸ್ಕ್ ಅನ್ನು ತುಟಿಯ ಮೇಲೆ ಲೇಪಿಸಿ ಸ್ವಲ್ಪ ಹೊತ್ತು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈ ಮಾಸ್ಕ್ ನಿಮ್ಮ ತುಟಿಗಳಿಗೆ ಬೇಕಾದ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ಆ ಮೂಲಕ ದಪ್ಪತನವನ್ನು ನೀಡುತ್ತದೆ. ಒಂದು ವೇಳೆ ನೀವು ಈ ಮೇಲಿನ ಯಾವುದಾದರೂ ಒಂದು ಪದಾರ್ಥಕ್ಕೆ ಅಲರ್ಜಿಯನ್ನು ವ್ಯಕ್ತಪಡಿಸುತ್ತಿದ್ದಲ್ಲಿ, ಆ ಪದಾರ್ಥವನ್ನು ರೆಸಿಪಿಯಿಂದ ತೆಗೆದುಬಿಡಿ.

ಸರಳವಾದ ಸಕ್ಕರೆಯ ಸ್ಕ್ರಬ್

ಸರಳವಾದ ಸಕ್ಕರೆಯ ಸ್ಕ್ರಬ್

ಸಕ್ಕರೆಯ ಸ್ಕ್ರಬ್ ನಿಮ್ಮ ತುಟಿಯಲಿರುವ ನಿರ್ಜೀವ ಕೋಶಗಳನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ತುಟಿಗಳನ್ನು ದಪ್ಪಗೆ ಹಾಗು ಆರೋಗ್ಯಕರವನ್ನಾಗಿ ಸಹ ಮಾಡುತ್ತದೆ. ಇದನ್ನು ತಯಾರಿಸಲು ಒಂದು ಚಮಚ ಸಕ್ಕರೆಯನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ. ಈಗ ಈ ಮಿಶ್ರಣವನ್ನು ನಿಮ್ಮ ತುಟಿಗಳ ಮೇಲೆ ಲೇಪಿಸಿ ಮತ್ತು ಇದನ್ನು ಸ್ಕ್ರಬ್ ಮಾಡಲು ನಿಮ್ಮ್ ಟೂಥ್‌ಪೇಸ್ಟ್ ಬಳಸಿ. ಈ ವಿಧಾನವು ನಿಮಗೆ ಪ್ಲಂಪ್ ಆಗಿರುವ ತುಟಿಗಳನ್ನಷ್ಟೇ ಅಲ್ಲದೆ ತುಟಿಯಲ್ಲಿರುವ ನಿರ್ಜೀವ ಕೋಶಗಳನ್ನು ತೆಗೆದು ಹಾಕುತ್ತದೆ.

ಚಾಕೊಲೇಟ್ ಲಿಪ್ ಸ್ಕ್ರಬ್

ಚಾಕೊಲೇಟ್ ಲಿಪ್ ಸ್ಕ್ರಬ್

ಚಾಕೊಲೇಟ್ ಪ್ರಿಯ ಮಹಿಳೆಯರಿಗೆ ಈ ಸ್ಕ್ರಬ್ ಉತ್ತಮ. ಈ ಸ್ಕ್ರಬ್ ಮೃದುವಾದ ತ್ವಚೆಗಳಿಗೆ ಒಳ್ಳೆಯದು. ಜೊತೆಗೆ ಬಾಯಿಯಲ್ಲಿ ನೀರೂರಿಸುವ ಸಾಮರ್ಥ್ಯ ಸಹ ಇದಕ್ಕಿದೆ. ಸ್ವಾಭಾವಿಕವಾದ ಲಿಪ್ ಪ್ಲಂಪರ್ ಅನ್ನು ತಯಾರಿಸಲು ಎರಡು ಚಮಚ ಕೊಕೊ ಪುಡಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಆಲೀವ್ ಎಣ್ಣೆಯನ್ನು ಸೇರಿಸಿ. ನಂತರ ಇದಕ್ಕೆ ಒಂದು ಚಮಚ ಜೇನು ತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಮತ್ತು ತುಟಿಯ ಸ್ಕ್ರಬ್‌ ಮಾಡಿಕೊಂಡು ತುಟಿಗೆ ಲೇಪಿಸಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ.

ಶುಂಠಿ ಸ್ಕ್ರಬ್

ಶುಂಠಿ ಸ್ಕ್ರಬ್

ಎರಡು ಚಮಚ ತೆಂಗಿನ ಎಣ್ಣೆ ಮತ್ತು ಎರಡು ಚಮಚ ಬ್ರೌನ್ ಶುಗರ್ ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಮೊಲಸ್ಸೆಸ್ ಹಾಗು ಒಂದು ಚಮಚ ಶುಂಠಿ ಪೌಡರ್ ಸಹ ಬೆರೆಸಿ. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ ಕೊನೆಗೆ ½ ಚಮಚ ಚಕ್ಕೆ ಪುಡಿ ಮತ್ತು ನಟ್‌ಮೆಗ್ ಪುಡಿಯನ್ನು ಬೆರೆಸಿ. ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿ ಒಂದ್ ಪೇಸ್ಟ್ ತಯಾರಿಸಿಕೊಂಡು ಅದನ್ನು ತುಟಿಯ ಮೇಲೆ ಲೇಪಿಸಿ. ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ.

ತುಟಿಯ ಸೌಂದರ್ಯವನ್ನು ಹೆಚ್ಚಿಸುವ ಶುಂಠಿ ಲಿಪ್ ಸ್ಕ್ರಬ್!

 

For Quick Alerts
ALLOW NOTIFICATIONS
For Daily Alerts

    English summary

    DIY Recipes That Will Help To Give You Plump Lips

    This is the age where selfies do all the talking. And for that, a luscious pout is what one aims at having. If you are the one who's loking for remedies to get plump lips, we have the right recipes for you. Some people opt for lip filters, while others opt for using homemade recipes. Plump lips are the recent talk of the town that can help one to enhance their facial features and also make a person look impressive. Plump, pink lips can somehow help you be confident of your looks as well.
    Story first published: Monday, June 19, 2017, 7:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more