ಬ್ಯೂಟಿ ಟಿಪ್ಸ್: ಕಾಫಿ-ಸಕ್ಕರೆ ಬೆರೆಸಿ ಮಾಡಿದ 'ಬಾಡಿ ಸ್ಕ್ರಬ್'!

By: Arshad
Subscribe to Boldsky

ಕಾಫಿ ಕುಡಿಯಲು ಮಾತ್ರವಲ್ಲ ತ್ವಚೆಗೆ ಹಚ್ಚಿಕೊಂಡಾಗ ಸೌಂದರ್ಯವರ್ಧಕವೂ ಹೌದು. ಕಾಫಿ ಆಂಟಿಆಕ್ಸಿಡೆಂಟುಗಳ ಆಗರವೂ ಆಗಿರುವ ಕಾರಣ ಚರ್ಮದ ಕಾಂತಿ ಮತ್ತು ಕೂದಲ ದೃಢತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರೊಂದಿಗೆ ಕೊಂಚ ಸಕ್ಕರೆಯನ್ನು ಬೆರೆಸಿದರೆ ಇದೊಂದು ಅತ್ಯುತ್ತಮವಾದ ಸ್ಕ್ರಬ್ (scrub) ಆಗಿ ಮಾರ್ಪಾಡಾಗುತ್ತದೆ.  

ಇದು ಚರ್ಮದಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ಸುಲಭವಾಗಿ ನಿವಾರಿಸಲು ಸಮರ್ಥವಾಗಿದ್ದು ನಿತ್ಯದ ಬಳಕೆಯಿಂದ ಕಾಂತಿಯುಕ್ತ ಹಾಗೂ ಕಲೆರಹಿತ ತ್ವಚೆ ಪಡೆಯಲು ನೆರವಾಗುತ್ತದೆ. ಹೊಳಪಿನ ಮೈಗಾಗಿ ಕಾಫಿ ಬಾಡಿ ಸ್ಕ್ರಬ್

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಸ್ಕ್ರಬ್‌ಗಳು ಲಭ್ಯವಿದ್ದರೂ ಇದಕ್ಕಿಂತಲೂ ಸಮರ್ಥವಾದ ಹಾಗೂ ಅಗ್ಗವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಈ ಸ್ಕ್ರಬ್ ಅನ್ನು ನೀವೇಕೆ ಪ್ರಯತ್ನಿಸಬಾರದು? ನಿಮ್ಮ ಉತ್ತರ ಹೌದು ಎಂದಾದಲ್ಲಿ ಇದನ್ನು ತಯಾರಿಸುವ ಬಗೆಯನ್ನು ಕೆಳಗೆ ನೀಡಲಾಗಿದೆ....   

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಕಾಫಿಪುಡಿ - ಮೂರು ಚಮಚ (ಸಾಮಾನ್ಯ ಕಾಫಿ ಪುಡಿ ಸಾಕು, ಫಿಲ್ಟರ್ ಕಾಫಿ ಬೇಡ)

*ಒಂದು ಚಮಚ ಎಪ್ಸಂ ಉಪ್ಪು (Epsom salt)

*ಎರಡು ಚಮಚ ಓಟ್ಸ್ ಪುಡಿ

*ಎರಡು ಚಮಚ ಸಕ್ಕರೆ

*ಒಂದು ಚಮಚ ಅರಿಶಿನ ಪುಡಿ

ತಯಾರಿಕಾ ವಿಧಾನ:

ತಯಾರಿಕಾ ವಿಧಾನ:

*ಮೊದಲು ಒಂದು ಬೋಗುಣಿಯಲ್ಲಿ ಕಾಫಿ ಪುಡಿ ಹಾಕಿ

*ಇದಕ್ಕೆ ಸಕ್ಕರೆ ಸೇರಿಸಿ

*ಬಳಿಕ ಎಪ್ಸಂ ಉಪ್ಪು ಬೆರೆಸಿ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ನಂತರ ಅರಿಶಿನ ಪುಡಿ ಬೆರೆಸಿ ಮಿಶ್ರಣ ಮಾಡಿ.

*ನಂತರ ಅಗತ್ಯವಿದ್ದಷ್ಟು ನೀರು ಹಾಕಿ ಚಮಚದಿಂದ ಚರ್ಮಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿರುವಂತೆ ಕಲಕಿ.

*ಈ ಲೇಪನದಲ್ಲಿ ಎಲ್ಲಿಯೂ ಗಂಟುಗಳಿಲ್ಲದಿರುವಂತೆ ಕಲಸಿ, ಬಳಿಕ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ ನಿತ್ಯದ ಬಳಕೆಗಾಗಿ ಶೇಖರಿಸಿ. ವಾವ್! ದೇಹಕ್ಕೆ ಸ್ಕ್ರಬ್ ಮನೆಯಲ್ಲಿಯೆ ಮಾಡಬಹುದು

ಓಟ್ಸ್‌ನ ಪ್ರಯೋಜನಗಳು

ಓಟ್ಸ್‌ನ ಪ್ರಯೋಜನಗಳು

ಇದು ಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ಸುಲಭವಾಗಿ ನಿವಾರಿಸುವಂತೆ ಮಾಡುತ್ತದೆ...ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಗಾತ್ರವನ್ನು ಚಿಕ್ಕದಾಗಿಸಿ ಇಲ್ಲಿ ಕೊಳೆ ತುಂಬಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕಾಫಿಯ ಪ್ರಯೋಜನಗಳು

ಕಾಫಿಯ ಪ್ರಯೋಜನಗಳು

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಕಾಂತಿ ಹೆಚ್ಚಿಸಲು ಮತ್ತು ತೇಜೋಮಯವಾಗಿಸಲು ನೆರವಾಗುತ್ತವೆ. ಕಾಫಿಯನ್ನು ಚರ್ಮದ ಮೇಲೆ ಬಳಸಿದಾಗ, ವಿಶೇಷವಾಗಿ ನಿದ್ದೆಯ ಕೊರತೆಯಿಂದ ಕಣ್ಣುಗಳ ಕೆಳಗಿನ ಕಪ್ಪು ವರ್ತುಲದ ಮೇಲೆ ಉಪಯೋಗಿಸಿದಾಗ ಕಪ್ಪುಕಲೆ ಮಾಯವಾಗುತ್ತದೆ.

ಚರ್ಮದ ಮೇಲೆ ಸಕ್ಕರೆಯ ಪರಿಣಾಮಗಳು

ಚರ್ಮದ ಮೇಲೆ ಸಕ್ಕರೆಯ ಪರಿಣಾಮಗಳು

ಸಕ್ಕರೆಯಿಂದ ಚರ್ಮದ ಸತ್ತ ಜೀವಕೋಶಗಳು ಸಡಿಲಗೊಂಡು ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಚರ್ಮದ ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಲು ಅತ್ಯುತ್ತಮವಾಗಿದೆ.

ಚರ್ಮಕ್ಕೆ ಅರಿಶಿನದ ಪ್ರಯೋಜನಗಳು

ಚರ್ಮಕ್ಕೆ ಅರಿಶಿನದ ಪ್ರಯೋಜನಗಳು

ಇದರ ಉರಿಯೂತ ನಿವಾರಕ ಗುಣದಿಂದಾಗಿ ಇದರ ಪೋಷಕಾಂಶಗಳು ಚರ್ಮದ ಆಳದಲ್ಲಿ ಇಳಿದು ಮೊಡವೆಗೆ ಕಾರಣವಾಗುವ ಸೋಂಕನ್ನು ನಿವಾರಿಸುತ್ತವೆ ಹಾಗೂ ಈ ಮೂಲಕ ಉಂಟಾಗಬಹುದಾಗಿದ್ದ ಮೊಡವೆಗಳನ್ನು ಇಲ್ಲವಾಗಿಸುತ್ತವೆ. ಅಲ್ಲದೇ ಅರಿಶಿನ ಚರ್ಮದ ಬಣ್ಣವನ್ನು ಬಿಳಿಚಿಸಿ ನೈಸರ್ಗಿಕವಾಗಿ ಸಹಜವರ್ಣ ಪಡೆಯಲು ನೆರವಾಗುತ್ತದೆ.ತ್ವಚೆಯ ಕೋಮಲತೆಗೆ 'ಅರಿಶಿನ' ಫೇಸ್ ಸ್ಕ್ರಬ್

 
English summary

DIY: Coffee And Sugar Body Scrub

Coffee is good for the skin when applied on to it; its good source of antioxidants helps to keep your skin glowing and hair healthy. This coffee and sugar scrub helps to benefit your skin in several ways. Incorporating coffee in your daily skin care routine can help to give you smooth and an even toned skin. Well, if you are looking for an excellent homemade scrub, here is a short recipe that you could try at home.
Please Wait while comments are loading...
Subscribe Newsletter