ಉಗುರಿನ ಬಣ್ಣ ಹಳದಿ ಆಗಿ ಬಿಟ್ಟಿದೆಯೇ? ಇಲ್ಲಿದೆ ನೋಡಿ ಸರಳ ಟಿಪ್ಸ್

By: Deepak M
Subscribe to Boldsky

ಹೆಂಗಸರು ಅಲಂಕಾರ ಪ್ರಿಯರು. ಅವರಿಗೆ ಅಡಿಯಿಂದ ಮುಡಿಯವರೆಗೆ ಶೃಂಗಾರ ಮಾಡಿಕೊಳ್ಳಬೇಕೆಂಬ ಹಂಬಲ ಇರುವುದು ಸಹಜ. ಕಾಲು ಮತ್ತು ಕೈಬೆರಳುಗಳಲ್ಲಿ ಸಹ ಅವರು ಸೌಂದರ್ಯವನ್ನು ನೋಡುತ್ತಾರೆ. ಅದಕ್ಕಾಗಿ ಅವರು ಮೆನಿಕ್ಯೂರ್ ಇತ್ಯಾದಿ ಮಾಡಿಸಿಕೊಳ್ಳುತ್ತಾರೆ ಹಾಗು ತಾವು ತೊಡುವ ಬಟ್ಟೆಗಳಿಗೆ ತಕ್ಕಂತೆ ನೇಲ್ ಪಾಲಿಶ್ ಮಾಡಿಕೊಳ್ಳುತ್ತಾರೆ. ಮೆನಿಕ್ಯೂರ್ ಅನ್ನು ಸರಿಯಾಗಿ ಮಾಡಿಕೊಂಡಾಗ ಅದು ಉಗುರಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಆದರೆ ಯಾವುದನ್ನೇ ಆಗಲಿ ಮಿತಿಗಿಂತ ಹೆಚ್ಚಾಗಿ ಮಾಡಿಕೊಂಡಾಗ ಒಳ್ಳೆಯದಲ್ಲ. ಅದು ನೇಲ್ ಪಾಲಿಶ್ ಮತ್ತು ನೇಲ್ ಪಾಲಿಶ್ ರಿಮೂವರ್‌ಗೆ ಅನ್ವಯಿಸುತ್ತವೆ. ಇವುಗಳ ಪದೇ ಪದೇ ಬಳಕೆಯಿಂದಾಗಿ ಉಗುರುಗಳು ನೋಡಲು ಸತ್ವಹೀನವಾಗಬಹುದು, ಮುರಿದು ಹೋಗಬಹುದು ಮತ್ತು ಹಳದಿ ಬಣ್ಣಕ್ಕೆ ತಿರುಗಬಹುದು.

ಹಳದಿ ಬಣ್ಣದ ಉಗುರುಗಳು ನಿಜಕ್ಕೂ ಸಮಸ್ಯೆಯೇ ಅಲ್ಲ. ಆದರೆ ನೀವು ಪಾಲಿಶ್ ಇಲ್ಲದೆ ಮೆನಿಕ್ಯೂರ್ ಲುಕ್‌ನಲ್ಲಿಯೇ ಹೊರಗೆ ಹೋಗಬೇಕೆಂದರೆ ಹಳದಿ ಬಣ್ಣದ ಈ ಉಗುರು ನಿಮಗೆ ಮುಜುಗರವನ್ನುಂಟು ಮಾಡಿಬಿಡುತ್ತದೆ. ಈ ಮುಜುಗರವನ್ನು ತಪ್ಪಿಸಲು ನಾವು ನಿಮಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ಮನೆಯಲ್ಲಿಯೇ ದೊರೆಯುವ ಅಂಶಗಳನ್ನು ಒಳಗೊಂಡಿರುತ್ತವೆ. ಬನ್ನಿ ಅವು ಯವುವು ಎಂದು ನೋಡೋಣ...  

Tooth paste

ಟೂಥ್‌ಪೇಸ್ಟ್ ಬಳಸಿ ಉಗುರನ್ನು ಬೆಳ್ಳಗೆ ಮಾಡುವುದು:

ಇದು ಒಂದು ಸುಲಭವಾದ ವಿಧಾನವಾಗಿರುತ್ತದೆ. ಇದಕ್ಕೆ ಬೇಕಾಗಿರುವ ಪದಾರ್ಥಗಳ ಪಟ್ಟಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

*ಬಿಳಿಯ ಟೂಥ್‌ಪೇಸ್ಟ್

*ನೇಲ್ ಪಾಲಿಶ್ ರಿಮೂವರ್

*ಫೋರ್-ವೇ ಬಫ್ಫಿಂಗ್ ಬ್ಲಾಕ್

ವಿಧಾನ

*ನಿಮ್ಮ ಉಗುರುಗಳನ್ನು ಸ್ವಚ್ಛಗೊಳಿಸಿ ಮತ್ತು ಅದರ ಮೇಲೆ ಇರುವ ನೇಲ್ ಪಾಲಿಶ್ ಅನ್ನು ತೆಗೆಯಿರಿ. ನೇಲ್ ಬಫ್ಫರ್ ತೆಗೆದುಕೊಂಡು ನಿಮ್ಮ ಕೈಗಳ ಮೂಲಕ ಅಥವಾ ಬ್ಯಾಟರಿಚಾಲಿತ ಬಫ್ಫ್‌ರ್ ಮೂಲಕ ನೇಲ್ ಬಫ್ಫ್ ಮಾಡಿ.

*ಟಾಪ್ ಮೇಲೆ ಟೂಥ್‌ಪೇಸ್ಟ್ ಕೋಟ್ ಮಾಡಿ ಮತ್ತು ಉಗುರಿನ ಪಕ್ಕದಲ್ಲಿ ವೈಟೆನಿಂಗ್ ಟೂಥ್‌ಪೇಸ್ಟ್ ಅನ್ನು ಮೃದುವಾಗಿ ಸ್ಕ್ರಬ್ ಮಾಡಿ. ಇದಕ್ಕಾಗಿ ಒಂದು ಮೃದುವಾದ ಬ್ರಶ್ ಬಳಸಿ. ನಂತರ ತೊಳೆಯಿರಿ.

*ಇದರಿಂದ ನೀವು ನಿರೀಕ್ಷಿಸುವ ಫಲಿತಾಂಶ ಬರದಿದ್ದಲ್ಲಿ, 10-15 ನಿಮಿಷ ಬಿಟ್ಟು ಮತ್ತೆ ಈ ಪರಿಹಾರವನ್ನು ಪ್ರಯೋಗ ಮಾಡಿ. ನಂತರ ತಕ್ಷಣ ಫಲಿತಾಂಶ ನಿಮ್ಮ ಕಣ್ಣ ಮುಂದೆ ಇರುತ್ತದೆ.  

Lime and baking powder

ಬೇಕಿಂಗ್ ಸೋಡಾ ಬಳಸುವ ವಿಧಾನ

ಬೇಕಿಂಗ್ ಸೋಡಾ ನಮ್ಮ ಅಡುಗೆ ಮನೆಯಲ್ಲಿ ದೊರೆಯುತ್ತದೆ. ಇದು ಇಲ್ಲದಿದ್ದಲ್ಲಿ, ನಿಮ್ಮ ಮನೆ ಪಕ್ಕದ ಅಂಗಡಿಯಿಂದ ಖರೀದಿಸಿ. ಈ ಸೋಡಾವನ್ನು ಶತಮಾನಗಳಿಂಡ ಉಗುರುಗಳ ಸ್ವಚ್ಛಗೊಳಿಸುವಿಕೆಗೆ ಬಳಸಲಾಗುತ್ತಿದೆ. ಇದು ಸ್ವಲ್ಪ ಉರಿಯುವ ಗುಣ ಹೊಂದಿದ್ದರೂ, ಉಗುರುಗಳಲ್ಲಿರುವ ಹಳದಿತನವನ್ನು ನಿವಾರಿಸುತ್ತದೆ.

ಪದಾರ್ಥಗಳು:

*ಎರಡು ಟೀಸ್ಪೂನ್ ಬೇಕಿಂಗ್ ಸೋಡಾ

*ಬೆಚ್ಚಗಿನ ನೀರು

ವಿಧಾನ

ಉಗುರಿನ ಮೇಲೆ ಇರುವ ನೇಲ್ ಪೇಯಿಂಟ್ ಅನ್ನು ತೆಗೆಯಿರಿ.

ಮೇಲೆ ಸೂಚಿಸಿರುವ ಪದಾರ್ಥಗಳನ್ನು ಬಳಸಿ ಪೇಸ್ಟ್ ಮಾಡಿಕೊಳ್ಳಿ ಮತ್ತು ಅದನ್ನು ಉಗುರಿನ ಮೇಲ್ಭಾಗಕ್ಕೆ ಹಾಗು ಪಕ್ಕಕ್ಕೆ ಲೇಪಿಸಿ.

ನಂತರ ಐದು ನಿಮಿಷ ಬಿಟ್ಟು ತೊಳೆಯಿರಿ. 

lime

ನಿಂಬೆ ಹಣ್ಣು

ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಉಗುರಿನಲ್ಲಿರುವ ಬಣ್ಣವನ್ನು ನಿವಾರಿಸುತ್ತದೆ.

ಇದಕ್ಕೆ ಬೇಕಾದ ಪದಾರ್ಥಗಳು

*ನಿಂಬೆರಸ

*ಹತ್ತಿ ಉಂಡೆ

ವಿಧಾನ

ತಾಜಾ ಆಗಿ ಹಿಂಡಿರುವ ನಿಂಬೆರಸವನ್ನು ತೆಗೆದುಕೊಳ್ಳಿ. ಇದನ್ನು ಹತ್ತಿಯ ಉಂಡೆಯಿಂದ ನೇರವಾಗಿ ಉಗುರಿನ ಮೆಲೆ ಲೇಪಿಸಿ.

ಕೆಲವು ನಿಮಿಷ ಬಿಟ್ಟು ನಂತರ ಇದನ್ನು ತೊಳೆಯಿರಿ.

ಇದರಿಂದ ಉಗುರುಗಳು ಹೊಳಪಿನಿಂದ ಮತ್ತು ಸುವಾಸನೆಯಿಂದ ಕಂಗೊಳಿಸುತ್ತವೆ.

English summary

DIY At-home Remedies For Yellow Nails

Here are a few remedies to get rid of the yellow and brittle nails for good. These home remedies to treat yellow nails will give you bright and smooth nails in a snap. That way, you can go bare or light-colour them without worrying about them looking unhealthy and yellow. And the best part is, you don't have to splurge in unnecessary products laden with chemicals. You can find all the ingredients right at home. Take a look to know more on the home remedies to get rid of yellow nails.
Story first published: Wednesday, June 14, 2017, 8:31 [IST]
Subscribe Newsletter