For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಒಂದು ಕಪ್, ತೆಂಗಿನ ಹಾಲು-ಉಪಯೋಗ ಮಾತ್ರ ಹಲವು!

ತೆಂಗಿನ ಹಾಲನ್ನು ಅದರ ಸೌಂದರ್ಯವರ್ಧಕ ಗುಣದಿಂದಾಗಿ ಅನೇಕ ಬ್ಯೂಟಿ ಪ್ರೊಡಕ್ಟ್‌ಗಳಲ್ಲಿ ಬಳಕೆ ಮಾಡಲಾಗುತ್ತೆ. ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡುವುದರ ಜೊತೆಗೆ, ಕೂದಲಿನ ಆರೈಕೆಯಲ್ಲೂ ಸೈ ಎನಿಸಿಕೊಂಡಿದೆ.....

By Jayasubramanya
|

ಅನಾದಿ ಕಾಲದಿಂದಲೂ ಕೂದಲು ಮತ್ತು ತ್ವಚೆಯ ಸೌಂದರ್ಯಕ್ಕಾಗಿ ನೈಸರ್ಗಿಕ ವಿಧಾನಗಳನ್ನೇ ಅನುಸರಿಸುತ್ತಿದ್ದು ಇದರಿಂದ ಪೂರ್ಣ ಫಲಿತಾಂಶವನ್ನು ಪಡೆದುಕೊಳ್ಳುವುದರ ಜೊತೆಗೆ ಯಾವುದೇ ಹಾನಿಯನ್ನು ಇದು ಉಂಟುಮಾಡುವುದಿಲ್ಲ. ನೈಸರ್ಗಿಕ ಉತ್ಪನ್ನಗಳಲ್ಲಿರುವ ಪೋಷಕಾಂಗಳು ಹಾಗೂ ನ್ಯೂಟ್ರೀನ್‌ ಅಂಶಗಳು ತ್ವಚೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಸಹಕಾರಿಯಾಗಲಿವೆ ಜೊತೆಗೆ ಕೂದಲಿಗೂ ಬೇಕಾದ ಪೋಷಕಾಂಶಗಳನ್ನು ಇವು ಒದಗಿಸುತ್ತವೆ.

ನೆಲ್ಲಿಕಾಯಿ, ದಾಸವಾಳ, ತುಳಸಿ ಮುಂತಾದ ಉತ್ಪನ್ನಗಳಲ್ಲಿರುವ ಹೆಚ್ಚಿನ ನೈಸರ್ಗಿಕ ಅಂಶಗಳು ನಿಮ್ಮ ತ್ವಚೆಗೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ ಜೊತೆಗೆ ತ್ವಚೆಗೆ ಈ ಮೊದಲು ಉಂಟಾಗಿರುವ ಕೆಟ್ಟ ಪ್ರಭಾವಗಳನ್ನು ನಿವಾರಿಸಿ ಹೊಳೆಯುವ ಮೈಕಾಂತಿಯನ್ನು ನಿಮಗೆ ನೀಡುವಲ್ಲಿ ಪ್ರಯೋಜನಕಾರಿ ಎಂದೆನಿಸಲಿವೆ.

ಮನೆಯಲ್ಲಿ ತಯಾರಿಸಿದ ತೆಂಗಿನ ಹಾಲು-ಉಪಯೋಗ ಹಲವು...

ಇಂದಿನ ಲೇಖನದಲ್ಲಿ ಅತ್ಯುನ್ನತ ಅಂಶಗಳನ್ನು ಒಳಗೊಂಡಿರುವ ನೈಸರ್ಗಿಕ ಉತ್ಪನ್ನವಾದ ತೆಂಗಿನ ಹಾಲಿನ ಲಾಭಗಳನ್ನು ತಿಳಿಸುತ್ತಿದ್ದೇವೆ. ತೆಂಗಿನ ಹಾಲಿನಲ್ಲಿರುವ ಅಸಾಮಾನ್ಯ ಪೋಷಕಾಂಶಗಳನ್ನು ನೀವು ಅರಿತುಕೊಂಡಲ್ಲಿ ನಿತ್ಯವೂ ಬಳಸುವುದನ್ನು ನೀವು ತಪ್ಪಿಸುವುದಿಲ್ಲ ಇದಂತೂ ಖಂಡಿತ.

ವಿಟಮಿನ್ ಬಿ6, ವಿಟಮಿನ್ ಸಿ, ವಿಟಮಿನ್ ಬಿ3, ವಿಟಮಿನ್ ಬಿ5, ಅಂತೆಯೇ ವಿಟಮಿನ್ ಬಿ1 ಅನ್ನು ಇದು ಒಳಗೊಂಡಿದೆ. ಕ್ಯಾಲ್ಶಿಯಂ, ಕಬ್ಬಿಣದ, ಮೆಗ್ನೇಶಿಯಂ ಅನ್ನು ತನ್ನಲ್ಲಿ ಹೇರಳವಾಗಿಸಿಕೊಂಡಿದೆ. ಇಂದಿಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿಗೆ ತೆಂಗಿನ ಹಾಲನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ...

ಮನೆಯಲ್ಲೇ ತಯಾರಿಸಿ ಫೇಸ್ ವಾಶ್

ಮನೆಯಲ್ಲೇ ತಯಾರಿಸಿ ಫೇಸ್ ವಾಶ್

ತೆಂಗಿನ ಹಾಲನ್ನು ಬಳಸಿಕೊಂಡು ನೀವು ಫೇಸ್ ವಾಶ್ ಅನ್ನು ಸ್ವತಃ ತಯಾರಿಸಿಕೊಳ್ಳಬಹುದಾಗಿದೆ. ಒಂದು ಕಪ್‌ನಷ್ಟು ತೆಂಗಿನ ಹಾಲನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಜೇನು ಅಂತೆಯೇ ಒಂದು ಚಮಚ ಗ್ಲಿಸರಿನ್ ಸೇರಿಸಿ. ಇವು ಮೂರನ್ನೂ ಮಿಶ್ರ ಮಾಡಿಕೊಂಡು ಫ್ರಿಡ್ಜ್‌ನಲ್ಲಿರಿಸಿ. ನಿಮ್ಮ ಮುಖಕ್ಕೆ ಇದನ್ನು ಬಳಸಿ ವೃತ್ತಾಕಾರವಾಗಿ ಹಚ್ಚಿಕೊಳ್ಳಿ ಮಸಾಜ್ ಮಾಡಿ. 10 ನಿಮಿಷಗಳ ಕಾಲ ಕಾಯಿರಿ ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಂಡೀಷನರ್

ಕಂಡೀಷನರ್

ಈ ಹಾಲಿನಲ್ಲಿ ಹೇರಳವಾಗಿರುವ ವಿಟಮಿನ್‌ಗಳು ಮತ್ತು ನೈಸರ್ಗಿಕ ಪ್ರೊಟೀನ್ ಅಂಶಗಳಿದ್ದು ನಿಮ್ಮ ಕೂದಲಿಗೆ ಇದು ನೈಸರ್ಗಿಕ ಕಂಡೀಷನರ್‌ನಂತೆ ಕಾರ್ಯನಿರ್ವಹಿಸಲಿದೆ. ಒಂದು ಕಪ್‌ನಷ್ಟು ತೆಂಗಿನ ಹಾಲನ್ನು ತೆಗೆದುಕೊಂಡು ಇದಕ್ಕೆ ಅಷ್ಟೇ ಪ್ರಮಾಣದ ಲಿಂಬೆ ರಸವನ್ನು ಬೆರೆಸಿ. ಒಂದು ಚಮಚ ಜೇನನ್ನು ಮಿಶ್ರ ಮಾಡಿ. ಮೂರನ್ನೂ ಚೆನ್ನಾಗಿ ಬೆರೆಸಿಕೊಳ್ಳಿ. ನಿಮ್ಮ ತಲೆಬುರುಡೆಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ನಿಮ್ಮ ಕೂದಲಿನ ತುದಿಗೂ ಸಂಪೂರ್ಣವಾಗಿ ಇದನ್ನು ಹಚ್ಚಿಕೊಂಡು ಅರ್ಧಗಂಟೆ ನಿರೀಕ್ಷಿಸಿ. ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ನಿಮ್ಮ ಕೂದಲನ್ನು ಇದು ಮೃದುಗೊಳಿಸಿ ಕಾಂತಿಯನ್ನು ನೀಡುತ್ತದೆ.

ತೆಂಗಿನ ಹಾಲಿನ ಸ್ಕ್ರಬ್

ತೆಂಗಿನ ಹಾಲಿನ ಸ್ಕ್ರಬ್

ಮುಖದಲ್ಲಿರುವ ಮೃತಕೋಶವನ್ನು ಹೋಗಲಾಡಿಸುವಲ್ಲಿ ತೆಂಗಿನ ಹಾಲು ಸಹಕಾರಿಯಾಗಲಿದೆ. ತ್ವಚೆಯ ಟ್ಯಾನಿಂಗ್‌ನಿಂದ ಇದು ಮುಕ್ತಿಯನ್ನು ನೀಡಲಿದೆ. ಒಂದು ಶುಂಠಿಯನ್ನು ತೆಗೆದುಕೊಂಡು ಅದನ್ನು ತುರಿದುಕೊಳ್ಳಿ. ಈಗ ಅರ್ಧ ಚಮಚ ಜೇನು, ಚಿಟಿಕೆಯಷ್ಟು ಅರಶಿನ, ಒಂದು ಚಮಚ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿರಿ. 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿ ನಂತರ ಮುಖ ತೊಳೆದುಕೊಳ್ಳಿ.

ಮೇಕಪ್ ನಿವಾರಣೆಗೆ

ಮೇಕಪ್ ನಿವಾರಣೆಗೆ

ಮೇಕಪ್ ನಿವಾರಣೆಗೆ ತೆಂಗಿನ ಹಾಲು ಅತ್ಯುತ್ತಮವಾದ ನೈಸರ್ಗಿಕ ಸಾಧನವಾಗಿದೆ. ಇದು ಮೇಕಪ್ ನ ಕಣಗಳನ್ನು ಬುಡದಿಂದ ನಿವಾರಿಸುವುದರ ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚ ತೆಂಗಿನ ಹಾಲು ಮತ್ತು ಒಂದು ಚಿಕ್ಕ ಚಮಚ ಆಲಿವ್ ಎಣ್ಣೆ ಬೆರೆಸಿ ಈ ದ್ರವದಲ್ಲಿ ಹತ್ತಿಯುಂಡೆಯನ್ನು ಬೆರೆಸಿ ಕೊಂಚವೇ ಒತ್ತಡದಿಂದ ಒರೆಸಿಕೊಳ್ಳುವ ಮೂಲಕ ಮೇಕಪ್ ನಿವಾರಿಸಲು ಸಾಧ್ಯ.

ಸ್ಕಿನ್ ಕ್ಲೆನ್ಸರ್

ಸ್ಕಿನ್ ಕ್ಲೆನ್ಸರ್

ನಿಮ್ಮ ಮುಖವನ್ನು ಸ್ವಚ್ಛಮಾಡುವ ಕ್ಲೆನ್ಸರ್‌ನಂತೆ ತೆಂಗಿನ ಹಾಲು ಕಾರ್ಯನಿರ್ವಹಿಸಲಿದ್ದು ಇದನ್ನು ಆರಾಮವಾಗಿ ನಿಮಗೆ ಬಳಸಿಕೊಳ್ಳಬಹುದು. ಒಂದು ಚಮಚ ಗ್ಲಿಸರಿನ್ ಮತ್ತು ಅಷ್ಟೇ ಪ್ರಮಾಣದಲ್ಲಿ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಗ್ಲಿಸರಿನ್ ಲಿಂಬೆರಸ ಬೆರೆಸಿ. ಇದೆಲ್ಲವನ್ನೂ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರವಾಗಿ ಮಸಾಜ್ ಮಾಡಿ. 5 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕಾಂತಿಯುಕ್ತ ಫೇಸ್ ಮಾಸ್ಕ್

ಕಾಂತಿಯುಕ್ತ ಫೇಸ್ ಮಾಸ್ಕ್

ನಿಮ್ಮ ಮುಖದಲ್ಲಿರುವ ಕಲೆಗಳನ್ನು ನಿವಾರಿಸಿ ಕಾಂತಿಯುಕ್ತ ತ್ವಚೆಯನ್ನು ಪಡೆದುಕೊಳ್ಳುವಲ್ಲಿ ತೆಂಗಿನ ಹಾಲು ಉಪಯೋಗಕಾರಿ ಎಂದೆನಿಸಲಿದೆ. ಒಂದು ಚಮಚ ತೆಂಗಿನ ಹಾಲನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ಶ್ರೀಗಂಧ ಪೌಡರ್ ಅನ್ನು ಬೆರೆಸಿ. ಇವುಗಳನ್ನು ಮಿಶ್ರ ಮಾಡಿಕೊಂಡು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಕಾಯಿರಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಆಂಟಿ ಏಜಿಂಗ್ ಕ್ರೀಮ್

ಆಂಟಿ ಏಜಿಂಗ್ ಕ್ರೀಮ್

ಈ ಹಾಲಿನಿಂದ ಸ್ವತಃ ಆಂಟಿ ಏಜಿಂಗ್ ಕ್ರೀಮ್ ಅನ್ನು ನಿಮಗೆ ತಯಾರಿಸಿಕೊಳ್ಳಬಹುದು. ಈ ಹಾಲಿನಲ್ಲಿ ಸಾಕಷ್ಟು ಪ್ರೊಟೀನ್‌ಗಳು ಮತ್ತು ಉತ್ಕರ್ಷನ ನಿರೋಧಿ ಅಂಶಗಳಿದ್ದು ಇದು ಶೀಘ್ರದಲ್ಲಿ ವಯಸ್ಸಾಗುವುದನ್ನು ತಡೆಯಲಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಕಪ್‌ ತೆಂಗಿನ ಹಾಲನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ಅಲೊವೇರಾ ಜೆಲ್ ಮಿಶ್ರ ಮಾಡಿಕೊಳ್ಳಿ. ಒಂದು ಚಮಚ ಬಾದಾಮಿ ಹುಡಿಯನ್ನು ಮಿಶ್ರ ಮಾಡಿಕೊಂಡು ವಿಟಮಿನ್ ಇ ಎಣ್ಣೆಯನ್ನು ಬೆರೆಸಿ. ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಇದು ನಿಮ್ಮ ಮುಖದಲ್ಲಿ ಕನಿಷ್ಠ ಪಕ್ಷ 24 ಗಂಟೆಗಳವರೆಗೆ ಇರಲಿ. ನಿತ್ಯವೂ ಇದನ್ನು ಬಳಸಿಕೊಳ್ಳಿ.

ಸನ್‌ಬರ್ನ್‌ಗಾಗಿ ಉಪಯೋಗಿಸಿ

ಸನ್‌ಬರ್ನ್‌ಗಾಗಿ ಉಪಯೋಗಿಸಿ

ಒಂದು ಕಪ್ ನಷ್ಟು ತೆಂಗಿನ ಹಾಲಿಗೆ , ಅದರ ಅರ್ಧದಷ್ಟು ಗುಲಾಬಿ ರಸವನ್ನು ಸೇರಿಸಿ. ಒಂದು ಬಾಟಲ್ ನಲ್ಲಿ ಈ ಮಿಶ್ರಣವನ್ನು ಹಾಕಿ ಪ್ರಿಡ್ಜ್ ನಲ್ಲಿಡಿ. ಯಾವಾಗ ಉರಿ ಉರಿ ಬಿಸಿಲಿನಿಂದ ಬಳಲಿ ಬೆಂಡಾಗಿ ಬರ್ತೀರೋ ಆಗ ಈ ಮಿಶ್ರಣವನ್ನು ಸ್ಪ್ರೇ ಮಾಡ್ಕೊಳ್ಳಿ. ಕೇವಲ ಮುಖಕ್ಕೆ ಮಾತ್ರವಲ್ಲ, ಕೈಗಳಿಗೆ ಮತ್ತು ಕುತ್ತಿಗೆಯ ಭಾಗದಲ್ಲಿ ಆಗುವ ಸನ್ ಬರ್ನ್ ಸಮಸ್ಯೆಗೂ ಕೂಡ ಇದು ಪರಿಹಾರ ನೀಡಲಿದೆ. ಟ್ರೈ ಮಾಡಿ ನೋಡಿ.

English summary

Different Coconut Milk Recipes For Skin And Hair

Coconut milk is rich in Vitamin B6, Vitamin C, Vitamin B3, Vitamin B5 as well as Vitamin B1. Apart from this, the milk extracted from coconut is rich in calcium, selenium, iron, magnesium and phosphorous. There are several ways how you could use coconut milk for skin and hair.
Story first published: Thursday, May 18, 2017, 19:39 [IST]
X
Desktop Bottom Promotion