ಅಪರೂಪದ ಹಣ್ಣು ರಾಮಫಲ: ಸೌಂದರ್ಯದ ಚಿಕಿತ್ಸೆಯಲ್ಲೂ ಉತ್ತಮ ಫಲ

By: Divya
Subscribe to Boldsky

ಪ್ರಕೃತಿ ನಮಗಾಗಿ ಹಲವಾರು ಅದ್ಭುತವನ್ನು ಸೃಷ್ಟಿಸಿದೆ. ಅದೆಷ್ಟೇ ಹೊಸ ಬಗೆಯ ಕಾಯಿಲೆಗಳು ಬಂದರೂ, ಗುಣ ಪಡಿಸಬಲ್ಲ ಔಷಧೀಯ ಗಿಡಮೂಲಿಕೆ ಹಾಗೂ ಹಣ್ಣು ಹಂಪಲುಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಅಂತಹ ಒಂದು ಆರೋಗ್ಯ ಪೂರ್ಣ ಹಣ್ಣು ರಾಮಫಲ.(ಸೀತಾಫಲದ ಜಾತಿಗೆ ಸೇರಿದ ಹಣ್ಣು ) ನೋಡಲು ಹಸಿರು ಬಣ್ಣ, ಗಡುಸಾದ ಸಿಪ್ಪೆ. ಒಳಗೆ ಮೃದುವಾದ ತಿರುಳು ಹಾಗೂ ಹಲವಾರು ಬೀಜಗಳು. ರುಚಿಯಲ್ಲೂ ಅದ್ಭುತ. ಇದನ್ನು ಆಂಗ್ಲ ಭಾಷೆಯಲ್ಲಿ ಸೂರ್ಸಪ್, ಗ್ರಾವಿಯೋಲಾ ಎಂದು ಸಹ ಕರೆಯುತ್ತಾರೆ.

ಸಮೃದ್ಧ ಔಷಧೀಯ ಗುಣವನ್ನು ಹೊಂದಿರುವ ಈ ಹಣ್ಣು ಕೂದಲು ಸಮಸ್ಯೆ, ತ್ವಚೆಯ ಸಮಸ್ಯೆ ಹಾಗೂ ಕ್ಯಾನ್ಸರ್‌ನಂತಹ ಮಹಾ ಮಾರಿಯನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಗುಣಗಳು ಅಧಿಕವಾಗಿವೆ, ಅಷ್ಟೇ ಅಲ್ಲದೆ ಇದನ್ನು ಚರ್ಮ ಹಾಗೂ ಕೂದಲು ರಕ್ಷಣಾ ಉತ್ಪನ್ನವಾಗಿ ಬಳಸಲಾಗುತ್ತದೆ. ಅಪರೂಪದ ಈ ಹಣ್ಣಿನ ಹಲವು ಉಪಯೋಗಗಳ ವಿವರ ಇಲ್ಲಿದೆ ನೋಡಿ..... 

ತುರಿಕೆಯ ತ್ವಚೆಗೆ

ತುರಿಕೆಯ ತ್ವಚೆಗೆ

ರಾಮಫಲ ಹಣ್ಣಿನ ತಿರುಳು 3-4 ಚಮಚ, ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಜೇನುತುಪ್ಪ. ಇವುಗಳ ಮಿಶ್ರಣವನ್ನು ತ್ವಚೆಯ ಮೇಲಾದ ತುರಿಕೆಯ ಸ್ಥಳ ಹಾಗೂ ಉರಿ ಉಂಟಾಗುವ ಸ್ಥಳದ ಮೇಲೆ ಲೇಪಿಸಿದರೆ ಸಮಸ್ಯೆ ಬಗೆಹರಿಯುವುದು. ಅಲ್ಲದೆ ಆರೋಗ್ಯಕರ ತ್ವಚೆಯ ಹುಟ್ಟಿಗೂ ಕಾರಣವಾಗುತ್ತದೆ.

ಕಿರಿಕಿರಿಯನ್ನು೦ಟು ಮಾಡುವ ತುರಿಕೆ ಸಮಸ್ಯೆಗೆ ಪರಿಹಾರವೇನು?

ಮೊಡವೆಯ ಚಿಕಿತ್ಸೆ

ಮೊಡವೆಯ ಚಿಕಿತ್ಸೆ

1-2 ಚಮಚ ರಾಮಫಲ ಹಣ್ಣಿನ ತಿರುಳು, 2 ಚಮಚ ಹಾಲು, 2 ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಮಚ ಅರಿಶಿನ ಸೇರಿಸಿ ಮಿಶ್ರಣವೊಂದನ್ನು ತಯಾರಿಸಿಕೊಳ್ಳಿ. ನಂತರ ಮೊಡವೆ ಪೀಡಿತ ಪ್ರದೇಶಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಇದರಿಂದ ಮೊಡವೆ ಗುಣ ಮುಖವಾಗುವುದು.

ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಸುಕ್ಕುಗಳ ನಿವಾರಕ

ಸುಕ್ಕುಗಳ ನಿವಾರಕ

ಸ್ವಲ್ಪ ಹಣ್ಣಿನ ತಿರುಳಿಗೆ 1 ಚಮಚ ಅಲೋವೆರಾ ಜೆಲ್ ಮತ್ತು ಲ್ಯಾವೆಂಡರ್ ತೈಲವನ್ನು ಬೆರೆಸಿದ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಅನ್ವಯಿಸಿ, 15 ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಬೇಕು. ನಂತರ ನೀರಿನಿಂದ ತೊಳೆದರೆ ಮುಖವು ಕಾಂತಿಯುತವಾಗಿರುತ್ತದೆ. ಸುಕ್ಕುಗಳು ನಿವಾರಣೆಯಾಗಿ ಹೆಚ್ಚು ಆಕರ್ಷಿತ ತ್ವಚೆಯಾಗುತ್ತದೆ.

ಕಜ್ಜಿ ತುರಿಕೆಗಳು ಕಡಿಮೆಯಾಗುತ್ತವೆ

ಕಜ್ಜಿ ತುರಿಕೆಗಳು ಕಡಿಮೆಯಾಗುತ್ತವೆ

ರಾಮಫಲ ಹಣ್ಣಿನ ತಿರುಳನ್ನು ಸೋಂಕು ಪೀಡಿತ ಜಾಗದಲ್ಲಿ ಅನ್ವಯಿಸಿ, ಸ್ವಲ್ಪ ಮಸಾಜ್ ಮಾಡಬೇಕು. ಗಣನೀಯವಾಗಿ ಹೀಗೆ ಮಾಡಿದರೆ ಉರಿಯೂತ ಮತ್ತು ಕಜ್ಜಿ ತುರಿಕೆಗಳು ಕಡಿಮೆಯಾಗುತ್ತವೆ.

ಇದರಲ್ಲಿರುವ ವಿಟಮಿನ್ ಸಿ...

ಇದರಲ್ಲಿರುವ ವಿಟಮಿನ್ ಸಿ...

ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಸ್ಕೋರ್ಬಿಕ್ ಆಮ್ಲ ಅಧಿಕ ಪ್ರಮಾಣದಲ್ಲಿರುವುದರಿಂದ ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಸ್ವಲ್ಪ ರಾಮಫಲ ಹಣ್ಣಿನ ತಿರುಳು ಮತ್ತು ತೆಂಗಿನ ಎಣ್ಣೆ ಬೆರೆಸಿ ತಯಾರಿಸಲಾದ ಮಿಶ್ರಣವನ್ನು, ಸೂರ್ಯನ ಕಿರಣದ ಕಲೆ ಹಾಗೂ ಪಿಗ್ಮಂಟೇಶನ್ ಕಲೆಯ ಮೇಲೆ ಸವರಿಕೊಂಡು, ರಾತ್ರಿ ಮಲಗಬೇಕು. ಹೀಗೆ ನಿತ್ಯವು ಇದರ ಬಳಕೆ ಮಾಡಿದರೆ ಕಲೆ ಮಾಯವಾಗುವುದು.

ನೆತ್ತಿಯ ಆರೈಕೆ

ನೆತ್ತಿಯ ಆರೈಕೆ

ರಾಮಫಲ ಹಣ್ಣಿನ ಒಂದು ಭಾಗವನ್ನು, ಸ್ವಲ್ಪ ನೀರಿಗೆ ಹಾಕಿ ಕುದಿಸಿ. ನಂತರ ನೀರನ್ನು ಪ್ರತ್ಯೇಕ ಪಾತ್ರೆಯಲ್ಲಿ ಹಾಕಿ. ಬಿಸಿ ಆರಿದ ಮೇಲೆ ನೆತ್ತಿಗೆ ಹಾಗೂ ತಲೆಗೆ ಸವರಬೇಕು. ಹೀಗೆ ಮಾಡುವುದರಿಂದ ಅತಿ ಬೆವರುವಿಕೆಯಿಂದ ಉಂಟಾಗುವ ನೆತ್ತಿಯ ತುರಿಕೆ ಮತ್ತು ಅತಿಯಾದ ಬೆವರುವಿಕೆಯು ನಿಯಂತ್ರಣಕ್ಕೆ ಬರುವುದು.

ಕೂದಲಿನ ಸಮಸ್ಯೆಗೆ, ನೈಸರ್ಗಿಕ ಎಲೆಗಳಿಂದ ಆರೈಕೆ

ತಲೆಹೊಟ್ಟು ಹೇನು ನಿವಾರಕ

ತಲೆಹೊಟ್ಟು ಹೇನು ನಿವಾರಕ

1-2 ತುಣುಕು ಹಣ್ಣಿನ ತಿರುಳು, ಒಂದು ಚಮಚ ಮೆಂತ್ಯೆ ಬೀಜದ ಪೇಸ್ಟ್ ಮತ್ತು ಒಂದು ಚಮಚ ಬೇವಿನ ರಸ ಸೇರಿಸಿ, ಒಂದು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ನೆತ್ತಿ ಹಾಗೂ ಕೂದಲ ಬುಡಕ್ಕೆ ಸರಿಯಾಗಿ ಅನ್ವಯಿಸಿ. 10 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಗಣನೀಯವಾಗಿ ಮಾಡಿದರೆ ತಲೆಯಲ್ಲಿರುವ ಹೇನು ಮಾಯವಾಗುವುದು.

ತಲೆ ಹೊಟ್ಟು ನಿವಾರಕ

ತಲೆ ಹೊಟ್ಟು ನಿವಾರಕ

ರಾಮಫಲ ಹಣ್ಣಿನ ತಿರುಳಿನಿಂದ ಕಷಾಯ ತಯಾರಿಸಿಕೊಳ್ಳಿ. ಅದನ್ನು ನಿತ್ಯವು ಸ್ನಾನಕ್ಕೆ ಅರ್ಧ ಗಂಟೆ ಮೊದಲು, ತಲೆಗೆ ಅನ್ವಯಿಸಿ. ನಂತರ ಸ್ನಾನ ಮಾಡುವುದರಿಂದ ತಲೆ ಹೊಟ್ಟು ಹಾಗೂ ಕೇಶರಾಶಿಯ ಸಣ್ಣ-ಪುಟ್ಟ ಸಮಸ್ಯೆಗಳು ನಿವಾರಣೆ ಹೊಂದುವವು.

ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

English summary

Benefits Of Soursop (Ramphal) For Skin And Hair

Due to medicinal properties found in soursop or ramphal, it is widely used in treating incurable diseases like cancer and it also has several health benefits. Not only health; but using soursop can also help to treat many skin and hair care problems.Here we've mentioned about the benefits of using soursop (ramphal) for skin and hair. Read on further to know more.
Subscribe Newsletter