For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ಕೈ ಬೆರಳಿನ ಉಗುರು ಇರುವುದು ಏತಕ್ಕೆ..?

By Deepak
|

ಉಗುರುಗಳು ಎಲ್ಲಾ ಪ್ರಾಣಿಗಳಿಗೆ ಇರುತ್ತವೆ. ಅವುಗಳಿಗೆ ಅದರದೆ ಆದ ಕಾರ್ಯಗಳು ಇರುತ್ತವೆ. ಹಲವು ಪ್ರಾಣಿಗಳು ಊಟ ಮಾಡಲು, ಬೇಟೆಯಾಡಲು ಉಗುರುಗಳ ಸಹಾಯವನ್ನು ಪಡೆಯುತ್ತವೆ. ಆದರೆ ಮನುಷ್ಯನು ಇದನ್ನು ಹಲವಾರು ಕೆಲಸಗಳಿಗೆ ಬಳಸುತ್ತಾನೆ. ಜೊತೆಗೆ ಉಗುರುಗಳನ್ನು ಸೌಂದರ್ಯಕ್ಕೆ ಸಹ ಬಳಸಿಕೊಳ್ಳುವ ಜಾಣತನ ಮನುಷ್ಯನಿಗೆ ಮಾತ್ರ ಸಿದ್ಧಿಸಿದೆ! ಗಮ್ ಟೇಪ್ ತೆಗೆಯಲು, ಪ್ಯಾಕಿಂಗ್ ಬಿಚ್ಚಲು, ಹೂವು ಕತ್ತರಿಸಲು, ಯಾರನ್ನಾದರು ಗಟ್ಟಿಯಾಗಿ ಚಿವುಟಲು ಇತ್ಯಾದಿ ಕೆಲಸಗಳಿಗೆ ಉಗುರು ಬೇಕು.

ಇನ್ನು ಹೆಂಗಸರಂತ ಕೇಳಲೇಬೇಡಿ. ಬೆಂಡೆಕಾಯಿ, ಬೀನ್ಸ್, ಕುಂಬಳಕಾಯಿ, ಸೇಬು ಇತ್ಯಾದಿ ಇತ್ಯಾದಿ ತರಕಾರಿ-ಹಣ್ಣುಗಳನ್ನು ಪರೀಕ್ಷಿಸುವ ಸಾಧನವಾಗಿ ಉಗುರನ್ನು ಬಳಸಿಕೊಂಡಿರುತ್ತಾರೆ. ಇದು ಅವರಿಗೆ ಆಯುಧ ಮತ್ತು ಅಲಂಕಾರ ಎರಡಕ್ಕೂ ಬೇಕು! ಆದರೆ ಉದ್ದವಾಗಿ ಬೆಳೆಸಿರುವ ಉಗುರುಗಳು ಮತ್ತು ಬೆಳೆಯದೆ ಇರುವ ಉಗುರುಗಳು ಅಲಂಕಾರಕ್ಕೆ ಬಿಟ್ಟರೆ ಬೇರೆ ಪ್ರಯೋಜನಕ್ಕೆ ಬರುವುದಿಲ್ಲ. ಬನ್ನಿ ಉಗುರಿನಿಂದ ಮಾಡಬಾರದ ಕೆಲವೊಂದು ಕೆಲಸಗಳು ಯಾವುವು ಎಂದು ತಿಳಿದುಕೊಳ್ಳೋಣ...

Things you should NEVER do with your nails

ವಸ್ತುಗಳನ್ನು ತೆರೆಯಲು
ಒಂದು ಜಾಮ್ ಆಗಿರುವ ಕಂಟೇನರ್, ಬೀರ್ ಬಾಟಲ್ ಅಥವಾ ಸೀಲ್ ಆಗಿರುವ ಕ್ಯಾನ್ ಅನ್ನು ನಿಮ್ಮ ಉಗುರಿನಿಂದ ತೆಗೆಯಲು ಪ್ರಯತ್ನಿಸಬೇಡಿ. ಬಾಟಲ್ ಓಪನರ್‌ಗಳನ್ನು ತೆಗೆಯುವ ಓಪನರ್‌ಗಳಲ್ಲ ನಮ್ಮ ಉಗುರುಗಳು! ಇದರಿಂದ ನಿಮ್ಮ ಉಗುರು ಮುರಿದು ಹೋಗುವ ಸಾಧ್ಯತೆ ಇರುವುದರಿಂದಾಗಿ, ಇದನ್ನು ನಾಜೂಕಿನಿಂದ ನೋಡಿಕೊಳ್ಳಿ. ಇಂತಹ ಕಠಿಣ ಕೆಲಸಗಳನ್ನು ಮಾಡಲು ಹೋಗಬೇಡಿ. ಹೀಗೆ ಮಾಡಿದರೆ ನಿಮ್ಮ ಉಗುರಿನ ಜೊತೆಗೆ ನಿಮ್ಮ ಬೆರಳಿಗು ಗಾಯವಾಗುತ್ತದೆ, ವಿಶೇಷವಾಗಿ ನೇಲ್ ಬೆಡ್‌ಗೆ ಇದರಿಂದ ಹೆಚ್ಚು ಹಾನಿಯಾಗುತ್ತದೆ.

ವಸ್ತುಗಳನ್ನು ಸ್ವಚ್ಛಗೊಳಿಸಲು
ನಿಮ್ಮ ಡೆಸ್ಕ್ ಮೇಲೆ ಕೂದಲಿನಷ್ಟು ಇರುವ ಸಂಧಿಯಲ್ಲಿ ಸೇರಿಕೊಂಡಿರುವ ಗಲೀಜನ್ನು ಸ್ವಚ್ಛಗೊಳಿಸಲು ಉಗುರನ್ನು ಬಳಸಬೇಡಿ. ಕೀ ಬೋರ್ಡ್, ಮೊಬೈಲ್, ರಿಮೋಟ್ ಕಂಟ್ರೋಲ್ ಮೇಲೆ ಇರುವ ಕೊಳೆಯನ್ನು ಉಗುರಿನಿಂದ ಸ್ವಚ್ಛಗೊಳಿಸಲು ಹೋಗುತ್ತೇವೆ. ಹಾಗೆ ಮಾಡಬೇಡಿ. ಈ ಕೊಳೆಯು ನಿಮ್ಮ ಉಗುರಿನಲ್ಲಿ ಸೇರಿಕೊಂಡು ಇನ್‌ಫೆಕ್ಷನ್ ಉಂಟು ಮಾಡಬಹುದು ಮತ್ತು ಅದನ್ನು ನೀವು ಸ್ವಚ್ಛಗೊಳಿಸಲು ಬೇರೆ ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಇನ್ನೂ ತೊಂದರೆ ಎಂದರೆ ಕೈ ತೊಳೆದಾಗ ಈ ಕೊಳೆ ನಿಮ್ಮ ಉಗುರಿನಿಂದ ಹೊರಗೆ ಬರುವುದಿಲ್ಲ, ಆಗ ನಿಮ್ಮ ಊಟದ ಜೊತೆಗೆ ಇದರಲ್ಲಿರುವ ಕೀಟಾಣುಗಳು ನಿಮ್ಮ ಹೊಟ್ಟೆಗೆ ಸೇರುತ್ತವೆ. ಅಂದದ ಉಗುರಿನ ಆರೈಕೆಗೆ ಸರಳ ಮಾರ್ಗೋಪಾಯ

ನಿಮ್ಮ ಮೂಗನ್ನು ಸ್ವಚ್ಛ ಮಾಡಲು
ಮೂಗಿನಲ್ಲಿ ಸಿಂಬಳವು ಗಟ್ಟಿಯಾಗಿ ಹಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಅದರಲ್ಲಿಯೂ ಡಸ್ಟ್ ಅಲರ್ಜಿ ಇರುವವರಿಗೆ ಪ್ರತಿದಿನ ಒಂದು-ಎರಡು ಚಿಟಿಕೆಯಷ್ಟಾದರು ಮೂಗಿನಲ್ಲಿ ಗಟ್ಟಿ ಸಿಂಬಳ ಉತ್ಪತ್ತಿಯಾಗುತ್ತಲೆ ಇರುತ್ತದೆ. ಆಗ ಅವರು ಅನಿವಾರ್ಯವಾಗಿ ಅದನ್ನು ಸ್ವಚ್ಛಗೊಳಿಸಲು ಬೆರಳುಗಳನ್ನು ವಿಶೇಷವಾಗಿ, ಉಗುರಿನ ಸಹಾಯವನ್ನು ಪಡೆಯುತ್ತಾರೆ. ಇದು ನಿಮ್ಮ ಮೂಗಿನ ಗೋಡೆಗಳಿಗೆ ಅಂಟಿಕೊಂಡ ಸಿಂಬಳವನ್ನು ಕೀಳಲು ನೆರವಾಗುತ್ತದೆ. ಆದರೆ ಇದರಿಂದ ನಿಮ್ಮ ಉಗುರಿನ ಕೆಳಗೆ ಕಸ ಸೇರಿಕೊಳ್ಳುವುದರ ಜೊತೆಗೆ, ನಿಮ್ಮ ಮೂಗಿನ ಹೊಳ್ಳೆಗಳಲ್ಲಿ ಗಾಯವಾಗುವ ಸಾಧ್ಯತೆ ಸಹ ಇರುತ್ತದೆ.

ಬೀಗ ತೆಗೆಯಲು
ಬುದ್ಧಿವಂತರು ಬೀಗ ತೆಗೆಯಲು ಸಹ ಉಗುರನ್ನು ಬಳಸುತ್ತಾರೆ. ಜಾಮ್ ಆಗಿರುವ ಬೀಗವನ್ನು ತೆಗೆಯಲು ಉಗುರನ್ನು ಬೀಗದ ಕೈ ರೀತಿ ಬಳಸುತ್ತಾರೆ ಎಂದರೆ ನೀವು ನಂಬಲೇ ಬೇಕು. ಇದರಿಂದ ಬೀಗ ತೆಗೆಯಲು ಪ್ರಯತ್ನ ಮಾಡಿದಲ್ಲಿ, ನಿಮ್ಮ ಉಗುರಿಗೆ ಆಪತ್ತು ಬರುತ್ತದೆ. ನಿಮ್ಮ ಉಗುರು ಮುರಿದು ಹೋಗುವ, ಬೀಗದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲದೆ ನೇಲ್ ಬೆಡ್‌ಗೆ ಸಹ ಇದರಿಂದ ಹಾನಿಯಾಗುತ್ತದೆ. ಉಗುರು ಸುಂದರವಾಗಿ ಕಾಣಲು ಹೀಗೆ ಮಾಡಿ

ಬೀಗ ತೆಗೆಯಲು
ಬುದ್ಧಿವಂತರು ಬೀಗ ತೆಗೆಯಲು ಸಹ ಉಗುರನ್ನು ಬಳಸುತ್ತಾರೆ. ಜಾಮ್ ಆಗಿರುವ ಬೀಗವನ್ನು ತೆಗೆಯಲು ಉಗುರನ್ನು ಬೀಗದ ಕೈ ರೀತಿ ಬಳಸುತ್ತಾರೆ ಎಂದರೆ ನೀವು ನಂಬಲೇ ಬೇಕು. ಇದರಿಂದ ಬೀಗ ತೆಗೆಯಲು ಪ್ರಯತ್ನ ಮಾಡಿದಲ್ಲಿ, ನಿಮ್ಮ ಉಗುರಿಗೆ ಆಪತ್ತು ಬರುತ್ತದೆ. ನಿಮ್ಮ ಉಗುರು ಮುರಿದು ಹೋಗುವ, ಬೀಗದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲದೆ ನೇಲ್ ಬೆಡ್‌ಗೆ ಸಹ ಇದರಿಂದ ಹಾನಿಯಾಗುತ್ತದೆ.

ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು
ಕಿವಿಯಲ್ಲಿರುವ ವ್ಯಾಕ್ಸ್ ಸ್ವಚ್ಛಗೊಳಿಸಲು ಉಗುರುಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ಮಾಡಲು ಹೋಗಬೇಡಿ. ಕಿವಿಯಲ್ಲಿರುವ ವ್ಯಾಕ್ಸ್ ನಿಮ್ಮ ಕಿವಿಗೆ ಕಸ ಪ್ರವೇಶಿಸಿದಂತೆ ತಡೆಯುತ್ತದೆ. ನೀವು ಇದನ್ನು ತೆಗೆದಲ್ಲಿ, ಕಿವಿಗೆ ಅಧಿಕ ಪ್ರಮಾಣದ ಕಸ ಪ್ರವೇಶಿಸುತ್ತದೆ. ಜೊತೆಗೆ ಈ ವ್ಯಾಕ್ಸ್ ನಿಮ್ಮ ಉಗುರಿನಲ್ಲಿ ಸೇರಿಕೊಂಡು ಬಿಡುತ್ತದೆ. ಆಗ ಕೆಲವೊಂದು ಇನ್‌ಫೆಕ್ಷನ್‌ಗಳು ಸಂಭವಿಸುತ್ತವೆ ಮತ್ತು ನೀವು ಊಟ ಮಾಡುವಾಗ ಈ ವ್ಯಾಕ್ಸ್ ನಿಮ್ಮ ಹೊಟ್ಟೆಯನ್ನು ಸೇರುತ್ತದೆ. ಅದಕ್ಕಾಗಿ ಕಿವಿಯನ್ನು ಸ್ವಚ್ಛಗೊಳಿಸಲು ಉಗುರನ್ನು ಬಳಸಬೇಡಿ.

English summary

Things you should NEVER do with your nails

Long nails do not really serve any purpose, and most of us grow them for vanity. However, many of us use nails for all the wrong purposes too, causing unnecessary harm. Here are six things you should never do with your nails.
Story first published: Friday, January 22, 2016, 19:25 [IST]
X
Desktop Bottom Promotion