Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಮಳೆಗಾಲದಲ್ಲಿ ಪಾದಗಳ ಸಂರಕ್ಷಣೆಯಲ್ಲಿ ತೋರದಿರಿ ಅನಾಸಕ್ತಿ
ಬಿರುಬೇಸಿಗೆಯಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತು ಇಳೆಗೆ ತಂಪನ್ನು ನೀಡಲು ಮಳೆರಾಯನ ಆಗಮನವಾಗಿದೆ. ಮಳೆ ಎಂದರೆ ಅದೊಂದು ಸಂತಸ, ನಿರೀಕ್ಷೆ, ದುಃಖ, ಸುಖ ಹೀಗೆ ಭಾವನೆಗಳ ಮಿಶ್ರಣ ಮಳೆಯಲ್ಲಡಗಿದೆ. ಕಲ್ಪನೆಯ ಕಣ್ಣುಗಳಿಂದ ಮಳೆಯನ್ನು ನೋಡಿ ಅದನ್ನು ಆಸ್ವಾದಿಸುವವರಿದ್ದರೆ ಇನ್ನು ಕೆಲವರಿಗೆ ಮಳೆ ಎಂದರೆ ಏನೋ ಅಲರ್ಜಿ ಅಂತೂ ಇಂತೂ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಮಳೆ ಮಾತ್ರ ತನ್ನಷ್ಟಕ್ಕೆ ತಾನು ಸುರಿಯುತ್ತಲೇ ಇರುತ್ತದೆ. ಪಾದ ದುರ್ವಾಸನೆ ಬೀರುವುದನ್ನು ತಡೆಯಲು ಟಿಪ್ಸ್

ಮಳೆಗಾಲದಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳಿಗೆ ಹೆದರಿಯೇ ಹೆಚ್ಚಿನವರು ಮೂಗು ಮುರಿಯುವುದೇ ಜಾಸ್ತಿ. ಶೀತ, ಕೆಮ್ಮು, ಜ್ವರ ಹೀಗೆ ರೋಗಗಳ ಸಾಲು ಪಟ್ಟಿಯನ್ನೇ ಮಳೆಗಾಲ ತರುತ್ತದೆ. ರಸ್ತೆಯಲ್ಲೆಲ್ಲಾ ಕೆಸರು ನಿಂತು ವಾಹನಗಳ ಓಡಾಟದಿಂದಾಗಿ ಈ ಕೆಸರಿನ ಮಳೆ ನಮ್ಮ ಮೇಲೆ ಪ್ರೋಕ್ಷಣೆಯಾಗಿ ಒಂದು ರೀತಿಯ ದೇಹ ತುರಿಕೆ ನಮ್ಮನ್ನು ಕಾಡುತ್ತದೆ.
ಈ ಕಾಲದಲ್ಲಿ ಹೆಚ್ಚು ಬಲಿಯಾಗುವುದು ನಮ್ಮ ಕಾಲುಗಳಾಗಿದೆ. ನೀರಿನಲ್ಲಿ ಹೆಚ್ಚು ಓಡಾಡಬೇಕಾದ ಪರಿಸ್ಥಿತಿಯಿಂದಾಗಿ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ರಾಜಾರೋಷವಾಗಿ ನಮ್ಮ ಕಾಲುಗಳ ಮೇಲೆ ಪಾದಗಳು ಮತ್ತು ಬೆರಳುಗಳ ಮೇಲೆ ದಾಳಿಯನ್ನು ಮಾಡುತ್ತವೆ. ಹೀಗೆಂದು ಅದನ್ನು ಹಾಗೆಯೇ ಬಿಟ್ಟರೆ ಪರಿಸ್ಥಿತಿ ಬಿಗಡಾಯಿಸುವುದು ಖಂಡಿತ. ಅದಕ್ಕೆಂದೇ ಕೆಲವು ಸಲಹೆಗಳನ್ನು ನೀವು ಅನುಸರಿಸಬೇಕಾಗಿದ್ದು ಪಾದಗಳ ಬೆರಳುಗಳ ಶುಶ್ರೂಷೆಯನ್ನು ಇದು ಮಾಡುತ್ತದೆ. ಪಾದಗಳಲ್ಲಿ ಬಿರುಕು ಹೋಗಲಾಡಿಸಲು 5 ವಿಧಾನ
ಯಾವಾಗಲೂ ಪಾದಗಳನ್ನು ಸ್ವಚ್ಛವಾಗಿರಿಸಿ
ಯಾವುದೇ ರೀತಿಯ ಸೋಂಕನ್ನು ಬುಡದಿಂದ ನಿವಾರಣೆ ಮಾಡಲು ಪಾದಗಳನ್ನು ದಿನಕ್ಕೆರಡು ಬಾರಿ ಸ್ವಚ್ಛವಾಗಿರಿಸಿ. ಸೂಕ್ತವಾಗಿ ಸ್ವಚ್ಛಗೊಳಿಸುವುದು ಕೂಡ ನಿಮ್ಮ ಪಾದಗಳನ್ನು ಮೃದುವಾಗಿಸುತ್ತದೆ.
ತೆರೆದ ಪಾದರಕ್ಷೆಯ ಆಯ್ಕೆ
ಮಳೆಗಾಲದಲ್ಲಿ, ಯಾವಾಗಲೂ ಮುಚ್ಚಿರುವ ಪಾದರಕ್ಷೆಗಳಿಗಿಂತ ಗಾಳಿಯಾಡುವ ಪಾದರಕ್ಷೆಗೆ ಆದ್ಯತೆ ನೀಡಿ. ಮುಚ್ಚಿದ ಪಾದರಕ್ಷೆಯು ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡಬಹುದು ಮತ್ತು ಸಹ್ಯವಲ್ಲದ ವಾಸನೆಯನ್ನು ಉಂಟುಮಾಡಬಲ್ಲುದು.
ಪಾದಗಳ ಎಕ್ಸ್ಫೋಲಿಯೇಟ್
ನಿತ್ಯವೂ ಈ ಕ್ರಿಯೆಯನ್ನು ನೀವು ನಡೆಸಬೇಕಾಗುತ್ತದೆ. ಸ್ಕ್ರಬ್ಬಿಂಗ್ ಪ್ಯಾಡ್ ಅಥವಾ ಪ್ಯುಮೈಸ್ ಸ್ಟೋನ್ ಅನ್ನು ಇದಕ್ಕಾಗಿ ನೀವು ಬಳಸಬೇಕಾಗುತ್ತದೆ. ಆದರೆ ಎಕ್ಸ್ಫೋಲಿಯೇಟ್ ಮಾಡುವುದು ಕಡ್ಡಾಯವಾಗಿದೆ. ಇದು ಮೃತ ಕೋಶಗಳನ್ನು ನಿವಾರಿಸಿ ನಿಮ್ಮ ಪಾದಗಳನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇರಿಸುತ್ತದೆ. ಅಂದದ ಪಾದ ಪಡೆಯಲು ಆರೇ ಸ್ಟೆಪ್
ಮಾಯಿಶ್ಚರೈಸರ್ಗಳ ಬಳಕೆ
ಪಾದಗಳು ಒಡೆಯದೇ ಇರಲು ಮಾಯಿಶ್ಚರೈಸರ್ಗಳನ್ನು ಕಡ್ಡಾಯವಾಗಿ ಬಳಸಿ. ಸ್ನಾನದ ನಂತರ ಮತ್ತು ಮಲಗುವ ವೇಳೆಯಲ್ಲಿ, ಈ ಎರಡೂ ಸಮಯಗಳಲ್ಲಿ ಮಾಯಿಶ್ಚರೈಸರ್ ಅನ್ನು ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳಿ.
ಪೆಡಿಕ್ಯೂರ್
ಸಮೀಪದ ಪಾರ್ಲರ್ಗೆ ಭೇಟಿ ನೀಡಿ, ಅಥವಾ ಮನೆಯಲ್ಲೇ ತಯಾರು ಮಾಡಿದ ಪಾದಗಳ ನೆನೆಯಿಸುವಿಕೆ ಕ್ರಿಯೆಯನ್ನು ಅನುಸರಿಸಿ. ಪಾದಗಳ ಬೇರೆ ಬೇರೆ ಭಾಗಗಳಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ತೊಡೆದು ಹಾಕಲು ಪೆಡಿಕ್ಯೂರ್ ಮಾಡಲೇಬೇಕಾಗುತ್ತದೆ.



Click it and Unblock the Notifications



