For Quick Alerts
ALLOW NOTIFICATIONS  
For Daily Alerts

ಹೋಳಿ ಹಬ್ಬದಲ್ಲಿ ಮೈಮರೆತು, ಅಪಾಯಕ್ಕೆ ಆಹ್ವಾನ ನೀಡಬೇಡಿ!

By Jaya Subramanya
|

ಬಣ್ಣಗಳ ಹಬ್ಬ ಹೋಳಿಯ ಆಚರಣೆಯನ್ನು ನಮ್ಮಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಒಬ್ಬರು ಇನ್ನೊಬ್ಬರ ಮೇಲೆ ಬಣ್ಣವನ್ನು ಎರಚಾಡುತ್ತಾ ಹೋಳಿ ಹಬ್ಬದ ಖುಷಿಯಲ್ಲಿ ಮೈಮರೆಯುತ್ತಾರೆ. ಬಾಂಗ್ ಕೂಡ ಹೋಳಿ ಹಬ್ಬದ ಆಚರಣೆಯ ಒಂದು ಭಾಗವಾಗಿದ್ದು ಪರಸ್ಪರರಿಗೆ ಸಿಹಿ ತಿನ್ನಿಸುತ್ತಾ ಭಾವೈಕ್ಯತೆಯನ್ನು ಮೆರೆಯುವ ಹಬ್ಬವಾಗಿದೆ ಹೋಳಿ. ಉತ್ತರ ಭಾರತದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಹೊಂದಿರುವ ಹಬ್ಬ ನಿಧಾನವಾಗಿ ದಕ್ಷಿಣಕ್ಕೂ ಕಾಲಿಟ್ಟಿದೆ. ಅಂತೂ ಬಣ್ಣಗಳ ಹಬ್ಬ ಮೈಮನಗಳನ್ನು ಸಂಭ್ರಮದಿಂದ ರಂಗೇರುವಂತೆ ಮಾಡುವುದು ಸುಳ್ಳಲ್ಲ.

Reasons why Holi is bad for your skin and health

ಆದರೆ ಈ ಬಣ್ಣದ ಗುರುತು ನಿಮ್ಮ ತ್ವಚೆ ಮತ್ತು ಕೂದಲಿಗೆ ಹಾಗೂ ಆರೋಗ್ಯಕ್ಕೆ ಎಷ್ಟು ಅಪಾಯವನ್ನುಂಟು ಮಾಡಬಲ್ಲುದು ಎಂಬುದನ್ನು ನೀವು ಅರಿತಿದ್ದೀರಾ? ರಾಸಾಯನಿಕಗಳನ್ನು ಬಳಸಿ ಈ ಬಣ್ಣಗಳನ್ನು ತಯಾರಿಸುವುದರಿಂದ ಇದು ಖಂಡಿತ ನಿಮ್ಮ ತ್ವಚೆಗೆ ಉಂಟುಮಾಡುವ ಅಪಾಯ ಅಷ್ಟಿಷ್ಟಲ್ಲ. ಮೊಡವೆ, ಅಲರ್ಜಿಗಳು, ಚರ್ಮದ ಉರಿಯೂತ ಖಂಡಿತ ನಿಮಗೆ ಉಂಟಾಗಬಲ್ಲುದು. ಹಬ್ಬದ ಸಂಭ್ರಮದಲ್ಲಿ ಈ ಅಪಾಯಗಳಿಗೆ ನಾವು ಅಷ್ಟೊಂದು ಗಮನ ಕೊಡದೇ ಹೋದರೂ ಈ ಬಣ್ಣಗಳು ಏಕೆ ಇಷ್ಟೊಂದು ಅಪಾಯಕಾರಿ ಮತ್ತು ಅವುಗಳು ತ್ವಚೆ ಹಾಗೂ ಆರೋಗ್ಯದ ಮೇಲೆ ಏಕೆ ಗಂಭೀರ ಪ್ರಭಾವವನ್ನೆಸಗುತ್ತವೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಈ ಅಂಶಗಳನ್ನು ನೀವು ತಿಳಿದುಕೊಂಡಾಗ ಹೋಳಿ ಆಡುವ ಮುನ್ನ ನೂರು ಬಾರಿ ಯೋಚಿಸುವುದು ಖಂಡಿತ.

1.ಹೋಳಿಯ ಬಣ್ಣವು ತ್ವಚೆಯ ಮೇಲೆ ಅಲರ್ಜಿಗಳು ಮತ್ತು ಕೆಂಪು ಗುಳ್ಳೆಗಳನ್ನು ಉಂಟುಮಾಡುತ್ತದೆ.
2. ಬಣ್ಣದಿಂದ ಕಣ್ಣಿನ ಸೋಂಕುಗಳು ಉಂಟಾಗಬಹುದು ಅಂತೆಯೇ ತಾತ್ಕಾಲಿಕ ಅಂಧತ್ವ ಕಾಡಬಹುದು. ಕೆಲವು ಬಣ್ಣಗಳಲ್ಲಿ ಕೋಪರ್ ಸಲ್ಫೇಟ್ ಅಂಶ ಇರುವುದರಿಂದ ಕಣ್ಣುಗಳಿಗೆ ಹೆಚ್ಚು ಅಪಾಯಕಾರಿಯಾಗಿರುತ್ತದೆ.
3.ಸಿಲ್ವರ್ ಬಣ್ಣವು ಹೆಚ್ಚು ಖ್ಯಾತಿವೆತ್ತಿರುವ ಬಣ್ಣವಾಗಿದ್ದು ಇದರಲ್ಲಿ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳಿರುತ್ತವೆ ಇದು ತ್ವಚೆಯ ಕ್ಯಾನ್ಸರ್‎ಗೆ ಕಾರಣವಾಗಬಹುದು.


4.ಬಣ್ಣಗಳಲ್ಲಿರುವ ವಿವಿಧ ರಾಸಾಯನಿಕಗಳು ತ್ವಚೆಗೆ ಅಪಾಯವನ್ನುಂಟು ಮಾಡುವಂತಿದ್ದು ತ್ವಚೆಯ ಕೆಂಪು ಗುಳ್ಳೆಗಳು, ಒಣಗುವಿಕೆ, ಮೊಡವೆ, ಚರ್ಮದ ಉರಿಯೂತಕ್ಕೆ ಕಾರಣವಾಗಬಲ್ಲುದು.
5.ಕಪ್ಪು ಬಣ್ಣದಲ್ಲಿ ಲೀಡ್ ಆಕ್ಸೈಡ್ ಇರುವುದರಿಂದ ನಿಮ್ಮ ಕಿಡ್ನಿಗಳಿಗೆ ಇದು ಅಪಾಯವನ್ನು ತರಬಲ್ಲುದು ಅಂತೆಯೇ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಲ್ಲುದು.
6.ಇನ್ನು ಕೂದಲಿಗೂ ಈ ಬಣ್ಣಗಳು ಹೆಚ್ಚು ಅಪಾಯಕಾರಿಯಾಗಿದ್ದು, ಒಣ ನೆತ್ತಿ, ಒಣಗುವಿಕೆ, ಒರಟಾದ ತೆರೆದ ತೊಗಟೆಯಿಂದ ನೆತ್ತಿಯು ತುರಿಕೆಗೆ ಒಳಗಾಗಬಹುದು ಮತ್ತು ತ್ವಚೆಗೆ ಕಿರುಕುಳವನ್ನು ಉಂಟುಮಾಡಬಲ್ಲುದು.
7.ಬಣ್ಣವನ್ನು ಸಿಲಿಕಾ, ಗ್ಲಾಸ್ ಮತ್ತು ಇತರ ವಸ್ತುಗಳಿಂದ ಮಾಡಿರುವುದರಿಂದ ನಿಮ್ಮ ಕಣ್ಣುಗಳಿಗೆ ಮತ್ತು ತ್ವಚೆಗೆ ಇದು ಹಾನಿಯನ್ನುಂಟು ಮಾಡುವುದು ಖಂಡಿತ. ಆದಷ್ಟು ಸಾವಯವ ಬಣ್ಣಗಳಿಂದ ಹೋಳಿಯಾಟವನ್ನು ಆಡಿ ಇವುಗಳು ತ್ವಚೆಗೆ ಅಷ್ಟೊಂದು ಹಾನಿಯನ್ನುಂಟು ಮಾಡದೇ ರಾಸಾಯನಿಕ ಮುಕ್ತವಾಗಿರುತ್ತದೆ.
8.ಗರ್ಭಿಣಿ ಸ್ತ್ರೀಯರು ಆದಷ್ಟು ಬಣ್ಣಗಳ ಎರಚಾಟದಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆ ಮಾಡಿ. ಭ್ರೂಣದ ವೈಪರೀತ್ಯಗಳನ್ನು ಈ ಬಣ್ಣಗಳು ಉಂಟುಮಾಡುವ ಸಾಧ್ಯತೆ ಇರುತ್ತದೆ.
9.ಅಸ್ತಮಾ ಮತ್ತು ಶ್ವಾಸಕೋಶದ ಕಟ್ಟುವಿಕೆಯು ಈ ಬಣ್ಣಗಳಿಂದ ಉಂಟಾಗುವ ಅಪಾಯಗಳಾಗಿವೆ.
10. ಬಣ್ಣಗಳ ಹೆಚ್ಚು ಬಳಕೆಯು ನಿಮ್ಮ ತ್ವಚೆಗೆ ಮಾರ್ಪಡಿಸಲಾಗದ ಹಾನಿಯನ್ನು ಉಂಟುಮಾಡುವುದು ಖಂಡಿತ. ಆದ್ದರಿಂದ ಆದಷ್ಟು ಕಾಳಜಿಯನ್ನು ನೀವು ವಹಿಸಬೇಕು. ನಿಮ್ಮ ಒಂದು ದಿನದ ಹೋಳಿ ಸಂಭ್ರಮ ನಿಮ್ಮನ್ನು ನಿತ್ಯವೂ ವೈದ್ಯರನ್ನು ಭೇಟಿ ಮಾಡುವಂತೆ ಮಾಡಬಾರದು ಅಲ್ಲವೇ? ಸುರಕ್ಷಿತ ಹೋಳಿಯನ್ನು ಆಚರಿಸಿ ಅಂತೆಯೇ ನಿಮ್ಮ ಕೂದಲು, ತ್ವಚೆ ಮತ್ತು ಆರೋಗ್ಯದ ಕಾಳಜಿಯನ್ನು ಮಾಡಿ.
English summary

Reasons why Holi is bad for your skin and health

One of the most colourful Indian festivals, Holi is everybody’s favourite festival. Throwing colours at each other, bingeing on sweets and other delicacies, coming back home and trying to remove all the colours off your skin, there are two sides to this festival.
X
Desktop Bottom Promotion