For Quick Alerts
ALLOW NOTIFICATIONS  
For Daily Alerts

ಹಳದಿ ಹಲ್ಲಿನ ಸಮಸ್ಯೆಗೆ, ಪವರ್ ಫುಲ್ ಮನೆಮದ್ದು

By Jaya subramanya
|

ಸುಂದರವಾದ ನಗುವಿಗೆ ಯಾರೂ ಕೂಡ ಮನಸೋಲುತ್ತಾರೆ. ಅದ್ಭುತವಾದ ನಗುವನ್ನು ಹೊಂದಿರಲು ನೀವು ಸುಂದರವಾದ ದಂತಪಂಕ್ತಿಗಳನ್ನು ಹೊಂದಿರಬೇಕು. ಆದರೆ ಈ ಸುಂದರವಾದ ಹಲ್ಲಿಗಾಗಿ ನೀವೇನು ಮಾಡಬೇಕು ಗೊತ್ತೇ? ನಿಜವಾಗಿ ಕೂಡ ಹೊಳೆಯುವ ಹುಳುಕಿಲ್ಲದ ಹಲ್ಲನ್ನು ಪಡೆಯುವ ಇಚ್ಛೆ ಯಾರಿಗಿರುವುದಿಲ್ಲ ಹೇಳಿ. ಹಳದಿ ಹಲ್ಲಿನಿಂದ ನೀವು ನಗೆ ಚೆಲ್ಲಿದಿರಿ ಎಂದಾದಲ್ಲಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತದೆ.

ಹಾಗಿದ್ದರೆ ಮನೆಯಲ್ಲೇ ಹಲ್ಲಿನ ರಿಪೇರಿಗೆ ನೀವು ಅನುಸರಿಸಬೇಕಾದ ಸಲಹೆಗಳೇನು ಎಂಬುದನ್ನೇ ಇಂದಿಲ್ಲಿ ತಿಳಿಸಲಿದ್ದೇವೆ. ಬರಿಯ ಹಲ್ಲುಜ್ಜುವುದರಿಂದ ಮಾತ್ರವೇ ನಿಮ್ಮ ಹಲ್ಲನ್ನು ಆರೋಗ್ಯಯುತ ಮತ್ತು ಹೊಳೆಯುವಂತೆ ಮಾಡಲಾಗುವುದಿಲ್ಲ. ಮನೆಮದ್ದುಗಳಾದ ಉಪ್ಪು, ಲಿಂಬೆ ರಸವನ್ನು ಬಳಸಿಕೊಂಡು ನಿಮ್ಮ ಹಲ್ಲುಗಳನ್ನು ಹೊಳೆಯಿಸಬಹುದಾಗಿದೆ. ಹುಷಾರ್, ಹಲ್ಲುಗಳ ಜೊತೆ ಎಂದೂ ಆಟವಾಡಬೇಡಿ..!

ಈ ಪರಿಹಾರಗಳನ್ನು ಬಳಸಿಕೊಂಡು ನಿಮ್ಮ ಹಲ್ಲುಗಳನ್ನು ಸುಂದರಗೊಳಿಸುವ ಸಂದರ್ಭದಲ್ಲಿ ಬಾಯಿಯ ಸಂಪೂರ್ಣ ಆರೋಗ್ಯದೆಡೆಗೆ ನೀವು ಗಮನವನ್ನು ಹರಿಸಬೇಕಾಗುತ್ತದೆ. ಬಾಯಿಯ ಆರೋಗ್ಯಕ್ಕಾಗಿ ದಿನಕ್ಕೆರಡು ಬಾರಿ ನೀವು ಹಲ್ಲುಜ್ಜಬೇಕು ಮತ್ತು ಬಾಯಿಯನ್ನು ಸ್ವಚ್ಛವಾಗಿ ತೊಳೆಯಬೇಕು. ಪ್ರತೀ ತಿಂಗಳು ಬಾಯಿಯ ಮತ್ತು ಹಲ್ಲುಗಳ ಪರಿಶೀಲನೆಗಾಗಿ ದಂತವೈದ್ಯರನ್ನು ಕಾಣಬೇಕು. ಮನೆಯಲ್ಲೇ ನೈಸರ್ಗಿಕವಾಗಿ ಹಲ್ಲುಗಳ ಕಾಳಜಿಯನ್ನು ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಆಹಾರ ಪದ್ಧತಿಯನ್ನು ನೀವು ಅನುಸರಿಸಬೇಕು. ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಕು ಇದು ಪ್ರತೀ ಸಲ ನೀವು ಆಹಾರ ಸೇವಿಸಿದ ಸಮಯದಲ್ಲಿ ಅನುಸರಿಸಬೇಕು. ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

ನಿಮ್ಮ ಮಕ್ಕಳಲ್ಲೂ ಈ ಅಭ್ಯಾಸವನ್ನು ಮೈಗೂಡಿಸುವಂತೆ ಮಾಡಿ. ಇದರಿಂದ ಅವರೂ ಕೂಡ ಹಲ್ಲಿನ ಸಮಸ್ಯೆಗಳಿಂದ ದೂರವಿರುತ್ತಾರೆ ಬಾಯಿಯ ದುರ್ವಾಸನೆ ಮತ್ತು ಹಳದಿ ಹಲ್ಲು ಅವರಲ್ಲಿ ಇರುವುದಿಲ್ಲ. ಮನೆಯಲ್ಲೇ ಹಲ್ಲುಗಳ ಕಾಳಜಿ ಮತ್ತು ಅವುಗಳನ್ನು ಬಿಳಿಯಾಗಿಸುವುದಕ್ಕೆ ನೈಸರ್ಗಿಕ ಪರಿಹಾರಗಳನ್ನು ನೀಡುತ್ತಿದ್ದೇವೆ....

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ

ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ

ಹಲ್ಲಿನಿಂದ ಹಳದಿ ಬಣ್ಣವನ್ನು ಹೋಗಲಾಡಿಸಲು, ಈ ಪರಿಹಾರ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಟೂತ್ ಪೇಸ್ಟ್‎ನಲ್ಲಿ ಇದನ್ನು ಉದುರಿಸಿಕೊಳ್ಳಿ ಮತ್ತು ಹಲ್ಲುಗಳನ್ನು ಉಜ್ಜಿ ಅಥವಾ ಬೇಕಿಂಗ್ ಸೋಡಾ ಮತ್ತು ನೀರನ್ನು ಬಳಸಿ ಪೇಸ್ಟ್ ತಯಾರಿಸಿಕೊಂಡು ಇದನ್ನು ನಿಮ್ಮ ಹಲ್ಲುಗಳಿಗೆ ಉಜ್ಜಿ. ನಿಮ್ಮ ಬಾಯಿಯನ್ನು ತೊಳೆದುಕೊಂಡ ನಂತರ ಫಲಪ್ರದ ಪರಿಣಾಮ ನಿಮಗುಂಟಾಗುತ್ತದೆ.

ಉಪ್ಪು

ಉಪ್ಪು

ಹಲವಾರು ಯುಗಗಳಿಂದ ಹಲ್ಲುಗಳನ್ನು ಬಿಳಿಯಾಗಿಸಲು ಉಪ್ಪನ್ನು ಬಳಸಲಾಗುತ್ತಿದೆ. ನಿಮ್ಮ ಟೂತ್ ಪೇಸ್ಟ್‎ನೊಂದಿಗೆ ಕೂಡ ಇದನ್ನು ಬಳಸಿಕೊಳ್ಳಬಹುದಾಗಿದೆ. ಉಪ್ಪು ನಿಮ್ಮ ಹಲ್ಲುಗಳನ್ನು ಮಾತ್ರ ಬಿಳಿಯಾಗಿಸದೇ ದಂತಕುಳಿ ಸಮಸ್ಯೆಗೂ ಉತ್ತಮ ಪರಿಹಾರವಾಗಿದೆ. ಮನೆಯಲ್ಲಿ ಇದನ್ನು ಪ್ರಯತ್ನಿಸಿ.

ಲಿಂಬೆ ರಸ

ಲಿಂಬೆ ರಸ

ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿರುವ ಲಿಂಬೆ ರಸ ಹಲ್ಲುಗಳ ಶುದ್ಧೀಕರಣದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಹಲ್ಲು ಹಳದಿಗಟ್ಟಿದೆ ಎಂದಾದಲ್ಲಿ ಉಪ್ಪು ಮತ್ತು ಲಿಂಬೆರಸದ ಮಿಶ್ರಣ ಇದಕ್ಕೆ ಸೂಕ್ತ. ಆದರೆ ನಿತ್ಯವೂ ಇದನ್ನು ಬಳಸಬೇಡಿ. ಏಕೆಂದರೆ ಆಸಿಡಿಕ್ ಸ್ವಭಾವ ದಂತಕ್ಷಯವನ್ನು ಉಲ್ಬಣಗೊಳಿಸಬಹುದು.

ತೆಂಗಿನೆಣ್ಣೆ

ತೆಂಗಿನೆಣ್ಣೆ

ಈ ಪರಿಹಾರವನ್ನು ಬಳಸಿಕೊಂಡು ಹಲ್ಲನ್ನು ಬಿಳಿಯಾಗಿಸಿಕೊಳ್ಳಬಹುದಾಗಿದೆ. ಸಂಶೋಧಕರ ಪ್ರಕಾರ, ತೆಂಗಿನೆಣ್ಣೆಯು, ಲಾರಿಕ್ ಆಸಿಡ್ ಅನ್ನು ಒಳಗೊಂಡಿದ್ದು ಹಲ್ಲಿನ ಹಳದಿಗಟ್ಟುವಿಕೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ ಎಂದಾಗಿದೆ. ಬಟ್ಟೆಯನ್ನು ಎಣ್ಣೆಯಲ್ಲಿ ನೆನೆಸಿಡಿ ಮತ್ತು ನಿತ್ಯವೂ ನಿಮ್ಮ ಹಲ್ಲಿಗೆ ಈ ಬಟ್ಟೆಯಿಂದ ಉಜ್ಜಿ. ನಂತರ ಬಾಯಿ ತೊಳೆದುಕೊಳ್ಳಿ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ತ್ವಚೆ ಮತ್ತು ಕೂದಲಿನ ಕಾಳಜಿಯಲ್ಲಿ ಆಪಲ್ ಸೀಡರ್ ವಿನೇಗರ್ ಅದ್ಭುತ ಪ್ರಯೋಜನವನ್ನು ಉಂಟುಮಾಡುತ್ತದೆ. ನಿಮ್ಮ ಹಲ್ಲಿಗೂ ಇದು ಪ್ರಯೋಜನಕಾರಿಯಾದುದು ಎಂಬುದು ನಿಮಗೆ ಗೊತ್ತೇ? ಒಂದು ಭಾಗದಷ್ಟು ವಿನೇಗರ್ ಮತ್ತು ಎರಡು ಭಾಗಗಳಷ್ಟು ನೀರನ್ನು ತೆಗೆದುಕೊಳ್ಳಿ. ಚೆನ್ನಾಗಿ ಗಾರ್ಗಲಿಂಗ್ ಮಾಡುವ ಮೂಲಕ ಬಾಯಿಯನ್ನು 2 ನಿಮಿಷ ತೊಳೆದುಕೊಳ್ಳಿ. ಕೆಲವೇ ದಿನಗಳಲ್ಲಿ ಉತ್ತಮ ಪ್ರಯೋಜನ ಕಂಡುಕೊಳ್ಳಲು ನಿತ್ಯವೂ ಹೀಗೆ ಮಾಡಿ.

ಸ್ಟ್ರಾಬೆರ್ರಿ

ಸ್ಟ್ರಾಬೆರ್ರಿ

ಮಾಲಿಕ್ ಆಸಿಡ್ ಈ ಹಣ್ಣಿನಲ್ಲಿದ್ದು, ನಿಮ್ಮ ಹಲ್ಲಿಗೆ ಉತ್ತಮ ಬ್ಲೀಚಿಂಗ್ ಅನ್ನು ಮಾಡುತ್ತದೆ. ಹಲವಾರು ಟೂತ್ ಪೇಸ್ಟ್‎ಗಳಲ್ಲಿ ಸ್ಟ್ರಾಬೆರ್ರಿ ಸ್ಥಾನ ಪಡೆದುಕೊಂಡಿದೆ. ಇದರಲ್ಲಿರುವ ನಾರಿನಂಶ ಮೈಕ್ರೊ ಆರ್ಗಾನಿಸಮ್ಸ್ ಅನ್ನು ತೆಗೆದುಹಾಕುತ್ತದೆ ಇದು ನಿಮ್ಮ ದಂತಕುಳಿ ಮತ್ತು ದಂತಕ್ಷಯಕ್ಕೆ ಕಾರಣವಾಗಿದೆ.

ಬಾಳೆಹಣ್ಣು ತೊಗಟೆ

ಬಾಳೆಹಣ್ಣು ತೊಗಟೆ

ಮನೆಯಲ್ಲೇ ಹಲ್ಲು ಬೆಳ್ಳಗಾಗಿಸುವ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದೀರಿ ಎಂದಾದಲ್ಲಿ ಬಾಳೆಹಣ್ಣು ತೊಗಟೆ ಉತ್ತಮವಾದುದು. ಬಾಳೆಹಣ್ಣು ಸಿಪ್ಪೆಯನ್ನು ಬಳಸಿಕೊಂಡು ಅದರ ಒಳಭಾಗವನ್ನು ಪ್ರತೀ ದಿನ 2-3 ನಿಮಷಗಳಷ್ಟು ಕಾಲ ಉಜ್ಜಿಕೊಳ್ಳಿ.

ಎಳ್ಳಿನ ಬೀಜಗಳು

ಎಳ್ಳಿನ ಬೀಜಗಳು

ಎಳ್ಳಿನ ಬೀಜಗಳು ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

ತುಳಸಿ ಎಲೆಗಳಿಂದ ತಯಾರಿಸಿದ ಹಲ್ಲು ಪುಡಿ!

ತುಳಸಿ ಎಲೆಗಳಿಂದ ತಯಾರಿಸಿದ ಹಲ್ಲು ಪುಡಿ!

ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ನೆರಳಲ್ಲಿ ಇಟ್ಟು ಒಣಗಿಸಿ

*ಒಮ್ಮೆ ತುಳಸಿ ಎಲೆಗಳು ಸಂಪೂರ್ಣವಾಗಿ ಒಣಗಿದ ಮೇಲೆ, ಅದನ್ನು ಗ್ರೈಂಡ್ ಮಾಡಿ ಪುಡಿಮಾಡಿ

* ಇನ್ನು ಈ ಪುಡಿಯನ್ನು ನಿಮ್ಮ ಹಲ್ಲುಗಳನ್ನು ಉಜ್ಜಲು ಬಳಸಿ.

*ನಿಮ್ಮ ಬೆರಳಿನಿಂದ ಕೂಡ ತುಳಸಿ ಪುಡಿಯಿಂದ ಹಲ್ಲುಗಳನ್ನು ಉಜ್ಜಬಹುದು ಅಥವಾ ತುಳಸಿ ಪುಡಿಯನ್ನು ನಿಮ್ಮ ಎಂದಿನ ಟೂತ್ ಪೇಸ್ಟ್ ಜೊತೆ ಮಿಶ್ರಣಮಾಡಿ ಬಳಸಲೂ ಬಹುದು.

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ರಾತ್ರಿ ಮಲಗುವ ಮೊದಲು ಲಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲನ್ನು ಉಜ್ಜಿ

ಒಂದು ಲಿಂಬೆಹಣ್ಣಿನ ಸಿಪ್ಪೆ ತೆಗೆದುಕೊಂಡು ನಿಮ್ಮ ಹಲ್ಲುಗಳ ಮೇಲೆ 1/2 ದಿಂದ 1 ನಿಮಿಷದವರೆಗೆ ಮಾತ್ರ ಉಜ್ಜಿ ನಂತರ ನೀರಿನಿಂದ ತೊಳೆದುಕೊಳ್ಳಿ. ಒಂದು ಚಮಚ ಲಿಂಬೆರಸಕ್ಕೆ ಒಂದು ಚಮಚ ನೀರು ಬೆರಸಿ: ಅದನ್ನು ಬಳಸಿ ನಿಮ್ಮ ಹಲ್ಲುಗಳನ್ನು ಉಜ್ಜಿ. ನೀರಿನಿಂದ ತೊಳೆದುಕೊಂಡ ನಂತರ ನಿಮ್ಮ ಮಾಮೂಲು ಟೂತ್ ಪೇಸ್ಟಿನಿಂದ ಬ್ರಶ್ ಮಾಡಿ.

ಕಹಿ ಬೇವು

ಕಹಿ ಬೇವು

ಕಹಿ ಬೇವು ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ನಿಮ್ಮ ಹಳದಿ ದ೦ತಪ೦ಕ್ತಿಗಳನ್ನು ಮಾಲೀಸು ಮಾಡಿಕೊಳ್ಳುವುದರ ಮೂಲಕ ಅದನ್ನು ಬಿಳುಪಾಗಿಸಿರಿ. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

English summary

How to Get White Teeth Naturally, Safely, Fast, and Instantly

Brushing is not the only way to make your teeth healthier and shinier. Home remedies like salt, lemon juice, etc, have been used from a very long time to make your teeth brighter. Even now, you can apply these for whitening your teeth. But, while you apply these for whitening your teeth, you also need to take good care of your overall hygiene of the mouth. Here are some natural ways to whiten teeth at home.have a look
X
Desktop Bottom Promotion