For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಚರ್ಮದ ಕಾಂತಿಗೆ ಕಾಫಿಪುಡಿಯ ಸ್ಕ್ರಬ್

By Manu
|

ಕಾಫಿ ಒಂದು ಅಹ್ಲಾದ ನೀಡುವ ಪೇಯವಾಗಿದ್ದು ಕುಡಿದ ಬಳಿಕ ಚೈತನ್ಯ ನೀಡುತ್ತದೆ. ಕೆಲವರಿಗೆ ದಿನಕ್ಕೆ ನಾಲ್ಕಾರು ಕಪ್ ಕಾಫಿ ಬೇಕು. ಕೆಲಸದ ನಡುವಣ ಚಿಕ್ಕ ವಿರಾಮಕ್ಕೂ ಕಾಫಿ ಬ್ರೇಕ್ ಎಂದೇ ಕರೆಯಲಾಗುತ್ತದೆ. ಕಾಫಿಯ ಬಳಕೆ ಕೇವಲ ಕುಡಿಯುವುದಕ್ಕೆ ಮಾತ್ರ ಎಂದುಕೊಂಡಿದ್ದರೆ ನಿಮ್ಮ ಅನಿಸಿಕೆ ತಪ್ಪಾಗುತ್ತದೆ.

ಏಕೆಂದರೆ ಕಾಫಿ ಒಂದು ಉತ್ತಮ ಸೌಂದರ್ಯವರ್ಧಕವೂ ಹೌದು. ಚಿಕ್ಕಪುಟ್ಟ ಗಾಯಗಳಾದರೆ ಗಾಯದ ಮೇಲೆ ಕಾಫಿ ಪುಡಿ ಹಚ್ಚುವ ಮೂಲಕ ರಕ್ತ ಹರಿಯುವುದನ್ನು ನಿಲ್ಲಿಸಬಹುದು. ಅಂದರೆ ರಕ್ತ ಹೆಪ್ಪುಗಟ್ಟಲು ಕಾಫಿಪುಡಿ ಸಹಾಯ ಮಾಡುತ್ತದೆ. ಈ ಗುಣವೇ ಚರ್ಮದ ಆರೈಕೆಗೂ ಬಳಕೆಯಾಗುತ್ತದೆ. ಹೊಳಪಿನ ಮೈಗಾಗಿ ಕಾಫಿ ಬಾಡಿ ಸ್ಕ್ರಬ್

ಕಾಫಿಯನ್ನು ಹಲವಾರು ಸೌಂದರ್ಯ ಪ್ರಸಾಧನಗಳಲ್ಲಿ ಬಳಸುತ್ತಾ ಬರಲಾಗಿದೆ. ಈ ಬಗ್ಗೆ ಹೆಚ್ಚಿನವರಿಗೆ ಅರಿವೇ ಇಲ್ಲ. ಕಾಫಿಯಲ್ಲಿರುವ ಪೋಷಕಾಂಶಗಳು ಚರ್ಮದ ಒಳಭಾಗದಿಂದ ನೀಡುವ ಪೋಷಣೆ ಕಾಂತಿಯನ್ನು ಹೆಚ್ಚಿಸುವ ಜೊತೆಗೇ ಕಲೆಗಳನ್ನು ನಿವಾರಿಸಿ ಸಹಜವರ್ಣ ಪಡೆಯಲೂ ಸಹಾಯ ಮಾಡುತ್ತದೆ. ಚರ್ಮದ ಉತ್ತಮ ಆರೈಕೆಗಾಗಿ ನಿತ್ಯವೋ ಕೊಂಚ ಪೋಷಣೆ ನೀಡುವುದು ಅಗತ್ಯ.

DIY Homemade Coffee Powder Scrub For Glowing Skin

ಕೊಂಚ ಕ್ಲೀನ್ಸಿಂಗ್, ಸತ್ತ ಜೀವಕೋಶಗಳ ನಿವಾರಣೆ (exfoliating), ಟೋನಿಂಗ್ ಮತ್ತು ಆರ್ದ್ರಗೆ ನೀಡುವುದು (moisturising). ಉತ್ತಮ ಆರೈಕೆಯಿಂದ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕೊಳೆ ನಿವಾರಣೆಯಾಗಿ ಸೋಂಕಿನಿಂದ ರಕ್ಷಿಸಿದಂತಾಗುತ್ತದೆ ಹಾಗೂ ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಿ ಇನ್ನಷ್ಟು ಕೊಳೆ ತುಂಬದಂತೆ ತಡೆಯಬಹುದು ಹಾಗೂ ಒಳಗಿನ ಪೋಷಣೆಯಿಂದ ಚರ್ಮದ ಕಾಂತಿ ಹೆಚ್ಚಿಸಬಹುದು. exfoliating ಅಥವಾ ಸತ್ತ ಜೀವಕೋಶಗಳನ್ನು ನಿವಾರಿಸುವುದೂ ಚರ್ಮದ ಆರೈಕೆಯಲ್ಲಿ ಒಂದು ಮುಖ್ಯವಾದ ಹಂತವಾಗಿದೆ. ಈ ಜೀವಕೋಶಗಳು ತೆಳುವಾದ ಪದರದ ರೂಪದಲ್ಲಿ ಹೊರಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದು ಹೊಸ ಜೀವಕೋಶಗಳ ಬೆಳವಣಿಗೆಗೆ ಅಡ್ಡಿಯಾಗಿರುತ್ತದೆ. ಇದನ್ನು ನಿವಾರಿಸಿದರೆ ಹೊಸಚರ್ಮ ಬೆಳೆಯಲು ಅನುಕೂಲವಾಗುತ್ತದೆ.

ಇಂದು ಮಾರುಕಟ್ಟೆಯಲ್ಲಿ ಈ ಕಾರ್ಯಕ್ಕಾಗಿ ಹಲವು ಸ್ಕ್ರಬ್ ಎಂಬ ಲೇಪನಗಳು ದೊರಕುತ್ತವೆ. ಇವು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತವೆ. ಆದರೆ ಈ ಕಾರ್ಯಕ್ಕಾಗಿ ಕೆಲವು ಪ್ರಬಲ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇವುಗಳು ಒಮ್ಮೆಯೇ ಅಲ್ಲದಿದ್ದರೂ ಕ್ರಮೇಣವಾಗಿ ಚರ್ಮದ ಮೇಲೆ ಪ್ರಭಾವ ಬೀರಿ ಚರ್ಮದ ಕೋಮಲತೆಯನ್ನು ಘಾಸಿಗೊಳಿಸಬಹುದು. ಇವುಗಳ ಬದಲಿಗೆ ನೈಸರ್ಗಿಕ ಸ್ಕ್ರಬ್ ಗಳನ್ನು ಆಯ್ದುಕೊಳ್ಳಬಹುದು. ಈ ಕಾರ್ಯಕ್ಕೆ ನಿಸರ್ಗ ನೀಡಿರುವ ಅತ್ಯುತ್ತಮ ಸ್ಕ್ರಬ್ ಎಂದರೆ ಕಾಫಿಪುಡಿ!

ಕೊಂಚ ಕಾಫಿಪುಡಿ ಮತ್ತು ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ಪರಿಕರಗಳನ್ನು ಬಳಸಿ ಸಮರ್ಥವಾದ ಸ್ಕ್ರಬ್ ಅನ್ನು ಮನೆಯಲ್ಲಿಯೇ ಅಗ್ಗವಾಗಿ ತಯಾರಿಸಿ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ಸಮರ್ಥವಾದ ಪೋಷಕಾಂಶಗಳು ಕಾಫಿಪುಡಿಯಲ್ಲಿವೆ. ಆದರೆ ಇವು ಘನರೂಪದಲ್ಲಿರುವ ಕಾರಣ ಇವನ್ನು ನೇರವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಬದಲಿಗೆ ಇದನ್ನು ಕೊಂಚ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಸಿದರೆ ಉತ್ತಮವಾದ ಪರಿಣಾಮ ಪಡೆಯಬಹುದು.

ಸತ್ತ ಜೀವಕೋಶಗಳನ್ನು ಮಾತ್ರವಲ್ಲ, ಸೂಕ್ಷ್ಮರಂಧ್ರಗಳಲ್ಲಿ ಒಂದು ವೇಳೆ ಸೂಕ್ಷ್ಮಜೀವಿಗಳು ಈಗಾಗಲೇ ಬೀಡುಬಿಟ್ಟಿದ್ದು ಸೋಂಕು ಹರಡಲು ತಯಾರಿ ನಡೆಸುತ್ತಿದ್ದರೆ ಕಾಫಿ ಈ ಕ್ರಿಮಿಗಳನ್ನು ಅಲ್ಲಿಂದ ಹೊರಹಾಕಿ ಆ ಸ್ಥಳವನ್ನೆಲ್ಲಾ ಚೊಕ್ಕಟ ಮಾಡಿಬಿಡುತ್ತದೆ. ಕೊಬ್ಬರಿ ಎಣ್ಣೆ ಒಂದು ಉತ್ತಮವಾದ ತೇವಕಾರಕವಾಗಿದ್ದು ಸೂಕ್ಷ್ಮರಂಧ್ರಗಳಲ್ಲಿ ಕಾಫಿ ಪುಡಿ ಇಳಿಯಲು ನೆರವಾಗುತ್ತದೆ ಹಾಗೂ ಹೊಸ ಜೀವಕೋಶಗಳು ಬೆಳೆಯಲು ನೆರವಾಗುತ್ತದೆ. ಅಲ್ಲದೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ನೀಡಿ ಪೋಷಿಸುತ್ತದೆ. ಇವೆರಡರ ಜೋಡಿ ಮಾಡುವ ಕೆಲಸವನ್ನು ಮುಖ ತೊಳೆದಾದ ಮೇಲೆ ಪ್ರಜ್ವಲಿಸುವ ಚರ್ಮವೇ ತಿಳಿಸುತ್ತದೆ.

ಕಾಫಿಪುಡಿ ಸ್ಕೃಬ್ ಮಾಡುವ ವಿಧಾನ
*ಅಗತ್ಯವಿರುವ ಸಾಮಾಗ್ರಿಗಳು:
*ಕಾಫಿ ಪುಡಿ - 3 ದೊಡ್ಡಚಮಚ (ಇನ್ಸ್ಟಂಟ್ ಕಾಫಿ ಸಲ್ಲದು, ನಮ್ಮ ಸಾಂಪ್ರಾದಾಯಿಕ ಅಪ್ಪಟ ಕಾಫಿಪುಡಿಯೇ ಆಗಬೇಕು)
*ಕೊಬ್ಬರಿ ಎಣ್ಣೆ - 1 ದೊಡ್ಡಚಮಚ ಅರೆರೆ, ಕಾಫಿ ಪುಡಿಯಲ್ಲೂ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

ತಯಾರಿಸುವ ಮತ್ತು ಬಳಕೆಯ ವಿಧಾನ
*ಒಂದು ಚಿಕ್ಕ ಬೋಗುಣಿಯಲ್ಲಿ ಕಾಫಿಪುಡಿ ಮತ್ತು ಕೊಬ್ಬರಿ ಎಣ್ಣೆಗಳನ್ನು ನಿಗದಿರ ಅನುಪಾತದದಲ್ಲಿ ಅಗತ್ಯವಿದ್ದಷ್ಟು ಪ್ರಮಾಣವನ್ನು ಚೆನ್ನಾಗಿ ಬೆರೆಸಿ ನಯವಾದ ಲೇಪನವಾಗುವಂತೆ ಮಾಡಿಕೊಳ್ಳಿ. ಒಂದು ವೇಳೆ ಕಾಫಿ ಪುಡಿ ಕೊಂಚ ದೊರಗಾಗಿದ್ದು ಚಿಕ್ಕ ಚಿಕ್ಕ ಗಟ್ಟಿಯಾದ ಪುಡಿ ಇದ್ದರೆ ಟೀ ಸೋಸುವ ಸೋಸುಕದಲ್ಲಿ ಬೆರಳುಗಳಿಂದ ಒತ್ತಿ ಸೋಸಿ ಬಳಸಿ.
*ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ಸ್ನಾನ ಮಾಡಿದ ದೇಹದ ಎಲ್ಲಾ ಭಾಗಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಮುಖ ಮತ್ತು ಕುತ್ತಿಗೆಗೆ ಕೊಂಚ ಹೆಚ್ಚಿನ ಕಾಲ ಮಸಾಜ್ ಮಾಡಿ. ಕೆಲವು ನಿಮಿಷಗಳ ಬಳಿಕ ಸೌಮ್ಯ ಬ್ರಶ್ ಬಳಸಿ ನಯವಾಗಿ ಉಜ್ಜಿಕೊಳ್ಳಿ. ಬಳಿಕ ಸೌಮ್ಯ ಸೋಪ್ ಮತ್ತು ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ.

English summary

DIY Homemade Coffee Powder Scrub For Glowing Skin

Can you imagine starting a long day with no coffee to fuel you up? Well, most of us find it hard to go on with our busy day without having a cup of coffee! Coffee is one beverage that can make you feel instantly refreshed and energised. Coffee is one beverage that can make you feel instantly refreshed and energised.
X
Desktop Bottom Promotion