For Quick Alerts
ALLOW NOTIFICATIONS  
For Daily Alerts

ಅರೆರೆ, ಕಾಫಿ ಪುಡಿಯಲ್ಲೂ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

By Jaya
|

ಬೆಳಗ್ಗೆ ಎದ್ದೊಡನೆಯೇ ಬಿಸಿ ಬಿಸಿ ಕಾಫಿಯನ್ನು ಗುಟುಕರಿಸುವುದು ಎಂದರೆ ಅದೊಂದು ಅವರ್ಣನೀಯ ಆನಂದದ ಕ್ಷಣವಾಗಿದೆ. ಬೆಡ್ ಕಾಫಿ ಎಂಬುದು ಆಂಗ್ಲರ ಬಳುವಳಿಯಾದರೂ ಹಾಸಿಗೆಯಿಂದ ಎದ್ದೊಡನೆ ಕಾಫಿ ಕುಡಿಯದೇ ಇದ್ದರೆ ಅವರಿಗೆ ಆ ದಿನ ಏನೋ ಕಳೆದುಕೊಂಡಂತೆ. ಕಾಫಿ ಮೋಡಿ ಅಷ್ಟೊಂದು ಮೋಡಿ ಮಾಡುವಂತದ್ದಾಗಿದೆ. ಕಾಫಿ ರುಚಿಗೆ ಮನಸೋಲದವರು ಅದರ ಘಮಲಿಗೆ ಮೈ ಮರೆದವರು ಯಾರೂ ಇಲ್ಲವೆಂದೇ ಹೇಳಬಹುದು. ದಿನಕ್ಕೆ ಲೆಕ್ಕವಿಲ್ಲದಷ್ಟು ಕಾಫಿ ಕುಡಿದು ಹೊಟ್ಟೆ ತುಂಬಿಸಿಕೊಳ್ಳು ಕಾಫಿ ಪ್ರೇಮಿಗಳಿಗೆ ಏನೂ ಬರವಿಲ್ಲ. ಕಾಫಿ ಪ್ರಿಯರಿಗೆ ಇಲ್ಲಿದೆ ಬೊಂಬಾಟ್ 'ಸಿಹಿ' ಸುದ್ದಿ!

ಫಿಲ್ಟರ್ ಕಾಫಿ, ಫ್ಲೇವರ್ಡ್ ಕಾಫಿ, ಕ್ಯಾಪಚೀನೊ, ನೆಸ್‎ಕಫೆ, ಕೋಲ್ಡ್ ಕಾಫಿ ಹೀಗೆ ವೈವಿಧ್ಯಮಯ ಕಾಫಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಜನರ ಅಭಿರುಚಿಗೆ ತಕ್ಕಂತೆ ಕಾಫಿ ಕೂಡ ತನ್ನ ಬಣ್ಣವನ್ನು ವೈವಿಧ್ಯತೆಯನ್ನು ರುಚಿಯನ್ನು ಬದಲಾಯಿಸಿಕೊಳ್ಳುತ್ತಿದೆ. ನಿಮಗೆ ಹೊಸ ಹುರುಪನ್ನು ನೀಡುವ ಕಾಫಿಯ ಇನ್ನಷ್ಟು ಮಹಿಮೆಯನ್ನು ತಿಳಿಸಿಕೊಡುವ ಕಾರ್ಯವನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಸೌಂದರ್ಯ ವೃದ್ಧಿಗೆ ಒಂದು ಚಮಚ ಕಾಫಿ ಪುಡಿ ಸಾಕು!

ಹೌದು ನಿಮ್ಮ ತ್ವಚೆ ಮತ್ತು ಕೂದಲಿಗೂ ಕಾಫಿ ಹೆಚ್ಚು ಒಳ್ಳೆಯದು ಎಂಬ ಅಂಶವನ್ನು ನೀವು ಮನಗಂಡಿದ್ದೀರಾ? ಕಾಫಿಯಲ್ಲಿರುವ ಕೆಫಿನ್ ಅಂಶವು ತ್ವಚೆ ಮತ್ತು ಕೂದಲನ್ನು ರಿಪೇರಿ ಮಾಡಲು ಸಹಾಯಕ. ಅಲ್ಲದೆ, ಕಾಫಿಯಲ್ಲಿರುವ ಉತ್ಕರ್ಷಣ ಅಂಶಗಳು ಮುಖದ ಕಾಂತಿಯನ್ನು ದ್ವಿಗುಣಗೊಳಿಸುವಲ್ಲಿ ಸಹಕಾರಿ. ಹಾಗಿದ್ದರೆ ಮತ್ತೇಕೆ ತಡ ಕಾಫಿ ನಿಮ್ಮ ಕೂದಲಿಗೆ ಮತ್ತು ತ್ವಚೆಗೆ ಹೇಗೆ ಪರಿಣಾಮಕಾರಿಯಾದುದು ಎಂಬುದನ್ನು ಇಂದು ತಿಳಿದುಕೊಳ್ಳೋಣ...

ಕಪ್ಪು ವರ್ತುಲಗಳ ನಿವಾರಣೆ

ಕಪ್ಪು ವರ್ತುಲಗಳ ನಿವಾರಣೆ

ಕಣ್ಣಿನ ಕೆಳಗಿರುವ ಕಪ್ಪು ವರ್ತುಲಗಳನ್ನು ನಿವಾರಿಸುವಲ್ಲಿ ಕಾಫಿ ಸಹಾಯಕ. ಕಣ್ಣಿನ ಆಯಾಸವನ್ನು ದೂರಮಾಡಿ ಕಣ್ಣಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ನೀರನ್ನು ಬೆರೆಸಿ ಕಾಫಿ ಹುಡಿಯನ್ನು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕಣ್ಣಿನ ಅಡಿಭಾಗಕ್ಕೆ ಹಚ್ಚಿರಿ ಮತ್ತು ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಿ.

ಎಕ್ಸ್‎ಫೋಲಿಯೇಟ್ ಸ್ಕ್ರಬ್

ಎಕ್ಸ್‎ಫೋಲಿಯೇಟ್ ಸ್ಕ್ರಬ್

ಅತ್ಯುತ್ತಮ ಸ್ಕ್ರಬ್ ಆಗಿ ಕಾಫಿ ಕಾರ್ಯನಿರ್ವಹಿಸುತ್ತಿದ್ದು ತ್ವಚೆಯನ್ನು ಎಕ್ಸ್‎ಫೋಲಿಯೇಟ್ ಮಾಡುತ್ತದೆ. ಸೆಲ್ಯುಲೈಟ್ ಅನ್ನು ಕಡಿಮೆ ಮಾಡಿ ಮುಖದ ಸ್ವಚ್ಛತೆಯನ್ನು ಮಾಡುತ್ತದೆ. ಕಾಫಿ ಹುಡಿಯೊಂದಿಗೆ ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ ಮುಖಕ್ಕೆ ಸ್ಕ್ರಬ್‎ನಂತೆ ಸ್ಕ್ರಬ್ ಹಾಗೆ ಬಳಸಿಕೊಳ್ಳಿ.

ಜಿಡ್ಡಿನಂಶವನ್ನು ಕಲೆಗಳನ್ನು ಮಾಯವಾಗಿಸುತ್ತದೆ

ಜಿಡ್ಡಿನಂಶವನ್ನು ಕಲೆಗಳನ್ನು ಮಾಯವಾಗಿಸುತ್ತದೆ

ಮೂಗು, ಕೆನ್ನೆ ಮತ್ತು ಹಣೆಯಲ್ಲಿರುವ ಕಲೆಗಳನ್ನು ನಿವಾರಿಸಲು ಕಾಫಿ ಕೆಲಸ ಮಾಡುತ್ತದೆ. ತ್ವಚೆಯಲ್ಲಿರುವ ಜಿಡ್ಡನ್ನು ತೊಲಗಿಸಿ ಮುಚ್ಚಿಹೋಗಿರುವ ರಂಧ್ರದಿಂದ ಕೊಳೆಯನ್ನು ತೊಡೆದು ಹಾಕುತ್ತದೆ. ನೀವು ಮಾಡಬೇಕಾದದು ಇಷ್ಟೇ, ಕಾಫಿಪುಡಿಯನ್ನು ನೀರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುವುದು. ಇದೊಂದು ಉತ್ತಮವಾದ ಫೇಸ್ ಪ್ಯಾಕ್ ಆಗಿದೆ.

ತ್ವಚೆಯನ್ನು ಬೆಳ್ಳಗಾಗಿಸುವುದು

ತ್ವಚೆಯನ್ನು ಬೆಳ್ಳಗಾಗಿಸುವುದು

ತ್ವಚೆಯನ್ನು ಬೆಳ್ಳಗಾಗಿಸುವ ಅಂಶ ಕಾಫಿಯಲ್ಲಿದೆ. ಮುಖದ ಕಾಂತಿ ವರ್ಧಕ ಫೇಶಿಯಲ್ ಆಗಿ ಕಾಫಿಯನ್ನು ಬಳಸಲಾಗುತ್ತದೆ. ರಕ್ತ ಸಂಚಾರವನ್ನು ಹೆಚ್ಚಿಸಿ ಸೆಲ್ಯುಲಾಟ್ ಅನ್ನು ಕಡಿಮೆ ಮಾಡುತ್ತದೆ. ತ್ವಚೆಯನ್ನು ಪುನಶ್ಚೇತನಗೊಳಿಸಿ ಕಾಂತಿಯುತವಾಗಿಸುತ್ತದೆ.

ಕೂದಲಿನ ಸೌಂದರ್ಯ

ಕೂದಲಿನ ಸೌಂದರ್ಯ

ನೀವು ಬಯಸುವಂತಹ ಸುಂದರ ಕೇಶರಾಶಿಯನ್ನು ಕಾಫಿ ದಯಪಾಲಿಸುತ್ತದೆ. ನಿಸ್ತೇಜ ಮತ್ತು ಸಿಕ್ಕಾದ ಕೂದಲಿಗೆ ಕಾಫಿ ಉತ್ತಮವಾದುದಾಗಿದೆ. ಕೂದಲಿಗೆ ಹೊಳಪನ್ನು ನೀಡಿ ತಲೆಹೊಟ್ಟನ್ನು ಮತ್ತು ಕೂದಲುದುರುವಿಕೆಯನ್ನು ತಡೆಯುತ್ತದೆ. ನೀವು ಮಾಡಬೇಕಾದದು ಇಷ್ಟೇ, ಪ್ರತಿ ಹದಿನೈದು ದಿನಕ್ಕೊಮ್ಮೆ ಹಳೆಯ ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ಇದರಿಂದ ತಲೆಬುರುಡೆಯ ಚರ್ಮದಲ್ಲಿರುವ ಕೊಳೆ, ಹೊಟ್ಟು ಮತ್ತು ಇತರ ಕಲ್ಮಶಗಳು ನಿವಾರಣೆಯಾಗುತ್ತವೆ.

ಕೂದಲ ಬಣ್ಣ

ಕೂದಲ ಬಣ್ಣ

ನಿಮ್ಮ ಕೂದಲಿಗೆ ಬಣ್ಣವನ್ನು ನೀಡಲು ಕಾಫಿ ಸಹಾಯಕವಾಗಿದೆ. ನೈಸರ್ಗಿಕ ಹೇರ್ ಡೈನಂತೆ ಕೆಲಸ ಮಾಡುವ ಕಾಫಿ ಬಿಳಿಗೂದಲನ್ನು ಮುಚ್ಚಲು ನೆರವಾಗಲಿದೆ. ಕಾಫಿಯ ಪೇಸ್ಟ್ ಅನ್ನು ಮೆಹಂದಿ ಹುಡಿಯೊಂದಿಗೆ ಮಿಶ್ರ ಮಾಡಿಕೊಂಡು, ಈ ಪೇಸ್ಟ್‌ನ್ನು ಕೂದಲಿಗೆ ಹಚ್ಚಿಕೊಳ್ಳಿ ಒಂದು ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಿ. ನಿಮ್ಮ ಕೂದಲಿಗೆ ನೈಸರ್ಗಿಕ ಬಣ್ಣ ಬಂದಿರುತ್ತದೆ.

English summary

Amazing Benefits Of Coffee For Hair And Skin

Coffee is one of the best stimulants that helps million people to wake up in the morning. But, not many of us are aware of the beauty benefits of this stimulating beverage. The caffeine present in coffee is known to have good benefits for the skin and hair. It reduces redness, cellulite, treats puffy eyes and so on. Thus, in this article, we at Boldsky will be listing out some of the amazing benefits of using coffee for hair and skin care. Have a look at it.
X
Desktop Bottom Promotion