For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಇಮ್ಮಡಿಗೊಳಿಸುವ ಸಿಹಿ ಸಿಹಿ ಬೆಲ್ಲ!

By Manasa
|

ಬೆಲ್ಲ ಎಂದೊಡನೆ ಬಾಯಲ್ಲಿ ನೀರೂರುವ ಸಿಹಿ ತಿನಿಸುಗಳ ಮೆರವಣಿಗೆಯೇ ನೆನಪು ಬರುತ್ತದೆ. ಭಾರತೀಯರ ಪಾಲಿಗೆ ಬೆಲ್ಲ ಇಲ್ಲದ ಹಬ್ಬವಿಲ್ಲ. ವಿಧ ವಿಧ ಪಾಯಸ, ಒಬ್ಬಟ್ಟು, ಕಜ್ಜಾಯ, ಎನ್ನು ಎಷ್ಟು ಬಗೆ ತಿಂಡಿಗಳ ಪಟ್ಟಿಯನ್ನು ಮಾಡಬಹುದು.. ಸಕ್ಕರೆ ಬಹಳಷ್ಟು ಕಡೆ ಬೆಲ್ಲವನ್ನು ಬದಲಿ ಮಾಡಿ ಮೆರೆಯುತ್ತಿದೆಯಾದರೂ, ಬೆಲ್ಲದ ಸವಿಗೆ ಸಾಟಿ ಇಲ್ಲ. ಸಕ್ಕರೆಯು ತನ್ನ ಕ್ಯಾಲೋರಿ ಹಾಗೂ ಇತರ ನಕಾರಾತ್ಮಕ ಗುಣಗಳಿಂದ ಈಗ ಕೆಂಗಣ್ಣಿಗೆ ಗುರಿಯಾಗಿದೆ. ಮತ್ತೆ ಜನರೆಲ್ಲ ಬೆಲ್ಲದ ಕಡೆ ಮುಖ ಮಾಡತೊಡಗಿದ್ದಾರೆ.

ಬೆಲ್ಲದ ಗಾಣಕ್ಕೆ ಹೋದಾಗ ಅಲ್ಲಿ ಬಿಸಿಯಾಗಿ ಕರಗಿರುವ ಇನ್ನೂ ಸಂಪೂರ್ಣವಾಗಿ ತಯಾರಾಗದ ಬೆಲ್ಲವನ್ನು ಸವಿದರೆ ಆ ರುಚಿಗೆ ಮಾರು ಹೋಗದವರಿಲ್ಲ. ಚಿಕ್ಕ ಮಕ್ಕಳಿಗಂತೂ ಕೈಯಲ್ಲಿ ಬೆಲ್ಲದ ಒಂದು ಚಿಕ್ಕ ತುಂಡು ಕೊಟ್ಟುಬಿಟ್ಟರೆ ಸಾಕು. ಅದನ್ನು ಅವರು ಸವಿಯುವ ನೋಟ ನೋಡಲು ಕಣ್ಣೆರಡು ಸಾಲದು. ಅದು ಬೆಲ್ಲದ ರುಚಿಯ ಹಿರಿಮೆ. ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ

ಬೆಲ್ಲವನ್ನು ಮುಖ್ಯವಾಗಿ ಏಷಿಯಾ ಹಾಗೂ ಆಫ್ರಿಕಾ ಖಂಡದಲ್ಲಿ ತಯಾರಿಸಿ ಬಳಸುತ್ತಾರೆ. ಕಬ್ಬನ್ನು ಬಳಸಿ ಬೆಲ್ಲವನ್ನು ತಯಾರಿಸುತ್ತಾರೆ. ಕೆಲವು ಕಡೆ ಖರ್ಜೂರದ ಗಿಡಗಳನ್ನು ಕೂಡ ಬಳಸುತ್ತಾರೆ. ಬೆಲ್ಲದಲ್ಲಿ "ಸೋಡಿಯುಂ", "ಪೊಟಾಸಿಯುಂ", "ಕ್ಯಾಲ್ಸಿಯುಂ", "ಐರನ್" ನಂತಹ ಮುಖ್ಯ ಪೋಷಕಾಂಶಗಳು ಇವೆ. ಬೆಲ್ಲವನ್ನು ಅಡಿಗೆಗೆ ಬಳಸುವುದು ಎಲ್ಲರಿಗೂ ತಿಳಿದ ವಿಷಯ. ಬೆಲ್ಲದಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು

ಆದರೆ ಬೆಲ್ಲದಿಂದ ಸೌಂದರ್ಯ ರಕ್ಷಣೆಯು ಕೂಡ ಸಾಧ್ಯ. ಇದು ಹೇಗೆ ಎಂದು ಹುಬ್ಬೇರಿಸುತ್ತಿದ್ದೀರಾ? ಬೆಲ್ಲದ ಸವಿಯು ನಾಲಿಗೆಗೆ ಅಲ್ಲ ಅಂದವನ್ನು ಹೆಚ್ಚಿಸಿ ಅದರ ಮೂಲಕ ನೋಡುವ ಕಣ್ಣಿಗೂ ಸಿಹಿ ಎಂದರೆ ತಪ್ಪಿಲ್ಲ.

ರಕ್ತ ಶುಧ್ಧಿ

ರಕ್ತ ಶುಧ್ಧಿ

ಬೆಲ್ಲವೂ ಅಮೋಘವಾದ ರಕ್ತ ಶುಧ್ಧಿಟಾನಿಕ್. ರಕ್ತ ಶುಧ್ಧೀಕರಣ ನಮ್ಮ ಚರ್ಮಕ್ಕೆ ಬಹಿರಂಗವಾಗಿ ಅಲ್ಲದೆ ಆಂತರಂಗಿಕವಾಗಿ ಅಂದ ನೀಡುತ್ತದೆ. ಇದರಿಂದ "ಡಿ ಟಾಕ್ಸಿಫಿಕೇಷನ್" ಆಗಿ ನಮ್ಮ ದೇಹದಲ್ಲಿರುವ ವಿಷಪೂರಿತ ಪದಾರ್ಥಗಳು ಹೊರಹೋಗುತ್ತವೆ. ಮೊಡವೆಗಳು ಹಾಗೂ ಇತರ ಚರ್ಮದ ಕಾಯಿಲೆಗಳು ಮಾಯಾವಾಗುವ ಸಾಧ್ಯತೆ ಇದೆ. ಹಾಗಾಗಿ ದಿನಿತ್ಯ ಬೆಲ್ಲವನ್ನು ಉಗುರು ಬೆಚ್ಚಗಿನ ಹಾಲಿನ ಜೊತೆ ಬೆರೆಸಿ ಕುಡಿಯುವುದರಿಂದ ಹಾಲಿಗೆ ರುಚಿಯೂ ಬಂತು ಹಾಗೂ ರಕ್ತದ ಶುಧ್ಧಿಯೂ ಆಯಿತು.

ಚರ್ಮಕ್ಕೆ ಆರೈಕೆ

ಚರ್ಮಕ್ಕೆ ಆರೈಕೆ

ಬೆಲ್ಲದಲ್ಲಿ ಇರುವ ಅನೇಕ ವಿಟಮಿನ್ ಹಾಗೂ ಮಿನರಲ್ ಗಳು ನಮ್ಮ ಚರ್ಮಕ್ಕೆ ಬೇಕಾದ ಸತ್ವ ನೀಡುತ್ತವೆ. ಇದರಿಂದ ಚರ್ಮದ ಅಂದ ಹೆಚ್ಚುತ್ತದೆ. ಈ ಆರೈಕೆಯಿಂದ ಚರ್ಮವು ಆರೋಗ್ಯವಾಗಿಯೂ ಅಂದವಾಗಿಯೂ ಕಾಣುತ್ತದೆ. ಚರ್ಮದ ಹೊಳಪು ಕೂಡ ಹೆಚ್ಚಾಗುತ್ತದೆ. ಬೆಲ್ಲದ ಪುಡಿಗೆ ಅಷ್ಟೇ ಪ್ರಮಾಣದ ಜೇನು ಹಾಕಿ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಕಲೆಸಿ ಮುಖಕ್ಕೆ ಹಚ್ಚಿ. ಇದನ್ನು ಸುಮಾರು ಹದಿನೈದು ನಿಮಿಷ ಇರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಚರ್ಮದ ಸುಕ್ಕು ನಿವಾರಣೆ

ಚರ್ಮದ ಸುಕ್ಕು ನಿವಾರಣೆ

ಬೆಲ್ಲವನ್ನು ಮೇಲೆ ಹೇಳಿದಂತೆ ಮುಖದ ಮೇಲೆ ಪ್ಯಾಕ್ ಮಾಡಿ ಹಚ್ಚುವುದರಿಂದ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ. ಇದರಿಂದ ಚರ್ಮವು ತಾರುಣ್ಯ ಭರಿತವಾಗಿ ಕಾಣುತ್ತದೆ. ನೀವು ಮಾಡಬೇಕಾದುದು ಇಷ್ಟೇ ಬೆಲ್ಲದ ಪುಡಿಯ ಜೊತೆ ಮೊಸರು ಸೇರಿಸಿ ಚೆನ್ನಾಗಿ ಕಲೆಸಿ ಮುಖದ ಮೇಲೆ ಹಚ್ಚಿ. ಇದಕ್ಕೆ ಮತ್ತೆ ಸ್ವಲ್ಪ ಅರಿಶಿಣದ ಪುಡಿ ಕೂಡ ಬೆರೆಸಬಹುದು. ಈ ಮಿಶ್ರಮವನ್ನು ಸುಮಾರು ಹತ್ತು ನಿಮಿಷ ಇರಿಸಿಕೊಂಡು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ನೆನಪಿಡಿ ಈ ಪ್ಯಾಕ್ ಅನ್ನು ತೊಳೆಯಲು ಬರಿ ನೀರು ಬಳಸಿದರೆ ಉತ್ತಮ.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಮಾಲಿನ್ಯ, ಒಣ ಹವೆ ಮುಂತಾದ ಕಾರಣಗಳಿಂದ ಹಾನಿಗೊಳಗಾದ ಕೂದಲು ಉದುರುವುದು ಸಹಜ. ಬೆಲ್ಲದಲ್ಲಿರುವ ಐರನ್ ಎಂದರೆ ಕಬ್ಬಿಣಾಂಶವು ಕೂದಲಿಗೆ ಬಲ ನೀಡುತ್ತದೆ. ಇದರಿಂದ ಬೆಲ್ಲವನ್ನು ನಾವು ನಮ್ಮ ದಿನನಿತ್ಯದ ಊಟದಲ್ಲಿ ಸೇರಿಸಿಕೊಂಡರೆ ಅದು ಇತರ ಅನೇಕ ಪೋಷಕಾಂಶಗಳ ಜೊತೆಗೆ ತನ್ನದೇ ಆದ ಸತ್ವಗಳನ್ನು ಸೇರಿಸಿ ಕೂದಲಿಗೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಸಲಹೆ

ಸಲಹೆ

ಬೆಲ್ಲವನ್ನು ಹಾಲಿನ ಜೊತೆಯಲ್ಲೇ ಅಲ್ಲದೆ ಇತರ ಅನೇಕ ರೀತಿಯಲ್ಲಿ ಸೇವಿಸಿ ಮೇಲೆ ಹೇಳಿದ ಎಲ್ಲ ಪ್ರಯೋಜನಗಳನ್ನು ಪಡೆಯಬಹುದು. ಸಕ್ಕರೆಯ ಬದಲಿಗೆ ನಾವು ಎಲ್ಲ ಸಿಹಿ ತಿಂಡಿಗಳಲ್ಲಿಯೂ ಬೆಲ್ಲದ ಉಪಯೋಗ ಮಾಡಬಹುದು. ಬೆಲ್ಲದಲ್ಲಿರುವ "ಕ್ಯಾಲ್ಸಿಯುಂ" ಹಾಗೂ "ಐರನ್" ನ ಉಪಯೋಗ ಪಡೆಯಬಹುದು. ಬೆಲ್ಲದ ಪಾನಕ, ಪಾಯಸಗಳು ರುಚಿ ಹಾಗೂ ಆರೋಗ್ಯಕರವೂ ಕೂಡ. ನಾವು ಮನೆಗಳಲ್ಲಿ ಕಷಾಯ ಮಾಡುವಾಗಲೂ ಬೆಲ್ಲವನ್ನೇ ಉಪಯೋಗಿಸುತ್ತೇವೆ. ಇದರಲ್ಲಿ ನಮಗೆ ಅದರ ಔಷಧೀಯ ಗುಣವೂ ತಿಳಿಯುತ್ತದೆ. ಬೆಲ್ಲದಿಂದ ನಮ್ಮ ಸೌಂದರ್ಯಕ್ಕೆ ಎಷ್ಟೆಲ್ಲ ಉಪಯೋಗ ನೋಡಿದಿರಾ? ಇದಕ್ಕಿಂತ ಹೆಚ್ಚು ಉಪಯೋಗ ನಮ್ಮ ದೇಹದ ಆರೋಗ್ಯಕ್ಕೆ. ಇದನ್ನು ಮತ್ತೊಮ್ಮೆ ತಿಳಿಯೋಣ.

English summary

Amazing beauty benefits jaggery you didnt know

Well, the wonders of jaggery are not just restricted to health benefits, it also works as an incredible beauty product, replacing number of your cosmetics in your kitty. So, here’s how it helps in enhancing one’s beauty, and can substitute your those pricey attractive beauty products.
Story first published: Wednesday, September 7, 2016, 9:57 [IST]
X
Desktop Bottom Promotion