For Quick Alerts
ALLOW NOTIFICATIONS  
For Daily Alerts

ಉಗುರಿನ ಅಂದಕ್ಕೆ ಬೇಕು ಅಲೋವೆರಾ-ಜೇನಿನ ಮಿಶ್ರಣ

By CM prasad
|

ಉಗುರುಗಳೂ ಸಹ ದೇಹದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಉಗುರಿನ ಅಂದವನ್ನು ಹೆಚ್ಚಿಸಲು ಅನೇಕ ಬಗೆಯ ಸಾಧನಗಳನ್ನು ಬಳಸಲಾಗುತ್ತಿದೆ. ಉಗುರಿನ ಸೌಂದರ್ಯವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದಲ್ಲದೇ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ನೈಸರ್ಗಿಕವಾಗಿ ಉಗುರಿನ ಹೊರಪದರದ ಚರ್ಮದ ಅಂದವನ್ನು ಹೆಚ್ಚಿಸಲು ವಿಶಿಷ್ಟ ಸಂಗತಿಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

ಬಿರುಕುಬಿಟ್ಟ ಉಗುರಿನ ಹೊರಪದರವು ನಿಮ್ಮನ್ನು ಹೆಚ್ಚು ಚಿಂತೆಗೆ ಈಡು ಮಾಡುವುದಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಇದು ನಿಜಕ್ಕೂ ಅನಾರೋಗ್ಯಕರ ಬೆಳವಣಿಗೆ. ಇದರಿಂದ ಧೂಳು, ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ನಿಮ್ಮ ಉಗುರಿನ ಒಳಕ್ಕೆ ಹೊಕ್ಕು ಚರ್ಮದ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಚರ್ಮ ಒಣಗುವಿಕೆ, ತಾಪಮಾನದ ಇಳಿಕೆ, ಬಿಸಿಲಿನ ಶಾಖಕ್ಕೆ ಒಡ್ಡುವುದು ಮತ್ತು ದುಷ್ಪರಿಣಾಮ ಉಂಟಾಗುವ ರಾಸಾಯನಿಕಗಳ ಬಳಕೆ. ಚರ್ಮದ ತೇವಾಂಶದ ಪ್ರಮಾಣವು ಕಡಿಮೆಯಾದಾಗ ಉಗುರಿನ ಮೇಲ್ಭಾಗ ಹಾಳಾಗಿ ಹೊರಪದರವು ಬಿರುಕು ಬೀಳುತ್ತದೆ. ಚಿಂತಿಸದಿರಿ, ಈ ತೊಂದರೆಗೆ ನಿಮ್ಮ ಬಳಿಯೇ ಇದೆ ಸೂಕ್ತ ಪರಿಹಾರ. ಇದಕ್ಕೆ ಸೂಕ್ತ ಪರಿಹಾರವೆಂದರೆ ಜೇನು, ಅಲೋವೆರಾ ರಸ ಮತ್ತು ಆಲಿವ್ ತೈಲದ ಬಳಕೆ. ಜೇನು ಉಗುರಿನ ಪದರವನ್ನು ಮೃದುಗೊಳಿಸುವುದಲ್ಲದೆ ಬಿರುಕನ್ನು ಮತ್ತು ಒಣಗುವುದನ್ನು ತಡೆಯುತ್ತದೆ. ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

tips for nailcare

ಇದು ಹೇಗೆ ಉಪಯೋಗವಾಗುತ್ತದೆ?
ಆಲಿವ್ ತೈಲವು ಚರ್ಮದ ಒಳಗಿನಿಂದಲೇ ತೇವಾಂಶವನ್ನು ನೀಡಿ ಉಗುರಿನ ಒಳ ಅಂಗಾಂಶವನ್ನು ಸದೃಢಗೊಳಿಸುತ್ತದೆ. ಅಲೋವೆರಾ ಚರ್ಮದ ಬಿರುಕನ್ನು ನಿವಾರಿಸುತ್ತದೆ. ಅಲೋವೆರಾ ಪ್ರಬಲವಾದ ಸೂಕ್ಷ್ಮಜೀವಿನಿರೋಧಕ ಸಾಧನವಾಗಿದ್ದು, ಇದರಿಂದ ಸೋಂಕನ್ನು ಬಹುಬೇಗ ನಿವಾರಿಸುತ್ತದೆ ಮತ್ತು ಸತ್ತ ಜೀವಕೋಶಗಳನ್ನು ಹೊರಹಾಕಿ ನಿಮ್ಮ ಚರ್ಮವನ್ನು ಮೃದುಗೊಳಿಸಿ ನಾಜೂಕಾಗಿಸುತ್ತದೆ.

ಉಪಯೋಗಿಸುವುದು ಹೇಗೆ?
1 ಚಮಚ ಅಲೋವೆರಾ ರಸಕ್ಕೆ 1 ಚಮಚ ಕಚ್ಚಾ ಜೇನು ತುಪ್ಪವನ್ನು ಬೆರೆಸಿ. ನಂತರ 1 ಚಮಚ ಆಲಿವ್ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಉಗುರುಗಳ ಚರ್ಮದ ಭಾಗಕ್ಕೆ ಮತ್ತು ಉಗುರಿನ ಕೆಳಭಾಗಕ್ಕೆ ಸುಮಾರು 4 ರಿಂದ 5 ನಿಮಿಷಗಳ ಕಾಲ ನಯವಾಗಿ ಹಚ್ಚಿ. ಅಂದದ ಉಗುರಿನ ಆರೈಕೆಗೆ ಸರಳ ಮಾರ್ಗೋಪಾಯ

ಈ ಪ್ರಕ್ರಿಯೆಯನ್ನು ಎರಡರಿಂದ ಮೂರು ಬಾರಿ ಪ್ರತಿವಾರ ಅನುಸರಿಸಿ. ಇದರಿಂದ ಒರಟಾದ, ಬಿರುಕಾದ ಉಗುರಿನ ಹೊರಪದರವು ನಾಜೂಕಾಗಿ ಮಗುವಿನಂತೆ ಚರ್ಮವು ಮೃದುಗೊಳ್ಳುತ್ತದೆ. ಆದರೆ ಜಾಗೃತವಾಗಿರಿ, ಯಾವುದೇ ಕಾರಣಕ್ಕೂ ಬಿರುಕುಬಿಟ್ಟ ಉಗುರಿನ ಹೊರಪದರದ ಭಾಗವನ್ನು ಭೌತಿಕವಾಗಿ ಹೊರತೆಗೆಯಬೇಡಿ. ಇದು ನೋವುಂಟು ಮಾಡಿ ಸೋಂಕಿಗೆ ಎಡೆಮಾಡಿಕೊಡುತ್ತದೆ.

English summary

ಉಗುರಿನ ಅಂದಕ್ಕೆ ಬೇಕು ಅಲೋವೆರಾ-ಜೇನಿನ ಮಿಶ್ರಣ

Cracked cuticles are not just unsightly, they are unhealthy too. The damaged cuticles can allow dirt, bacteria and fungus to get under your skin and cause infections. Cracked cuticles result when the skin loses moisture and is exposed to cold temperatures, sunlight and harsh chemicals. When the moisture depletes from the skin, it loses its protective layer and gets cracked and inflamed.
Story first published: Wednesday, January 6, 2016, 17:25 [IST]
X
Desktop Bottom Promotion