For Quick Alerts
ALLOW NOTIFICATIONS  
For Daily Alerts

ಕಳೆಗುಂದಿದ ಮೆಹೆಂದಿ ಬಣ್ಣವನ್ನು ನಿವಾರಿಸಲು ಸರಳ ಟಿಪ್ಸ್

|

ಹೆಣ್ಣು ಅಲಂಕಾರಪ್ರಿಯಳು. ಯಾವುದೇ ಸಮಾರಂಭದಲ್ಲಿ ತಾನು ಪ್ರತ್ಯೇಕವಾಗಿ ಅಂತೆಯೇ ವಿಶೇಷವಾಗಿ ಕಾಣಬೇಕೆಂಬ ಬಯಕೆಯನ್ನು ಹೊಂದಿರುವವಳು. ಅದಕ್ಕಾಗಿಯೇ ತನ್ನ ಪ್ರತಿಯೊಂದು ಅಲಂಕಾರಕ್ಕೂ ಗಮನ ನೀಡುತ್ತಾಳೆ ಮತ್ತು ಅದಕ್ಕಾಗಿ ಆದಷ್ಟು ಕಾಳಜಿ ಕೂಡ ವಹಿಸುತ್ತಾಳೆ. ಇನ್ನು ಮದುವೆಯಂತಹ ವಿಶೇಷ ಸಂದರ್ಭಗಳಲ್ಲಂತೂ ಈ ಕಾಳಜಿ ಇನ್ನಷ್ಟು ಮುತುವರ್ಜಿಯಿಂದ ಕೂಡಿರುತ್ತದೆ. ಕಣ್ಣು ತಪ್ಪಿದರೂ ಎಡವಟ್ಟಾಗುವ ಸಂದರ್ಭ ವಿವಾಹಗಳಲ್ಲಿ ಸರ್ವೇಸಾಮಾನ್ಯ. ಹಾಗಿದ್ದಾಗ ಹೆಚ್ಚಿನ ಜಾಗರೂಕತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೆಹೆಂದಿ ಸಮಾರಂಭ: ನಿಮ್ಮ ದಿರಿಸಿನ ಆಯ್ಕೆ ಹೇಗಿದ್ದರೆ ಚೆಂದ?

ವಿವಾಹದ ಹಿಂದಿನ ದಿನ ಏರ್ಪಡಿಸುವ ಮೆಹೆಂದಿ ಸಮಾರಂಭಕ್ಕೆ ಅದರದ್ದೇ ಆದ ಮಹತ್ವವಿದೆ. ವಿವಾಹಕ್ಕೆ ಕಳೆಯನ್ನು ತರುವ ಮೆಹೆಂದಿ ಮದುಮಗಳಿಗೆ ನವ ಕಳೆಯನ್ನು ತರುತ್ತದೆ. ಇನ್ನು ಇದರ ಬಣ್ಣ ಗಾಢವಾಗಿದ್ದಷ್ಟೂ ದಾಂಪತ್ಯ ಬಂಧ ಗಟ್ಟಿಯಾಗುತ್ತದೆ ಎಂದೂ ಕೂಡ ನಂಬುವವರಿದ್ದಾರೆ. ಹೀಗೆ ಫ್ಯಾಷನ್ ಮತ್ತು ಸಂಪ್ರದಾಯಗಳ ಬೆಸುಗೆಯಾಗಿರುವ ಮೆಹೆಂದಿಯ ಸುವಾಸನೆ ಪ್ರತಿಯೊಬ್ಬರಿಗೂ ಇಷ್ಟವಾಗುವುದು ದೂರದ ಮಾತು.ಅಲ್ಲದೆ ದಿನಗಳೆದಂತೆ ಅದು ಮಾಸುತ್ತಾ ಹೋಗುವುದು ಕೈಗಳ ಅಂದವನ್ನು ಕೆಡಿಸುವುದೂ ನಿಜ.

ಇಂದಿನ ಲೇಖನದಲ್ಲಿ ಮೆಹೆಂದಿ ಕಲೆಯನ್ನು ಹೋಗಲಾಡಿಸಲು ಸಹಕಾರಿಯಾಗಿರುವ ಕೆಲವೊಂದು ಸರಳ ಸಲಹೆಗಳೊಂದಿಗೆ ನಾವು ಬಂದಿದ್ದು ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನೇ ಬಳಸಿ ಮೆಹೆಂದಿ ಕಲೆಯನ್ನು ನಿವಾರಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಗಳಿಂದ ಅರಿತುಕೊಳ್ಳಿ..

ಅಡಿಗೆ ಸೋಡಾ ಮತ್ತು ಲಿಂಬೆ ರಸ

ಅಡಿಗೆ ಸೋಡಾ ಮತ್ತು ಲಿಂಬೆ ರಸ

ಅಡಿಗೆ ಸೋಡಾ ಮತ್ತು ಲಿಂಬೆ ರಸವನ್ನು ಸೇರಿಸಿ ಒಂದು ಗಟ್ಟಿಯಾದ ಪೇಸ್ಟ್ ಮಾಡಿ ಮೆಹೆಂದಿ ಹರಡಿರುವ ಜಾಗದ ಮೇಲೆ ಹಚ್ಚಿ. ಅದು ಒಣಗಿದ ನಂತರ ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಕೆಲವು ವೇಳೆ ಹೀಗೆ ತೊಳೆದುಕೊಂಡ ನಂತರ ನಿಮ್ಮ ಕೈಗಳು ಸ್ವಲ್ಪ ಒರಟಾಗಿ ಕಂಡರೆ ಕೂಡಲೇ ನೈಸರ್ಗಿಕ ಮಾಯಿಸ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ

ಟೂತ್‌ಪೇಸ್ಟ್

ಟೂತ್‌ಪೇಸ್ಟ್

ಟೂತ್‌ಪೇಸ್ಟಿನ ಕೆಲವು ಗುಣಗಳು ಮೆಹೆಂದಿಯನ್ನು ಶೀಘ್ರವಾಗಿ ಅಳಿಸಲು ಸಹಕಾರಿಯಾಗಿದೆ. ಮೆಹೆಂದಿ ಹರಡಿರುವ ಸ್ಥಳದಮೇಲೆ ಟೂತ್‌ಪೇಸ್ಟ್ ಹಚ್ಚಿ. ಅದು ಒಣಗಿದ ನಂತರ, ಮೆಹೆಂದಿ ವೇಗವಾಗಿ ಅಳಿಸಲು ಎರಡೂ ಕೈಗಳನ್ನು ಜೋಡಿಸಿಕೊಂಡು ಉಜ್ಜಿ.

ಕೈಗಳನ್ನು ತೊಳೆಯುವುದು

ಕೈಗಳನ್ನು ತೊಳೆಯುವುದು

ನಿಮ್ಮ ಕೈಗಳನ್ನು ಆದಷ್ಟೂ ಬಾರಿ (ದಿನದಲ್ಲಿ 10-12 ಬಾರಿ) ಸೋಪಿನಿಂದ ತೊಳೆದುಕೊಳ್ಳಿ. ಸೋಪು ಮೆಹೆಂದಿಯನ್ನು ತಿಳಿಯಾಗಿಸಲು ಸಹಾಯಮಾಡುತ್ತದೆ. ಆದರೆ ವಿಪರೀತವಾಗಿ ತೊಳೆದುಕೊಂಡರೆ ಕೈಗಳು ಒರಟಾಗಬಹುದು. ಹಾಗಾದಲ್ಲಿ ಪ್ರತಿ ಬಾರಿ ತೊಳೆದುಕೊಂಡ ನಂತರ ಮಾಯಿಸ್ಚರೈಸರ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.

ಆಲಿವ್ ಎಣ್ಣೆ ಮತ್ತು ಉಪ್ಪು

ಆಲಿವ್ ಎಣ್ಣೆ ಮತ್ತು ಉಪ್ಪು

ಆಲಿವ್ ಎಣ್ಣೆ ಒಂದು ಸ್ವಾಭಾವಿಕ ಸ್ವಚ್ಛಗೊಳಿಸುವ ಗುಣಹೊಂದಿದೆಯಾದ್ದರಿಂದ ಮೆಹೆಂದಿ ಬಣ್ಣವನ್ನು ಮರೆಮಾಡಲು ಒಂದು ಅತ್ಯಂತ ಸೌಮ್ಯವಾದ ಮಾರ್ಗವಾಗಿದೆ. ಸ್ವಲ್ಪ ಉಪ್ಪು ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣಮಾಡಿ ಮೆಹೆಂದಿ ಹಚ್ಚಿರುವ ಸ್ಥಳದ ಮೇಲೆ ಹಚ್ಚಿ. 10 ನಿಮಿಷಗಳು ಬಿಟ್ಟು ಮತ್ತೆ ಕೆಲವು ಬಾರಿ ಮಿಶ್ರಣವನ್ನು ಹಚ್ಚಿ. ಹೀಗೆ ಕೆಲವು ದಿನಗಳ ಕಾಲ ಮಾಡಿದರೆ ನಿಮ್ಮ ನಿರೀಕ್ಷಿತ ಪರಿಣಾಮ ಪಡೆಯಬಹುದು.

ಉಪ್ಪಿನ ನೀರು

ಉಪ್ಪಿನ ನೀರು

ಒಂದು ಬಕೆಟ್ಟಿನಲ್ಲಿ ಬಿಸಿನೀರಿಗೆ ಉಪ್ಪನ್ನು ಹಾಕಿ ಅದರೊಳಗೆ ನಿಮ್ಮ ಕೈಗಳು ಮತ್ತು ಕಾಲುಗಳನ್ನು ಸುಮಾರು 20 ನಿಮಿಷಗಳ ಕಾಲ ಅಥವಾ ನೀರು ತಣ್ಣಗಾಗುವವರೆಗೂ ನೆನೆಸಿಡಿ. ಈ ವಿಧಾನವನ್ನು ಕೆಲವು ಬಾರಿ ಪ್ರಯೋಗಮಾಡಿದಾಗ ನೀವು ಅದರ ಪರಿಣಾಮವನ್ನು ಗಮನಿಸಬಹುದು. ನಿಮ್ಮ ಕೈಗಳನ್ನು ದೀರ್ಘಕಾಲದವರೆಗೆ ನೆನೆಸಿಟ್ಟಿದ್ದರೆ ಕೈಗಳು ಒರಟಾಗಾಬಹುದು. ಆದ್ದರಿಂದ ಒಂದು ಸೂಕ್ತ ಉತ್ತಮ ಮಾಯಿಸ್ಚರೈಸರ್ ಹಚ್ಚಿಕೊಳ್ಳಲು ಸಿದ್ಧವಾಗಿಟ್ಟುಕೊಂಡಿರಿ.

ಕ್ಲೋರೀನ್

ಕ್ಲೋರೀನ್

ಕ್ಲೋರೀನ್ ಮೆಹೆಂದಿಯನ್ನು ತೆಗೆಯಲು ಸಹಯಕಾರಿಯಾಗಿರುತ್ತದೆ. ಮೆಹೆಂದಿಯನ್ನು ತೆಗೆಯಲು ಮನೆಯಲ್ಲಿ ನಿಮ್ಮ ಕೈಗಳು ಮತ್ತು ಕಾಲುಗಳನ್ನು ಕ್ಲೋರೀನ್ ಮಿಶ್ರಣದ ನೀರಿನಲ್ಲಿ ನೆನೆಸಿಡಿ. ಹಾಗೆ ದೀರ್ಘಕಾಲ ನೆನೆಸಿಟ್ಟುಕೊಂಡಾಗ ಚರ್ಮ ಒರಟಾದರೆ ಮಾಯಿಸ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.

English summary

Ways To Get rid of fading mehendi quickly

The wedding season is here and the mehendi ceremony is now a big part of not just north Indian, but south Indian weddings as well. While henna-laced hands are a vital part of the festivities, not many people like the smell of mehendi and the way it looks once it starts fading a few days later.
X
Desktop Bottom Promotion