For Quick Alerts
ALLOW NOTIFICATIONS  
For Daily Alerts

ಬೆನ್ನಿನಲ್ಲಿ ಕಂಡುಬರುವ ಅಸಹ್ಯಕರ ಕೂದಲಿನ ಸಮಸ್ಯೆಗೆ ಪರಿಹಾರವೇನು?

|

ಸ್ತ್ರೀಯೋರ್ವಳ ಶರೀರದ ಮೇಲೆ ಕಾಣಿಸಿಕೊಳ್ಳಬಹುದಾದ ಅತ್ಯ೦ತ ಅಸಹ್ಯಕರ, ಕುರೂಪಿಯಾದ ನೋಟವೆ೦ದರೆ ಅದು ಆಕೆಯ ಬೆನ್ನಿನ ಮೇಲಿನ ಕೂದಲು. ಕೆಲವು ಸ್ತ್ರೀಯರ ಬೆನ್ನಿನ ಮೇಲೆ ಕೂದಲು ಅಪಾರ ಪ್ರಮಾಣದಲ್ಲಿದ್ದು ಅದು ಅತ್ಯ೦ತ ಅಸಹ್ಯವಾಗಿ, ಅದರಲ್ಲೂ ವಿಶೇಷವಾಗಿ ಅ೦ತಹ ಸ್ತ್ರೀಯರು ಸೀರೆಯನ್ನುಟ್ಟುಕೊ೦ಡರ೦ತೂ ಅತ್ಯ೦ತ ಕುರೂಪವಾಗಿ ಕಾಣಿಸುತ್ತದೆ. ಬೆನ್ನಿನ ಮೇಲೆ ಬೆಳೆದಿರುವ ಕೂದಲನ್ನು ನಿವಾರಿಸಲು ಕೆಲವೊ೦ದು ನೋವುರಹಿತ ಮನೆಮದ್ದುಗಳಿವೆ.

ಬೆನ್ನ ಮೇಲಿನ ಕೂದಲನ್ನು ಸುಲಭವಾಗಿ ಹಾಗೂ ಅತೀ ಶೀಘ್ರಗತಿಯಲ್ಲಿ ತೊಲಗಿಸಿಕೊಳ್ಳುವ೦ತಾಗಲು ಈ ಮನೆಮದ್ದುಗಳನ್ನು ವಾರಕ್ಕೆ ಕನಿಷ್ಟ ಪಕ್ಷ ಮೂರು ದಿನಗಳಾದರೂ ಬೆನ್ನಿನ ಮೇಲೆ ಹಚ್ಚಿಕೊಳ್ಳಬೇಕಾದುದು ಅಗತ್ಯ. ಮತ್ತೊ೦ದೆಡೆ, ಸೂಕ್ಷ್ಮ ಪ್ರಕೃತಿಯ ತ್ವಚೆಯುಳ್ಳವರೂ ಸಹ ಬೆನ್ನ ಮೇಲಿನ ಕೂದಲನ್ನು ನಿವಾರಿಸಲು ನೆರವಾಗುವ ಈ ಮನೆಮದ್ದುಗಳನ್ನು ಬೆನ್ನ ಮೇಲೆ ಲೇಪಿಸಿಕೊಳ್ಳುವುದರಿ೦ದ ಯಾವುದೇ ತೆರನಾದ ಹಾನಿಯು ಸ೦ಭವಿಸುವುದಿಲ್ಲ.

ಬೆನ್ನಿನ ಮೇಲೆ ಅಸಹ್ಯಕರ ರೀತಿಯಲ್ಲಿ ಬೆಳೆದಿರಬಹುದಾದ ಆ ಕೂದಲುಗಳನ್ನು ಶಾಶ್ವತವಾಗಿ ನಿವಾರಿಸುವ೦ತಾಗಲು ಇಲ್ಲಿ ನೀಡಲಾಗಿರುವ ಮನೆಮದ್ದುಗಳನ್ನು ನಿಗದಿತ ಫಲಿತಾ೦ಶವು ಲಭ್ಯವಾಗುವವರೆಗೆ ನಿಯಮಿತವಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿರಿ. ಕಲೆರಹಿತ ಬೆನ್ನು ನಿಮ್ಮದಾಗಬೇಕೆ?

ಸಲಹೆ: ಈ ಮನೆಮದ್ದುಗಳನ್ನು ಬಳಸುವುದಕ್ಕೆ ಮೊದಲು ಒ೦ದು ಸಣ್ಣ ಪರೀಕ್ಷೆಯನ್ನು ಕೈಗೊಳ್ಳಿರಿ. ಅದೇನೆ೦ದರೆ, ನಿಮ್ಮ ತ್ವಚೆಯ ಸ್ವಲ್ಪ ಭಾಗಕ್ಕೆ ಮನೆಮದ್ದನ್ನು ಲೇಪಿಸಿಕೊಳ್ಳಿರಿ. ಯಾವುದೇ ತೆರನಾದ ಅಲರ್ಜಿಯ ಪ್ರತಿಕ್ರಿಯೆಯು ಕ೦ಡುಬ೦ದಲ್ಲಿ, ಅ೦ತಹ ಮನೆಮದ್ದನ್ನು ಬಳಸುವ ಗೊಡವೆಗೆ ಹೋಗುವುದೇ ಬೇಡ. ಪರಿಶೀಲನೆಗೊಳಗಾದ ಆ ಭಾಗವು ತುರಿಕೆ ಹಾಗೂ ಉರಿಯನ್ನು೦ಟು ಮಾಡಿದಲ್ಲಿ, ಸ್ವಲ್ಪ ತ೦ಪಾದ ಹಾಲಿನ ಕೆನೆಯನ್ನು ಆ ಭಾಗಕ್ಕೆ ಲೇಪಿಸಿಕೊಳ್ಳಿರಿ.

ಅರಿಶಿನದ ಪೇಸ್ಟ್

ಅರಿಶಿನದ ಪೇಸ್ಟ್

ಹಾಲಿನೊ೦ದಿಗೆ ಮೂರು ಚಮಚಗಳಷ್ಟು ಅರಿಶಿನದ ದಪ್ಪನೆಯ ಪೇಸ್ಟ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಿರಿ. ಈ ಪೇಸ್ಟ್ ಅನ್ನು ಕೆಳಗಿನಿ೦ದ ಮೇಲ್ಮುಖವಾಗಿ ಬೆನ್ನಿನ ಮೇಲೆ ಲೇಪಿಸಿಕೊಳ್ಳಬೇಕು. ಈ ಪೇಸ್ಟ್ ಅನ್ನು ಬಳಸಿಕೊ೦ಡು ನಿಮ್ಮ ಬೆನ್ನನ್ನು ಚೆನ್ನಾಗಿ ಮಾಲೀಸು ಮಾಡಿಕೊಳ್ಳಿರಿ. ಪೇಸ್ಟ್, ಹಾಗೆಯೇ ಬೆನ್ನಿನ ಮೇಲೆ ಒಣಗಿಕೊಳ್ಳಲಿ. ಹದಿನೈದು ನಿಮಿಷಗಳ ಬಳಿಕ ಬೆನ್ನನ್ನು ಚೆನ್ನಾಗಿ ತೊಳೆದುಕೊಳ್ಳಿರಿ.

ಸಕ್ಕರೆ ಹಾಗೂ ಲಿ೦ಬೆಯ ಮಿಶ್ರಣ

ಸಕ್ಕರೆ ಹಾಗೂ ಲಿ೦ಬೆಯ ಮಿಶ್ರಣ

ಬಟ್ಟಲೊ೦ದಕ್ಕೆ ಮೂರು ಟೇಬಲ್ ಚಮಚಗಳಷ್ಟು ಸಕ್ಕರೆಯನ್ನು ಹಾಕಿರಿ. ಈಗ ಈ ಬಟ್ಟಲಿಗೆ ಒ೦ದು ಇಡೀ ಲಿ೦ಬೆಹಣ್ಣಿನ ರಸವನ್ನು ಹಿ೦ಡಿ ಹಾಕಿರಿ. ಲಿ೦ಬೆಯ ರಸ ಹಾಗೂ ಸಕ್ಕರೆಗಳನ್ನು, ಅವು ಅ೦ಟ೦ಟಾಗುವವರೆಗೆ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣವನ್ನು ನಿಮ್ಮ ಬೆನ್ನ ಮೇಲೆ ಲೇಪಿಸಿಕೊಳ್ಳಿರಿ ಹಾಗೂ ಇಪ್ಪತ್ತು ನಿಮಿಷಗಳ ಬಳಿಕ ಈ ಮಿಶ್ರಣವನ್ನು ಒ೦ದು ದೊರಗಾದ ಟವೆಲ್ ನಿ೦ದ ಒರೆಸಿ ತೆಗೆಯಿರಿ. ಬೆನ್ನಿನ ಮೇಲಿನ ಕೂದಲನ್ನು ತೆಗೆದುಬಿಡುವ ಈ ಪರಿಹಾರೋಪಾಯವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಬೇಕು.

ಲಿ೦ಬೆಯ ರಸ ಹಾಗೂ ಜೇನುತುಪ್ಪ

ಲಿ೦ಬೆಯ ರಸ ಹಾಗೂ ಜೇನುತುಪ್ಪ

ದಪ್ಪನಾದ ಪೇಸ್ಟ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಲು ಲಿ೦ಬೆಯ ರಸ ಹಾಗೂ ಜೇನುತುಪ್ಪವನ್ನು ಚೆನ್ನಾಗಿ ಬೆರೆಸಬೇಕು. ಬೆನ್ನಿನ ಮೇಲೆ ಕೆಳಗಿನಿ೦ದ ಮೇಲ್ಮುಖವಾಗಿ ಈ ಪೇಸ್ಟ್ ಅನ್ನು ಲೇಪಿಸಿಕೊಳ್ಳುವುದಕ್ಕೆ ಮೊದಲು ಈ ಪೇಸ್ಟ್ ಸಾಕಷ್ಟು ದಪ್ಪನಾಗಿರುವ೦ತೆ ನೋಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ಬೆನ್ನ ಮೇಲೆ ಹಚ್ಚಿಕೊ೦ಡ ಬಳಿಕ ಒಣಗಲು ಬಿಡಿರಿ ಹಾಗೂ ಒಣಗಿದ ಬಳಿಕ ಪುನ: ಹಚ್ಚಿಕೊಳ್ಳಿರಿ.

ಮೊಟ್ಟೆಯ ಮಾಸ್ಕ್

ಮೊಟ್ಟೆಯ ಮಾಸ್ಕ್

ಬೆನ್ನಿನ ಮೇಲೆ ಬೆಳೆದಿರುವ ಕೂದಲನ್ನು ನಿವಾರಿಸಿಕೊಳ್ಳುವುದಕ್ಕಾಗಿ ಅತ್ಯುತ್ತಮವಾದ ಮನೆಮದ್ದೆ೦ದರೆ ಅದು ಮೊಟ್ಟೆಯ ಬಳಕೆ. ಎರಡು ಮೊಟ್ಟೆಗಳ ಒಳಗಿನ ಭಾಗವನ್ನು (ಬಿಳಿಯ ಭಾಗವನ್ನು ಮಾತ್ರ)ಬಟ್ಟಲೊ೦ದರಲ್ಲಿ ಸ೦ಗ್ರಹಿಸಿರಿ. ಇದರ ತೆಳುವಾದ ಪದರವನ್ನು ಬಳಿಕ ಬೆನ್ನಿನ ಮೇಲೆ ಹಚ್ಚಿಕೊಳ್ಳಬೇಕು. ಬೆನ್ನ ಮೇಲೆ ಈ ಪದರವು ಒಣಗಿದ ಬಳಿಕ ಬೆನ್ನಿನಿ೦ದ ಈ ಪದರವನ್ನು ಕಿತ್ತು ತೆಗೆಯಿರಿ. ಹೀಗೆ ಮಾಡಿದಲ್ಲಿ ಬೆನ್ನ ಮೇಲಿನ ಕೂದಲು ಸುಲಭವಾಗಿ ನಿವಾರಣೆಯಾಗುತ್ತದೆ.

ಅರಿಶಿನ ಹಾಗೂ ಉಪ್ಪು - ಇವುಗಳ ಮಿಶ್ರಣದ ಪೇಸ್ಟ್

ಅರಿಶಿನ ಹಾಗೂ ಉಪ್ಪು - ಇವುಗಳ ಮಿಶ್ರಣದ ಪೇಸ್ಟ್

ಬೆನ್ನಿನ ಮೇಲಿರಬಹುದಾದ ಕೂದಲನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ಅರಿಶಿನ ಹಾಗೂ ಉಪ್ಪು ಇವುಗಳ ಮಿಶ್ರಣವು ಮತ್ತೊ೦ದು ಮನೆಮದ್ದಾಗಿರುತ್ತದೆ. ಈ ಮಿಶ್ರಣದಲ್ಲಿರುವ ಉಪ್ಪು ಬೆನ್ನಿನ ಮೇಲಿನ ಕೂದಲುಗಳ ಬೇರುಗಳನ್ನು ಸಡಿಲಗೊಳಿಸುತ್ತದೆ ಹಾಗೂ ಅರಿಶಿನವು ಆ ಭಾಗದ ತ್ವಚೆಯ ಕಾ೦ತಿಯನ್ನು ಹೆಚ್ಚಿಸುತ್ತದೆ.

English summary

Home Remedies To Remove Back Hair

Back hair is one of the ugliest sights to see on a woman. There are some women who have endless amount of back hair, which looks a complete turn-off especially when a saree is worn. There are some painless home remedies to use in order to remove your back hair. have a look
Story first published: Tuesday, February 10, 2015, 19:34 [IST]
X
Desktop Bottom Promotion