For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕೂದಲಿನ ಆರೈಕೆಗೆ- ಎಣ್ಣೆ ಮಸಾಜ್

|

ವಸಂತ ಕಾಲ ಹೋಗಿ ವರುಣನ ಅಬ್ಬರ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಹಸಿರು, ನೀರಿನ ಜಲಧಾರೆಗಳು ಪ್ರತ್ಯಕ್ಷವಾದಂತೆ ಹಲವಾರು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಮಳೆಗಾಲ ಶುರುವಾದರೆ ಸಾಕು, ಶೀತ, ಕಫ, ವೈರಲ್ ಜ್ವರ, ಸೋಂಕು, ಗ್ಯಾಸ್ಟ್ರಿಕ್‌ನ ಸಮಸ್ಯೆ ಪ್ರವಾಹದಂತೆ ಮನೆಯೊಳಗೆ ನುಗ್ಗಿ ಬಿಡುತ್ತದೆ. ಮಳೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಉರಿಯುವ ಸೂರ್ಯನಿಂದ ಮುಕ್ತಿ ನೀಡುವ ಮಳೆಗಾಲ ಮಸಾಜ್ ಮತ್ತು ನವಚೈತನ್ಯ ಪಡೆಯಕೊಳ್ಳಲು ಅತ್ಯಂತ ಸೂಕ್ತ ಸಮಯ.

ಮಳೆಗಾಲದಲ್ಲಿ ಜನರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ಚರ್ಮದ ಸಮಸ್ಯೆ. ಮಳೆಗಾಲದ ಅವಧಿಯಲ್ಲಿ ಚರ್ಮ ಸುಕ್ಕುಗಟ್ಟುವುದು ಮತ್ತು ಕೂದಲಿನ ಸಮಸ್ಯೆಗಳನ್ನು ತಡೆಯಲು ಅತ್ಯಂತ ಒಳ್ಳೆಯ ವಿಧಾನವೆಂದರೆ ಎಣ್ಣೆಯ ಮಸಾಜ್. ಆಯುರ್ವೇದದ ಪ್ರಕಾರ ಮಳೆಗಾಲದಲ್ಲಿ ದೇಹದಲ್ಲಿ ನಿಶ್ಯಕ್ತಿ ಉಂಟಾಗುವುದು. ದೇಹಕ್ಕೆ ನವಚೈತನ್ಯ ನೀಡಬೇಕಾದರೆ ಎಣ್ಣೆ ಮಸಾಜ್ ಅನಿವಾರ್ಯ.

ಮಳೆಗಾಲದಲ್ಲಿ ನಿಮಗೆ ಎಣ್ಣೆ ಮಸಾಜ್ ಬೇಕೆಂದರೆ ನೀವು ಮಸಾಜ್ ಸೆಂಟರ್‌ಗಳಿಗೆ ಹೋಗಬೇಕಾಗುತ್ತದೆ. ಆದರೆ ಎಣ್ಣೆ ಮಸಾಜ್ ಮಾಡಿಕೊಳ್ಳಲು ನೀವು ದುಬಾರಿ ಮಸಾಜ್ ಸೆಂಟರ್ ಅಥವಾ ಸ್ಪಾದ ಬಾಗಿಲು ತಟ್ಟಬೇಡಿ. ಮಳೆಗಾಲದಲ್ಲಿನ ಎಣ್ಣೆ ಮಸಾಜ್‌ಗಾಗಿ ನೀವು ಕೆಲವೊಂದು ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಎಣ್ಣೆ ಮಸಾಜ್‌ನ ಲಾಭಗಳನ್ನು ತಿಳಿದುಕೊಂಡಿರುವ ನಾವು ಈಗ ಮಳೆಗಾಲದಲ್ಲಿ ಅದನ್ನು ಬಳಸಿಕೊಳ್ಳುವ ವಿಧಾನಗಳ ಬಗ್ಗೆ ಚರ್ಚಿಸುವ.

Best Oil Massage In Monsoon

ತೆಂಗಿನ ಎಣ್ಣೆ ಮಸಾಜ್

ಮಳೆಗಾಲದಲ್ಲಿ ನಿಮ್ಮ ಕೂದಲಿಗೆ ಸರಳವಾಗಿ ಮಾಡಬಹುದಾದ ಮಸಾಜ್ ಎಂದರೆ ತೆಂಗಿನ ಎಣ್ಣೆ ಮಸಾಜ್. ಮಳೆಗಾಲ ಬಂತೆಂದರೆ ನಿಮ್ಮ ಕೂದಲು ಒಣಗುವುದು ಹಾಗು ಜಿಗುಟುಕಟ್ಟುವುದು. ಬಿಸಿಯಾದ ತೆಂಗಿನ ಎಣ್ಣೆಯಿಂದ ವಾರದಲ್ಲಿ ಎರಡು ಸಲ ಕೂದಲಿಗೆ ಮಸಾಜ್ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಇದು ಕೂದಲು ಉದುರುವುದನ್ನು ನಿವಾರಿಸಿ ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ.

ಆಲಿವ್ ಆಯಿಲ್ ಮಸಾಜ್

Best Oil Massage In Monsoon

ಆಲಿವ್ ಆಯಿಲ್ ಬಳಸಿಕೊಂಡು ಮಳೆಗಾಲದಲ್ಲಿ ಮತ್ತೊಂದು ಸರಳ ರೀತಿಯ ಮಸಾಜ್ ಮಾಡಬಹುದು. ಆಲಿವ್ ನಿಮ್ಮ ಕೂದಲು ಮತ್ತು ಚರ್ಮಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸಿ, ಅದನ್ನು ಆರೋಗ್ಯವಾಗಿಡುತ್ತದೆ.

ಬಾದಾಮಿ ಎಣ್ಣೆ ಮಸಾಜ್

Best Oil Massage In Monsoon

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಒಳಗೊಂಡಿದೆ ಮತ್ತು ಚರ್ಮ ಹಾಗೂ ಕೂದಲಿಗೆ ಜೀವ ತುಂಬುತ್ತದೆ. ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ಅದನ್ನು ನಿಧಾನವಾಗಿ ಕೆಲವು ನಿಮಿಷಗಳ ಕಾಲ ತಲೆಬುರುಡೆಗೆ ಹಚ್ಚಿ. ಸಮ ಪ್ರಮಾಣದಲ್ಲಿ ಬಾದಾಮಿ ಎಣ್ಣೆ ಮತ್ತು ಆಲಿವ್ ಆಯಿಲ್‌ನ್ನು ಮಿಶ್ರಣ ಮಾಡಿ ಅದನ್ನು ಬಿಸಿ ಮಾಡಿ, ನಿಮ್ಮ ಮಸಾಜ್ ಗೆ ಬಳಸಿಕೊಳ್ಳಿ. ಇದರಿಂದ ಮಳೆಗಾಲದಲ್ಲಿ ಕೂದಲು ಜಿಗುಟುಕಟ್ಟುವುದು ನಿಲ್ಲುತ್ತದೆ.

ಸಾಸಿವೆ ಎಣ್ಣೆ ಮಸಾಜ್

ಮಳೆಗಾಲದಲ್ಲಿ ಮಸಾಜ್ ಮಾಡಲು ಇದು ಅತೀ ಕಡಿಮೆ ದರದಲ್ಲಿ ಸಿಗುವ ಹಾಗೂ ಪ್ರಭಾವಿಯಾದ ಎಣ್ಣೆ. ಸಾಸಿವೆ ಎಣ್ಣೆಯನ್ನು ಮಸಾಜ್ ಗೆ ಬಳಸಿದಾಗ ಚರ್ಮ ಮತ್ತು ತಲೆಬುರುಡೆಗೆ ರಕ್ತ ಸಂಚಲವನ್ನು ಹೆಚ್ಚಿಸುತ್ತದೆ.ಮಳೆಗಾಲದಲ್ಲಿ ಮಸಾಜ್‌ಗೆ ಬಳಸಲ್ಪಡುವ ಇತರ ಎಣ್ಣೆಗಳೆಂದರೆ ಜೊಜೊಬಾ ಎಣ್ಣೆ, ಲ್ಯಾವೆಂಡರ್ ಎಣ್ಣೆ ಮತ್ತು ರೋಸ್ಮೆರಿ ಎಣ್ಣೆ. ಮಳೆಗಾಲದಲ್ಲಿ ಕೂದಲಿನ ಉತ್ತಮ ಆರೈಕೆಗೆ ಬಿಸಿ ಎಣ್ಣೆ ಬಳಸಿ, ಕೆಲ ಸಮಯ ತಲೆ ಬುರುಡೆಗೆ ಮಸಾಜ್ ಮಾಡಿದ ಬಳಿಕ ಕೆಲವು ಗಂಟೆ ಹಾಗೆ ಇರಲಿ. ಇದರಿಂದ ತಲೆಬುರುಡೆಯು ಎಣ್ಣೆಯನ್ನು ಸರಿಯಾಗಿ ಹೀರಿಕೊಳ್ಳುತ್ತದೆ. ಇದರ ಬಳಿಕ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಬಿಸಿ ನೀರಿನಿಂದ ಸ್ನಾನ ಮಾಡಿದ ಬಳಿಕ ಹೇರ್ ಕಂಡೀಷನರ್ ಬಳಸಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Best Oil Massage In Monsoon

Come Monsoon, we all are worried about the common health problems that we might encounter. Cold, cough, viral fever, infections, gastric problems are a few of them. However, there are several things that we all love about the rain. Having known the benefits, let us now discuss simple ways on how to get the best oil massage in monsoon.
Story first published: Sunday, June 21, 2015, 11:54 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X