For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಯುವ ಜನತೆಗಾಗಿ ಸೌಂದರ್ಯದ ಟಿಪ್ಸ್

By Vani nailk
|

ಚಳಿಗಾಲದಲ್ಲಿ ಗಂಡಸರಿಗೂ ಹಾಗು ಹೆಂಗಸರಿಗೂ ಶುಷ್ಕ ತ್ವಚೆಯ ತೊಂದರೆ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲಿ ಗಾಳಿಯಲ್ಲಿ ತೇವಾಂಶವಿರುತ್ತದೆ. ಹಾಗಾಗಿ ನಮ್ಮ ದೇಹ, ಶುಷ್ಕ ತ್ವಚೆಯು ಬಾರದಂತೆ ಬೇಕಾಗುವಷ್ಟು ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ. ಚಳಿಗಾಲದ ತಿಂಗಳುಗಳಲ್ಲಿ, ಜನರು ಅನೇಕ ತ್ವಚೆಯ ಸಮಸ್ಯೆಗಳಾದ ಒರಟು ಮುಖ, ಶುಷ್ಕತೆ, ತುರಿಕೆ ಮುಂತಾದವುಗಳಿಂದ ಬಳಲುತ್ತಾರೆ. ಆದ್ದರಿಂದ ನೀವು ತ್ವಚೆಯ ಆರೈಕೆಯ ಉತ್ಪನ್ನಗಳನ್ನು ಬಹಳ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಇದು ಮಹಿಳೆಯರಿಗಷ್ಟೇ ಆಲ್ಲ, ಪುರುಷರಿಗೂ ಅನ್ವಯಿಸುತ್ತದೆ.

ಚಳಿಗಾಲದಲ್ಲಿ ದೇಹದ ಆರೈಕೆಗೆ ಟಿಪ್ಸ್
ಉತ್ತಮ ತ್ವಚೆಯನ್ನು ಕಾಪಾಡಿಕೊಳ್ಳಲು ನೈಸರ್ಗಿಕವಾದ ಮಾಯಿಸ್ಚರೈಸರ್ ಅನ್ನೇ ಬಳಸಬೇಕು. ಚಳಿಗಾಲದ ತಿಂಗಳುಗಳಲ್ಲಿ ಬಿಸಿನೀರ ಸ್ನಾನ ಹೆಚ್ಚು ಸೂಕ್ತವೆನಿಸಿದರೂ, ಪುರುಷರ ಮತ್ತು ಮಹಿಳೆಯರ ತ್ವಚೆಯ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಇದು ಚರ್ಮದಿಂದ ತೇವಾಂಶವನ್ನು ಹೀರಿಕೊಳ್ಳುತ್ತಾದ್ದರಿಂದ, ಚರ್ಮವನ್ನು ಒಣದಾಗಿಸಿ, ತ್ವಚೆಯು ಬಿಗಿದಂತಾಗುತ್ತದೆ.

Top winter body care tips for men and women

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ

ದೀರ್ಘ ಕಾಲದವರೆಗೆ ಅಥವಾ ಮೇಲಿಂದ ಮೇಲೆ ಸ್ನಾನ ಮಾಡುವುದನ್ನು ತಡೆಗಟ್ಟಬೇಕು. ಚರ್ಮವು ಬಿರುಕು ಬಿಟ್ಟ ಸ್ಥಳದಲ್ಲಿ ಪೆಟ್ರೊಲಿಯಮ್ ಜೆಲ್ಲಿಯನ್ನು ಲೇಪಿಸಬೇಕು. ಮಲಗುವ ಮುನ್ನ ಮುಖಕ್ಕೆ ಬಾದಾಮಿ ಎಣ್ಣೆಯನ್ನು ಹಚ್ಚಬೇಕು. ಚಳಿಗಾಲದ ಗಾಳಿಯಿಂದ ನಿಮ್ಮ ತ್ವಚೆಯನ್ನು ಸಂರಕ್ಷಿಸಬೇಕು. ಆದಷ್ಟು ದೇಹವನ್ನು ಬಟ್ಟೆಯಿಂದ ಆಥವಾ ವುಲ್ಲನ್ ನಿಂದ ಕವರ್ ಮಾಡಬೇಕು.

ಪುರುಷ ಮತ್ತು ಮಹಿಳೆಯರಿಗೆ ತುಟಿಯ ಆರೈಕೆ
ಕೆಟ್ಟ ವಾತಾವರಣದಿಂದ ತುಟಿಗಳನ್ನು ರಕ್ಷಿಸಲು ಲಿಪ್ ಕೇರ್ ಬಾಮ್ ಅನ್ನು ಖಂಡಿತವಾಗಿ ಹಚ್ಚಿಕೊಳ್ಳಬೇಕು. ಸಾಧ್ಯವಾದರೆ ಮನೆಯಲ್ಲಿಯೇ ತಯಾರಿಸಿದ ಮುಲಾಮನ್ನು ಹಚ್ಚಿಕೊಳ್ಳಬೇಕು. ಇದರಿಂದಾಗಿ ತುಟಿಯ ಮೇಲಿನ ಸಂವೇದನೆಯಿಲ್ಲದ ತ್ವಚೆ ಹೋಗಿ ಹೊಸ ತ್ವಚೆ ಬರುತ್ತದೆ. ತ್ವಚೆ ತೇವವಾಗಿರಬೇಕೆಂದರೆ ಹೆಚ್ಚು ನೀರು ಕುಡಿಯಬೇಕು.

ತುಟಿಯು ತೇವವಾಗಿರಬೇಕೆಂದು ಹಲವರಿಗೆ ತುಟಿಯ ಮೇಲೆ ನಾಲಿಗೆ ಆಡಿಸುವ ಚಟವಿರುತ್ತದೆ. ಆದರೆ, ಇದು ಖಂಡಿತ ತಪ್ಪು. ಇದರಿಂದ ತುಟಿ ಮತ್ತಷ್ಟು ಶುಷ್ಕವಾಗುತ್ತದೆ ಮತ್ತು ತ್ವಚೆ ಹಾಳಾಗಿ ಬೇಗನೆ ಒಡೆಯುತ್ತವೆ. ಆದ್ದರಿಂದ ತುಟಿಯ ಮೇಲೆ ನಾಲಿಗೆ ಆಡಿಸುವುದನ್ನು ಬಿಡುವುದೇ ಒಳಿತು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲದಲ್ಲಿ ಸೌಂದರ್ಯ ರಕ್ಷಣೆಗೆ ಬ್ಯೂಟಿ ಟಿಪ್ಸ್

ಪುರುಷರು ಮತ್ತು ಮಹಿಳೆಯರಿಗೆ ಕಾಲಿನ ಆರೈಕೆಗೆ ಸಲಹೆ
ಪಾದ ಒಡೆಯುವುದು ಚಳಿಗಾಲದಲ್ಲಿ ಬಹುತೇಕ ಜನರು ಎದುರಿಸುವ ಸಾಮಾನ್ಯ ತೊಂದರೆ. ಇದರ ನಿವಾರಣೆಗೆ ಮನೆಯಲ್ಲಿಯೇ ಔಷಧಿಯನ್ನು ತಯಾರಿಸಿ ಲೇಪಿಸಬಹುದು. ಒಂದು ಬೋಗುಣಿಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು, ಅದರಲ್ಲಿ ಸ್ವಲ್ಪ ನಿಂಬೆ ರಸವನ್ನು ಹಿಂಡಿ, ಅರ್ಧ ಗಂಟೆಯ ಕಾಲ ಪಾದವನ್ನು ಅದರಲ್ಲಿ ಮುಳುಗಿಸಿಡಿ. ನಂತರ ಕಲ್ಲಿನಿಂದ ಅಥವಾ ಹುರುಪಾದ ಜಾಗದಲ್ಲಿ ಪಾದವನ್ನು ತಿಕ್ಕಿದರೆ ಸತ್ತ ಚರ್ಮದ ಕೋಶಗಳು ನಿವಾರಣೆಯಾಗುತ್ತವೆ.

ಪಾದಗಳಿಗೆ ಪೆಟ್ರೋಲಿಯಂ ಜೆಲ್ಲಿ ಅಥವಾ ಚಳಿಗಾಲದಲ್ಲಿ ಬಳಸಲಾಗುವ ಸುರಕ್ಷಿತ ಕ್ರೀಂಗಳನ್ನು ಹಚ್ಚಿರಿ. ಕ್ರೀಂ ಹಚ್ಚಿದ ನಂತರ ಕಾಲಿಗೆ ಸಾಕ್ಸ್ ಹಾಕಿಕೊಳ್ಳಿ. ಇದರಿಂದ ಪಾದಗಳು ಗಾಳಿಗೆ ತೆರವಾಗುವುದನ್ನು ತಪ್ಪಿಸಬಹುದು.

ಪುರುಷರು ಮತ್ತು ಮಹಿಳೆಯರಿಗೆ ಚಳಿಗಾಲದಲ್ಲಿ ಕೂದಲಿನ ಆರೈಕೆ
ಚಳಿಗಾಲದ ತಿಂಗಳುಗಳಲ್ಲಿ ಕೂದಲು ಹಾಳಾಗುವುದು ಅಥವಾ ತುದಿಗಳು ವಿಭಾಗವಾಗುವುದು ಸರ್ವೇಸಾಮಾನ್ಯ. ವಿಪರೀತ ಚಳಿ ಕೂದಲು ಒಣಗುವಂತೆ ಮತ್ತು ಸತ್ವ ಕಳೆದುಕೊಂಡಂತೆ ಕೂಡ ಮಾಡುತ್ತದೆ. ಇಂಥ ಸಮಯದಲ್ಲಿ ಕೂದಲ ಆರೈಕೆಯನ್ನು ಮಾಡುವುದು ಅತೀ ಉತ್ತಮ.

ಚಳಿ ಇದ್ದಾಗ ಹೊಟ್ಟು ಹೆಚ್ಚಾಗಿ ಆಗುತ್ತಿರುತ್ತದೆ. ಹೊಟ್ಟು ತೊಲಗಿಸಲು ತಾಜಾ ನಿಂಬೆ ರಸವನ್ನು ಕೂದಲ ಬುಡಕ್ಕೆ ಹಚ್ಚಿ ನಂತರ ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಹೊಟ್ಟು ನಿವಾರಣೆಯಾಗುತ್ತದೆ.

ಚಳಿಗಾಲದಲ್ಲಿ ಜಾಸ್ತಿ ತಲೆಯ ಮೇಲೆ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಜಾಸ್ತಿ ಸ್ನಾನ ಮಾಡಿದರೆ ಕೂದಲು ಒಣಗಿದಂತಾಗಿ ಸತ್ವ ಕಳೆದುಕೊಂಡಂತೆ ಆಗುತ್ತವೆ. ನೈಸರ್ಗಿಕ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ. ಇದರಿಂದ ಎಣ್ಣೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

English summary

Top winter body care tips for men and women

Dryness of skin is faced by both male and female during winter season. During the summer seasons, humidity in the air remains. Thus, even if we seat, out body retain enough moisture to protect our skin from dryness.
Story first published: Saturday, January 18, 2014, 10:33 [IST]
X
Desktop Bottom Promotion