For Quick Alerts
ALLOW NOTIFICATIONS  
For Daily Alerts

ಪಪ್ಪಾಯಿ ಹಣ್ಣಿನಿಂದ ನಿಮ್ಮ ಸೌಂದರ್ಯವನ್ನು ವರ್ಧಿಸಿಕೊಳ್ಳಿ

By Poornima Heggade
|

ಪಪ್ಪಾಯಿ ಹಲವಾರು ಉಪಯೋಗಗಳನ್ನು ಹೊಂದಿರುವ ಒಂದು ಉಷ್ಣವಲಯದ ಹಣ್ಣು. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ಸಲಾಡ್, ಐಸ್ ಕ್ರೀಮ್, ಮತ್ತು ಸೈಯ್ಸ್ ರೂಪದಲ್ಲಿ/ಬೆರೆಸಿ ಸೇವಿಸಬಹುದು. ಇದನ್ನು ಕೂದಲು ಮತ್ತು ತ್ವಚೆ ಎರಡಕ್ಕೂ ಒಂದು ಸೌಂದರ್ಯ ಉತ್ಪನ್ನಗಳ ರೂಪದಲ್ಲಿ ಬಳಸಲಾಗುತ್ತದೆ.

ನೀವು ಈ ಸಂಸ್ಕರಿಸಿದ ಹಣ್ಣನ್ನು ಖರೀದಿ ಮಾಡಿ ನೇರವಾಗಿ ಬಳಸಿ ಈ ಸೌಂದರ್ಯ ಪ್ರಯೋಜನಗಳನ್ನು ಪಡೆಯಬಹುದು. ಜೊತೆಗೆ ಈ ಕೆಳಗೆ ನೀಡಲಾದ ಪಪ್ಪಾಯಿ ಸೌಂದರ್ಯ ಸಲಹೆಗಳ ಮೂಲಕ ಪಪ್ಪಾಯಿ ಬಳಕೆಯನ್ನು ತಿಳಿಯಬಹುದು.

Papaya Beauty Tips

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ

ಸಲಹೆ 1 : ಮುಖಕ್ಕೆ ಪಪ್ಪಾಯಿ ಲೇಪಿಸಿ
Encyclopedia.com ನಲ್ಲಿ ನಮೂದಿಸಿದಂತೆ, ಪಪ್ಪಾಯಿ ಬಿ ಹೆಚ್ ಎ (BHAs) ಎಂದು ಕರೆಯಲ್ಪಡುವ ಬೀಟಾ ಹೈಡ್ರಾಕ್ಸಿಲ್ ಆಮ್ಲಗಳು ಎಂಬ ರಾಸಾಯನಿಕಗಳನ್ನು ಹೊಂದಿರುತ್ತವೆ. ಬಿ ಹೆಚ್ ಎ (BHAs) ಮೃದುವಾದ ಮತ್ತು ಸುಂದರವಾದ ಹೊಸ ತಾಜಾ ತ್ವಚೆಯನ್ನು ನೀಡುವ ಮತ್ತು ತವ್ಚೆಯ ಮೇಲಿನ ಪದರಗಳನ್ನು ತೆಗೆದು ಹೊಸ ಪದರವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಸ್ಕ್ರಬ್ ನಂತೆ ಬಳಸಲ್ಪಡುತ್ತದೆ. ಜೊತೆಗೆ, ಈ ಹಣ್ಣುಗಳಲ್ಲಿರುವ ಬಿ ಹೆಚ್ ಎ ಕಾರಣದಿಂದಾಗಿ ತ್ವಚೆಯ ಕೊಳಕು ಮತ್ತು ಮೊಡವೆಗೆ ಕಾರಣವಾದ ಎಣ್ಣೆ ಜಿಡ್ಡನ್ನು ತೆಗೆದುಹಾಕಲು ಬಳಸಬಹುದು.

ಮುಖಕ್ಕೆ ಮೃದುತ್ವವನ್ನು ನೀಡಲು ಪಪ್ಪಾಯಿಯನ್ನು ನಿಮ್ಮ ಮುಖದ ಮೇಲೆ ತೆಳುವಾಗಿ ಹಚ್ಚಿ ಸ್ಪಲ್ವ ಸಮಯದ ವರೆಗೆ ತೊಳೆಯದೆ ಹಾಗೆಯೇ ಬಿಡಿ ನಂತರ ಕೆಲವು ನಿಮಿಷಗಳ ನಂತರ ತೊಳೆಯಿರಿ. ಪಪ್ಪಾಯಿ ಹಣ್ಣಿನಲ್ಲಿರುವ ಬಿ ಹೆಚ್ ಎ ಅಂಶ ಇತರ ಸ್ಕ್ರಬ್ ಗಳಂತೆ ಕಿರಿಕಿರಿಯನ್ನುಂಟುಮಾಡುವುದಿಲ್ಲ. ಆಗಾದ್ಯೂ ಕೆಲವರಿಗೆ ಪಪ್ಪಾಯಿ ಅಲರ್ಜಿಯನ್ನುಂಟು ಮಾಡುವುದರಿಂದ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಬಳಸುವಾಗ ಎಚ್ಚರವಹಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಾಕ್ಸಿಂಗ್ ಬಂಪ್ಸ್ ಅನ್ನು ನಿವಾರಿಸುವ ಸಲಹೆಗಳು

ಸಲಹೆ 2: ಸ್ಕಿನ್ ಟೋನ್‌ಗಳಿಗೆ ಪಪ್ಪಾಯಿ
ಕೆಲವರು ವಯಸ್ಸಾಗುತ್ತಿದ್ದಂತೆ ಅಸಮ ವರ್ಣದ್ರವ್ಯಗಳ (ಕಪ್ಪಾಗುವುದು, ಮುಖ ಸುಕ್ಕಾಗುವುದು ಇತ್ಯಾದಿ) ತೊಂದರೆಯಿಂದ ಬಳಲುತ್ತಿದ್ದಾರೆ. ಇವು ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳು ಮತ್ತು ಚರ್ಮರೋಗ ವೈದ್ಯರಿಂದ ಇದಕ್ಕೆ ದುಬಾರಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಜೊತೆಗೆ, ಮೇರಿ ಕ್ಲೇರ್ ಪತ್ರಿಕೆಯ ಸಲಹೆಯಂತೆ ಪಪ್ಪಾಯಿಯನ್ನು ವರ್ಣದ್ರವ್ಯದ ಅಥವಾ ತ್ವಚೆಯ ಕಪ್ಪು ತಾಣಗಳನ್ನು ಹೊಂದಿರುವ ವ್ಯಕ್ತಿಗಳು ಮಾಸ್ಕ್ ರೀತಿಯಲ್ಲಿ ಮನೆಯಲ್ಲಿಯೇ ತಯಾರಿಸಿ ಬಳಕೆ ಮಾಡಬಹುದು. ಈ ಮಾಸ್ಕ್ ನ್ನು ತಯಾರಿಸುವುದು ಸುಲಭ ಮತ್ತು ಜೊತೆಗೆ ಅಗ್ಗವಾದದ್ದು.

ಒಂದು ಪಪ್ಪಾಯಿ ಮಾಸ್ಕ್ ತಯಾರಿಕೆಗೆ, ಕೇವಲ 2 ಚಮಚ ಜೇನಿನೊಂದಿಗೆ ಹಿಸುಕಿದ ಕಳಿತ ಪಪ್ಪಾಯಿಯನ್ನು ½ ಲೋಟ ಕಪ್ ಮಿಶ್ರಣ ಮಾಡಿ. ಈ ಮುಶ್ರಣವನ್ನು ಎಲ್ಲಾ ನಿಮ್ಮ ಮುಖದ ಮೇಲೆ ತೆಳುವಾಗಿ ಲೇಪಿಸಿ, ನಂತರ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಿಸಿ ನೀರಿನಲ್ಲಿ ಮುಖವನ್ನು ತೊಳೆದು ಮುಖವನ್ನು ಒರೆಸಿಕೊಳ್ಳಿ. ನಂತರ ನಿಮ್ಮ ಮಾಯಿಶ್ಚರೈಸರ್ ಗಳನ್ನು ಹಚ್ಚಿ.

ಸಲಹೆ 3: ಆರೋಗ್ಯ ಸುಧಾರಣೆಗೆ ಪಪ್ಪಾಯಿ
ಸೌಂದರ್ಯವನ್ನು ಹೆಚ್ಚಿಸುವುದು ಬಾಹ್ಯ ಚಿಕಿತ್ಸೆ. ಜೊತೆಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದೂ ಕೂಡ ಇದೇ ಸಂದರ್ಭದಲ್ಲಿ ಪ್ರಮುಖವಾದುದು ಎಂಬುದನ್ನು ಮರೆಯುವಂತಿಲ್ಲ. ಒಬ್ಬ ವ್ಯಕ್ತಿ ದೈಹಿಕವಾಗಿ ಉತ್ತಮ ಆರೋಗ್ಯ ಹೊಂದಿದ್ದರೆ ಆತ ಉತ್ತಮ ತ್ವಚೆಯನ್ನೂ ಹೊಂದಲು ಸಾಧ್ಯ. ಪಪ್ಪಾಯಿ ಹಣ್ಣು ಹಲವು ಪೋಷಕಾಂಶಗಳ ಒಳಗೊಂಡಿರುವುದರಿಂದ ಸಾಮಾನ್ಯ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದವರು ವಿವರಿಸುವಂತೆ, ಪಪ್ಪಾಯಿಯಲ್ಲಿರುವ ಸಮೃದ್ಧವಾದ ವಿಟನಿನ್ ಸಿ, ಪ್ರಬಲ ಆಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಆಗಿದ್ದು ದೇಹದ ಆಮೂಲಾಗ್ರ ಹಾನಿಯನ್ನು ತಡೆಯುತ್ತದೆ. ಇದಲ್ಲದೆ, ವಿಟಮಿನ್ ಸಿ ಸಂಧಿವಾತ, ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ರೋಗಗಳನ್ನೂ ತಡೆಯುತ್ತದೆ.

ಪಪ್ಪಾಯಿ, ಸಾಮಾನ್ಯವಾಗಿ ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಬಳಸುವ ಪದಾರ್ಥವಾಗಿ ಬಳಸುವುದನ್ನು ನೀವು ಎಲ್ಲಾ ಆರೋಗ್ಯ ಮಳಿಗೆಗಳಲ್ಲಿ (ಮೆಡಿಕಲ್ ಶಾಪ್) ಬ್ಯೂಟಿ ಪಾರ್ಲರ್ ಗಳಲ್ಲಿ ಕಾಣಬಹುದು. ನೀವು ದಿನಸಿ ಅಂಗಡಿಗಳಲ್ಲಿಯೂ ಸಹ ಇಂತಹ ಉತ್ಪನ್ನಗಳನ್ನು ನೋಡಬಹುದು. ನಿಮಗೆ ಈ ಹಣ್ಣುಗಳಿಂದ ಮಾಸ್ಕ್ ಅಥವಾ ಬೇರೆ ಸೌಂದರ್ಯವರ್ಧಕಗಳನ್ನು ತಯಾರಿಸಲು ಸಮಯವಿಲ್ಲದಿದ್ದರೆ ಈ ಹಣ್ಣನ್ನು ಬಳಸಿ ತಯಾರಿಸಿದ ಮಿಶ್ರಣಗಳನ್ನು ಬಳಸಿ ಉತ್ತಮ ಫಲಿತಾಂಶ ಪಡೆಯಬಹುದು.

English summary

Papaya Beauty Tips

Papaya is a tropical fruit which has several uses. It can be eaten alone or can be mixed into salads, ice cream, smoothies and salsas. It can also be used as an ingredient of both hair and skin care products.
X
Desktop Bottom Promotion