For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಬಿಳುಪಿನ ದಂತ ಪಂಕ್ತಿಗಾಗಿ ಸರಳ ಸಲಹೆಗಳು

|

ಹಲ್ಲುಗಳು ಸೌಂದರ್ಯದ ಪ್ರತೀಕ. ನಮ್ಮ ಸೌಂದರ್ಯ ಅಡಗಿರುವುದು ಹಲ್ಲುಗಳಲ್ಲೇ. ಹುಳುಕಿರುವ ಹಲ್ಲುಗಳು ಸೌಂದರ್ಯವನ್ನು ಹಾಳುಗೆಡವುತ್ತವೆ. ಇದಕ್ಕಾಗಿ ವಿಶೇಷ ಕಾಳಜಿಯನ್ನು ನಾವು ತೆಗೆದುಕೊಳ್ಳಲೇಬೇಕು. ಹಲ್ಲುಗಳ ಸಂರಕ್ಷಣೆ ನಮ್ಮ ಕೈಯಲ್ಲಿದೆ. ದಿನವೂ ಹಲ್ಲುಗಳನ್ನು ಸ್ವಚ್ಛವಾಗಿಡುವುದರಿಂದ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಅದರಲ್ಲೂ ಸೂಕ್ಷ್ಮ ಹಲ್ಲುಗಳು ಅಥವಾ ಸೆನ್ಸಿಟೀವ್ ಹಲ್ಲುಗಳ ಕಾಳಜಿಗೆ ಹೆಚ್ಚು ಗಮನ ನೀಡಬೇಕು. ಬನ್ನಿ ನೈಸರ್ಗಿಕವಾಗಿ ಹಲ್ಲುಗಳ ರಕ್ಷಣೆ ಹೇಗೆ ಮಾಡಬಹುದು ಎಂಬುದರ ಕಡೆ ಗಮನಹರಿಸೋಣ. ಹಲ್ಲುಗಳು ಹಳದಿಯಾಗದಂತೆ ತಡೆಯಬೇಕೆ?

ಕೆಲವು ಮರದ ಕಡ್ಡಿಗಳನ್ನು ಹಲ್ಲು ಬೆಳ್ಳಗಾಗುವುದಕ್ಕೆ ಬಳಸಿ
ಈ ಸಂಪ್ರದಾಯವು ಭಾರತದ ಕೆಲವು ಪ್ರದೇಶಗಳಲ್ಲಿ ಮತ್ತು ಅದರ ನೆರೆಯ ದೇಶಗಳಲ್ಲಿ ಇಂದಿನ ಕಾಲದಲ್ಲೂ ಕೂಡ ನಡೆಯುತ್ತಿದೆ. ಆಯುರ್ವೇದದಲ್ಲಿ ಕೆಲವು ಮರಗಳ ಕಡ್ಡಿಯಲ್ಲಿ ನಿರ್ದಿಷ್ಟ ರಕ್ತಸ್ರಾವ ತಡೆಗಟ್ಟುವ ಮತ್ತು ಇತರ ಗುಣಗಳು ನೀವು ನಿಯಮಿತವಾಗಿ ಬಳಸಿದರೆ ಬಿಳೀಹಲ್ಲುಗಳನ್ನು ಹೊಂದಬಹುದೆಂದು ಹೇಳಲ್ಪಟ್ಟಿದೆ. ಈ ಮರಗಳ ಕಡ್ಡಿಯನ್ನು ಹಲ್ಲುಗಳನ್ನು ಉಜ್ಜಲು ಬಳಸುತ್ತಾರೆ. ಅದು ಹೇಗೆ? ಮರದ ರೆಂಬೆಯಲ್ಲಿನ ಒಂದು ಎಳೆಯ ನವಿರಾದ (ಬಹಳ ಮೃದುವೂ ಅಲ್ಲ ಮತ್ತು ಗಟ್ಟಿಯೂ ಅಲ್ಲ) ಕಡ್ಡಿಯನ್ನು ತೆಗೆದುಕೊಳ್ಳಬೇಕು.

ಅದರ ಉದ್ದ ಒಂದು ಸಾಧಾರಣ ಟೂತ್ ಬ್ರಶ್ ಉದ್ದಕಿರಬೇಕು. ಕಡ್ದಿಯನ್ನು ಚೆನ್ನಗಿ ಶುದ್ಧ ನೀರಿನಿಂದ ತೊಳೆಯಿರಿ. ಈಗ ಒಂದು ಕೊನೆ ಕೈಯಲ್ಲಿ ಹಿಡಿದು ಮತ್ತೊಂದು ಕೊನೆಯನ್ನು ಬಾಯಲ್ಲಿ ಹಲ್ಲುಗಳ ಮಧ್ಯವಿರಿಸಿ ಮೆಲ್ಲಗೆ ಕಚ್ಚಿರಿ. ಕೆಲವೇ ಸಮಯದಲ್ಲಿ ಕಚ್ಚುತ್ತಿರುವ ಕೊನೆಯು ಚದುರಿ ನಾರುಗಳು ಕಂಡುಬರುತ್ತವೆ. ಅದನ್ನು ಬಾಯಿಯಿಂದ ಹೊರಕ್ಕೆ ತೆಗೆದು ನೋಡಿದರೆ ಒದು ಒಂದು ಕಲಾವಿದನ ಕುಂಚದಂತೆ ಸ್ವಲ್ಪ ಒರಟಾಗಿರುವಂತೆ ಕಾಣುತ್ತದೆ. ಇದು ಈಗ ನಿಮ್ಮ ನೈಸರ್ಗಿಕ ಟೂತ್ ಬ್ರಶ್. ನಾರಿನ ಕೊನೆಯಿಂದ ನಿಮ್ಮ ಹಲ್ಲುಗಳನ್ನು ಕನಿಷ್ಠ 15-20 ನಿಮಿಷಗಳು ಬ್ರಶ್ ಮಾಡಿ. ನಂತರ ಕಡ್ಡಿಯನ್ನು ಬಿಸಾಡಿ ಮತ್ತು ಮುಂದಿನ ಬಾರಿ ಬಳಸಲು ಮತ್ತೊಂದು ಬ್ರಶ್ ಮಾಡಿಕೊಳ್ಳಿ. ಈಗ ಬರುವ ಪ್ರಶ್ನೆಯೇನೆಂದರೆ ಈ ಕಡ್ಡಿಗಳನ್ನು ಯಾವ ಮರಗಳಲ್ಲಿ ಹುಡುಕಬೇಕು? ಇಲ್ಲಿಇದೆ ನೋಡಿ ಅಂತಹ ಮರಗಳ ಪಟ್ಟಿಯನ್ನು:

ಬಬೂಲ್ ಮರ (ಅಕಸಿಯಾ ಅರಾಬಿಕ)
ಬಬೂಲ್ ಮರವು ಅತ್ಯಂತ ಸೌಹಾರ್ದ ಮರಗಳಲ್ಲೊಂದಾಗಿದೆ. ಇದರ ಸಾರವನ್ನು ಅನೇಕ ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿ ಬಳಸುತ್ತಾರೆ ಹಾಗೂ ಇದರ ಸಾರವು ವಾಣಿಜ್ಯ ರೂಪದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಮರದ ಕೊಂಬೆಗಳಲ್ಲಿರುವ ಟಾನ್ನಿನ್ ಅಂಬ ಅಂಶದಿಂದ ನಿಮ್ಮ ಹಳದಿ ಬಣ್ಣದ ಹಲ್ಲುಗಳನ್ನು ಬೆಳ್ಳಗೆ ಮಾಡುತ್ತದೆ.

ಆಲದ ಮರ (ಫಿಕಸ್ ರೆಲಿಜಿಯೋಸ)
ಈ ಮರದ ಬಿಳಿಲು ಬಿಟ್ಟಿರುವ ಬೇರುಗಳಲ್ಲಿ ನೈಸರ್ಗಿಕವಾಗಿ ರಕ್ತಸ್ರಾವ ತಡೆದು ಬೆಳ್ಳಗೆ ಮಾಡುವ ಅಂಶಗಳಿರುತ್ತದೆ ಮತ್ತು ಇದು ನಿಮ್ಮ ಹಲ್ಲುಗಳನ್ನು ಮುತ್ತಿನಂತೆ ಬೆಳ್ಳಗೆ ಮಾಡುತ್ತದೆ.

ಉಚಿತವಾಗಿ ದೊರಕುವ ಮುತ್ತಿನಂಥ ಬಿಳಿಹಲ್ಲುಗಳಿಗಾಗಿ ಆಯಿಲ್ ಪುಲ್ಲಿಂಗ್ ಮಾಡುವುದನ್ನು ಕಲಿಯಿರಿ
ಹಾದು, ಇದೊಂದು ವಿಶೇಷ ಸವಲತ್ತು - ಬೆಳ್ಳಗಿರುವ ಹಲ್ಲುಗಳು - ನೀವು ಮೌಖಿಕವಾಗಿ ಆಯಿಲ್ ಪುಲ್ ಮಾಡಿದಾಗ ದೊರಕುವುದು. ಆಯಿಲ್ ಪುಲ್ಲಿಂಗ್ ಒಟ್ಟಾರೆ ಒಳ್ಳೆಯ ಆರೋಗ್ಯಕ್ಕೆ ಮತ್ತು ಒಂದಲ್ಲ, ಎರಡಲ್ಲ ಆದರೆ ವಿವಿಧವಾದಕಾಯಿಲೆಗಳು, ಅಂದರೆ ಕೀಲು ನೋವು, ಸಂಧಿವಾತ, ಮೈಗ್ರೇನ್, ಸೈನಸ್ ಸೋಂಕು, ಇಸಬು ಸೇರಿದಂತೆ ಚರ್ಮಕ್ಕೆ ತಗಲುವ ಸೋಂಕು ಮತ್ತು ಇತರ ಕಾಯಿಲೆಗಳನ್ನು ಗುಣಪಡಿಸಲು ಒಂದು ಆಯುರ್ವೇದದ ವಿಧಾನ. ಮತ್ತು ಸುಧಾರಣೆ ಪ್ರಶ್ನೆ ಬಂದಾಗ, ಇದು ಕಣ್ಣಿನ ದೃಷ್ಟಿ, ಮಾನಸಿಕ ಸ್ಪಷ್ಟತೆ, ಕೂದಲು ಬೆಳವಣಿಗೆ, ಜೀರ್ಣಕ್ರಿಯೆ ಮತ್ತು ನೀವು ಹವಣಿಸುತ್ತಿರುವ ಹಲ್ಲುಗಳ ಬಿಳುಪು ಇವೆಲ್ಲವನ್ನೂ ಸುಧಾರಿಸುತ್ತದೆ. ನೀವು ಆಯಿಲ್ ಪುಲ್ ಮಾಡಿದಾಗ ನಿಮಗೆ ಹೊಳೆಯುವ ಹಲ್ಲುಗಳು ಬರುವುದಲ್ಲದೆ ಬ್ಯಾಕ್ಟೀರಿಯ, ಹಲ್ಲುಗಳ ಮೇಲಣ ಲೋಳೆಯಂಥ ನಿಕ್ಷೇಪ (ಪ್ಲೇಕ್) ಮತ್ತು ಗಮ್‌ರೋಗ (ಜಿಂಜಿವಿಟಿಸ್) ಇವೆಲ್ಲವನ್ನು ತೆಗೆದುಹಾಕಿ ಆರೋಗ್ಯಕರ ಹೊಳೆಯುವ ಬಾಯಿಯನ್ನು ಪಡೆಯುತ್ತೀರಿ! ನೀವು ಬಾಯಲ್ಲಿ ಮುಕ್ಕಳಿಸಲು ಬಳಸುವ ಎಣ್ಣೆಯು ಬ್ಯಾಕ್ಟೀರಿಯ, ಪರಾವಲಂಬಿಗಳು (ಪ್ಯಾರಾಸೈಟ್ಸ್) ಮತ್ತು ಇತರ ನಿಮ್ಮ ಹಲ್ಲುಗಳಲ್ಲಿರುವ ವಿಷಗಳನ್ನು ಮತ್ತು ಲೋಳೆಯ ಪೊರೆಗಳನ್ನು ಎಳೆದು ಹಾಕುತ್ತದೆ. ಹಾಗಿದ್ದಲ್ಲಿ ಆಯಿಲ್ ಪುಲ್ಲಿಂಗ್ ಮಾಡುವುದು ಹೇಗೆ? ಅದು ಬಹಳ ಸರಳ ವಿಧಾನ ಮತ್ತು ಮಾಡುವುದೂ ಕೂಡ ಸರಳ.

ವಿಟಮಿನ್ ಸಿ ಧಾರಾಳವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ನಿಮಗೆ ಬಿಳಿ ಹಲ್ಲುಗಳನ್ನು ನೀಡಬಹುದು
ವಿಟಮಿನ್ ಸಿ ಧಾರಾಳವಾಗಿರುವ ಸಿಟ್ರಸ್ ಹಣ್ಣುಗಳು ಹಾಗೂ ಇತರ ಆಹಾರಗಳು ನಿಮ್ಮ ಹಲ್ಲುಗಳ ಮೇಲಿನ ಹಳದಿಬಣ್ಣವನ್ನು ಹೊಡೆದುಹಾಕಲು ಸಹಾಯಮಾಡಬಹುದು. ಅವುಗಳ ಬ್ಲೀಚಿಂಗ್ ಮಾಡುವ ಶಕ್ತಿಯಿಂದ ನಿಮ್ಮ ಹಲ್ಲುಗಳಮೇಲೆ ಒಳ್ಳೆಯ ಪರಿಣಾಮ ಆಗುವುದು. ಆದ್ದರಿಂದ ಸ್ಟ್ರಾಬೆರ್ರಿ, ಟೊಮ್ಯಾಟೋ, ನೆಲ್ಲಿಕಾಯಿ (ಗೂಸ್‌ಬೆರ್ರಿ), ಕಿತ್ತಳೆ ಮತ್ತು ಅತ್ಯಂತ ಪರಿಣಾಮಕಾರಿ ನಿಂಬೆ ಇವುಗಳನ್ನು ಸೇವಿಸಿ ನಿಮ್ಮ ಹಲ್ಲುಗಳನ್ನು ಬ್ಲೀಚ್ ಆಗಿ ಹೊಳೆಯುವ ಬಿಳುಪು ಹಲ್ಲುಗಳನ್ನು ಪಡೆಯಿರಿ. ಈ ಹಣ್ಣುಗಳು ನಿಮ್ಮ ಹಲ್ಲುಗಳ ಸಂಪರ್ಕಕ್ಕೆ ಬರಲು ಅವುಗಳನ್ನು ಮ್ಯಾಶ್ ಮಾಡಿ, ಹಲ್ಲುಗಳನ್ನು ಉಜ್ಜಿ, ಅವುಗಳ ರಸವನ್ನು ತೆಗೆದು ಕುಡಿಯಿರಿ, ಹೀಗೆ ಯಾವುದಾದ ರೀತಿಯಲ್ಲಿ ಬಳಸಿ ಉಪಯೋಗಿಸಿ.

ಸ್ಟ್ರಾಬೆರ್ರಿಯನ್ನು ಎರಡು ಹೋಳಾಗಿ ಮಾಡಿ. ಒಂದರ್ಧವನ್ನು ತೆಗೆದುಕೊಂಡು ಅದರಮೇಲೆ ಅಡಿಗೆ ಸೋಡ ಸಿಂಪಡಿಸಿ. ಈಗ ಇದನ್ನು ಬಳಸಿ ನಿಮ್ಮ ಹಲ್ಲುಗಳನ್ನು ಉಜ್ಜಿ. ನೀವು ಅಡಿಗೆ ಸೋಡ ಬೇಡವೆಂದರೆ, ಸರಳ ಸ್ಟ್ರಾಬೆರ್ರಿಯನ್ನೇ ಬಳಸಿ ಉಜ್ಜಿ. ಮ್ಯಾಲಿಕ್ ಆಮ್ಲ ಸ್ಟ್ರಾಬೆರ್ರಿಯಲ್ಲಿ ಇದ್ದು ಅದರಲ್ಲಿರುವ ಹಲ್ಲುಗಳ ಮೇಲಿನ ಲೋಳೆ ಮತ್ತು ಹಳದಿ ಬಣ್ಣವನ್ನು ತೆಗೆಯುವ ಗುಣಗಳಿಂದ ನಿಮಗೆ ಮುತ್ತಿನಂತಿರುವ ಹಲ್ಲುಗಳು ಕೊಡುತ್ತದೆ. ಸ್ಟ್ರಾಬೆರ್ರಿಯನ್ನು ಮ್ಯಾಶ್ ಮಾಡಿ, ಹಿಂಡಿ ರಸವನ್ನು ತೆಗೆದುಕೊಳ್ಳಿ. ಈ ರಸವನ್ನು ನಿಮ್ಮ ಹಲ್ಲುಗಳಮೇಲೆ ಲೇಪಿಸಿ ಮತ್ತು ಒಂದೆರಡು ನಿಮಿಷವಾದ ನಂತರ ಹಲ್ಲುಗಳನ್ನು ತೊಳೆದುಕೊಳ್ಳಿ. ನೀವು ಇದರ ತಿರುಳನ್ನು ಸಹ ಇದೇ ಪರಿಣಾಮಕ್ಕೆ ಬಳಸಬಹುದು. ಸ್ಟ್ರಾಬೆರ್ರಿಯನ್ನು ಬಳಸಿದನಂತರ ಯಾವಾಗಲೂ ನಿಮ್ಮ ಮಾಮೂಲು ಬಳಸುವ ಟೂತ್ ಪೇಸ್ಟ್ ಬಳಸಿ ಹಲ್ಲುಗಳನ್ನು ಸ್ವಚ್ಚ ಮಾಡಿಕೊಳ್ಳಿ.

English summary

Natural Teeth Whitening Home Remedies

Using basil for oral care not only gives your yellow teeth the much needed sparkling but also protect them against many dental problems like pyorrhea or the bleeding of gums. There are many ways in which Ayurveda suggests using basil leaves for your yellow teeth. Here are some of them.
X
Desktop Bottom Promotion