For Quick Alerts
ALLOW NOTIFICATIONS  
For Daily Alerts

ಸೌಂದರ್ಯ ವೃದ್ಧಿಗೆ ಬಳಸಿ ಚೆಂಡು ಹೂವಿನ ಆರೋಗ್ಯಕಾರಿ ಸಲಹೆ

By Super
|

ತ್ವಚೆಯ ಸಂರಕ್ಷಣೆಯ ವಿಷಯಕ್ಕೆ ಬಂದರೆ ಚೆಂಡು ಹೂವು (ಗೊಂಡೆ ಹೂವು) ಅತ್ಯಂತ ಹಳೆಯ ಗಿಡಮೂಲಿಕೆಯಾಗಿ ಚಾಲ್ತಿಯಲ್ಲಿದೆ. ಕುಂಡದ ಚೆಂಡು ಮಲ್ಲಿಗೆಯು ಮಾಮೂಲಿ ಗೊಂಡೆ ಹೂವಿಗಿಂತ ವಿಭಿನ್ನವಾಗಿದೆ.

ಇದನ್ನು ಮೆಡಿಟರೇನಿಯನ್, ಯೂರೋಪ್ ಮತ್ತು ನೈಋತ್ಯ ಏಷ್ಯಾ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದರಲ್ಲಿ ಕ್ಯಾರೊಟಿನೋಯ್ಡ್‌ಗಳು, ಗ್ಲಿಸೊಸೈಡ್‍ಗಳು, ವೊಲಟೈಲ್ ಎಣ್ಣೆ, ಫ್ಲಾವೊನಾಯ್ಡ್‌ಗಳು ಮತ್ತು ಸ್ಟೆರೊಲ್‌ಗಳು ಅಧಿಕವಾಗಿರುತ್ತವೆ.

ಇವುಗಳೆಲ್ಲವು ತ್ವಚೆಯ ಮೇಲೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತವೆ. ಇವುಗಳು ಕ್ರೀಮ್, ಸೋಪ್ ಮತ್ತು ಆರೋಮಾ ಥೆರಪಿ ಎಣ್ಣೆಗಳಾಗಿ ಅಂಗಡಿಗಳಲ್ಲಿ ದೊರೆಯುತ್ತವೆ. ಇಲ್ಲಿ ನಾವು ಚೆಂಡು ಹೂವುಗೆ ಅಥವಾ ಗೊಂಡೆ ಹೂವು ದೊರೆಯುವ ಕೆಲವೊಂದು ಆರೋಗ್ಯಕಾರಿ ಪ್ರಯೋಜನಗಳನ್ನು ವಿವರಿಸಿದ್ದೇವೆ ಓದಿಕೊಳ್ಳಿ. ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ತ್ವಚೆಯಲ್ಲಿ ತುರಿಕೆಯನ್ನು ಕಡಿಮೆ ಮಾಡುತ್ತವೆ

ತ್ವಚೆಯಲ್ಲಿ ತುರಿಕೆಯನ್ನು ಕಡಿಮೆ ಮಾಡುತ್ತವೆ

ಚೆಂಡು ಹೂವುಗೆ ವೊಲಾಟೈಲ್ ಎಣ್ಣೆ, ಸಾವಯವ ಆಮ್ಲಗಳು ಮತ್ತು ಸ್ಟಿರೋಲ್‍ಗಳು ಇರುತ್ತವೆ. ಇವು ಒಳ್ಳೆಯ ಉಪಶಮನಕಾರಿ ಗುಣಗಳನ್ನು ಹೊಂದಿರುತ್ತವೆ. ತ್ವಚೆಯ ಮೇಲೆ ಕೀಟಾಣುಗಳು ಕಡಿತದಿಂದ, ಸುಟ್ಟ ಗಾಯದಿಂದ ಅಥವಾ ಗಾಯದಿಂದ ತುರಿಕೆ ಉಂಟಾದಲ್ಲಿ ಕ್ಯಾಲೆಂಡುಲದ ಕ್ರೀಮನ್ನು ಹಚ್ಚಿ ತಕ್ಷಣ ಉಪಶಮನವನ್ನು ಪಡೆಯಿರಿ. ಇದರಿಂದ ಗಾಯವು ಬೇಗ ಮಾಯುತ್ತದೆ.

ಮೊಡವೆಗಳಿಗೆ ಚಿಕಿತ್ಸೆ ನೀಡಲು

ಮೊಡವೆಗಳಿಗೆ ಚಿಕಿತ್ಸೆ ನೀಡಲು

ಮೊಡವೆಗಳು ಒಣ ತ್ವಚೆ ಅಥವಾ ಜಿಡ್ಡಿನಿಂದ ಕೂಡಿದ ತ್ವಚೆಯಿಂದ ಉಂಟಾಗುವ ಸಮಸ್ಯೆಯಾಗಿದೆ. ಈ ಜಿಡ್ಡು ತ್ವಚೆಯಲ್ಲಿರುವ ರಂಧ್ರಗಳನ್ನು ಮುಚ್ಚಿ ಹಾಕಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಮುಖದಲ್ಲಿ ತುರಿಕೆ ಸಹ ಕಾಣಿಸಿಕೊಳ್ಳುತ್ತದೆ. ಮುಖದ ಅಂದ ಸಹ ಕೆಡುತ್ತದೆ. ಚೆಂಡು ಹೂವು ಕ್ರೀಮನ್ನು ಹಚ್ಚುವುದರಿಂದ ಈ ಸಮಸ್ಯೆಯಿಂದ ವಿಮುಕ್ತಿಯನ್ನು ಪಡೆಯಬಹುದು. ಜೊತೆಗೆ ಕಲೆ, ತುರಿಕೆ ಮತ್ತು ಬಾವುಗಳನ್ನು ಸಹ ನಿವಾರಿಸಿಕೊಳ್ಳಬಹುದು.

ಒಣ ತ್ವಚೆಗೆ ಮೊಯಿಶ್ಚರೈಸ್ ಮಾಡಲು

ಒಣ ತ್ವಚೆಗೆ ಮೊಯಿಶ್ಚರೈಸ್ ಮಾಡಲು

ಚೆಂಡು ಹೂವುಗೆ ಹೂಗಳಿಂದ ಲಭ್ಯವಾಗುವ ಎಣ್ಣೆಯನ್ನು ತ್ವಚೆಗೆ ಲೇಪಿಸುವುದರಿಂದ ತ್ವಚೆಯ ಹೊರ ಪದರ ಅಂದರೆ ಎಪಿಡರ್ಮಿಸ್ ಎಂಬ ಭಾಗವು ಮೃದುವಾಗುತ್ತದೆ. ಹೀಗೆ ಇದು ಒಣ ಮತ್ತು ಒಡೆದ ತ್ವಚೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಒಂದು ವೇಳೆ ನಿಮಗೆ ಗಂಭೀರವಾದ ಒಣ ತ್ವಚೆಯ ಸಮಸ್ಯೆಯಿದ್ದಲ್ಲಿ, ನಿಯಮಿತವಾಗಿ ಕ್ಯಾಲೆಂಡುಲದ ಎಣ್ಣೆಯನ್ನು ಬಳಸಿ, ನಿಮ್ಮ ತ್ವಚೆಗೆ ಮೊಯಿಶ್ಚರೈಸ್ ಮಾಡಿ. ಇದರಿಂದ ನಿಮ್ಮ ತ್ವಚೆಯ ಆರೋಗ್ಯ ಸುಧಾರಿಸುತ್ತದೆ.

ಮೈ ಬಣ್ಣವನ್ನು ಸುಧಾರಿಸುತ್ತದೆ

ಮೈ ಬಣ್ಣವನ್ನು ಸುಧಾರಿಸುತ್ತದೆ

ಚೆಂಡುಹೂವನ್ನು ಎಲ್ಲೆಲ್ಲಿ ಲೇಪಿಸಲಾಗುವುದೋ, ಅಲ್ಲಲ್ಲಿ ರಕ್ತ ಪರಿಚಲನೆಯು ಹೆಚ್ಚಾಗುತ್ತದೆ. ರಕ್ತ ಪರಿಚಲನೆ ಹೆಚ್ಚಿದಂತೆಲ್ಲ, ಆ ಭಾಗದಲ್ಲಿರುವ ಟಾಕ್ಸಿನ್‍ಗಳು ಹೊರ ಹಾಕಲ್ಪಡುತ್ತವೆ. ಸಾಮಾನ್ಯವಾದ ಜೀರ್ಣ ಕ್ರಿಯೆಯು ಈ ಭಾಗವನ್ನು ಆರೋಗ್ಯಕರವಾಗಿಡುತ್ತವೆ. ಚೆಂಡು ಹೂವು ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ನಾವು ನಮ್ಮ ತ್ವಚೆಯ ಬಣ್ಣವನ್ನು ಸುಧಾರಿಸಿಕೊಳ್ಳಬಹುದು. ಇದು ತ್ವಚೆಯ ಬಣ್ಣಕ್ಕೆ ಪೂರಕವಾಗುವ ಅಂಶಗಳನ್ನು ಹೊಂದಿರುತ್ತದೆ.

ಕ್ರೌಸ್ ಫೀಟ್ ಕಡಿಮೆ ಮಾಡುತ್ತದೆ

ಕ್ರೌಸ್ ಫೀಟ್ ಕಡಿಮೆ ಮಾಡುತ್ತದೆ

ಕ್ರೌಸ್ ಫೀಟ್ ಎಂಬುದು ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಕಪ್ಪು ಕಲೆಗಳು ಮತ್ತು ಸುಕ್ಕು ಆಗಿದೆ. ಇದು ವಯಸ್ಸಾದಂತೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ವಯಸ್ಸಾಗುವುದರ ಸಾಮಾನ್ಯ ಲಕ್ಷಣ. ಕ್ಯಾಲೆಂಡುಲದಲ್ಲಿರುವ ಫೈಟೋಕಾನ್ಸಿಟ್ಯೂಯೆಂಟ್‌ಗಳಲ್ಲಿ ಸದೃಢವಾದ ಆಂಟಿ ಆಕ್ಸಿಡೆಂಟ್‍ಗಳು ಇರುತ್ತವೆ. ಇವುಗಳು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಜೊತೆಗೆ ಇವು ತ್ವಚೆಯ ಮೇಲೆ ಇರುವ ಕೋಶಗಳ ಪುನಃಶ್ಚೇತನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಚೆಂಡು ಹೂವು ಬಳಸುವುದರಿಂದ ಮುಖದಲ್ಲಿ ಕಳೆ ಬರುವುದರ ಜೊತೆಗೆ, ಕಣ್ಣಿನ ಸುತ್ತಲಿನ ಕಲೆಗಳು ನಿವಾರಣೆಯಾಗುತ್ತವೆ.

ಚೆಂಡು ಹೂವನ್ನು ಹೇಗೆ ಬಳಸುವುದು- ಮನೆ ಮದ್ದಿಗೆ ಸಲಹೆಗಳು

ಚೆಂಡು ಹೂವನ್ನು ಹೇಗೆ ಬಳಸುವುದು- ಮನೆ ಮದ್ದಿಗೆ ಸಲಹೆಗಳು

ಚೆಂಡು ಹೂವನ್ನು ಮನೆಯಲ್ಲಿ ಬಳಸಲು ಇರುವ ಅತ್ಯುತ್ತಮ ಮಾರ್ಗ ಅದನ್ನು ನೀರಿನಲ್ಲಿ ಕುದಿಸಿ ಬಳಸುವುದು. ಒಮ್ಮೆ ನೀರು ತಣ್ಣಗಾದ ಮೇಲೆ, ಇದನ್ನು ನಿಮ್ಮ ತ್ವಚೆಯ ಮೇಲೆ ಬೇಕಾದ ಕಡೆಗಳಲ್ಲಿ ಲೇಪಿಸಬಹುದು. ಇದನ್ನು ನೀವು ಬಿಗಿಯಾದ ಜಾಡಿಗಳಲ್ಲಿ ಸಹ ಹಾಕಿ ರೆಫ್ರಿಜಿರೇಟರಿನಲ್ಲಿ ಇಟ್ಟು ಬೇಕಾದಾಗ ಬಳಸಬಹುದು.

ಇದಕ್ಕೆ ಬದಲಿಯಾಗಿ, ಆಲೀವ್ ಎಣ್ಣೆಯಲ್ಲಿ ಒಣಗಿರುವ ಚೆಂಡುಮಲ್ಲಿಗೆಗಳನ್ನು 10 ದಿನಗಳ ಕಾಲ ಹಾಕಿಟ್ಟು, ನಂತರ ಜಾಡಿಗೆ ಬದಲಾಯಿಸಿ ಬಳಸಬಹುದು. ಇದನ್ನು ಬಳಸುವ ಮೊದಲು ಶೋಧಿಸಿ ಬಳಸಬೇಕು. ಈ ಎಣ್ಣೆಯನ್ನು ಗಾಳಿಯಾಡದ ಜಾಡಿಯಲ್ಲಿ ಹಾಕಿಟ್ಟು ಒಂದು ವರ್ಷದವರೆಗೆ ಬಳಸಬಹುದು. ಯಾರಿಗೆ ಈ ಹೂವುಗಳು ದೊರೆಯುವುದಿಲ್ಲವೋ, ಅವರು ಅಂಗಡಿಯಲ್ಲಿ ದೊರೆಯುವ ಕ್ಯಾಲೆಂಡುಲದ ಕ್ರೀಮುಗಳನ್ನು ಬಳಸಬಹುದು. ಇಲ್ಲವೆ ಆನ್‍ಲೈನ್‌ಗಳಲ್ಲಿ ಸಹ ಇವುಗಳನ್ನು ಖರೀದಿಸಬಹುದು.

ಚೆಂಡು ಹೂವನ್ನು ಹೇಗೆ ಬಳಸುವುದು- ಮನೆ ಮದ್ದಿಗೆ ಸಲಹೆಗಳು

ಚೆಂಡು ಹೂವನ್ನು ಹೇಗೆ ಬಳಸುವುದು- ಮನೆ ಮದ್ದಿಗೆ ಸಲಹೆಗಳು

ಚೆಂಡು ಹೂವು ಸಾಮಾನ್ಯವಾಗಿ ಹೊರ ಮೈಗೆ ಬಳಸಲು ಸುರಕ್ಷಿತವಾಗಿದೆ. ಆದರೂ ಇದು ಗರ್ಭಿಣಿಯರಿಗೆ ಮತ್ತು ಹಾಲುಡಿಸುವ ತಾಯಂದಿರಿಗೆ ಅಪಾಯವನ್ನುಂಟು ಮಾಡುತ್ತದೆಯೇ, ಇಲ್ಲವೇ ಎಂಬುದು ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ. ಆದ್ದರಿಂದ ಗರ್ಭಿಣಿ ಮತ್ತು ಬಾಣಂತಿಯರು ಇದನ್ನು ಬಳಸದಿರುವುದು ಉತ್ತಮ. ಜೊತೆಗೆ ಚೆಂಡು ಹೂವನ್ನು ಅಲರ್ಜಿ ಇರುವವರು ಸಹ ಇದನ್ನು ಬಳಸದಿದ್ದರೆ ಒಳ್ಳೆಯದು. ವಿಶೇಷವಾಗಿ ಈ ಚೆಂಡು ಹೂವಿಗೆ ಅಸ್ಟೆರಸಿಯೆ ಕುಟುಂಬದಿಂದ ಬಂದಿದೆ, ಇದರ ಜೊತೆಗೆ ಡೈಸಿ, ಕ್ರಿಸಂತೆಮಮ್ ಮತ್ತು ರಗ್‍ವೀಡ್ ಎಂಬ ಹೂವುಗಳು ಸಹ ಈ ಕುಟುಂಬದಲ್ಲಿದೆ.

English summary

Marigold beauty benefits

When it comes to skincare, Calendula or pot marigold is one of the oldest known herbs. Pot marigold – which is quite different from the ornamental marigold – grows widely in the Mediterranean region, Here are a few beauty benefits of marigold or calendula:
X
Desktop Bottom Promotion