For Quick Alerts
ALLOW NOTIFICATIONS  
For Daily Alerts

ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸುವುದು ಹೇಗೆ?

By Super
|

ನಮ್ಮ ದೇಹದಲ್ಲಿ ಎರಡು ರೀತಿಯ ಬೆವರಿನ ಗ್ರಂಥಿಗಳಿರುತ್ತದೆ. ಒಂದು ಬೆವರಿನ ಗ್ರಂಥಿ ದೇಹದ ಎಲ್ಲಾ ಭಾಗಗಳಿದ್ದರೆ ಮತ್ತೊಂದು ಬೆವರಿನ ಗ್ರಂಥಿ ದೇಹದಲ್ಲಿ ಕೂದಲಿರುವ ಕಡೆಗಳಲ್ಲಿ ಇರುತ್ತದೆ. ದೈಹಿಕ ಶ್ರಮದಿಂದ, ತಕ್ಷಣ ಒತ್ತಡಕ್ಕೆ ಒಳಗಾದಾಗ ಬೆವರು ಬರುತ್ತದೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಹಣೆ, ಪಾದ, ತಲೆ, ಕೈಗಳಲ್ಲಿ ಹೆಚ್ಷಾಗಿ ಬೆವರು ಕಂಡು ಬರುತ್ತದೆ. ತುಂಬಾ ಬೆವರಿದರೆ , ಕೆಟ್ಟ ವಾಸನೆ ಬೀರುವುದು. ಇದರಿಂದ ನಮಗೆ ಮಾತ್ರವಲ್ಲ, ನಮ್ಮ ಪಕ್ಕ ನಿಂತವರಿಗೂ ಮುಜುಗರ ಉಂಟಾಗುತ್ತದೆ.

ತೇವಾಂಶದ ಮಟ್ಟ ಹೆಚ್ಚಾದರೆ ಮತ್ತು ಅದರಿಂದ ಉಂಟಾಗುವ ಬೆವರಿನ ಸಮಸ್ಯೆಯೊಂದಿಗೆ ದಿನವೂ ವ್ಯವಹರಿಸುವುದು ಪ್ರತಿಯೊಬ್ಬರಿಗೂ ಕಿರಿಕಿರಿಯೇ ಸರಿ. ಎಲ್ಲರೂ ಬೆವರುವುದು ಸಾಮಾನ್ಯವಾಗಿದ್ದರೂ ಅತಿಯಾಗಿ ಬೆವರುವುದು ಸಮಸ್ಯೆಯಾಗಿ ಪರಿಣಮಿಸಬಹುದು. ಹೈಪೋಹೈಡ್ರೋಸಿಸ್ ಎಂದೂ ಕರೆಯಲಾಗುವ ಅತಿಯಾದ ಬೆವರುವಿಕೆ ಸಾಮಾನ್ಯವಾಗಿ ಆನುವಂಶಿಕವಾಗಿರುತ್ತದೆ.

ಇದು ಹಾರ್ಮೋನುಗಳ ಅಸಮತೋಲನ, ಹೆಚ್ಚಿನ ಭಾವನಾತ್ಮಕ ಉತ್ಸಾಹ, ಮಸಾಲೆಯುಕ್ತ ಆಹಾರ, ವ್ಯಾಯಾಮ, ಅಥವಾ ಒತ್ತಡದಿಂದಲೂ ಉಂಟಾಗಬಹುದು. ನಿಮ್ಮ ಈ ಸಮಸ್ಯೆಯನ್ನು ಹೋಗಲಾಡಿಸಲು ಅನುಸರಿಸಬಹುದಾದ ಕೆಲವು ಅಂಶಗಳು ಇಲ್ಲಿವೆ. ಆರೋಗ್ಯಕರ ಜೀವನ ಶೈಲಿಗಾಗಿ ಸೂಪರ್ ಸಲಹೆಗಳು

ನೀರಿನಿಂದ ಜೀವಾಣುಗಳನ್ನು ಹೋಗಲಾಡಿಸುವುದು

ನೀವು ಈ ಮೊದಲು ಅನೇಕ ಇದನ್ನು ಬಾರಿ ಕೇಳಿರಬಹುದು, ನೀರು ನಿಮ್ಮ ದೇಹವನ್ನು ಶುದ್ಧೀಕರಿಸುವುದು ಮಾತ್ರವಲ್ಲ, ಇದು ಕಂಕುಳಲ್ಲಿ ಉಂಟಾಗುವ ವಾಸನೆಯನ್ನು ತಡೆಯುತ್ತದೆ. ಜೊತೆಗೆ, ದಿನದಲ್ಲಿ ಕನಿಷ್ಠ ಎರಡು ಬಾರಿ ಸ್ನಾನ ಮಾಡಿದರೆ ಆರೋಗ್ಯಕರವಾಗಿರುವುದು ಮಾತ್ರವಲ್ಲ ದೇಹದ ಆಕ್ರಮಣಕಾರಿ ವಾಸನೆಯನ್ನೂ ತಡೆಗಟ್ಟಬಹುದು.

ಸರಿಯಾದ ಬಟ್ಟೆಗಳನ್ನು ಧರಿಸುವುದು

ಹತ್ತಿ (ಕಾಟನ್) ಬಟ್ಟೆಯನ್ನು ಧರಿಸುವುದು ಚರ್ಮಕ್ಕೆ ಆರಾಮದಾಯಕವಾಗಿರುತ್ತದೆ ಮತ್ತು ಅತಿಯಾದ ಬೆವರುವಿಕೆ ಸಮಸ್ಯೆಯೊಂದಿಗೆ ವ್ಯವಹರಿಸಲು ಸಹಾಯ ಮಾಡುತ್ತದೆ. ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಅತಿಯಾದ ಬೆವರಿಗೆ ಕಾರಣವಾಗುವ, ಕಿರಿಕಿರಿಯನ್ನುಂಟುಮಾಡುವ ಬಟ್ಟೆಗಳನ್ನು ಧರಿಸದಿರಿ. ಮಹಿಳೆಯರು ಬ್ರಾ ಧರಿಸದಿದ್ದರೆ ಸಿಗುವ 7 ಪ್ರಯೋಜನಗಳು

ನಿಂಬೆಹಣ್ಣು

ನಿಂಬೆ ಹಣ್ಣು ನೀವು, ಬೆವರುವುದನ್ನು ಕಡಿಮೆ ಮಾಡಿ ದೇಹದ ವಾಸನೆ ತಡೆಯಲು ಮತ್ತು ನಿಮ್ಮ ಕಂಕುಳಲ್ಲಿ ಹೊಳಪನ್ನು (ಬಿಳುಪಾಗುವುದು) ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ. ಕೈ ಅಡಿಯಲ್ಲಿ ಅರ್ಧ ನಿಂಬುವನ್ನು ಉಜ್ಜಿ. ಇದು ಸ್ವಲ್ಪಮಟ್ಟಿಗೆ ಕಿರಿಕಿರಿಯನ್ನು ಉಂಟುಮಾಡುದರೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದಾಗ್ಯೂ ನೀವು ರಾಶಸ್ ತೊಂದರೆಯಿಂದ ಬಳಲುತ್ತಿದ್ದರೆ ನಿಂಬೆ ಹಣ್ಣನ್ನು ಬಳಸಬೇಡಿ.

ತಾಜಾತನ ನೀಡುವ ಸುಗಂಧ ದ್ರವ್ಯಗಳನ್ನು ಬಳಸುವುದು

ಬೆವರಿನ ವಾಸನೆಯನ್ನು ಹೋಗಲಾಡಿಸುವ ಸ್ಪ್ರೇಗಳು ಮತ್ತು ಡಿಯೊಡ್ರಂಟ್ ಗಳು ಸ್ವಲ್ಪಮಟ್ಟಿಗೆ ದೇಹದ ದುರ್ಗಂಧವನ್ನು ಹೋಗಲಾಡಿಸಲು ಸಹಾಯಮಾಡಬಹುದು. ಆದರೆ ಇದು ಎಲ್ಲರಿಗೂ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸುಗಂಧದ್ರವ್ಯಗಳು ಸಾಮಾನ್ಯವಾಗಿ ನಿಮ್ಮ ಚರ್ಮದ ಮೇಲ್ಮೈ ತಲುಪುವುದರಿಂದ ಬೆವರನ್ನು ಸ್ಪಲ್ವಮಟ್ಟಿಗೆ ನಿಯಂತ್ರಿಸುತ್ತದೆ. ಇವು ದೇಹದಲ್ಲಿ ಬೆವರಿನ ವಾಸನೆಯನ್ನು ತಕ್ಷಣದಲ್ಲಿ ತೊಡಗಿದರೂ ಕೆಲವರಿಗೆ ಇದರಲ್ಲಿರುವ ರಾಸಾಯನಿಕಗಳು ಚರ್ಮದ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ದೇಹಕ್ಕೆ ಸರಿಹೊಂದುವಂತಹ ಸುಗಂಧ ದ್ರವ್ಯಗಳನ್ನೇ ಬಳಸಿ.

ತೂಕವನ್ನು ಇಳಿಸಿ ಮತ್ತು ಬೆವರುವುದನ್ನು ನಿಯಂತ್ರಿಸಿ

ಅತಿಯಾದ ತೂಕದಿಂದ ಬೆವರುವುದು ಸಾಮಾನ್ಯ. ಆದ್ದರಿಂದ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ ಮತ್ತು ಬೆವರುವುದನ್ನು ನಿಯಂತ್ರಿಸಿ. ನಿಮ್ಮ ತೂಕ ಈಗಾಗಲೇ ಸಹಜವಾಗಿದ್ದರೆ/ಸರಿಯಾಗಿದ್ದರೆ, ನಿಮ್ಮ ಆಹಾರದಲ್ಲಿ ಹೆಚ್ಚು ಫೈಬರ್‌ನ್ನು ಸೇರಿಸಿ ಮತ್ತು ಮಸಾಲೆಗಳನ್ನು ತಪ್ಪಿಸುವುದು ಅತ್ಯಂತ ಅಗತ್ಯ. ಈ ನಿಮ್ಮ ದೇಹದ ಎಲ್ಲಾ ಜೀವಾಣುಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಬೆವರಿನ ಸಮಸ್ಯೆ ಎದುರಿಸಲು ವಿನೆಗರ್ ಬಳಸಿ

ನೀವು ಆಶ್ಚರ್ಯಪಟ್ಟರೂ ಇದು ಸತ್ಯ. ರಾತ್ರಿ ಮಲಗುವ ಮೊದಲು ನಿಮ್ಮ ಕೈಗಳ ಅಡಿಯಲ್ಲಿ (ಕಂಕುಳಲ್ಲಿ) ವಿನೇಗರ್‌ನ್ನು ಹಚ್ಚಿ ಅದು ಹಾಗೆಯೇ ಒಣಗಲು ಬಿಡಿ. ಮರುದಿನ ಬೆಳಿಗ್ಗೆ ಇದನ್ನು ನೀರಿನಲ್ಲಿ ತೊಳೆಯಿರಿ. ಆಪಲ್ ಸೈಡರ್ ಅನ್ನು ಹಚ್ಚುವುದರಿಂದ ಅತಿಯಾದ ಬೆವರುವಿಕೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ.

ನಿಮ್ಮ ವೈದ್ಯರನ್ನು ಭೇಟಿ ಮಾಡಿ
ನಿಮ್ಮ ವೈದ್ಯರನ್ನು ಭೇಟಿ ಮಾಡಿ ಮತ್ತು ತಪಾಸಣೆಗಳ ಮೂಲಕ ನೀವು ಅತಿಯಾದ ಬೆವರಲು ನಿಖರವಾದ ಕಾರಣವನ್ನು ತಿಳಿದುಕೊಳ್ಳಿ. ಬೆವರುವುದು ಕೇವಲ ದೇಹದ ಸಾಮಾನ್ಯ ಕಾರ್ಯವಾಗಿದ್ದರೆ ಅದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದರ್ಥ. ಹೌದು, ದೇಹದ ವಾಸನೆ ತೊಡೆದುಹಾಕುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ಇದಕ್ಕಾಗಿ ಸುಲಭೋಪಾಯಗಳನ್ನು ನಿಮಗಾಗಿ ಇಲ್ಲಿ ನೀಡಿದ್ದೇವೆ!

English summary

How To Get Rid Of Body Odour

Humidity levels are rising and perspiration is a major problem that people, all over the country, have to deal with every day. While everyone perspires, only some of us sweat excessively and that is when it becomes a problem. Here are a few things you could follow to ease out the problem.
X
Desktop Bottom Promotion