For Quick Alerts
ALLOW NOTIFICATIONS  
For Daily Alerts

ಕಣ್ರೆಪ್ಪೆ ದಪ್ಪಗಾಗಿಸಲು ಕೆಲವೊಂದು ವಿಧಾನಗಳು

By Hemanth P
|

ಕಣ್ಣುಗಳು ನಮ್ಮ ಮುಖದ ಸೌಂದರ್ಯ ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಕಣ್ಣುಗಳು ದೊಡ್ಡದಾಗಿ, ದಪ್ಪ ಕಣ್ರೆಪ್ಪೆಗಳು ಮತ್ತು ಹುಬ್ಬುಗಳು ಇದ್ದರೆ ಕಣ್ಣಿನ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಇಂದಿನ ದಿನಗಳಲ್ಲಿ ಕಣ್ಣಿನ ಮೇಕಪ್ ಜನಪ್ರಿಯತೆ ಜತೆಗೆ ಒಂದು ಟ್ರೆಂಡ್ ಆಗುತ್ತಿದೆ. ಪ್ರಸಿದ್ಧ ಸೆಲೆಬ್ರಿಟಿಯಿಂದ ಹಿಡಿದು ಕಾಲೇಜಿಗೆ ಹೋಗುವ ಸಾಮಾನ್ಯ ಹುಡುಗಿಯ ತನಕ ಪ್ರತಿಯೊಬ್ಬರು ತಮ್ಮ ಕಣ್ಣುಗಳು ಬಹುಕಾಂತೀಯವಾಗಿ ಕಾಣಬೇಕೆಂದು ಬಯಸುತ್ತಾರೆ.
ಸುಂದರವಾದ ಕಣ್ಣುಗಳನ್ನು ಪಡೆಯಲು ನೀವು ಕಣ್ರೆಪ್ಪೆ ಮತ್ತು ಹುಬ್ಬಗಳ ಕಡೆ ಗಮನಹರಿಸುವುದು ಮುಖ್ಯ. ಕಣ್ಣಿನ ಮೇಕಪ್ ನಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಣ್ರೆಪ್ಪೆಗಳು ದಪ್ಪ ಮತ್ತು ಗಾಢವಾಗಿದ್ದರೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಕಣ್ರೆಪ್ಪೆಗಳು ದಪ್ಪ ಮತ್ತು ಸುಂದರವಾಗಿಸಲು ಮಹಿಳೆಯರಿಗೆ ಕೆಲವೊಂದು ಸೌಂದರ್ಯದ ಟಿಪ್ಸ್ ಗಳಿವೆ. ಕಣ್ರೆಪ್ಪೆಗಳನ್ನು ದಪ್ಪವಾಗಿಸಲು ಕೆಲವೊಂದು ಕಾಸ್ಮೆಟಿಕ್ ವಿಧಾನ ಹಾಗೂ ಕೆಲವೊಂದು ನೈಸರ್ಗಿಕ ವಿಧಾನಗಳಿವೆ.
ಕಣ್ರೆಪ್ಪೆಗಳನ್ನು ದಪ್ಪಗಾಗಿಸಲು ಮಹಿಳೆಯರಿಗೆ ಹಲವಾರು ರೀತಿಯ ಸೌಂದರ್ಯ ಟಿಪ್ಸ್ ಗಳಿವೆ. ಆದರೆ ಕೆಲವು ಪರಿಣಾಮಕಾರಿಯಲ್ಲ, ಇದು ನಿಮ್ಮ ತ್ವಚೆ ಮತ್ತು ಕೂದಲಿಗೆ ಹೊಂದಿಕೊಳ್ಳದೆ ಇರಬಹುದು. ತುಂಬಾ ಪರಿಣಾಮಕಾರಿ ಮತ್ತು ಹೆಚ್ಚಾಗಿ ಬಳಸಲ್ಪಡುವ ಕಣ್ರೆಪ್ಪೆ ದಪ್ಪವಾಗಿಸಲು ಕೆಲವೊಂದು ವಿಧಾನಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Ways to thicken eyelashes

1. ಮಸ್ಕಾರ ಬಳಸಿ
ನೀವು ಡೇಟ್ ಗೆ ಅಥವಾ ಯಾವುದೇ ಪಾರ್ಟಿಗೆ ಹೋಗುವಾಗ ಕಣ್ರೆಪ್ಪೆಗಳು ದಪ್ಪವಾಗಿ ಕಾಣಿಸಬೇಕೆಂದು ಬಯಸಿದರೆ ಆಗ ಒಳ್ಳೆಯ ಗುಣಮಟ್ಟದ ಮಸ್ಕಾರ ಬಳಸಿ. ಕಣ್ರೆಪ್ಪೆಗಳನ್ನು ದಪ್ಪ ಮಾಡಿಕೊಳ್ಳಲು ಮಸ್ಕಾರ ಮಹಿಳೆಯರ ಸೌಂದರ್ಯದ ಟಿಪ್ಸ್. ಇದು ತುಂಬಾ ಪರಿಣಾಮಕಾರಿ ಹಾಗೂ ಜನಪ್ರಿಯ ವಿಧಾನ. ಮಸ್ಕಾರವು ವಿವಿಧ ವಿನ್ಯಾಸಗಳಲ್ಲಿ ಸಣ್ಣ ಮತ್ತು ದೊಡ್ಡ ಕಣ್ರೆಪ್ಪೆಗಳಿಗೆ ಲಭ್ಯವಿದೆ. ಇದು ವಿಭಿನ್ನ ಬಣ್ಣಗಳಲ್ಲೂ ಸಿಗುತ್ತದೆ. ದೀರ್ಘಾವಧಿ ತನಕ ಕಣ್ರೆಪ್ಪೆಗಳನ್ನು ದಪ್ಪವಾಗಿಡಲು ಮಸ್ಕಾರ ಒಳ್ಳೆಯ ಆಯ್ಕೆ.

2. ನಕಲಿ ಕಣ್ರೆಪ್ಪೆಗಳು
ನಿಮಗೆ ಉದ್ದ ಮತ್ತು ದಪ್ಪಗಿನ ಕಣ್ರೆಪ್ಪೆಗಳು ತುಂಬಾ ಇಷ್ಟವೆಂದಾದರೆ ಆಗ ನೀವು ಕಣ್ರೆಪ್ಪೆಗಳನ್ನು ಕೃತಕವಾಗಿ ಉದ್ದ ಮಾಡಬಹುದು. ಇದು ನಕಲಿ ಎಂದು ಕಾಣಿಸಬಹುದು. ಆದರೆ ಉದ್ದ ಹಾಗೂ ದಪ್ಪಗಿನ ಕಣ್ರೆಪ್ಪೆ ಬೇಕೆಂದಾಗ ಹೀಗೆ ಮಾಡಿ. ಕಣ್ರೆಪ್ಪೆ ದಪ್ಪ ಮಾಡಿಕೊಳ್ಳಲು ಇದು ಒಂದು ವಿಧಾನ. ಯಾವುದೇ ಬ್ಯೂಟಿ ಸ್ಟೋರ್ ಗಳಲ್ಲಿ ಕೃತಕ ಮತ್ತು ವಿವಿಧ ಬಗೆಯ ಕಣ್ರೆಪ್ಪೆ ಸಿಗುತ್ತದೆ. ಈ ಸೌಂದರ್ಯ ಟಿಪ್ಸ್ ನ್ನು ಮಹಿಳೆಯರು ಸಾಮಾನ್ಯವಾಗಿ ಬಳಸುತ್ತಾರೆ.

3. ಮೊಶ್ಚಿರೈಸರ್
ವ್ಯಾಸಲೀನ್ ಬಳಸಿಕೊಂಡು ಕಣ್ರೆಪ್ಪೆ ಮತ್ತು ಹುಬ್ಬನ್ನು ನೈಸರ್ಗಿಕವಾಗಿ ದಪ್ಪ ಹಾಗೂ ಗಾಢವಾಗಿಸಬಹುದು. ಕಣ್ರೆಪ್ಪೆ ದಪ್ಪಗಾಗಿಸಲು ಇರುವ ಕೆಲವೊಂದು ಮೇಕಪ್ ಗಳಿಗಿಂತ ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಇದು ಶಾಶ್ವತ ಪರಿಣಾಮ ಬೀರಲು ಮತ್ತು ಕಣ್ರೆಪ್ಪೆ ದಪ್ಪಗೊಳಿಸಲು ಇದು ಒಳ್ಳೆಯ ವಿಧಾನ

4. ತೈಲಗಳು
ಆಲೀವ್ ತೈಲ, ತೆಂಗಿನ ಎಣ್ಣೆ ಇತ್ಯಾದಿ ತೈಲಗಳನ್ನು ಬಳಸಿಕೊಂಡು ನೀವು ಕಣ್ರೆಪ್ಪೆಗಳಿಗೆ ಮಸಾಜ್ ಮಾಡಬಹುದು. ಈ ತೈಲಗಳು ಕಣ್ರೆಪ್ಪೆಗಳ ಕಿರುಚೀಲಗಳು ಉತ್ತೇಜನವಾಗುವಂತೆ ಮಾಡಿ ಅದರ ಬೆಳವಣಿಗೆಗೆ ನೆರವಾಗುತ್ತದೆ. ಕಣ್ಣಿನ ಹುಬ್ಬುಗಳಿಗೂ ಈ ತೈಲಗಳಿಂದ ನಿಯಮಿತವಾಗಿ ಮಸಾಜ್ ಮಾಡಬೇಕು. ಕಣ್ರೆಪ್ಪೆಯ ಬೇರುಗಳು ಹುಬ್ಬುಗಳಲ್ಲಿ ಇರುವ ಕಾರಣ ಅದು ತಾನಾಗಿಯೇ ಬೆಳೆಯುತ್ತದೆ. ಕಣ್ರೆಪ್ಪೆಗಳನ್ನು ದಪ್ಪಗಾಗಿಸಲು ಇದು ಶಾಶ್ವತ ವಿಧಾನ. ಈ ವಿಧಾನ ಬಳಸಿಕೊಳ್ಳಲು ಹೆಚ್ಚಿನ ಸಮಯ ಮತ್ತು ತಾಳ್ಮೆ ಬೇಕಾಗಿಲ್ಲ. ಯಾವುದೇ ಕಾಸ್ಮೆಟಿಕ್ ಬಳಸಿಕೊಳ್ಳದೆ ದಪ್ಪಗಿನ ಸುಂದರ ಕಣ್ರೆಪ್ಪೆ ಪಡೆಯಲು ಇದು ಒಳ್ಳೆಯ ವಿಧಾನ

5. ಕಣ್ಣು ಉಜ್ಜಬೇಡಿ
ನಮಗೆಲ್ಲರಿಗೂ ಕಣ್ಣಿನ ರೆಪ್ಪೆ ಉಜ್ಜುವ ಅಭ್ಯಾಸವಿದೆ. ಈ ರೀತಿ ಮಾಡುವುದರಿಂದ ಕಣ್ರೆಪ್ಪೆಗಳು ಮುರಿದು ಉದುರುತ್ತದೆ. ಇದರಿಂದ ನಿಮ್ಮ ಕಣ್ರೆಪ್ಪೆ ದಪ್ಪ ಕಡಿಮೆಯಾಗಿ ಮತ್ತಷ್ಟು ತೆಳುವಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ಆಗಾಗ ಕಣ್ಣು ಉಜ್ಜುವುದನ್ನು ನಿಲ್ಲಿಸಿ. ದಪ್ಪಗಿನ ಕಣ್ರೆಪ್ಪೆ ಬಯಸುವ ಮಹಿಳೆಯರು ಕಣ್ಣುಜ್ಜುವುದನ್ನು ನಿಲ್ಲಿಸಬೇಕೆಂಬ ಸಲಹೆ ಮಾಡಲಾಗುತ್ತದೆ.

ದಪ್ಪಗಿನ ಮತ್ತು ಸುಂದರ ಕಣ್ರೆಪ್ಪೆ ಪಡೆಯಲು ಇದು ಕೆಲವೊಂದು ಸಲಹೆಗಳು. ಈ ಸೌಂದರ್ಯ ಟಿಪ್ಸ್ ಗಳು ಮಹಿಳೆಯರಿಗೆ ತುಂಬಾ ಉಪಯೋಗಿ ಮತ್ತು ಲಾಭಕಾರಿ. ಇಂದಿನ ದಿನಗಳಲ್ಲಿ ಕಣ್ಣಿನ ಮೇಕಪ್ ಮತ್ತು ಕಣ್ಣಿನ ಸೌಂದರ್ಯ ತುಂಬಾ ಮುಖ್ಯವಾಗಿದೆ. ದಪ್ಪಗಿನ ಕಣ್ರೆಪ್ಪೆಗಳು ನಿಮ್ಮ ಸಂಪೂರ್ಣ ಸೌಂದರ್ಯ ಬದಲಾಯಿಸಬಹುದು ಮತ್ತು ಕಣ್ಣುಗಳು ಹಾಗೂ ಮುಖ ಕಾಂತಿಯುವಾಗಿ ಕಾಣುವಂತೆ ಮಾಡಬಹುದು.

English summary

Ways to thicken eyelashes

Eyes are the most beautiful part of the face. Eyes look more beautiful if they are big and have nice thick eyelashes and eyebrows. Eye makeup is therefore getting very popular and is in trend.
Story first published: Friday, December 13, 2013, 10:59 [IST]
X
Desktop Bottom Promotion