For Quick Alerts
ALLOW NOTIFICATIONS  
For Daily Alerts

ಮುಖದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬೇಕೆ?

|

ಮಹಿಳೆಯರಿಗೆ ಮುಖದಲ್ಲಿ ಎದ್ದು ಕಾಣುವ ರೀತಿಯಲ್ಲಿ ಕೂದಲಿದ್ದರೆ ತುಂಬಾ ಮುಜುಗರ ಉಂಟಾಗುವುದು. ಈ ಕೂದಲುಗಳು ಅವರ ಮುಖದ ಕೋಮಲತೆಯನ್ನು ಮರೆಯಾಗಿಸಿ, ಅವರ ಸೌಂದರ್ಯವನ್ನು ಮರೆ ಮಾಚುತ್ತದೆ.

ತೆಳುವಾದ ಮೀಸೆ ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುತ್ತದೆ. ಇವುಗಳೇನು ಎದ್ದು ಕಾಣುವುದಿಲ್ಲ, ಐ ಬ್ರೋ ಮಾಡಿಸುವಾಗ ಅಪ್ಪರ್ ಲಿಪ್ ಮಾಡಿಸಿದರೆ ಸಾಕು. ಆದರೆ ಇನ್ನೂ ಕೆಲವರಿಗೆ ಹಾರ್ಮೋನ್ ಗಳ ವ್ಯತ್ಯಾಸದಿಂದ ಪುರುಷರಿಗೆ ಬರುವಷ್ಟು ಅಲ್ಲದಿದ್ದರೂ ಮಂದವಾಗಿ ರೋಮಗಳು ಬರುತ್ತದೆ, ಈ ರೋಮಗಳು ಮಹಿಳೆಯರ ಮುಖದ ಚೆಲುವನ್ನು ಸಂಪರ್ಣ ನಾಶ ಮಾಡುತ್ತದೆ.

ಇಲ್ಲಿ ನಾವು ಮಹಿಳೆಯರ ಮುಖದಲ್ಲಿ ರೋಮಗಳು ಬೆಳೆಯದಂತೆ ತಡೆಯುವ ಕೆಲವೊಂದು ವಿಧಾನಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಅರಿಶಿಣ

ಅರಿಶಿಣ

ಇದೊಂದು ಉತ್ತಮವಾದ ಮನೆ ಮದ್ದಾಗಿದೆ. ಪ್ರತೀದಿನ ಅರಿಶಿಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದ ರೋಮಗಳು ಕ್ರಮೇಣ ಇಲ್ಲದಾಗುವುದು. ಇದು ತುಂಬಾ ನಿಧಾನವಾದ ಕ್ರಿಯೆಯಾದರೂ ಅರಿಶಿಣ ಹಚ್ಚುವುದರಿಂದ ಯಾವುದೇ ಅಡ್ಡ ಪರಿಣಾಮದ ಭಯವಿಲ್ಲ, ಮುಖದ ಕಾಂತಿ ಕೂಡ ಹೆಚ್ಚುವುದು.

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳಲ್ಲಿ Phytoestrogen ಅಂಶವಿದ್ದು ಇವುಗಳು ಮೈಯಲ್ಲಿ ಕೂದಲುಗಳ ಉತ್ಪತ್ತಿಯನ್ನು ಕಮ್ಮಿ ಮಾಡುತ್ತದೆ. ಪುರುಷರು ಸೋಯಾ ಉತ್ಪನ್ನಗಳನ್ನು ಮಿತಿಯಲ್ಲಿ ತಿನ್ನಿ.

ಟೋಪಿಕಲ್ ಕ್ರೀಮ್(topical cream)

ಟೋಪಿಕಲ್ ಕ್ರೀಮ್(topical cream)

ಇದನ್ನು ಬಳಸಿದರೆ ಮುಖದ ರೋಮವನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು. ಆದರೆ ಇದನ್ನು ಬಳಸುವ ಮುನ್ನ ವೈದ್ಯರ ಸಲಹೆ ಪಡೆದು ನಂತರವಷ್ಟೇ ಬಳಸಿ.

 ವಿಟಮಿನ್ ಬಿ6

ವಿಟಮಿನ್ ಬಿ6

ವಿಟಮಿನ್ ಬಿ6 ಮಹಿಳೆಯರ ದೇಹದಲ್ಲಿ ಟೆಸ್ಟೋಸ್ಟಿರೋನೆ ಎಂಬ ಪುರುಷ ಹಾರ್ಮೋನ್ ಗಳ ಉತ್ಪತ್ತಿಯನ್ನು ಕಮ್ಮಿ ಮಾಡುತ್ತದೆ. ವಿಟಮಿನ್ ಬಿ6 ಇರುವ ಸಪ್ಲಿಮೆಂಟ್ ಮತ್ತು ಆಹಾರಗಳಿಂದ ಮುಖದಲ್ಲಿ ಕೂದಲು ಬರುವುದನ್ನು ಕಮ್ಮಿ ಮಾಡಬಹುದು.

 ಗರ್ಭನಿರೋಧಕ ಮಾತ್ರೆಗಳು

ಗರ್ಭನಿರೋಧಕ ಮಾತ್ರೆಗಳು

ಗರ್ಭನಿರೋಧಕ ಮಾತ್ರೆಗಳು ಕೂದಲು ಉತ್ಪತ್ತಿಗೆ ಕಾರಣವಾಗಿರುವ ಹಾರ್ಮೋನ್ ಗಳನ್ನು ಕಮ್ಮಿ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಗರ್ಭನಿರೋಧಕ ಮಾತ್ರೆಗಳಿಂದ ಅಡ್ಡ ಪರಿಣಾಮ ಕೂಡ ಉಂಟಾಗಬಹುದು. ಯಾವುದಕ್ಕೂ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಿ.

 ಸ್ಪಿಯರ್ ಮಿಂಟ್ ಟೀ(spearmint tea)

ಸ್ಪಿಯರ್ ಮಿಂಟ್ ಟೀ(spearmint tea)

ಪ್ರತೀದಿನ 2 ಲೋಟ ಸ್ಪಿಯರ್ ಮಿಂಟ್ ಟೀ ಕುಡಿದರೆ ಮುಖದಲ್ಲಿ ರೋಮಗಳ ಉತ್ಪತ್ತಿ ಕಡಿಮೆಯಾಗುವುದು.

ಲೇಸರ್ ಟ್ರೀಟ್ ಮೆಂಟ್

ಲೇಸರ್ ಟ್ರೀಟ್ ಮೆಂಟ್

ಲೇಸರ್ ಟ್ರೀಟ್ ಮೆಂಟ್ ನಿಂದ ಮುಖದ ಕೂದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ಲೇಸರ್ ಟ್ರೀಟ್ ಮೆಂಟ್

ಲೇಸರ್ ಟ್ರೀಟ್ ಮೆಂಟ್

ಲೇಸರ್ ಟ್ರೀಟ್ ಮೆಂಟ್ ನಿಂದ ಮುಖದ ಕೂದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.

ವೈದ್ಯಕೀಯ ಚಿಕಿತ್ಸೆ

ವೈದ್ಯಕೀಯ ಚಿಕಿತ್ಸೆ

ಮುಖದಲ್ಲಿ ಅಧಿಕ ರೋಮಗಳು ಹಾರ್ಮೋನ್ ಗಳ ವ್ಯತ್ಯಾಸದಿಂದ ಉಂಟಾಗುವುದು, ಆ ಹಾರ್ಮೋನ್ ಗಳ ಸಮತೋಲನಕ್ಕೆ ಔಷಧಿ ತೆಗೆದುಕೊಂಡರೆ ಮುಖದಲ್ಲಿ ರೋಮ ಬರುವುದಿಲ್ಲ.

ಎಲೆಕ್ಟ್ರೋಲಿಸಸ್(Electrolysis)

ಎಲೆಕ್ಟ್ರೋಲಿಸಸ್(Electrolysis)

ಈ ವಿಧಾನ ಸ್ವಲ್ಪ ದುಬಾರಿಯಾದ ವಿಧಾನ.ಇದನ್ನು ಮಾಡಿಸಿದರೆ ಬೇಡದ ಕೂದಲಿನಿಂದ ಮುಕ್ತಿಯನ್ನು ಪಡೆಯಬಹುದು.

Read more about: ಕೂದಲು ಮುಖ hair face
English summary

Ways To Stop Facial Hair Growth

While you can remove the unwanted hair on your body through waxing or shaving, the same is not recommended for your facial hair. Shaving or waxing facial hair only aggravates its growth. Ways To Stop Facial Hair Growth Bleaching your facial hair is also not a good option.
X
Desktop Bottom Promotion