For Quick Alerts
ALLOW NOTIFICATIONS  
For Daily Alerts

ಕಂಕುಳಿನ ಕಪ್ಪುಕಲೆ ಹೋಗಲಾಡಿಬೇಕೇ?

By Super
|

ಹುಡುಗಿಯರಿಗೆ ಸೌಂದರ್ಯವಿದ್ದಂತೆ ಕೆಲವೊಂದು ಸಮಸ್ಯೆಗಳು ಕೂಡ ಅವರನ್ನು ಕಾಡುತ್ತಿರುತ್ತದೆ. ಇದರಲ್ಲಿ ಪ್ರಮುಖವಾಗಿ ದೇಹದ ಮೇಲಿನ ಕೂದಲು. ಸಾಮಾನ್ಯವಾಗಿ ರೇಝರ್, ಕ್ರೀಮ್ ಅಥವಾ ವ್ಯಾಕ್ಸ್ ನ್ನು ಬಳಸಿ ಇದನ್ನು ತೆಗೆಯಬೇಕಾಗುತ್ತದೆ. ಕೂದಲಿನ ಸಮಸ್ಯೆಯೊಂದಿಗೆ ಕೆಲವು ಹುಡುಗಿಯರ ಕಂಕುಳಿನಲ್ಲಿ ಇರುವ ಕಪ್ಪು ಕಲೆ ಮತ್ತೊಂದು ಸಮಸ್ಯೆ. ಈ ಕಪ್ಪು ಕಲೆಗಳನ್ನು ತೆಗೆಯಲು ಕೆಲವು ತುಂಬಾ ಕಷ್ಟಪಡುತ್ತಾರೆ. ಇದು ಕೆಟ್ಟದಾಗಿ

ಕಾಣಿಸುವುದಲ್ಲದೆ, ಕೆಲವು ಹುಡುಗಿಯರಿಗೆ ಸ್ಲೀವ್ ಲೆಸ್ ಅಥವಾ ಇದೇ ರೀತಿಯ ಬಟ್ಟೆಯನ್ನು ಧರಿಸಲು ಕಷ್ಟವಾಗುತ್ತದೆ.

Ways to lighten armpit

ಕಂಕುಳಲ್ಲಿ ಕಪ್ಪುಕಲೆಗಳು ಬೀಳಲು ಕೆಲವು ಕಾರಣಗಳು:
* ಕಂಕುಳಲ್ಲಿ ಇರುವ ಕೂದಲನ್ನು ತೆಗೆಯಲು ಯಾವಾಗಲೂ ಶೇವಿಂಗ್ ಮಾಡುತ್ತಿದ್ದರೆ ಚರ್ಮ ಕಪ್ಪಾಗುತ್ತದೆ.
* ಡಿಯೋಡ್ರೆಂಟ್ ಮತ್ತು ಪರ್ಫ್ಯೂಮ್ ಗಳಲ್ಲಿರುವ ಕೆಲವು ರಾಸಾಯನಿಕಗಳು ಚರ್ಮದ ಬಣ್ಣವನ್ನು ಕೆಡಿಸಬಹುದು.
* ಅಕ್ಯಾಂತೋಸಿಸ್ ನಿಗ್ರಿಕನ್ಸ್ ಎನ್ನುವ ವೈದ್ಯಕೀಯ ಪರಿಸ್ಥಿತಿ ಕಂಕುಳಿನ ಚರ್ಮವನ್ನು ಕಪ್ಪಾಗಿಸಬಹುದು. ಇದು ದೇಹದ ಇತರ ಭಾಗಗಳಲ್ಲಿ ಕೂಡ ಕಪ್ಪು ಕಲೆಯನ್ನು ಉಂಟು ಮಾಡಬಹುದು.
* ಅತಿಯಾದ ಬೆವರಿನಿಂದಾಗಿ ಕಂಕುಳಿನ ಚರ್ಮದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಅದು ಚರ್ಮದ ಬಣ್ಣವನ್ನು ಬದಲಾಯಿಸಬಹುದು.

ಕಂಕುಳಿನ ಚರ್ಮವನ್ನು ಬಿಳಿಯಾಗಿಸುವ ವಿಧಾನಗಳು
ಕಂಕುಳಿನ ಚರ್ಮ ಕಪ್ಪಾಗುವುದನ್ನು ತಡೆಗಟ್ಟಲು ಮತ್ತು ಕಪ್ಪುಕಲೆಯನ್ನು ಹೋಗಲಾಡಿಸಲು ಇಂದಿನ ದಿನಗಳಲ್ಲಿ ಹಲವಾರು ದಾರಿಗಳಿವೆ. ಇದರಲ್ಲಿ ಕೆಲವು ಮನೆಮದ್ದಾಗಿದ್ದರೆ ಮತ್ತೆ ಕೆಲವು ಚರ್ಮರೋಗ ವೈದ್ಯರ

ಚಿಕಿತ್ಸೆಯಿಂದ ಹೋಗಲಾಡಿಸಬಹುದು.

ಮನೆಮದ್ದಿನಲ್ಲಿ ಬ್ಲೀಚಿಂಗ್ ಕಾರಕಗಳಾದ ನಿಂಬೆ ಮತ್ತು ಬಟಾಟೆ, ಸುಲಿದುಹೋದ ಕಾರಕ ಮತ್ತು ಬಿಳಿ ಮಾಡುವ ಕಾರಗಳನ್ನು ಬಳಸಿಕೊಂಡು ಕಂಕುಳಿನ ಕಪ್ಪುಚರ್ಮವನ್ನು ಬಿಳಿಯಾಗಿಸಬಹುದು. ಮನೆಮದ್ದಿನಲ್ಲಿ ಪ್ರಮುಖ

ಪರಿಹಾರವೆಂದರೆ ಅಡುಗೆ ಮನೆಯಲ್ಲಿ ಸಿಗುವ ಅಡುಗೆ ಸೋಡಾ. ಅಡುಗೆ ಸೋಡಾವು ಕಂಕುಳಿನ ಕಪ್ಪುಚರ್ಮವನ್ನು ಬಿಳಿಯಾಗಿ ಮಾಡುತ್ತದೆ ಮತ್ತು ಕೆಟ್ಟ ದುರ್ವಾಸನೆಯನ್ನು ತಡೆಯುತ್ತದೆ. ಸೂಕ್ಷ್ಮ ಅಥವಾ ಮೊಡವೆ ಪೀಡಿತ

ಚರ್ಮವಾಗಿದ್ದರೂ ಅಡುಗೆ ಸೋಡಾವನ್ನು ಚಿಂತೆಯಿಲ್ಲದೆ ಬಳಸಬಹುದು. ಯಾವುದೇ ರೀತಿಯ ಚರ್ಮಕ್ಕೂ ಅಡುಗೆ ಸೋಡಾ ಬಳಸಬಹುದು.

ಕಂಕುಳಿನ ಚರ್ಮದ ಕಪ್ಪು ಕಲೆ ಹೋಗಲಾಡಿಸಲು ಅಡುಗೆ ಸೋಡಾವನ್ನು ಬಳಸುವ ಕೆಲವು ಸಾಮಾನ್ಯ ವಿಧಾನಗಳು:

1. ಅಡುಗೆ ಸೋಡಾದ ಸ್ಕ್ರಬ್
ಕಂಕುಳಿನ ಚರ್ಮವನ್ನು ಬಿಳಿಯಾಗಿಸಬೇಕೆಂದು ಇಚ್ಛಿಸಿದ್ದರೆ, ಚರ್ಮದ ಕಪ್ಪಾಗಿರುವ ಭಾಗವನ್ನು ನೀವು ನಿಯಮಿತವಾಗಿ ಸ್ಕ್ರಬ್ ಮಾಡಬೇಕು. ಪ್ರಾಕೃತಿಕ ಸ್ಕ್ರಬ್ ನ್ನು ಮನೆಯಲ್ಲೇ ಮಾಡಲು ಅಡುಗೆ ಸೋಡಾಕ್ಕೆ ಸ್ವಲ್ಪ

ನೀರು ಸೇರಿಸಿ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಕಂಕುಳಿನ ಚರ್ಮಕ್ಕೆ ಸ್ಕ್ರಬ್ ಮಾಡಿ. ಕಂಕುಳಿನ ಚರ್ಮ ಕಪ್ಪಾಗಲು ಪ್ರಮುಖ ಕಾರಣವಾಗಿರುವ ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಇದು

ನೆರವಾಗುತ್ತದೆ.

2. ಅಡುಗೆ ಸೋಡಾದ ಪ್ಯಾಕ್
ಕಡಲೆ ಹಿಟ್ಟನ್ನು ನಿಂಬೆ ರಸ್, ಅರಶಿನ, ಸ್ವಲ್ಪ ಬ್ಲೀಚಿಂಗ್ ಪೌಡರ್ ಮತ್ತು ಮೊಸರನ್ನು ಬಳಸಿ ಪೇಸ್ಟ್ ತಯಾರಿಸಿ. ಮೊದಲು ಕಂಕುಳಿನ ಚರ್ಮಕ್ಕೆ ಪೇಸ್ಟ್ ನ್ನು ಹಚ್ಚಿ ಮತ್ತು ಉಜ್ಜಿ. ಆ ಬಳಿಕ 20 ನಿಮಿಷ ಅದನ್ನು ಒಣಗಲು ಬಿಟ್ಟು ತಣ್ಣಗಿನ ನೀರಿನಿಂದ ತೊಳೆಯಿರಿ. ಇದರ ಬಳಿಕ ಡಿಯೋಡ್ರೆಂಟ್ ಬಳಸುವ ಬದಲು ಅಡುಗೆ ಸೋಡಾವನ್ನು ಹಚ್ಚಿ. ಇದರ ಪರಿಣಾಮ ನಿಮ್ಮ ಕಣ್ಣ ಮುಂದಿರುತ್ತದೆ.

3. ಅಡುಗೆ ಸೋಡಾದ ಡಿಯೋ
ಡಿಯೋಡ್ರೆಂಟ್ ಅಥವಾ ಆ್ಯಂಟಿ ಪೆರ್ಸ್ಪೆರೆಂಟ್ ನ್ನು ಬಳಸುವ ಬದಲು ಅಡುಗೆ ಸೋಡಾ ಅಥವಾ ಪಟಿಕವನ್ನು ಕಂಕುಳಿಗೆ ಹಚ್ಚಿ. ಇದು ಹೆಚ್ಚುವರಿ ತೇವಾಂಶ ಹೀರಿಕೊಳ್ಳುತ್ತದೆ ಮತ್ತು ಒಂದು ಕೆಟ್ಟ ವಾಸನೆ ಬಾರದಂತೆ ತಡೆಯುತ್ತದೆ.

4. ಅಡುಗೆ ಸೋಡಾ ಕಪ್ಪುಕಲೆ ನಿವಾರಣೆ
ಅಡುಗೆ ಸೋಡಾ ಮತ್ತು ವಿನೇಗರ್ ನ್ನು ಬಳಸಿಕೊಂಡು ನಿಮ್ಮದೇ ಆದ ಬೆಳ್ಳಾಗಾಗುವ ಮಾಸ್ಕ್ ನ್ನು ತಯಾರಿಸಬಹುದು. ವೈಟ್ ವಿನೇಗರ್ ಅಥವಾ ಆ್ಯಪಲ್ ಸಿಡರ್ ವಿನೇಗರ್ ನ್ನು ಪೇಸ್ಟ್ ಮಾಡಲು ಬಳಸಬಹುದು ಮತ್ತು ದಿನಕ್ಕೆ ಎರಡು ಸಲ ಇದನ್ನು ಹಚ್ಚಿಕೊಳ್ಳಬೇಕು. ವಿನೇಗರ್ ಮತ್ತು ಬೇಕಿಂಗ್ ಸೋಡಾವನ್ನು ಬಳಸುವಾಗ ಬರುವ ಗುಳ್ಳೆಗಳಿಂದ ಗೊಂದಲಕ್ಕೆ ಒಳಗಾಗಬೇಡಿ. ಈ ಗುಳ್ಳೆಗಳು ಕೆಲವೇ ಕ್ಷಣದಲ್ಲಿ ಮಾಯವಾಗುತ್ತದೆ. ಸ್ನಾನದ ಬಳಿಕ ಈ ಪೇಸ್ಟ್ ನ್ನು ನೀವು ನಿಯಮಿತವಾಗಿ ಬಳಸಬಹುದು. ಇದಕ್ಕೆ ಪರ್ಯಾಯವಾಗಿ ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಬೆರೆಸಿ ಉಪಯೋಗಿಸಬಹುದು. ಇದನ್ನು ಕಂಕುಳಿನ ಚರ್ಮಕ್ಕೆ ಹಚ್ಚಿ ಮತ್ತು ಒಣಗುವ ತನಕ ಬಿಡಿ ಮತ್ತು ಬಳಿಕ ತೊಳೆಯಿರಿ.

ಈ ಮೇಲಿನ ಯಾವುದೇ ವಿಧಾನವನ್ನು ನಿಯಮಿತವಾಗಿ ಬಳಸುವುದರಿಂದ ಕಂಕುಳಿನ ಕಪ್ಪು ಕಲೆಯನ್ನು ಹೋಗಲಾಡಿಸಬಹುದು. ಆದರೆ ಒಂದೇ ದಿನದಲ್ಲಿ ಪವಾಡವನ್ನು ನಿರೀಕ್ಷಿಸಬೇಡಿ. ರೇಝರ್ ಮತ್ತು ಕ್ರೀಮ್ ಬಳಸುವುದನ್ನು ಕಡಿಮೆ ಮಾಡಿ. ಇದು ಕಂಕುಳಿನ ಚರ್ಮ ಕಪ್ಪಾಗಲು ಪ್ರಮುಖ ಕಾರಣ. ಕೂದಲನ್ನು ತೆಗೆಯಲು ವ್ಯಾಕ್ಸ್ ನ್ನು ಬಳಸಿ. ಕಂಕುಳಿನ ಚರ್ಮದ ಕಪ್ಪು ಕಲೆಗಳನ್ನು ಹೋಗಲಾಡಿಸಲು ತಾಳ್ಮೆಯಿಂದ ಇರಬೇಕಾಗುತ್ತದೆ.

X
Desktop Bottom Promotion