For Quick Alerts
ALLOW NOTIFICATIONS  
For Daily Alerts

ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ

By Hemanth P
|

ಚಳಿಗಾಲ ಈ ಸಲ ಬೇಗನೆ ಬಂದಿದೆ ಮತ್ತು ಇದಕ್ಕೆ ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಚಳಿಗಾಲದಲ್ಲಿ ತ್ವಚೆ ಮತ್ತು ಕೂದಲಿನ ಆರೈಕೆ ಕಡೆ ಹೆಚ್ಚಿನ ಗಮನಹರಿಸಬೇಕು. ಒಣಶೀತ ಗಾಳಿಯಿಂದಾಗಿ ತ್ವಚೆ ಮತ್ತು ನೆತ್ತಿಯು ಒಣಗುತ್ತದೆ. ಒಣಗಿದ ಚರ್ಮವು ಮುಖ ಮತ್ತು ದೇಹದ ಕಾಂತಿಯನ್ನು ಕಡಿಮೆ ಮಾಡುತ್ತದೆ. ಇದನ್ನು ತಪ್ಪಿಸಲು ಮೊಶ್ಚಿರೈಸರ್ ಮತ್ತು ಕ್ರೀಮ್ ಗಳನ್ನು ಬಳಸಬೇಕು.

ಶೀತಕ್ಕೆ ನಮ್ಮ ಚರ್ಮ ತುಂಬಾ ಸೂಕ್ಷ್ಮವಾದದ್ದು ಮತ್ತು ತುಟಿಗಳು ಅದಕ್ಕಿಂತಲೂ ಸೂಕ್ಷ್ಮ. ತುಟಿಗಳಲ್ಲಿ ಎಣ್ಣೆಯಾಂಶ ಬಿಡುಗಡೆ ಮಾಡುವಂತಹ ಯಾವುದೇ ಗ್ರಂಥಿಗಳಿಲ್ಲ. ಇದರಿಂದ ಚಳಿಗಾಲದಲ್ಲಿ ಅದು ಯಾವುದೇ ರೀತಿಯ ಎಣ್ಣೆಯಂಶ ಮತ್ತು ತೇವಾಂಶ ಪಡೆಯುವುದಿಲ್ಲ. ಇದರಿಂದ ದೇಹದ ಇತರ ಭಾಗಗಳಿಗಿಂತ ತುಟಿಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಶೀತದಿಂದಾಗಿ ತುಟಿಗಳು ಒಣಗಿ ಒಡೆದು ಹೋಗಬಹುದು. ಇದರಿಂದ ಅದು ತುಂಬಾ ಅಸಹ್ಯವಾಗಿ ಕಾಣಬಹುದು. ಹಲವಾರು ಮೊಶ್ಚಿರೈಸರ್, ಲಿಪ್ ಮುಲಾಮ್ ಮತ್ತು ಲಿಪ್ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದನ್ನು ಬಳಸಿಕೊಳ್ಳಬಹುದು.

Ways to Cure dry chapped Lips with coconut oil

ಒಣ ಮತ್ತು ಒಡೆದ ತುಟಿಗೆ ಕೆಲವೊಂದು ಮನೆಮದ್ದುಗಳು ಲಭ್ಯವಿದೆ. ಕೆಲವೊಂದು ನೈಸರ್ಗಿಕ ಮೊಶ್ಚಿರೈಸರ್ ಗಳು ತುಟಿಯನ್ನು ನಯ ಮತ್ತು ತೇವಾಂಶ ಪಡೆಯುವಂತೆ ಮಾಡುತ್ತದೆ. ತೈಲವು ತುಟಿ ಒಣಗುವುದನ್ನು ತಡೆದು ತೇವಾಂಶ ಒದಗಿಸಬಲ್ಲದು. ತೆಂಗಿನ ಎಣ್ಣೆಯು ತುಟಿಯಲ್ಲಿ ಒಂದು ಪದರವನ್ನು ರಚಿಸಿ ಶೀತ ಗಾಳಿಯಿಂದ ತುಟಿ ಒಣಗುವುದು ಮತ್ತು ಬಿರುಕು ಬಿಡುವುದನ್ನು ತಪ್ಪಿಸುತ್ತದೆ. ತೆಂಗಿನ ಎಣ್ಣೆಯು ಸುಲಭವಾಗಿ ಲಭ್ಯವಿದೆ ಮತ್ತು ಮಿತವ್ಯಯಿ. ಇದರಿಂದ ಪ್ರತಿಯೊಬ್ಬರು ತೆಂಗಿನ ಎಣ್ಣೆಯನ್ನು ಬಳಸಿ ಒಣಗಿದ ಮತ್ತು ಬಿರುಕುಬಿಟ್ಟ ತುಟಿಗಳನ್ನು ರಕ್ಷಿಸಬಹುದು.

ಒಣಗಿದ ಮತ್ತು ಬಿರುಕುಬಿಟ್ಟ ತುಟಿಗಳ ಆರೈಕೆಗೆ ತೆಂಗಿನ ಎಣ್ಣೆಯನ್ನು ಹೇಗೆ ಬಳಸಬಹುದು ಎಂದು ಕೆಳಗೆ ನೀಡಲಾಗಿದೆ.

1. ನಿಯಮಿತವಾಗಿ ಬಳಸಿ
ಯಾವಾಗಲೂ ನಿಮ್ಮ ಪರ್ಸ್ ಅಥವಾ ಬ್ಯಾಗ್ ನಲ್ಲಿ ತೆಂಗಿನ ಎಣ್ಣೆಯ ಸಣ್ಣ ಬಾಟಲಿ ಇರಲಿ. ಇದನ್ನು ಆಗಾಗ ತುಟಿಗೆ ಹಚ್ಚುತ್ತಿರಿ. ಬೆರಳಿನಿಂದ ಸ್ವಲ್ಪ ಎಣ್ಣೆ ತೆಗೆದು ತುಟಿಗೆ ಹಚ್ಚಿ. ತೆಂಗಿನ ಎಣ್ಣೆಯಿಂದ ಬಿರುಕುಬಿಟ್ಟ ತುಟಿಗಳ ಆರೈಕೆಗೆ ಇದು ಒಳ್ಳೆಯ ವಿಧಾನ. ಒಳ್ಳೆಯ ಫಲಿತಾಂಶ ಪಡೆಯಲು ಇದನ್ನು ಈ ಚಳಿಗಾಲದಲ್ಲಿ ಬಳಸಿ.

2. ರಾತ್ರಿಯ ಚಿಕಿತ್ಸೆ
ತೆಂಗಿನ ಎಣ್ಣೆಗೆ ಸುವಾಸನೆ ಮತ್ತು ರುಚಿಯಿರುತ್ತದೆ. ಈ ಕಾರಣದಿಂದಾಗಿ ನಿಮಗೆ ದಿನದಲ್ಲಿ ಇದನ್ನು ಬಳಸಲು ಸಮಸ್ಯೆಯಾದರೆ ಅಥವಾ ಇತರ ಯಾವುದೇ ಕಾರಣದಿಂದ ನಿಯಮಿತವಾಗಿ ಬಳಸಲು ಸಾಧ್ಯವಿಲ್ಲವೆಂದಾದರೆ ಮತ್ತೊಂದು ಆಯ್ಕೆ ಲಭ್ಯವಿದೆ. ಮಲಗುವ ಮೊದಲು ತೆಂಗಿನ ಎಣ್ಣೆಯನ್ನು ತುಟಿಗೆ ಹಚ್ಚಿ ಮತ್ತು ರಾತ್ರಿಯಿಡಿ ಹಾಗೆ ಇಡಿ. ಬೆಳಿಗ್ಗೆ ನೀರಿನಿಂದ ತುಟಿಗಳನ್ನು ತೊಳೆಯಿರಿ. ಆದರೆ ದಿನದಲ್ಲಿ ಬೇರೆ ಲಿಪ್ ಕ್ರೀಮ್ ಹಚ್ಚುವುದು ಅಗತ್ಯವೆನ್ನುವುದು ನೆನಪಿರಲಿ.

3. ತೆಂಗಿನ ವಾಸನೆಯ ಮುಲಾಮ್
ತೆಂಗಿನ ಎಣ್ಣೆಯ ಅಂಶಗಳನ್ನು ಒಳಗೊಂಡ ಕೆಲವೊಂದು ಲಿಪ್ ಮುಲಾಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮುಲಾಮ್ ಗಳಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚುವಂತಹ ಲಾಭಗಳು ಸಿಗುವುದಿಲ್ಲ. ಆದರೂ ಪರಿಣಾಮಕಾರಿ. ಈ ಮುಲಾಮ್ ನ್ನು ನಿಯಮಿತವಾಗಿ ಬಳಸಬೇಕು. ರಾಸಾಯನಿಕವಿರುವ ಲಿಪ್ ಮುಲಾಮ್ ಗಿಂತ ನೈಸರ್ಗಿಕವಾಗಿ ತಯಾರಿಸಿದ ಲಿಪ್ ಮುಲಾಮ್ ನ್ನು ಬಳಸಿ.

4. ಘನ ತೈಲ
ಘನ ರೂಪದಲ್ಲಿರುವ ತೆಂಗಿನ ಎಣ್ಣೆಯನ್ನು ಬಳಸಿದರೆ ಅದು ತುಂಬಾ ಪರಿಣಾಮಕಾರಿ ಮತ್ತು ಇದು ನೈಸರ್ಗಿಕ ಲಿಪ್ ಮುಲಾಮ್. ಇದು ಮಂದರೂಪದಲ್ಲಿರುವ ಶುದ್ಧ ತೆಂಗಿನ ಎಣ್ಣೆಯಾಗಿದೆ. ಇದರ ಒಂದು ನ್ಯೂನತೆಯೆಂದರೆ ಇದು ತಾಪಮಾನ ಸೂಕ್ಷ್ಮ. ಗರಿಷ್ಠ ತಾಪಮಾನದಲ್ಲಿ ಇದು ಸುಲಭವಾಗಿ ಕರಗುತ್ತದೆ.

5. ತೈಲ ಮಿಶ್ರಣಗಳು
ತೆಂಗಿನ ಎಣ್ಣೆಯನ್ನು ಆಲಿವ್ ಎಣ್ಣೆ ಅಥವಾ ಇತರ ಯಾವುದೇ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತುಟಿಗೆ ಬಳಸಿದರೆ ಆಗ ಅಗತ್ಯವಿರುವ ತೇವಾಂಶ ಸಿಗುತ್ತದೆ. ಸಮಪ್ರಮಾಣದ ಮಿಶ್ರಣವನ್ನು ನಿಯಮಿತವಾಗಿ ಅಥವಾ ರಾತ್ರಿ ವೇಳೆ ಬಳಸಬೇಕು. ಇದು ಬಳಕೆದಾರರ ಮೇಲೆ ಅವಲಂಬಿತವಾಗಿದೆ. ಈ ಮಿಶ್ರಣ ತುಂಬಾ ಪರಿಣಾಮಕಾರಿ ಮತ್ತು ಚಳಿಗಾಲದ ಶೀತ ಗಾಳಿಯಿಂದ ತುಟಿಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ.

English summary

Ways to Cure dry chapped Lips with coconut oil

Winter is arriving sooner this time. It is time to get prepared for it. Winter calls in for more attention to skin and hair. The dry cold air results in dehydrating the skin and scalp. The dried skin gives a bad look to the face and body.
Story first published: Friday, December 6, 2013, 11:05 [IST]
X
Desktop Bottom Promotion